Blog Archive

ಜೂನ್‌ 8‌ ರ ವರೆಗೆ ದೇವಸ್ಥಾನ, ಚರ್ಚ್, ಮಸೀದಿಗಳು ತೆರೆಯಲ್ಲ, ಹೊಟೇಲ್‌‌, ಮಾಲ್‌‌ಗಳು ಓಪನ್ ಇಲ್ಲ

Monday, June 1st, 2020
kaddri-temple

ಬಂಟ್ವಾಳ : ದೇಶಾದ್ಯಂತ ಲಾಕ್‌‌‌‌‌ಡೌನ್‌‌ 5.0 ಜಾರಿಯಲ್ಲಿರುವ ನಿಟ್ಟಿನಲ್ಲಿ ಜೂನ್‌ 1ರಿಂದ ತೆರೆಯಲು ಉದ್ದೇಶಿಸಿರುವ ದೇವಸ್ಥಾನ, ಮಸೀದಿ ಹಾಗೂ ಚರ್ಚ್‌‌ಗಳನ್ನು ತೆರೆಯಲು ಅವಕಾಶ ನೀಡದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಕೇಂದ್ರದ ಮಾರ್ಗಸೂಚಿಯಂತೆ ಜೂನ್‌ 8‌ ದೇವಸ್ಥಾನ, ಚರ್ಚ್, ಮಸೀದಿ, ಹೊಟೇಲ್‌‌, ಮಾಲ್‌‌ಗಳನ್ನು ತೆರೆಯಲು ರಾಜ್ಯ ಸರ್ಕಾರ ಮುಂದಾಗಿದೆ. ದೇವಸ್ಥಾನಗಳಲ್ಲಿ ಕೇವಲ ಅರ್ಚಕರು ಮಾತ್ರವೇ ಗರ್ಭಗುಡಿಗೆ ಪ್ರವೇಶಿಸಿ ಪೂಜೆ ಸಲ್ಲಿಸಬಹುದಾಗಿದೆ. ಇನ್ನು ದೇವಸ್ಥಾನ ಆರಂಭವಾದ ಬಳಿಕ ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಅಲ್ಲದೇ, ಮುಖಕ್ಕೆ ಮಾಸ್ಕ್‌‌‌‌ ಧರಿಸಿಯೇ ದೇವರ […]

ಜೂನ್ 1ರಿಂದ ರಾಜ್ಯದ ದೇವಸ್ಥಾನ ತೆರೆಯಲು ಸರ್ಕಾರ ಸಮ್ಮತಿ

Tuesday, May 26th, 2020
Srinivas poojary

ಮಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಜೂನ್ 1ರಿಂದ ರಾಜ್ಯದ ದೇವಸ್ಥಾನಗಳನ್ನು ತೆರೆಯಲು ಸರ್ಕಾರ ಅವಕಾಶ ನೀಡಿದೆ. ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದೇವಸ್ಥಾನ ಗಳನ್ನು ತೆರೆಯುವುದರ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದ್ದಾರೆ. ಇನ್ನು ಸದ್ಯಕ್ಕೆ ಜಾತ್ರೆ, ಸಮಾರಂಭಗಳಿಗೆ ಅವಕಾಶ ಇಲ್ಲ ನೀಡಲಾಗಿಲ್ಲ. ದೇವಸ್ಥಾನಗಳಲ್ಲಿ ಭಕ್ತರು ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲನೆ ಮಾಡಬೇಕಿದೆ ಎಂದರು. ನಾಳೆಯಿಂದ ರಾಜ್ಯ 52 ದೇವಸ್ತಾನಗಳ ಆನ್ ಲೈನ್ ಸೇವೆಗೆ […]

ದೇವಸ್ಥಾನಗಳಿಂದ ಪ್ಯಾಕೇಟ್ ಗಳ ಮೂಲಕ ಉಪಹಾರ ಮತ್ತು ಊಟ ಸರಬರಾಜು

Saturday, March 28th, 2020
Kota

ಮಂಗಳೂರು:  ನಿರ್ಗತಿಕರು, ಕೂಲಿ ಕಾರ್ಮಿಕರು ಊಟವಿಲ್ಲದೇ ಪರದಾಡುತ್ತಿರುವವರಿಗೆ ಸಹಾಯವಾಗುವಂತೆ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಆಯ್ದ ಎ ದರ್ಜೆ ದೇವಸ್ಥಾನಗಳಿಂದ ಊಟ ಉಪಹಾರ ಸರಬರಾಜು ಮಾಡುವಂತೆ ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಯಾವ ಪ್ರದೇಶದಲ್ಲಿ ಇಂತಹ ಸಂಕಷ್ಟಕ್ಕೆ ಒಳಗಾದವರು ಇದ್ದಾರೋ ಅವರಿಗೆ ಉಪಹಾರ ಮತ್ತು ಊಟವನ್ನು ಸಿದ್ದಪಡಿಸಿ , ಪ್ರಾದೇಶಿಕವಾರು ಸಂದರ್ಭಕ್ಕನುಗುಣವಾಗಿ ಪ್ಯಾಕೇಟ್ ಗಳ ಮೂಲಕ ಅಥವಾ ಸ್ಥಳೀಯ ಜಿಲ್ಲಾಡಳಿತ ನಿರ್ಧರಿಸಿದಂತೆ ಆಹಾರ ವಿತರಿಸಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ. […]

ಬಂಟ್ವಾಳ : ದೇವಸ್ಥಾನದಲ್ಲಿ ನಗದು ಕಳವು; ಸಿಸಿ ಕ್ಯಾಮರಾದಲ್ಲಿ ಕಳ್ಳರ ಚಲನವಲನ ಸೆರೆ

Thursday, December 26th, 2019
veeara-bhadra-temple

ಬಂಟ್ವಾಳ : ಬಂಟ್ವಾಳ ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಕಟ್ಟೆಯ ಸಂಗಬೆಟ್ಟುನಲ್ಲಿರುವ, ಪಣಂಬೂರು ಶ್ರೀ ವೀರಭದ್ರ ಮಹಾಮ್ಮಾಯಿ ದೇವಸ್ಥಾನಕ್ಕೆ ಕಳ್ಳರು ನುಗ್ಗಿದ್ದು, ದೇವಸ್ಥಾನದ ಒಳಗಿರುವ ಕಾಣಿಕೆ ಡಬ್ಬಿ ಕೊಂಡೊಯ್ದ ಘಟನೆ ಸಂಭವಿಸಿದೆ. ಡಿ.25 ರ ಮಧ್ಯರಾತ್ರಿ 2.30 ವೇಳೆ ಘಟನೆ ಸಂಭವಿಸಿದ್ದು, ಕಳ್ಳರ ಚಲನ ವಲನ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಇಬ್ಬರು ವ್ಯಕ್ತಿಗಳು ದೇವಸ್ಥಾನಕ್ಕೆ ಒಳಗೆ ನುಗ್ಗಿದ ಚಿತ್ರ ಸಿ.ಸಿ.ಕ್ಯಾಮಾರದಲ್ಲಿ ಸೆರೆಯಾಗಿದೆ. ಶ್ರೀ ವೀರಭದ್ರ ಹಾಗೂ ಮಹಾಮ್ಮಾಯಿ ದೇವಸ್ಥಾನದ ನವೀಕರಣಗೊಂಡು ಇತ್ತೀಚಿಗೆ ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವ ನಡೆದಿತ್ತು.‌ […]

ದೇವಸ್ಥಾನಗಳಿಗೆ ವಾರ್ಷಿಕ ಅನುದಾನ ಹೆಚ್ಚಳಕ್ಕೆ ಚಿಂತನೆ : ಕೋಟಾ ಶ್ರೀನಿವಾಸ್‌ ಪೂಜಾರಿ

Thursday, September 5th, 2019
kota

ಶಿವಮೊಗ್ಗ : ಆರ್ಥಿಕ ಸಂಕಷ್ಟದಲ್ಲಿರುವ 27 ಸಾವಿರ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಿಗೆ ವಾರ್ಷಿಕ ಅನುದಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್‌ ಪೂಜಾರಿ ಹೇಳಿದರು. ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗಾಗಲೇ ಪ್ರತೀ ವರ್ಷ ಆರ್ಥಿಕ ಸಂಕಷ್ಟದಲ್ಲಿರುವ 27 ಸಾವಿರ ಮುಜರಾಯಿ ಇಲಾಖೆಯ ದೇವಸ್ಥಾನಗಳಿಗೆ 48 ಸಾವಿರ ಅನುದಾನವನ್ನು ನೀಡಲಾಗುತ್ತಿದೆ. ಇದನ್ನು ಮುಂಬರುವ ದಿನಗಳಲ್ಲಿ ಹೆಚ್ಚಿಸಲಾಗುವುದು […]

ದೇವಸ್ಥಾನಗಳಲ್ಲಿ ಸನಾತನ ಗ್ರಂಥಾಲಯದ ಉದ್ಘಾಟಣೆ

Friday, February 7th, 2014
Temple-Shree

ಮಂಗಳೂರುಃ   ಮಂಗಳೂರಿನ  ಶ್ರೀ ಮಾರಿಯಮ್ಮ ದೇವಸ್ಥಾನ ಉರ್ವ ದಿನಾಂಕ 04 ಫೆಬ್ರವರಿ 2014 ರಂದು ಇಲ್ಲಿನ ಆಡಳಿತ ಮೊಕ್ತೇಸರರಾದ ಶ್ರೀ ಮೋಹನ ಬೋಳೂರು ಇವರು  ದೀಪಪ್ರಜ್ವಲನೆ ಮಾಡಿ  ಸನಾತನ ಗ್ರಂಥಾಲಯದ ಉದ್ಘಾಟಣೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಸಹ ಮೊಕ್ತೇಸರರಾದ ಶ್ರೀ ಗಂಗಾಧರ ಪಾಂಗಲ್ ಬೈಕಂಪಾಡಿ, ಶ್ರೀ ಪುರಂದರ ಗುರಿಕಾರ ಹೋಸಬೆಟ್ಟು,ಶ್ರೀ ಭಾಸ್ಕರ ಸಾಲಿಯಾನ ಬೋಳೂರು,ಶ್ರೀ ದಯಾನಂದ ಪುತ್ರನ್ ಕುದ್ರೋಳಿ, ಸನಾತನ ಸಂಸ್ಥೆಯ ಕು ವಿಜಯಲಕ್ಷ್ಮೀ ಹಿಂದೂ ಜನಜಾಗ್ರತಿ ಸಮಿತಿಯ ಶ್ರೀ ಪ್ರಸನ್ನ್ ಕಾಮತ ಮತ್ತಿತರ ಗಣ್ಯ ವ್ಯಕ್ತಿಗಳು […]

ಜಿಲ್ಲೆಯ ವಿವಿಧ ದೇವಸ್ಥಾನಗಳಿಂದ ಕದ್ದ 17 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳ ವಶ

Saturday, July 20th, 2013
six temple thieves

ಮಂಗಳೂರು : ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಅಭಿಷೇಕ್ ಗೋಯಲ್ ಅವರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ದೇವಸ್ಥಾನ ಹಾಗೂ ಬಸದಿಗಳಲ್ಲಿ ದರೋಡೆ ನಡೆಸಿದ್ದ ಕಳ್ಳರ ತಂಡವನ್ನು ಬಂಟ್ವಾಳ ಪೊಲೀಸರು ಬಂಧಿಸಿ, ಅವರಲ್ಲಿದ್ದ 17 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಹಾಗೂ ಪ್ರಾಚೀನ ಜೈನ ತೀರ್ಥಂಕರ ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಂದು ಅವರ ಕಚೇರಿಯಲ್ಲಿ ಜುಲೈ 19ರಂದು ಕರೆದ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು. ಬಂಟ್ವಾಳ ಪೊಲೀಸರು  ಜೂನ್ 12ರಂದು ವಾಹನ ತಪಾಸಣೆ ಮಾಡುತ್ತಿದ್ದಾಗ […]