Blog Archive

ಪೆಟ್ರೋಲ್‌ ಬೆಲೆ 25 ರೂ.ಇಳಿಸಲು ಸಾಧ್ಯ, ಆದರೆ ಸರಕಾರ ಮಾಡದು: ಪಿ.ಚಿದಂಬರಂ

Wednesday, May 23rd, 2018
p-chidambaram

ಹೊಸದಿಲ್ಲಿ :”ದೇಶದ ಜನರು ಖರೀದಿಸುವ ಪ್ರತಿ ಲೀಟರ್‌ ಪೆಟ್ರೋಲ್‌ ದರದಲ್ಲಿ 25 ರೂ.ಗಳನ್ನು ಕೇಂದ್ರ ಸರಕಾರ ಬಾಚಿ ಕೊಳ್ಳುತ್ತಿದೆ ಮತ್ತು ತನ್ನ ಖಜಾನೆಯನ್ನು ಅದು ತುಂಬಿಸಿಕೊಳ್ಳುತ್ತಿದೆ” ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಆರೋಪಿಸಿದ್ದಾರೆ. ದಿಲ್ಲಿಯಲ್ಲಿಂದು ಪೆಟ್ರೋಲ್‌ ಲೀಟರ್‌ ದರ 30 ಪೈಸೆಯಷ್ಟು ಏರಿ 77 ರೂ. ಗಡಿ ದಾಟಿದ ಸಂದರ್ಭದಲ್ಲಿ ಚಿದಂಬರಂ ಅವರು ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಟ್ವಿಟರ್‌ ವಾಗ್ಧಾಳಿ ಆರಂಭಿಸಿದರು. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಇಳಿದಾಗ ಕೇಂದ್ರ ಸರಕಾರ ಜನರು […]

ಕೇಂದ್ರ ಬಜೆಟ್ 2018: ನಿರೀಕ್ಷೆಗಳು, ಅಪೇಕ್ಷೆಗಳ ಮಧ್ಯೆ ಹಗ್ಗದ ನಡಿಗೆ

Thursday, February 1st, 2018
arun-jetly

ನವ ದೆಹಲಿ: ಕೇಂದ್ರ ಸರ್ಕಾರಕ್ಕೆ ಈ ಬಾರಿಯ ಬಜೆಟ್ ಹಗ್ಗದ ಮೇಲಿನ ನಡಿಗೆ. ಈ ಬಜೆಟ್ ನಲ್ಲಿನ ಪ್ರಮುಖ ಘೋಷಣೆಗಳು ಯಾವುದು ಆಗಬಹುದು ಎಂಬುದರ ವಿವರಗಳು ಇಲ್ಲಿವೆ.  ಆದಾಯ ತೆರಿಗೆ ವಿನಾಯಿತಿ ಸದ್ಯಕ್ಕೆ ಎರಡೂವರೆ ಲಕ್ಷ ರುಪಾಯಿ ಇದೆ. ಅದನ್ನು ಹೆಚ್ಚಿಸಬಹುದು ಎಂಬುದು ಹೆಚ್ಚಿನ ಸಂಖ್ಯೆಯಲ್ಲಿರುವ ವೇತನದಾರರ ನಿರೀಕ್ಷೆ.  ಷೇರುಗಳಿಗೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ ತೆರಿಗೆ ಹಾಕಬಹುದು ಕಾರ್ಪೋರೇಟ್ ತೆರಿಗೆಗಳಲ್ಲಿ ಇಳಿಕೆ ಮಾಡಬಹುದು. ಬಜೆಟ್ ಬಗ್ಗೆ ಐಐಎಂಬಿ ಪ್ರೊಫೆಸರ್ ವೈದ್ಯನಾಥನ್ ಕೃಷಿ ವಲಯಕ್ಕೆ ಭರಪೂರ ಯೋಜನೆಗಳನ್ನು […]

ಕಾಸರಗೋಡಿನಲ್ಲಿ ಮನೆಗೆ ಬೆಂಕಿ ಬಿದ್ದು ನಾಲ್ಕು ಮಂದಿ ಸಜೀವ ದಹನ

Tuesday, August 20th, 2013
Four members of family found burnt inside house at Kannur

ಕಾಸರಗೋಡು:  ಮನೆಗೆ ಬೆಂಕಿ ಬಿದ್ದ ಪರಿಣಾಮ ಸೋಮವಾರ ತಡರಾತ್ರಿ ನಿದ್ದೆಯಲ್ಲಿದ್ದ ನಾಲ್ಕು ಮಂದಿ ಸಜೀವ ದಹನಗೊಂಡ ದುರ್ಘಟನೆ ಕಣ್ಣೂರಿನ ಚೆರುಪುಳದಲ್ಲಿ ನಡೆದಿದೆ. ಸುಟ್ಟು ಕರಕಲಾಗಿರುವ ನಾಲ್ಕು ಶವಗಳು ಕೋಣೆಯಲ್ಲಿ ಪತ್ತೆಯಾಗಿದೆ ಈ ದುರ್ಘಟನೆಯಲ್ಲಿ ಸಾಜಿ (42), ಮತ್ತು  ಸಿಂಧು(31) ಮತ್ತು ಅವರ ಮಕ್ಕಳಾದ ಅಧೀರಾ (10), ಮತ್ತು  ಅತುಲ್ಯ(5) ಮೃತಪಟ್ಟಿದ್ದಾರೆ. ಮನೆಗೆ ಬೆಂಕಿ ಬಿದ್ದಿತ್ತೇ ಅಥವಾ ಇದು ಸಾಮೂಹಿಕ ಆತ್ಮಹತ್ಯೆಯೇ ಎನ್ನುವುದು ಇದುವರೆಗೆ ತಿಳಿದುಬಂದಿಲ್ಲ. ಎಲ್ಲಾ ಶವಗಳು ಒಂದೇ ಕೋಣೆಯಲ್ಲಿ ಸಿಕ್ಕಿರುವ ಕಾರಣ ಇದು ಆತ್ಮಹತ್ಯೆ ಪ್ರಕರಣವಾಗಿರಬಹುದೆಂದು […]