ಕೊರೊನಾ ವಿರುದ್ಧ ಹೋರಾಟ- ಕರ್ನಾಟಕ ಸರ್ಕಾರದ ಕ್ರಮಗಳ ಬಗ್ಗೆ ಅಮಿತ್ ಷಾ ಮೆಚ್ಚುಗೆ

Thursday, September 2nd, 2021
Amith Sha

ಬೆಂಗಳೂರು : ದೇಶ ಮತ್ತು ಜಗತ್ತು ಹಿಂದೆಂದೂ ಕಂಡಿರದ, ಮಾನವಕುಲಕ್ಕೇ ಸವಾಲಾಗಿದ್ದ ಕೊರೊನಾ ಮಹಾಮಾರಿಯನ್ನು ಕರ್ನಾಟಕ ಸರ್ಕಾರ ಅತ್ಯುತ್ತಮವಾಗಿ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕ ಸರ್ಕಾರವನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ಕರ್ನಾಟಕ ರಾಜ್ಯ ಮೊದಲಿಗೆ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹಾಗೂ ಈಗ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೊರೊನಾ ವಿರುದ್ಧ ಸಮರ್ಥವಾಗಿ ಹೋರಾಡಿದೆ. ಈ ವರೆಗೆ ಸುಮಾರು 5.2 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಆ ಪೈಕಿ 4 ಕೋಟಿ […]

ತುಳು ಅಕಾಡೆಮಿ ತೌಳವರ ತವರೂರು ಇದ್ದಂತೆ” – ದಯಾನಂದ ಜಿ ಕತ್ತಲ್‌ಸಾರ್

Wednesday, August 18th, 2021
Sarayu Yakshagana

ಮಂಗಳೂರು : ತುಳು ಅಕಾಡೆಮಿಯು ಕೊರೊನಾದ ಸಂಕಷ್ಟ ಕಾಲದಲ್ಲೂ ಕಲೆ, ಕಲಾವಿದರಿಗಾಗಿ ಸದಾ ತೆರೆದಿದೆ. ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಯಾರಿಗೂ ನಾವು ಅನುಮತಿ ನಿರಾಕರಿಸಿಲ್ಲ. ಇದು ತುಳುವ ಬಂಧುಗಳಿಗೆ ತವರೂರು ಆಗಿಯೇ ಇದೆ. ಅಂತಹಾ ಅವಕಾಶವನ್ನು ಎಲ್ಲಾ ತೌಳವ ಬಂಧುಗಳು ಬಳಸಿಕೊಂಡು ಕಮರಿ ಹೋದ ಕಲಾಬದುಕನ್ನು ಖಂಡಿತಾ ಪುನಃ ಕಟ್ಟಿಕೊಳ್ಳಬಹುದು. ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ ಕತ್ತಲ್‌ಸಾರ್‌ರವರು ತುಳುವೆರೆ – ಏಳಾಟೊ – ಸರಯೂ ಸಪ್ತಾಹೊದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷೀಯ ಭಾಷಣದಲ್ಲಿ […]

ಕೊರೊನಾದಂತಹ ಸಾಂಕ್ರಾಮಿಕ ರೋಗ ಎದುರಿಸಲು ಯೋಗ ಸಹಾಯಕ : ಸಚಿವ ಡಿ ವಿ ಸದಾನಂದ ಗೌಡ

Monday, June 21st, 2021
DVS-Yoga

ಬೆಂಗಳೂರು : ನಿಯಮಿತವಾಗಿ ಯೋಗಾಭ್ಯಾಸ ಮಾಡುವ ಮೂಲಕ ಕರೋನಾದಂತಹ ಸಾಂಕ್ರಾಮಿಕ ರೋಗವನ್ನು ಸಮರ್ಥವಾಗಿ ಎದುರಿಸಬಹುದಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ. ಸಚಿವರು ದೆಹಲಿಗೆ ಹೊರಡುವ ಮುನ್ನ ಪಕ್ಷದ ಜಿಲ್ಲಾ ಘಟಕದ ವತಿಯಿಂದ ಹೆಬ್ಬಾಳ ಕ್ಷೇತ್ರದಲ್ಲಿ ಇಂದು ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಏಳನೇ ವಿಶ್ವ ಯೋಗದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಮಾಡಿದ ಭಾಷಣವನ್ನು ಪ್ರಸ್ತಾಪಿಸಿದ ಸಚಿವರು ನಿಯಮಿತವಾಗಿ ಯೋಗ, ಪ್ರಾಣಾಯಾಮ ಮಾಡುವುದರಿಂದ ನಮ್ಮ […]

ಮಹಾಮಾರಿ ಕೊರೊನಾ ಓಡಿಸಲು ಮಾರಮ್ಮ ದೇವಿ ಮೊರೆ ಹೋದ ಗ್ರಾಮಸ್ಥರು

Saturday, June 12th, 2021
maramma devi

ತುಮಕೂರು : ಜಿಲ್ಲೆಯ ಎರಡು ಗ್ರಾಮಗಳಲ್ಲಿ ಮಹಾಮಾರಿ ಕೊರೊನಾ ಓಡಿಸಲು ಜನರು ದೇವರ ಮೊರೆ ಹೋಗಿದ್ದಾರೆ. ಮರದಲ್ಲಿ ರಾಗಿ ಮುದ್ದೆ, ಬೇವಿನ ಸೊಪ್ಪು ಇಟ್ಟು, ಮಾರಮ್ಮನ ದೇವಾಲಯದ ಪ್ರದಕ್ಷಿಣೆ ಹಾಕಿ ಪೂಜೆ ಮಾಡಿದ್ದಾರೆ.  ಪರಿಣಾಮ ಈಗ 20 ಜನ ಗುಣಮುಖರಾಗಿ ವಾಪಸ್ಸಾಗಿದ್ದಾರೆ ಎಂಬುವುದು ಗ್ರಾಮಸ್ಥರ ನಂಬಿಕೆ. ಪಕ್ಕದ ಗ್ರಾಮ ತಿಪ್ಪಗಾನಹಳ್ಳಿಯಲ್ಲಿ ಇದೇ ರೀತಿ ಆಚರಿಸಿದ್ದಾರೆಂದು  ಪಾವಗಡ ತಾಲೂಕಿನ ಬಲ್ಲೇನಹಳ್ಳಿಯಲ್ಲಿ ಮಾರಮ್ಮ ದೇವಿ ಹಾಗೂ ರಕ್ಷಾ ಕಲ್ಲಿಗೆ ಪೂಜೆ ಸಲ್ಲಿಸಿ ಜನರು ಕೊರೊನಾ ದೂರ ಮಾಡುವಂತೆ ಪ್ರಾರ್ಥನೆ ಮಾಡಿದ್ದಾರೆ. ಪುರುಷರು ಮಾತ್ರ […]

ಅನ್ ಲಾಕ್ ಆದರೆ ಬಸ್ ಸಂಚಾರ

Thursday, June 3rd, 2021
vayuvyasarige

ಹುಬ್ಬಳ್ಳಿ: ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರುವುದರಿಂದ ಸರ್ಕಾರ ಲಾಕ್ ಡೌನ್ ಜಾರಿ ಮಾಡಿತ್ತು. ಅದರಂತೆ ಬಸ್ ಸೇವೆಗಳನ್ನು ಸಹ ಸ್ಥಗಿತಗೊಳಿಸಿತ್ತು. ಈಗ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿರುವುದರಿಂದ ಸರ್ಕಾರ ಅನ್ ಲಾಕ್ ಮಾಡುವ ನಿರ್ಧಾರಕ್ಕೆ ಬಂದರೆ. ಬಸ್‌ಗಳ ಚಾಲನೆಯನ್ನು ಮಾಡುವುದಾದರೆ ಈಗ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗ ಯಾವ ರೀತಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಗ್ರಾಮೀಣ ವಿಭಾಗದ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡ ಅವರು ಮಾಹಿತಿ ನೀಡಿದ್ದಾರೆ. ಈಗಾಗಲೇ ಜೂನ್ 7 ರ ವರೆಗೆ […]

ಕೊರೊನಾದಿಂದ ಅನಾಥವಾದ ಮಕ್ಕಳಿಗೆ ಎಲ್​ಕೆಜಿಯಿಂದ ಇಂಜಿನಿಯರಿಂಗ್​ ವರೆಗೂ ಉಚಿತ ಶಿಕ್ಷಣ : ಶ್ರೀ ಸಿದ್ಧರಾಮ ಸ್ವಾಮೀಜಿ

Sunday, May 30th, 2021
Siddarama Swamy

ಗದಗ: ಹೆಮ್ಮಾರಿ ಕೊರೊನಾ ಸಾಕಷ್ಟು ಮಕ್ಕಳನ್ನು ತಬ್ಬಲಿಯಾಗಿ ಮಾಡಿದೆ. ಹೆತ್ತವರನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ. ಸದ್ಯ ಇಂತಹ ಮಕ್ಕಳ ಶಿಕ್ಷಣಕ್ಕೆ ಮುಂದಾದ ಗದಗದ ತೋಂಟದಾರ್ಯ ಮಠದ ಸ್ವಾಮೀಜಿ. ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಮುಂದಾಗಿದ್ದಾರೆ. ಆ ಮೂಲಕ ಅನ್ನ ದಾಸೋಹದ ಜೊತೆಗೆ ಶಿಕ್ಷಣ ದಾಸೋಹಕ್ಕೂ ಶ್ರೀಮಠ ಮುಂದಾಗಿದೆ. ಎಲ್ ಕೆಜಿಯಿಂದ ಇಂಜಿನೀಯರಿಂಗ್ ವರೆಗೂ ಉಚಿತ ಶಿಕ್ಷಣ ನೀಡುವುದಾಗಿ ತೋಂಟದಾರ್ಯ ಮಠದ ಶ್ರೀಗಳು ಹೇಳಿದ್ದಾರೆ. ಉತ್ತರ ಕರ್ನಾಟಕದ ಪ್ರಸಿದ್ಧ ಮಠವಾದ ಗದಗದ ತೋಂಟದಾರ್ಯ ಮಠ ಸಂದಿಗ್ಧ ಪರಿಸ್ಥಿತಿಯಲ್ಲಿ ಟೊಂಕ […]

ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಮಾಸಿಕ ಮೂರುವರೆ ಸಾವಿರ ಸಹಾಯ ಧನ

Saturday, May 29th, 2021
CM

ಬೆಂಗಳೂರು  : ಮಹತ್ವದ ಸುದ್ದಿಗೋಷ್ಟಿ ನಡೆಸಿದ ಸಿಎಂ ಯಡಿಯೂರಪ್ಪ ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಮಾಸಿಕ ಮೂರುವರೆ ಸಾವಿರ ಸಹಾಯ ಧನ ನೀಡೋದಾಗಿ ಘೋಷಿಸಿದ್ದಾರೆ. ಶನಿವಾರ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ ಕೊರೊನಾ ಸೋಂಕಿನಿಂದ ತಂದೆ-ತಾಯಿ ಇಬ್ಬರೂ ಮೃತಪಟ್ಟ ಅನಾಥ ಮಕ್ಕಳಿಗೆ ಈ ಸಹಾಯ ಧನ ತಲುಪಲಿದೆ ಎಂದಿದ್ದಾರೆ. ಈ ಅನಾಥ ಮಕ್ಕಳನ್ನು ನೋಡಿಕೊಳ್ಳುವ ಸಂಬಂಧಿಕರು ಇರದಿದ್ದಲ್ಲಿ ನೋಂದಾಯಿತ ಪಾಲನಾ ಸಂಸ್ಥೆಗಳಿಗೆ ದಾಖಲಿಸಲಾಗುವುದು. ಹಾಗೂ ಈ ಸಹಾಯಧನ ಈ ಸಂಸ್ಥೆಗಳಿಗೆ ತಲುಪಲಿದೆ ಎಂದು […]

ಕೊರೊನಾ ಬಂದಿದ್ದ ವ್ಯಕ್ತಿಗೆ ಬ್ಲಾಕ್ ಫಂಗಸ್, ಬೆಳ್ತಂಗಡಿಯಲ್ಲಿ ಮೊದಲ ಬಲಿ

Friday, May 28th, 2021
black fungus

ಬೆಳ್ತಂಗಡಿ: ಕೊರೊನಾದ ಬಳಿಕ ಕಣ್ಣು ಮತ್ತು ಕಿಡ್ನಿ ಸಮಸ್ಯೆ ಉಂಟಾಗಿ ಬ್ಲಾಕ್ ಫಂಗಸ್ ಗೆ ಬೆಳ್ತಂಗಡಿಯ ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ. ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಅಳಕೆ ನಿವಾಸಿ ನೋಣಯ್ಯ ಪೂಜಾರಿ (55) ಬ್ಲ್ಯಾಕ್ ಫಂಗಸ್ ವೈರಸ್‌ಗೆ ಬಲಿಯಾದ ವ್ಯಕ್ತಿ. ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಕೊರೊನಾ ಪರೀಕ್ಷೆ ನಡೆಸಿದಾಗ ಪಾಸಿಟಿವ್ ವರದಿ ಬಂದಿತ್ತು ಕೊರೋನಾ ಚಿಕಿತ್ಸತೆಯ ಬಳಿಕ  ಬ್ಲ್ಯಾಕ್ ಫಂಗಸ್ ಗೋಚರಿಸಿದ್ದು ಕಣ್ಣಿನ ಆಪರೇಷನ್ ನಡೆಸಿದ್ದರು, ಬಳಿಕ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ […]

ಅಕ್ಕನ ಮಗಳನ್ನು ಮದುವೆಯಾಗಿ ಕೆಎಎಸ್​ ಅಧಿಕಾರಿಯನ್ನಾಗಿ ಮಾಡಿದ ವ್ಯಕ್ತಿ ಕೊರೊನಾಗೆ ಬಲಿ

Thursday, May 27th, 2021
seena

ಶಿವಮೊಗ್ಗ:  ಹೆಂಡತಿಯನ್ನ ಚೆನ್ನಾಗಿ ಓದಿಸಿ ಕೆಎಎಸ್ ಅಧಿಕಾರಿ ಮಾಡಲು ಶ್ರಮ ವಹಿಸಿದ್ದ ವ್ಯಕ್ತಿ  ಮಹಾಮಾರಿ ಕರೊನಾಗೆ ಬಲಿಯಾಗಿದ್ದಾನೆ. ಶಿವಮೊಗ್ಗದ ಸವಾರ್ ಲೈನ್ ರಸ್ತೆಯ ಸೀನಾ ಅಲಿಯಾಸ್ ಕಡ್ಡಿ ಸೀನಾ ಮೃತ ದುರ್ದೈವಿ. ಕಡ್ಡಿ ಸೀನಾ ತನ್ನ ಅಕ್ಕನ ಮಗಳು ಅಶ್ವಿನಿಯನ್ನು ಮದುವೆಯಾಗಿದ್ದ. ಆತ ಓದಿರಲಿಲ್ಲ ಅದಕ್ಕಾಗಿ ಹೆಂಡತಿಯಾದರೂ ಓದಿ ಕೆಎಎಸ್ ಅಧಿಕಾರಿ ಆಗಲಿ ಎಂದು ಬಯಸಿದ್ದ. ಹೀಗಾಗಿ ಹೆಂಡತಿಗೆ ಕೆಎಎಸ್ ಪೂರ್ವಬಾವಿ ತರಬೇತಿ ಕೊಡಿಸಿದ್ದ. ಆತನ ಹೆಂಡತಿ ಅಶ್ವಿನಿ 2020 ರಲ್ಲಿ ಕೆಎಎಸ್ ಪಾಸ್ ಮಾಡಿ ಆರು ತಿಂಗಳ […]

ಮೈಸೂರು : ಕೊರೊನಾದಿಂದ ಮೃತ ತಂದೆಯ ಹೆಣ ಬೇಡ ಹಣ ಬೇಕು ಅಂದ ಮಗ

Sunday, May 23rd, 2021
Mysore corona

ಮೈಸೂರು: ತಂದೆಯ ಅಂತ್ಯಕ್ರಿಯೆ ನೀವೆ ಮುಗಿಸಿ. ಆದರೆ ತಂದೆಯ ಬಳಿ ಇರುವ 6 ಲಕ್ಷ ಹಣ ಹಾಗೂ ಇನ್ನಿತರೆ ದಾಖಲೆಗಳನ್ನು ತಂದು ಕೊಡಿ ಎಂದು ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಮಗ ಹೇಳಿರುವ ಘಟನೆ ಮೈಸೂರಿನ ಹೆಬ್ಬಾಳದಲ್ಲಿ ನಡೆದಿದೆ. ತಂದೆಯ ಶವ ಕೂಡ ನೋಡಲು ಬಾರದ ಮಗ, ತಂದೆ ಶವ ಬೇಡ, ಹಣ ಬೇಕು ಎಂದು  ಆತನಿಗೆ ಕರೆ ಮಾಡಿ ವಿಷಯ ತಿಳಿಸಿದವರಿಗೆ ಹೇಳಿದ್ದಾನೆ, ತಂದೆ ಮನೆಯಲ್ಲಿ ಇಟ್ಟಿರುವ ಹಣವನ್ನು ನಾನು ಇರುವ ಸ್ಥಳಕ್ಕೆ ತಂದು ಕೊಡಿ. ತಂದೆಯ ಶವ ನೀವೇ ಸುಟ್ಟು ಹಾಕಿ, […]