Blog Archive

ರಾಜ್ಯದಲ್ಲಿ ಶನಿವಾರ ಒಂದೇ ದಿನ 42 ಮಂದಿ ಕೊರೋನಾ ಸೋಂಕಿನಿಂದ ಮೃತ,1839 ಮಂದಿಗೆ ಪಾಸಿಟಿವ್

Sunday, July 5th, 2020
Karnataka Corona

ಬೆಂಗಳೂರು: ರಾಜ್ಯದಲ್ಲಿ ಶನಿವಾರ ಒಂದೇ ದಿನ  42 ಮಂದಿ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 335ಕ್ಕೇರಿಕೆಯಾಗಿದೆ. ಕೊರೋನಾ ವೈರಸ್ ನಿಂದಾಗಿ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 24 ಸೇರಿದಂತೆ ರಾಜ್ಯದಲ್ಲಿ ಒಟ್ಟು 42 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಇಂದು ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 1172 ಪ್ರಕರಣಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 1839 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ […]

ಕಾಸರಗೋಡು ಜಿಲ್ಲೆಯಲ್ಲಿ ಎಂಟು ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ

Tuesday, June 30th, 2020
kasaragod-corona

ಕಾಸರಗೋಡು : ಜಿಲ್ಲೆಯಲ್ಲಿ ಮಂಗಳವಾರ ಜಿಲ್ಲೆಯಲ್ಲಿ ಎಂಟು ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರಲ್ಲಿ ಮೂವರು ವಿದೇಶ, ಮೂವರು ಹೊರ ರಾಜ್ಯ ಹಾಗೂ ಓರ್ವನಿಗೆ ಸಂಪರ್ಕದಿಂದ ಸೋಂಕು ತಗಲಿರುವುದಾಗಿ ಜಿಲ್ಲಾ ವೈದ್ಯಾಧಿಕಾರಿ ಡಾ. ರಾಮ್ ದಾಸ್ ತಿಳಿಸಿದ್ದಾರೆ. ವಿದೇಶದಿಂದ ಬಂದ ಕುಂಬಳೆ, ಬದಿಯಡ್ಕ ತಲಾ ಇಬ್ಬರು, ಪನತ್ತಡಿ, ಮಡಿಕೈ, ಚೆಂಗಳ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಕಾಸರಗೋಡು ಜಿಲ್ಲೆಯ ಓರ್ವ ಎರ್ನಾಕುಲಂ ತ್ರಿಪ್ಪಣಿತ್ತರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದರಿಂದ ಮಂಗಳವಾರ ಏಳು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಚಿಕಿತ್ಸೆಯಲ್ಲಿದ್ದ ಮಂಗಲ್ಪಾಡಿ, ಕುಂಬಳೆ, […]

ಉಳ್ಳಾಲ ವ್ಯಾಪ್ತಿಯಲ್ಲಿ ಒಂದೇ ಮನೆಯ 17 ಸದಸ್ಯರಿಗೆ ಕೊರೋನಾ ಸೋಂಕು ದೃಢ ಜೊತೆಗೆ 22 ಸೋಂಕು ಪತ್ತೆ

Saturday, June 27th, 2020
Ullala Covid

ಉಳ್ಳಾಲ: , ಉಳ್ಳಾಲದ ಪ್ರಥಮ ಸೋಂಕಿತೆಯ ಮನೆಯಲ್ಲಿದ್ದ ಎಲ್ಲಾ 16 ಮಂದಿ ಸದಸ್ಯರಿಗೆ ಸೋಂಕು ತಗುಲಿದ್ದು ಮಹಿಳೆ ಸೇರಿದಂತೆ ಒಂದೇ ಮನೆಯ 17 ಸದಸ್ಯರಿಗೆ ಸೋಂಕು ದೃಢವಾದಂತಾಗಿದೆ. ಉಳ್ಳಾಲ ವ್ಯಾಪ್ತಿಯಲ್ಲಿ ಪೊಲೀಸರು ಸೇರಿದಂತೆ 22 ಸೋಂಕು ಶನಿವಾರ ದೃಢವಾಗಿದೆ. ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಳ್ಳಾಲ, ದೇರಳಕಟ್ಟೆ, ಅಸೈಗೋಳಿ ಸೇರಿ ಸೋಂಕಿತರ ಸಂಖ್ಯೆ 29ಕ್ಕೇರಿದ್ದು ಒರ್ವ ಮಹಿಳೆ ಮೃತಪಟ್ಟಿದ್ದಾರೆ. ಉಳ್ಳಾಲ ಆಝಾದ್ ನಗರದ 57ರ ಹರೆಯದ ಮಹಿಳೆಗೆ ಆರಂಭದಲ್ಲಿ ಸೋಂಕು ತಗುಲಿತ್ತು. ಅವರಿಗೆ ನಗರದ ವೆನ್‍ಲಾಕ್ ಕೋವಿಡ್ […]

ಕೊರೋನಾ ಸೋಂಕು ತಗುಲಿದ್ದ ಆಟೋ ಚಾಲಕ ಹಲಸಿನ ಹಣ್ಣು ಬಿದ್ದು ಸಾವು

Friday, June 26th, 2020
Robin

ಕಾಸರಗೋಡು : ಹಲಸಿನಕಾಯಿ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಆಟೋ ಚಾಲಕ ಮೃತಪಟ್ಟ ಘಟನೆ ಕಾಸರಗೋಡಿನ ಕೋಡೋ ಬೇಳೂರಿನಲ್ಲಿ ನಡೆದಿದೆ. ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟ ವ್ಯಕ್ತಿಯನ್ನು ರೋಬಿನ್ 44,  ಎಂದು ಗುರುತಿಸಲಾಗಿದೆ . ಮೇ 19ರಂದು ಮನೆ ಹಿತ್ತಲಿನಲ್ಲಿ ಹಲಸಿನ ಕಾಯಿ ಕೊಯ್ಯುತ್ತಿದ್ದಾಗ ಹಲಸಿನಕಾಯಿಯೊಂದು ರೋಬಿನ್ ದೇಹದ ಮೇಲೆ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಬೆನ್ನುಮೂಳೆ ಮುರಿದಿತ್ತು. ಗಂಭೀರ ಗಾಯಗೊಂಡಿದ್ದ ರೋಬಿನ್ ನನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಕ್ರಿಯೆ ನಡೆಸುವ ಮೊದಲು […]

ಕಾಸರಗೋಡು ಜಿಲ್ಲೆಯಲ್ಲಿ ರವಿವಾರ ಆರು ಮಂದಿಯಲ್ಲಿ ಕೊರೋನಾ ಸೋಂಕು ದೃಢ

Sunday, June 21st, 2020
kasaragod-corona

ಕಾಸರಗೋಡು :  ರವಿವಾರ ಕಾಸರಗೋಡು ಜಿಲ್ಲೆಯಲ್ಲಿ ಆರು ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದಿಂದ ಬಂದ ಏಳು ವರ್ಷದ ಬಾಲಕನಿಗೂ ಕೊರೋನಾ ಸೋಂಕು ಪತ್ತೆಯಾಗಿದೆ. ಮಹಾರಾಷ್ಟ್ರದಿಂದ  ಜೂನ್ 5 ರಂದು ರೈಲಿನಲ್ಲಿ ಬಂದ ಮಂಗಲ್ಪಾಡಿ ನಿವಾಸಿಗಳಾದ ತಂದೆ ಮತ್ತು ಮಗಳಿಗೆಗೆ ಸೇರಿದಂತೆ ಮೇ 23 ರಂದು ಕಾರಿನಲ್ಲಿ ಮಹಾರಾಷ್ಟ್ರದಿಂದ ಬಂದ ಮಂಗಲ್ಪಾಡಿ ಪಂಚಾಯತ್ ನ ಏಳು ವರ್ಷದ ಬಾಲಕ, ಸೋಂಕು ದೃಢಪಟ್ಟಿದೆ. ಜೂನ್ 13ರಂದು ದುಬೈಯಿಂದ ಬಂದ ಪಳ್ಳಿಕೆರೆ, ಜೂನ್ 12 ರಂದು ಕುವೈಟ್ ನಿಂದ ಬಂದ ಚೆಂಗಳ, ಜೂನ್ 11 […]

ಕೊರೋನಾ ಸೋಂಕಿನ ಶಂಕೆ: ಕೋಳಿ ಫಾರಂನಲ್ಲೇ ಟೈಗರ್‌ ಗೂ ಕ್ವಾರಂಟೈನ್‌ !

Friday, May 29th, 2020
tiger

ಚಿಕ್ಕೋಡಿ : ಕೊರೋನಾ ಸೋಂಕಿನ ಶಂಕೆಯ ಹಿನ್ನೆಲೆಯಲ್ಲಿ ಟೈಗರ್‌ ಎಂಬ ಹೆಸರಿನ ನಾಯಿಯೊಂದಕ್ಕೆ ಕ್ವಾರಂಟೈನ್‌ ಮಾಡಲಾಗಿದೆ. ಮೂಲತಃ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಖಾನಾಪುರ ತಾಲೂಕಿನ ಬೇನಾಪುರ ಗ್ರಾಮದ ಶಿಂಧೆ ಎನ್ನುವ ಕುಟುಂಬದವರು ಕೋಲ್ಕತ್ತಾದಲ್ಲಿ ಚಿನ್ನದ ವ್ಯಾಪಾರ ಮಾಡುತ್ತಿದ್ದಾರೆ. ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಕೋಲ್ಕತ್ತಾದಿಂದ ತಮ್ಮೊಂದಿಗೆ 2 ಸಾವಿರ ಕಿ.ಮೀ. ಪ್ರಯಾಣಿಸಿ ಈ ನಾಯಿಯನ್ನು ಕರೆ ತಂದಿದ್ದಾರೆ. ಊರಿನಿಂದ ಬಂದ ನಂತರ ತಮ್ಮ ಕೋಳಿ ಫಾರಂನಲ್ಲೇ ಕ್ವಾರಂಟೈನ್ ನಲ್ಲಿದ್ದಾರೆ. ತಮ್ಮೊಂದಿಗೆ ನಾಯಿಯನ್ನೂ ಕ್ವಾರಂಟೈನ್‌ ಮಾಡಿರುವುದು ವಿಶೇಷ. 5 ವರ್ಷಗಳಿಂದ ಸಾಕಿರುವ ಟೈಗರ್ […]

ಉಡುಪಿ ಜಿಲ್ಲೆಯಲ್ಲಿ ಎಂಟು ಮಕ್ಕಳು ಸೇರಿ 16 ಜನರಿಗೆ ಕೊರೋನಾ ಸೋಂಕು ದೃಢ

Monday, May 25th, 2020
Udupi Covid19

ಉಡುಪಿ: ಜಿಲ್ಲೆಯಲ್ಲಿ ಮತ್ತೆ 16 ಜನರಿಗೆ ಕೊರೋನಾ ಸೋಂಕು ದೃಢವಾಗಿದೆ. ಇದರಿಂದ ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸೋಂಕು ದೃಢವಾದವರ ಸಂಖ್ಯೆ32 ಕ್ಕೆ ಏರಿಕೆಯಾಗಿದೆ. ಇದರಿಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ ಶತಕ ದಾಟಿದ್ದು 108 ಆಗಿದೆ. ಇಂದು ಸಂಜೆ ವರದಿಯಾದ 16 ಪ್ರಕರಣಗಳ ಪೈಕಿ 13 ಪ್ರಕರಣಗಳು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಇದರಲ್ಲಿ ಒಂದು ವರ್ಷದ ಮಗುವೂ ಸೇರಿದೆ. ಸೋಂಕಿತ ಸಂಖ್ಯೆ 1435ರ ಸಂಪರ್ಕದಿಂದ 65 ವರ್ಷದ ಮಹಿಳೆಗೆ ಸೋಂಕು ತಾಗಿದ್ದು, ಕಂಟೈನ್ ಮೆಂಟ್ ಪ್ರದೇಶಕ್ಕೆ ಭೇಟಿ ನೀಡಿದ […]

ಕರ್ನಾಟಕದಲ್ಲಿ ಒಂದೇ ದಿನ 216 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ

Saturday, May 23rd, 2020
karnataka-corona

ಬೆಂಗಳೂರು: ಕರ್ನಾಟಕದಲ್ಲಿ ಮಾರಕ ಕೊರೋನಾ ವೈರಸ್ ಗೆ  ಒಂದೇ ದಿನ 216 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗುವುದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1959ಕ್ಕೆ ಏರಿಕೆಯಾಗಿದೆ. ಇಂದು ಮಧ್ಯಾಹ್ನದ ವರದಿಯಲ್ಲಿ 196 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿತ್ತು. ಆದರೆ ಸಂಜೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ವರದಿಯಲ್ಲಿ ಮತ್ತೆ 20 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಆ ಮೂಲಕ ಇಂದು ಒಂದೇ ದಿನ 216 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1959ಕ್ಕೆ ಏರಿಕೆಯಾಗಿದೆ. […]

ಬೆಳ್ತಂಗಡಿಯ ಆರಂಬೋಡಿಯ 29 ವರ್ಷದ ಯುವತಿಗೆ ಕೊರೋನಾ ಸೋಂಕು ದೃಢ

Friday, May 22nd, 2020
belthangady Girl

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಆರಂಬೋಡಿಯ 29 ವರ್ಷದ ಯುವತಿಗೆ ಸೋಂಕು ತಾಗಿರುವುದು ದೃಢವಾಗಿದೆ.  ಮಹಾರಾಷ್ಟ್ರದಿಂದ  ಮೇ  18ರಂದು ಆಗಮಿಸಿದ್ದ ಯುವತಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಇದರಿಂದಾಗಿ  ಶುಕ್ರವಾರದ ವರದಿಯಲ್ಲಿ ಜಿಲ್ಲೆಯಲ್ಲಿ ಏಕೈಕ ಸೋಂಕು ಪ್ರಕರಣ ವರದಿಯಾಗಿದೆ. ಈಕೆ ಕಳೆದ ಮೇ 18ರಂದು ಮಹಾರಾಷ್ಟ್ರ ರಾಜ್ಯದ ದೊಂಬಿವಿಲಿ, ಥಾಣೆ, ಮುಂಬೈನಿಂದ ಪ್ರಯಾಣ ಬೆಳೆಸಿದ್ದರು. ಇವರನ್ನು ಬೆಳ್ತಂಗಡಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಸ್ಥಾಪಿಸಲಾದ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ರಾಜ್ಯದಲ್ಲಿ ಇಂದು ಒಟ್ಟು 105 ಹೊಸ […]

ಉಡುಪಿ ಜಿಲ್ಲೆಯಲ್ಲಿ15 ವರ್ಷದ ಬಾಲಕ ಸೇರಿ ಆರು ಮಂದಿಯಲ್ಲಿ ಕೊರೋನಾ ಸೋಂಕು

Wednesday, May 20th, 2020
tma-pai hospital

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಆರು ಮಂದಿಯಲ್ಲಿ ಕೋವಿಡ್`-19 ಸೋಂಕು ಕಾಣಿಸಿಕೊಂಡಿದೆ. ಇದಿರಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 21 ಕ್ಕೆ ಏರಿಕೆಯಾಗಿದೆ. 74 ವರ್ಷದ ಪುರುಷ, 55 ವರ್ಷದ ಪುರುಷ , 47 ವರ್ಷದ ಮಹಿಳೆ, 31 ವರ್ಷದ ಮಹಿಳೆ, 44 ವರ್ಷದ ಮಹಿಳೆ ಹಾಗೂ 15 ವರ್ಷದ ಹುಡುಗನಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿರುವುದು ದೃಢವಾಗಿದೆ. ಇವರೆಲ್ಲರಿಗೂ ಉಡುಪಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರೆಲ್ಲಾ ಮಹಾರಾಷ್ಟ್ರ ದಿಂದ ಉಡುಪಿ ಜಿಲ್ಲೆಗೆ ಆಗಮಿಸಿ ಕ್ವಾರಂಟ್ಯೆನ್ ನಲ್ಲಿದ್ದರು.