Blog Archive

ಉಗ್ರ ಬಿನ್‌ ಲಾಡೆನ್‌ ಉತ್ಸವ ಆಚರಿಸಲಿ: ಸಂಸದ ನಳಿನ್‌

Friday, February 16th, 2018
nalin-kumar

ಮಂಗಳೂರು: ಬಹಮನಿ ಉತ್ಸವ ಆಚರಿಸಲು ಮುಂದಾಗಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಯೋತ್ಪಾದಕ ಒಸಮಾ ಬಿನ್ ಲಾಡೆನ್ ಉತ್ಸವ ಆಚರಿಸಲಿ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಲೇವಡಿ ಮಾಡಿದ್ದಾರೆ. ಪುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಹಿರಿಮೆಯಾಗಿದ್ದ ವಿಜಯನಗರ ಸಾಮ್ರಾಜ್ಯದ ಮೇಲೆ ದಂಡೆತ್ತಿ ಬಂದ ದಂಗೆಕೋರ ಬಹಮನಿ ಸುಲ್ತಾನರು, ಶ್ರೀಮಂತ ವಿಜಯನಗರ ಸಾಮ್ರಾಜ್ಯವನ್ನು ಹಾಳು ಹಂಪೆ ಮಾಡಿದ್ದರು. ಈ ಕರಾಳ ಘಟನೆಯ ಅರಿವಿದ್ದರೂ ಅಲ್ಪಸಂಖ್ಯಾತರ ಓಲೈಕೆಗೆ ಯಾವ ರೀತಿಯಲ್ಲಿ ಬೇಕಾದರೂ ನಡೆದುಕೊಳ್ಳುವ ರಾಜಕಾರಣವನ್ನು ಮಾಡುತ್ತಿದ್ದಾರೆ […]

ಕೇಂದ್ರದಿಂದ ಜಿಲ್ಲೆ ಅಭಿವೃದ್ಧಿಗೆ 91.2 ಕೋ. ರೂ.: ಕೊಟ್ಟಾರಿ

Saturday, February 10th, 2018
nalin-kumar

ಮಂಗಳೂರು: ಸಂಸದ ನಳಿನ್‌ ಕುಮಾರ್‌ ಕಟೀಲು ಶಿಫಾರಸಿನ ಮೇರೆಗೆ ಜಿಲ್ಲೆಯ ವಿವಿಧ ರಸ್ತೆಗಳು ಹಾಗೂ ಕಾಲೇಜುಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸರಕಾರ ಒಟ್ಟು 91.2 ಕೋ. ರೂ. ಅನುದಾನ ನೀಡಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ ತಿಳಿಸಿದರು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ರಸ್ತೆ ನಿಧಿ (ಸಿಆರ್‌ಎಫ್‌)ಯಿಂದ ಜಪ್ಪಿನಮೊಗರು ರಸ್ತೆಗೆ 3 ಕೋ. ರೂ., ಕಂಕನಾಡಿ- ಪಂಪುವೆಲ್‌ ಬೈಪಾಸ್‌ ರಸ್ತೆಗೆ 4 ಕೋ.ರೂ., ಪುತ್ತೂರಿನ ಮುಡಿಪಿನಡ್ಕ, ಮೈಂದನಡ್ಕ, ಸುಳ್ಯಪದವು ರಸ್ತೆಗಳಿಗೆ 5.5 […]

ಕಾಂಗ್ರೆಸ್‌ನದ್ದು ರಾಜಕೀಯದ ಭಕ್ತಿ, ಹಿಂದುತ್ವ

Wednesday, January 24th, 2018
udupi-BJP

ಉಡುಪಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಚುನಾವಣೆ ಮತ್ತು ರಾಜಕೀಯ ಉದ್ದೇಶದಿಂದ ಮಾಡುತ್ತಿರುವ ಹಿಂದುತ್ವ ಮತ್ತು ದೇವರ ಮೇಲಿನ ಭಕ್ತಿಗೆ ಗುಜರಾತ್‌ನ ಜನ ಪಾಠ ಕಲಿಸಿದ್ದಾರೆ. ಕರ್ನಾಟಕ ದಲ್ಲಿಯೂ ಇದೇ ರೀತಿಯಾಗಲಿದೆ ಎಂದು ಕೇಂದ್ರ ಸಚಿವ, ಕರ್ನಾಟಕ ಬಿಜೆಪಿಯ ಚುನಾವಣಾ ಸಂಚಾಲಕ ಪ್ರಕಾಶ್‌ ಜಾಬ್ಡೇಕರ್‌ ಹೇಳಿದರು. ಜ.23ರಂದು ಉಡುಪಿಯಲ್ಲಿ ಬಿಜೆಪಿ ಪ್ರಮುಖರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಹುಲ್‌ಗಾಂಧಿ ಅವರಿಗೆ ಈಗ ಹಿಂದುತ್ವದ ಮೇಲೆ ಪ್ರೀತಿ, ಭಕ್ತಿ ಮೂಡಿದೆ. ಅವರ ಹೇಳಿಕೆಯ ಅನಂತರ ಸಿದ್ದರಾಮಯ್ಯ ಕೂಡ ತಾನೂ ಓರ್ವ […]

ದೀಪಕ್‌ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿದ ಜನತೆ

Saturday, January 6th, 2018
support

ಮಂಗಳೂರು: ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ದೀಪಕ್‌ ರಾವ್‌ ಅವರ ಕುಟುಂಬದ ಆರ್ಥಿಕ ನೆರವಿಗೆ ಸಾರ್ವಜನಿಕರು ಸ್ಪಂದಿಸಿದ್ದು, ಅವರ ತಾಯಿ ಪ್ರೇಮಾರ ಬ್ಯಾಂಕ್‌ ಖಾತೆಗೆ ಶನಿವಾರ ಮಧ್ಯಾಹ್ನದ ವೇಳೆಗೆ 24 ಲಕ್ಷ ರೂಪಾಯಿ ಜಮೆಯಾಗಿದೆ.ಶುಕ್ರವಾರ ಸಂಜೆವರೆಗೆ 17,43,859 ರೂ. ಜಮೆಯಾಗಿತ್ತು. ಈ ಬಗ್ಗೆ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದು, ಸಹಾಯಹಸ್ತ ನೀಡಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದ್ದಾರೆ. ದೀಪಕ್‌ ಸ್ನೇಹಿತರು ಅವರ ತಾಯಿಯ ಖಾತೆಗೆ ಹಣ ಜಮೆ ಮಾಡುವಂತೆ ವಿನಂತಿಸಿ ಫೇಸ್‌ಬುಕ್‌ ಮತ್ತು […]

ಮಂಗಳೂರು-ಶಾರ್ಜಾ ನಡುವಣ ಜೆಟ್‌ ಜೆಟ್‌ ಏರ್‌ವೇಸ್‌ನ ನೇರ ವಿಮಾನಯಾನ ಆರಂಭ

Monday, August 8th, 2016
Mangalore-Sharja

ಮಂಗಳೂರು: ಮಂಗಳೂರು-ಶಾರ್ಜಾ ನಡುವಣ ಜೆಟ್‌ ಜೆಟ್‌ ಏರ್‌ವೇಸ್‌ನ ನೇರ ವಿಮಾನಯಾನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರವಿವಾರ ಆರಂಭವಾಯಿತು. ಮುಖ್ಯ ಅತಿಥಿಯಾಗಿದ್ದ ನಿಟ್ಟೆ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಎನ್‌. ವಿನಯ ಹೆಗ್ಡೆ ಅವರು ಮಂಗಳೂರು-ಶಾರ್ಜಾ ನೇರವಿಮಾನ ಯಾನದ ದೀರ್ಘ‌ಕಾಲದ ಕನಸು ನನಸಾಗಿದೆ ಎಂದರು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಪ್ರಯಾಣಿಕರಿಗೆ ವಿಶೇಷ ಸೌಲಭ್ಯ ಒದಗಿಸುವ ಮೂಲಕ ಜೆಟ್‌ ಏರ್‌ವೇಸ್‌ ಯಶಸ್ಸು ಸಾಧಿಸಿದೆ ಎಂದು ಶ್ಲಾಘಿಸಿದರು. ಮಂಗಳೂರು ಅಂ.ವಿ. ನಿಲ್ದಾಣದ ಸಮಗ್ರ ಬೆಳವಣಿಗೆ […]

ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳಿಗೆ ಪ್ರತಿ ತಿಂಗಳು ಎರಡು ಬಾರಿ ಭೇಟಿ ನೀಡಲಾಗುವುದು: ಕಟೀಲ್‌

Thursday, July 7th, 2016
Nalin

ಪುತ್ತೂರು: ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳಿಗೆ ಪ್ರತಿ ತಿಂಗಳು ಎರಡು ಬಾರಿ ಭೇಟಿ ನೀಡಲಾಗುವುದು. ಈ ಹಿಂದೆ ಯೋಜನೆ ರೂಪಿಸಲಾಯಿತಾದರೂ ಕಾರ್ಯಕ್ರಮದ ಒತ್ತಡದಿಂದ ಭೇಟಿ ನೀಡಲು ಆಗಿರಲಿಲ್ಲ. ಮುಂದೆ ಕ್ಷೇತ್ರ ಪ್ರವಾಸ ಹಮ್ಮಿಕೊಂಡು ಜನರ ಸಮಸ್ಯೆಗಳನ್ನು ಆಲಿಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಅವರು ಪುತ್ತೂರು ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಆದರ್ಶ ರೈಲು ನಿಲ್ದಾಣದ ಜೊತೆಗೆ ಜೆಪ್ಪು ಕುಡಿಪ್ಪಾಡಿ, ಸುಬ್ರಹ್ಮಣ್ಯ, ಎಡಮಂಗಲದಲ್ಲಿ ರಚನೆಯಾದ ಸೇತುವೆಗಳ ಉದ್ಘಾಟನೆ ನಡೆಯಲಿದೆ. […]

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಕೆ.ಟಿ ಶೈಲಾಜಾ ಭಟ್

Wednesday, February 9th, 2011
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಚುನಾವಣೆ

ಮಂಗಳೂರು,ಫೆ.08: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ 2011-12ರ ಅವಧಿಯ ಅಧ್ಯಕ್ಷರಾಗಿ ಬಿಜೆಪಿ ಸದಸ್ಯರಾದ ಕೆ.ಟಿ ಶೈಲಾಜಾ ಭಟ್  ಅವರು ಅಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಧರ್ಮಸ್ಥಳ ಕ್ಷೇತ್ರದ ಬಿಜೆಪಿ ಸದಸ್ಯೆ ಧನಲಕ್ಷ್ಮೀ ಜನಾರ್ಧನ್.ಡಿ ಇವರು ಅಯ್ಕೆಯಾಗಿದ್ದಾರೆ . ಚುನಾವಣಾಧಿಕಾರಿ   ಎಂ.ವಿ. ಜಯಂತಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಸಹಾಯಕ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ  ಅವರ ಉಪಸ್ಥಿತಿಯಲ್ಲಿ ನಗರದ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ  ಅಧ್ಯಕ್ಷ ಹಾಗೂ ಉಪಾಧ್ಯಕ್ಷ  ಚುನಾವಣೆ ನಡೆಯಿತು. ಒಟ್ಟು 35 ಸದಸ್ಯ ಬಲದ ದ.ಕ.ಜಿಲ್ಲಾ ಪಂಚಾಯತ್‌ನಲ್ಲಿ ಬಿಜೆಪಿ […]

ಸಹ್ಯಾದ್ರಿ ಆರೋಗ್ಯ ವಿಜ್ಞಾನ ಅಧ್ಯಯನ ಶಿಕ್ಷಣ ಸಂಸ್ಥೆಯಿಂದ ವಿಶ್ವ ಏಡ್ಸ್ ದಿನಾಚರಣೆ

Wednesday, December 1st, 2010
ಸಹ್ಯಾದ್ರಿ ಆರೋಗ್ಯ ವಿಜ್ಞಾನ ಅಧ್ಯಯನ ಶಿಕ್ಷಣ ಸಂಸ್ಥೆ ಮಂಗಳೂರು

ಮಂಗಳೂರು: ಸಹ್ಯಾದ್ರಿ ಆರೋಗ್ಯ ವಿಜ್ಞಾನ ಅಧ್ಯಯನ ಶಿಕ್ಷಣ ಸಂಸ್ಥೆ ಮಂಗಳೂರು ಇದರ ವತಿಯಿಂದ ನಗರದ ಪುರಭವನದಲ್ಲಿ ವಿಶ್ವ ಏಡ್ಸ್ ದಿನಾಚರಣೆಯನ್ನು  ಇಂದು ಬೆಳಿಗ್ಗೆ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ದ.ಕ ಸಂಸದ. ನಳಿನ್ ಕುಮಾರ್ ಕಟೀಲು, ನೆರವೇರಿಸಿದರು. ಉದ್ಘಾಟನೆಯ ಬಳಿಕ ಮಾತನಾಡಿದ ಅವರು ಏಡ್ಸ್ ರೋಗಿಗಳಿಗೆ ಆತ್ಮ ಸ್ಥೈರ್ಯ ತುಂಬುವ ಕಾರ್ಯ ಆಗಬೇಕು, ಸಾಮಾಜಿಕ ಜಾಗೃತಿಯೊಂದಿಗೆ. ತ್ಯಾಗ, ಸಮರ್ಪಣಾಭಾವ ಮತ್ತು ಸಾಮಾಜಿಕ ಕಳಕಳಿ ಶಿಕ್ಷಣ ಸಂಸ್ಥೆಗಳಿಗೆ ಇರಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಎ.ಜೆ ಮೆಡಿಕಲ್ ಕಾಲೇಜಿನ  ಚರ್ಮ […]

ಬ್ಯಾರಿ ಸಾಹಿತ್ಯ ಅಕಾಡೆಮಿಗೆ ನೂತನ ವೆಬ್ ಸೈಟ್.

Tuesday, November 2nd, 2010
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ವೆಬ್ ಸೈಟ್

ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ವೆಬ್ ಸೈಟ್ karnatakabearysahityaacademy.org ಯನ್ನು ನಗರದ ಶ್ರೀನಿವಾಸ ಹೋಟೇಲ್ ನಲ್ಲಿ ಇಂದು ಬೆಳಿಗ್ಗೆ 10.00ಗೆ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಗುಂಡಿ ಒತ್ತುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಬ್ಯಾರಿ ಭಾಷೆ ಮತ್ತು ಸಂಸ್ಕೃತಿಯು ತುಳು ಭಾಷೆ ಮತ್ತು ಸಂಸ್ಕೃತಿಯಷ್ಟೇ ಶ್ರೀಮಂತವಾಗಿದೆ. ಈ ಎರಡೂ ಸಮುದಾಯಗಳ ಸಂಬಂಧ ಅನನ್ಯವಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಉದ್ಯೋಗ ಮತ್ತಿತರ ಕಾರಣಕ್ಕಾಗಿ ಬ್ಯಾರಿಗಳು ಜಗತ್ತಿನ ವಿವಿಧ ಮೂಲೆಗಳಲ್ಲಿ ಹಂಚಿ […]