Blog Archive

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ನಿರಂತರ ಕಿರುಕುಳ : ದೂರು

Saturday, August 3rd, 2019
Kerala-pravasi

ಮಂಜೇಶ್ವರ:  ಮಲಯಾಳಿ ಪ್ರವಾಸಿಗಳಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಫಲಪ್ರದವಾಗಲಿಲ್ಲ, ಎಮಿಗ್ರೇಶನ್, ಕಸ್ಟಮ್ಸ್ ಸೇರಿದಂತೆ ಇತರ ವಿಭಾಗಗಳಲ್ಲಿ ಇತರ ಅಧಿಕಾರಿಗಳು ಕೂಡಾ ಮಲಯಾಳಿಗಳನ್ನು ಹುಡುಕಿ ಕಿರುಕುಳ ನೀಡುತ್ತಿರುವುದಾಗಿ ಕೇರಳ ಪ್ರವಾಸಿ ಸಂಘದ ಮಂಜೇಶ್ವರ ಏರಿಯಾ ಕಮಿಟಿ ಆರೋಪಿಸಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ನಿರಂತರವಾಗಿ ನೀಡುತ್ತಿರುವ ಕಿರುಕುಳದ ವಿರುದ್ಧ ಕೇರಳ ಪ್ರವಾಸಿ ಸಂಘದ ಮಂಜೇಶ್ವರ ಏರಿಯಾ ಕಮಿಟಿ ಅಧ್ಯಕ್ಷ ಬಶೀರ್ ದೇವಕಾನ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಲಯಾಳಿಗಳಿಗೆ ಕಿರುಕುಳ ನೀಡುತ್ತಿರುವುದು ನಿತ್ಯ ವರದಿಯಾಗಿದೆ […]

ತಾಂತ್ರಿಕ ದೋಷ: ಏರ್‌ ಇಂಡಿಯಾ ವಿಮಾನ ರನ್‌ವೇಯಿಂದ ವಾಪಸ್‌

Monday, January 29th, 2018
rescheduled

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಿಂದ ಮುಂಬಯಿಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಪತ್ತೆಯಾಗಿ ರನ್‌ವೇಯಿಂದ ವಾಪಸಾದ ಘಟನೆ ರವಿವಾರ ಸಂಭವಿಸಿದ್ದು, ಏರ್‌ ಇಂಡಿಯಾ ಸಂಸ್ಥೆಯು ಪ್ರಯಾಣಿಕರಿಗೆ ಸೋಮವಾರ ಮುಂಬಯಿಗೆ ಪಯಣಿಸುವ ವ್ಯವಸ್ಥೆ ಮಾಡಿದೆ. ರವಿವಾರ ಮಧ್ಯಾಹ್ನ 12.20ಕ್ಕೆ ವಿಮಾನವು ಪ್ರಯಾಣಿಕರನ್ನು ಹೊತ್ತು ರನ್‌ವೇಯಲ್ಲಿ ಚಲನೆ ಆರಂಭಿಸಿತ್ತು. ಕೆಲವೇ ಮೀಟರ್‌ಗಳಷ್ಟು ದೂರ ಕ್ರಮಿಸಿದಾಗ ವಿಮಾನದ ಎಂಜಿನ್‌ನ ಸ್ಟಾರ್ಟರ್‌ನಲ್ಲಿ ಲೋಪ ಕಂಡುಬಂದಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಿಮಾನ ರನ್‌ವೇಯಿಂದ ನಿಲ್ದಾಣಕ್ಕೆ ಮರಳಿದೆ. ವಿಮಾನದಲ್ಲಿ 116 ಮಂದಿ ಪ್ರಯಾಣಿಕರು […]

ಕಟೀಲು ದೇವರನ್ನು ಫೇಸ್‌‌ಬುಕ್‌ನಲ್ಲಿ ಅವಮಾನಿಸಿ ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನ ಬಂಧನ

Tuesday, October 11th, 2016
kateelu-temple

ಮಂಗಳೂರು: ಕಟೀಲು ಕ್ಷೇತ್ರದ ದೇವರನ್ನು ಫೇಸ್‌‌ಬುಕ್‌ನಲ್ಲಿ ಅವಮಾನಿಸಿ ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಶಾಫಿ ಬೆಳ್ಳಾರೆ ಬಂಧಿತ ಆರೋಪಿ. ಶಾಫಿ ಬೆಳ್ಳಾರೆ ಬಗ್ಗೆ ಈ ಹಿಂದೆಯೇ ಪೊಲೀಸರು ಲುಕ್ ಔಟ್ ನೋಟಿಸ್‌‌‌ ಜಾರಿ ಮಾಡಿದ್ದರು. ಭಾನುವಾರ ಆತ ಬಹ್ರೈನ್‌‌ನಿಂದ ವಿಮಾನದಲ್ಲಿ ಬಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಆತನನ್ನು ವಶಕ್ಕೆ ಪಡೆದುಕೊಳ್ಳಲಾಯಿತು ಎಂದು ಬಂದರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌‌ ಶಾಂತಾರಾಂ ತಿಳಿಸಿದ್ದಾರೆ. ಶಾಫಿ ಬೆಳ್ಳಾರೆಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಪೊಲೀಸರು ವಿವರಿಸಿದ್ದಾರೆ.

26 ಪಾಸ್‍ಪೋರ್ಟ್‍ಗಳನ್ನು ಹಿಡಿದುಕೊಂಡು ದುಬೈಗೆ ಹೋಗುತ್ತಿದ್ದವನ ಬಂಧನ

Thursday, August 18th, 2016
Abdulla-Pallakkan

ಮಂಗಳೂರು: ಒಂದು ಪಾಸ್‍ಪೋರ್ಟ್ ಪಡೆಯಬೇಕಾದರೆ ದಿನಪೂರ್ತಿ ಸರತಿಯಲ್ಲಿ ನಿಲ್ಲಬೇಕು. ತಿಂಗಳುಗಟ್ಟಲೆ ಕಾಯಬೇಕು. ಅಂಥದ್ದರಲ್ಲಿ 26 ಬೇರೆಯವರ ಪಾಸ್‍ಪೋರ್ಟ್‍ಗಳನ್ನು ಹಿಡಿದುಕೊಂಡು ದುಬೈಗೆ ಹೋಗುತ್ತಿದ್ದವನನ್ನು ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ಹಿಡಿದು ಬಜ್ಪೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಪಲ್ಲಕನ್ ಅಬ್ದುಲ (43) ಎಂಬಾತ ಆರೋಪಿ. 26 ಪಾಸ್‍ಪೋರ್ಟ್‍ಗಳ ಪೈಕಿ ಎರಡು ಅಮೆರಿಕಾಗೆ ಸೇರಿದ್ದಾಗಿವೆ. ಕಣ್ಣೂರಿನ ತಾಲಿಪ್ಪರಂಬು ನಿವಾಸಿಯಾದ ಮಹಮ್ಮದ್ ಪನವಪಿಲ್ ದುಬೈಯ ಕದಕ್-ಉತ್-ಲ್ಲ ಎಂಬಾತನ ಮಾಲೀಕತ್ವದ ಟ್ರಾವೆಲ್ ಏಜೆನ್ಸಿಯಲ್ಲಿ ಉದ್ಯೋಗದಲ್ಲಿದ್ದ. ಭಾರತದಿಂದ ವಿಶೇಷ ಪ್ಯಾಕೇಜ್‍ನಡಿ ಹಜ್‍ಗೆ ಹೋಗಿ ದುಬೈಗೆ ಬರುವವರ 26 […]

ದುಬೈನಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಬೃಹತ್ ಮೊತ್ತದ ಕೇಸರಿ ವಶ

Tuesday, January 8th, 2013
Mohammed Aslam

ಮಂಗಳೂರು : ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಸೋಮವಾರ ದುಬೈನಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ 15 ಲಕ್ಷ ರೂಪಾಯಿ ಮೊತ್ತದ 15 ಕೆ.ಜಿ. ಕೇಸರಿಯನ್ನು ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಕಾಸರಗೋಡು ಜಿಲ್ಲೆಯ ತಳಂಗರೆ ನಿವಾಸಿ ಮುಹಮ್ಮದ್ ಅಸ್ಲಂ(31) ಗೆ ಇದರ ಬಗ್ಗೆ ಮಾಹಿತಿ ಇರಲಿಲ್ಲ ಎನ್ನಲಾಗಿದೆ. ಇರಾನ್ ಮೂಲದ ಕೇಸರಿಯನ್ನು ದುಬಾಯಿ ಮೂಲಕ ಕಾಸರಗೋಡಿಗೆ ಅಕ್ರಮವಾಗಿ ತರಿಸಿ, ವಿತರಿಸುವ ಜಾಲ ಇದಾಗಿದ್ದು, ಜಾಲದ ಸದಸ್ಯರು ಮುಹಮ್ಮದ್ ಅಸ್ಲಂ ಮೂಲಕ ಎರಡು ಬಾಕ್ಸ್‌ಗಳಲ್ಲಿ ಇದನ್ನು […]