Blog Archive

ಬಂಟ್ವಾಳದ ಕೋವಿಡ್ 19 ಮೃತ ಮಹಿಳೆಯ ಶುಶ್ರೂಷಕಿ ಮತ್ತು ಮನೆಯ 9 ಮಂದಿಗೆ ಹೋಂ ಕ್ವಾರಂಟೈನ್‌‍

Wednesday, April 22nd, 2020
quarantine

ಬೆಳ್ತಂಗಡಿ: ಬಂಟ್ವಾಳದಲ್ಲಿ ಕೋವಿಡ್ 19 ವೈರಸ್ ನಿಂದ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಆರೈಕೆ ಮಾಡುತ್ತಿದ್ದ ವಾರ್ಡ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಶುಶ್ರೂಷಕಿ ಸಂಪರ್ಕದಲ್ಲಿದ್ದ ಪುದುವೆಟ್ಟು ಗ್ರಾಮದ ಸಾಮೇದಕಲಪುವಿನ ಒಂದೇ ಮನೆಯ ಮಕ್ಕಳು ಸೇರಿದಂತೆ 9 ಮಂದಿಯನ್ನು ಎ. 21ರಂದು ನೆರಿಯ ಆಸ್ಪತ್ರೆಯ ವೈದ್ಯರ ತಂಡ ಮುನ್ನೆಚ್ಚರಿಕಾ ಕ್ರಮವಾಗಿ ಹೋಂ ಕ್ವಾರಂಟೈನ್‌‍ಗೆ ಒಳಪಡಿಸಿದೆ. ಕೋವಿಡ್ 19 ವೈರಸ್ ಸೋಂಕಿನಿಂದ ಮೃತಪಟ್ಟ ಮಹಿಳೆ ಬಂಟ್ವಾಳದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅವರನ್ನು ಆರೈಕೆ ಮಾಡಿದ್ದ ವಾರ್ಡ್‌ನಲ್ಲಿದ್ದ ನರ್ಸ್‌ […]

ಕೋವಿಡ್ ಸೋಂಕಿಗೆ ಬಂಟ್ವಾಳದ ಮಹಿಳೆ ಬಲಿ ; ಅರೋಗ್ಯ ಇಲಾಖೆ ಅಧಿಕಾರಿಗಳ ಮಾರ್ಗದರ್ಶಶನದಂತೆ ಶವ ಸಂಸ್ಕಾರ

Sunday, April 19th, 2020
Bantwal death

ಮಂಗಳೂರು : ಬಂಟ್ವಾಳ ಕಸ್ಬಾ ನಿವಾಸಿ 50 ವರ್ಷದ ಮಹಿಳೆಯೊಬ್ಬರು ಕೋವಿಡ್ ಸೋಂಕಿಗೆ ತುತ್ತಾಗಿ ತೀವ್ರ ಉಸಿರಾಟದ ತೊಂದರೆಯಿಂದ ಭಾನುವಾರ ಮಂಗಳೂರಿನಲ್ಲಿ ಬೆಳಿಗ್ಗೆ 9.15 ಕ್ಕೆ ನಿಧನ ಹೊಂದಿದ್ದಾರೆ. ಇದು ದಕ್ಷಿಣ ಕನ್ನಡದಲ್ಲಿ ಕೋವಿಡ್ ಸೋಂಕಿನ ಮೊದಲ ಬಲಿ ಎನ್ನಲಾಗಿದೆ. ಮಹಿಳೆ ಉಸಿರಾಟದ ತೊಂದರೆಯಿಂದ ಶನಿವಾರ ಸಂಜೆ ವೆನ್ ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರನಿಗಾದಲ್ಲಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆಂದು ಜಿಲ್ಲಾಧಿಕಾರಿಯವರ ಪ್ರಕಟಣೆ ತಿಳಿಸಿದೆ. ಮೃತರ ಗಂಟಲು ದ್ರವ ಪರೀಕ್ಷೆಯ ವರದಿ ಭಾನುವಾರ ಮಧ್ಯಾಹ್ನ ಸಿಗುವ ಮೊದಲೇ ಸಾವನ್ನಪ್ಪಿದ್ದಾರೆ. […]

ಬಂಟ್ವಾಳ: 10 ತಿಂಗಳ ಮಗುವಿಗೆ ಇದೀಗ ಕೋವಿಡ್ 19 ವೈರಸ್ ಸೋಂಕು ದೃಢ

Friday, March 27th, 2020
Bantwal Baby

ಬಂಟ್ವಾಳ:  ಮಾರ್ಚ್ 23ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ 10 ತಿಂಗಳ ಮಗುವಿಗೆ ಇದೀಗ ಕೋವಿಡ್ 19 ವೈರಸ್ ಸೋಂಕು ತಗಲಿರುವುದು ಮಗುವಿನ ಗಂಟಲು ಸ್ರಾವ ಪರೀಕ್ಷಾ ವರದಿಯಿಂದ ಇಂದು ಸಾಬೀತುಗೊಂಡಿದೆ. ಈ ಹಿನ್ನಲೆಯಲ್ಲಿ ಕೊವಿಡ್ 19 ಸೋಂಕು ಮಗುವಿನ ಪೋಷಕರು ವಾಸವಿದ್ದ ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದಲ್ಲಿ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಇದೀಗ ಪೂರ್ತಿ ಗ್ರಾಮವನ್ನು ಕ್ವಾರೆಂಟೈನ್ ಮಾಡಲಾಗಿದೆ. ಹೀಗಾಗಿ ಈ ಗ್ರಾಮದಿಂದ ಯಾರು ಹೊರ ಹೋಗದಂತೆ ಮತ್ತು ಈ ಗ್ರಾಮಕ್ಕೆ ಯಾರೂ ಪ್ರವೇಶಿಸದಂತೆ ಜಿಲ್ಲಾಡಳಿತವು […]

ಬಂಟ್ವಾಳ : ಕಂಚಿನಡ್ಕಪದವುನಲ್ಲಿ ತ್ಯಾಜ್ಯ ವಿಲೇವಾರಿ ವಿವಾದ; ಸಜೀಪನಡು ಗ್ರಾಮ ಸಂಪೂರ್ಣ ಬಂದ್

Thursday, March 19th, 2020
sanjipa

ಬಂಟ್ವಾಳ : ಸಜೀಪನಡು ಗ್ರಾಮದ ಕಂಚಿನಡ್ಕಪದವುನಲ್ಲಿ ಮಾ. 18ರಂದು ಬಂಟ್ವಾಳ ಪುರಸಭೆಯ ಕಸ ವಿಲೇವಾರಿ ನಡೆಸುವ ವೇಳೆ ನಡೆದ ಬೆಳವಣಿಗೆಯನ್ನು ಖಂಡಿಸಿ ಗುರುವಾರ ಸಜೀಪ ಸಂಪೂರ್ಣ ಬಂದ್ ನಡೆಸಲಾಗುತ್ತಿದೆ. ಕಸ ವಿಲೇವಾರಿ ನಡೆಸುವುದನ್ನು ಪ್ರತಿಭಟಿಸಿದ ಗ್ರಾಮಸ್ಥರ ಮೇಲೆ ಪೊಲೀಸರ ದೌರ್ಜನ್ಯ ಪ್ರದರ್ಶಿಸಿದ್ದಾರೆ ಹಾಗೂ ಕಸ ವಿಲೇವಾರಿಯ ವಿಚಾರದಲ್ಲಿ ಪುರಸಭೆಯವರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಿ ಸಜೀಪನಡು ಗ್ರಾಮಸ್ಥರು ಸಜೀಪ ಬಂದ್ ಗೆ ಕರೆ ನೀಡಿದ್ದರು. ಕಂಚಿನಡ್ಕಪದವು ಘಟಕದಲ್ಲಿ ತ್ಯಾಜ್ಯ ವಿಲೇವಾರಿ ನಡೆಸುವ ಕುರಿತು ಕೆಲವು ದಿನಗಳಿಂದ ಸ್ಥಳೀಯರು […]

ಬಂಟ್ವಾಳದಲ್ಲಿ ನಟೋರಿಯಸ್ ರೌಡಿ ಮುತ್ತಾಸಿಮ್ ಭೀಕರ ಕೊಲೆ

Monday, February 3rd, 2020
murder

ಬಂಟ್ವಾಳ : ಕೇರಳದ ನಟೋರಿಯಸ್ ರೌಡಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಗ್ರಿ ಎಂಬಲ್ಲಿ ನಿಗೂಢವಾಗಿ ಕೊಲೆಯಾಗಿದ್ದಾನೆ. ಕೊಲೆಯಾದ ವ್ಯಕ್ತಿ ನಟೋರಿಯಸ್ ರೌಡಿಶೀಟರ್ ಕೇರಳ ಮೂಲದ ಮುತ್ತಾಸಿಮ್ ಯಾನೆ ತಸ್ಲೀಮ್ ಎಂದು ಗುರುತಿಸಲಾಗಿದ್ದು ಬಂಟ್ವಾಳದ ನಗ್ರಿ ಸಮೀಪದ ಗುಡ್ಡೆಯಲ್ಲಿ ಅನಾಥವಾಗಿ ಕಾರೊಂದರಲ್ಲಿ ಶವ ಪತ್ತೆಯಾಗಿದೆ. ಅಪಹರಣ ಮಾಡಿ ಕೊಲೆ ಮಾಡಿ ಬಂಟ್ವಾಳ ಸಮೀಪದ ನಗ್ರಿ ಎಂಬಲ್ಲಿ ಕಾರು ನಿಲ್ಲಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. 2017ರಲ್ಲಿ ಮಂಗಳೂರು ಹೊರವಲಯದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಯ […]

ಬಂಟ್ವಾಳ : ಗೋವು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Saturday, December 14th, 2019
bantwal

ಬಂಟ್ವಾಳ : ಜಾನುವಾರುಗಳ ಕಳವು ಪ್ರಕರಣದ ಆರೋಪದ ಮೇರೆಗೆ ಪೊಲೀಸರು ವಾಹನ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ನಿವಾಸಿ ನಜಾದುದ್ದೀನ್ ಹಾಗೂ ಅರ್ಕುಳ ಗ್ರಾಮದ ಅಬ್ದುಲ್ ಸಲಾಂ ಬಂಧಿತ ಆರೋಪಿಗಳು. ನವೆಂಬರ್ 28ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಜೀಪನಡುವಿನಲ್ಲಿ ಸಜೀಪದಿಂದ ಕಂಚಿನಡ್ಕಕ್ಕೆ ತೆರಳುವ ರಸ್ತೆಯಲ್ಲಿ ದನಗಳ ಕಳವಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು […]

ಇರಾ ಗ್ರಾಪಂ ಅಧ್ಯಕ್ಷ ರಝಾಕ್ ಮೇಲೆ ಹಲ್ಲೆ ಪ್ರಕರಣ : ಮೂವರು ಆರೋಪಿಗಳ ಬಂಧನ

Friday, December 13th, 2019
ira

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ ಗ್ರಾಪಂ ಅಧ್ಯಕ್ಷರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಮಂಚಿ ನಿವಾಸಿಗಳಾದ ಬಶೀರ್ (27), ಕಬೀರ್ (23), ತನ್ವೀರ್(23) ಬಂಧಿತ ಆರೋಪಿಗಳು. ನ.30ರಂದು ಮಂಚಿ ಕಟ್ಟೆಯ ಬಳಿ ಇರಾ ಗ್ರಾಪಂ ಅಧ್ಯಕ್ಷ ರಝಾಕ್ ಎಂಬುವರ ಮೇಲೆ ಮೂವರು ಹಲ್ಲೆ ನಡೆಸಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು […]

ಬಂಟ್ವಾಳ : ದ.ಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಿ.ಆನಂದ ನಿಧನ

Tuesday, December 10th, 2019
Anand

ಬಂಟ್ವಾಳ : ಬಂಟ್ವಾಳ ಬಿಜೆಪಿ ಮಾಜಿ ಕ್ಷೇತ್ರಾಧ್ಯಕ್ಷ ಜಿ.ಆನಂದ (70) ಮಂಗಳವಾರ ಮುಂಜಾನೆ 1.30ರ ಸುಮಾರಿಗೆ ನಿಧನ ಹೊಂದಿದರು. ಬಂಟ್ವಾಳ ವ್ಯವಸಾಯ ಸೇವಾ ಸಹಕಾರ ಸಂಘ ಅಧ್ಯಕ್ಷರಾಗಿದ್ದ ಅವರು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿದ್ದರು. ವೀಣಾಧಾರಿಣಿ ಕಲಾ ಯುವಕ ಸಂಘ, ಸ್ಟೇಟ್ ಟೈಲರ್ ಅಸೋಸಿಯೇಶನ್, ಸ್ಥಳೀಯ ಕಲ್ಲುರ್ಟಿ ಸನ್ನಿಧಿ ಸಹಿತ ಹಲವು ಸಂಘಸಂಸ್ಥೆಗಳಲ್ಲಿ ಅವರು ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಜಿ.ಆನಂದ ನಿಧನಕ್ಕೆ ಬಂಟ್ವಾಳ […]

ಬಂಟ್ವಾಳ : 4 ತಾಲೂಕುಗಳಿಗೆ ಎಂಆರ್ ಪಿಎಲ್ ಸಂಸ್ಥೆಯಿಂದ ಆ್ಯಂಬುಲೆನ್ಸ್ ಕೊಡುಗೆ

Wednesday, October 30th, 2019
Bantwal

ಬಂಟ್ವಾಳ : ಎಂಆರ್ ಪಿಎಲ್ ಸಂಸ್ಥೆಯು ಸಿಎಸ್.ಆರ್. ನಿಧಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕು ಆಸ್ಪತ್ರೆಗಳಿಗೆ ನೀಡಿರುವ 4 ಹೊಸ ಆ್ಯಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ಬುಧವಾರ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ನಡೆಯಿತು. ಆ್ಯಂಬುಲೆನ್ಸ್ ಗಳ ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯದಲ್ಲಿ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಇತ್ತೀಚಿನ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಹೆರಿಗೆ ಸಾವುಗಳು ಸಂಪೂರ್ಣ ಕಡಿಮೆಯಾಗಿದ್ದು […]

ಹುಟ್ಟೂರಿನಲ್ಲಿ ಕದ್ರಿ ಗೋಪಾಲನಾಥ್ ಅವರ ಪಾರ್ಥೀವ ಶರೀರದ ಅಂತ್ಯಸಂಸ್ಕಾರ

Monday, October 14th, 2019
gopalnath

ಮಂಗಳೂರು : ವಿಶ್ವ ಪ್ರಸಿದ್ದ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಅವರ ಪಾರ್ಥೀವ ಶರೀರದ ಅಂತ್ಯಸಂಸ್ಕಾರ ಇಂದು ಸಂಜೆ ಅವರ ಹುಟ್ಟೂರು ಬಂಟ್ವಾಳದ ಸಜಿಪದಲ್ಲಿ ನಡೆಯಲಿದೆ. ಇಂದು ಬೆಳಿಗ್ಗೆ 10.15ರಿಂದ 1.45ರವರೆಗೆ ಮಂಗಳೂರು ಪುರಭವನದಲ್ಲಿ ಸಾರ್ವಜನಿಕ ಅಂತಿಮ ದರ್ಶನ ನಡೆಯಿತು. ಕಲಾವಿದರು, ಜನಪ್ರತಿನಿಧಿಗಳು, ಚೆನ್ನೈ ನಿಂದ ಬಂದಿದ್ದ ಶಿಷ್ಯರು ಅಗಲಿದ ಮಹಾನ್ ಕಲಾವಿದನ ಅಂತಿಮ ದರ್ಶನ ಮಾಡಿದರು. ಸಂಜೆ ನಾಲ್ಕು ಗಂಟೆಗೆ ಬಂಟ್ವಾಳ ತಾಲೂಕಿನ ಸಜಿಪ ಮಿತ್ತಮಜಲಿನಲ್ಲಿ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಅಂತಿಮ ವಿಧಿವಿಧಾನವನ್ನು ಜೋಗಿ […]