Blog Archive

ಶಿಷ್ಯವೇತನ ಪಾವತಿಸದ ವಿರುದ್ಧ ವೈದ್ಯ ವಿದ್ಯಾರ್ಥಿಗಳು ನಗರದ ವೆನ್ಲಾಕ್ ಆಸ್ಪತ್ರೆ ಎದುರು ಪ್ರತಿಭಟನೆ

Monday, October 22nd, 2018
wenlock1

ಮಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಲಿನಿಕಲ್ ಸೌಲಭ್ಯ ಪಡೆಯುತ್ತಿರುವ ಖಾಸಗಿ ವೈದ್ಯಕೀಯ ಕಾಲೇಜಿನ ಸರ್ಕಾರಿ ಕೋಟಾದ ಗೃಹ ವೈದ್ಯರು ಮತ್ತು ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳಿಗೆ 8 ತಿಂಗಳಿನಿಂದ ಶಿಷ್ಯವೇತನ ಪಾವತಿಯಾಗಿಲ್ಲ ಎಂದು ಆರೋಪಿಸಿ ಇಂದು ವೈದ್ಯ ವಿದ್ಯಾರ್ಥಿಗಳು ನಗರದ ವೆನ್ಲಾಕ್ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು‌. ಈ ಬಗ್ಗೆ ಮಾತನಾಡಿದ ವೈದ್ಯ ವಿದ್ಯಾರ್ಥಿಗಳು, ದಿನದ 24 ಗಂಟೆಗಳ ಕಾಲ ದುಡಿಯುತ್ತೇವೆ. ಸಾಂಕ್ರಾಮಿಕ ರೋಗಗಳು ಹರಡುತ್ತವೆ ಎಂಬ ಭೀತಿಯಿದೆ. ಆದರೂ ನಾವು ಎಲ್ಲಾ ರೀತಿಯಲ್ಲಿ ರೋಗಿಗಳ ಶುಶ್ರೂಷೆಯನ್ನು ಮಾಡುತ್ತಿದ್ದೇವೆ. ಸರ್ಕಾರಿ […]

ಬ್ರಿಟಿಷರಿಗೆ ಇದ್ದಷ್ಟು ಕಾಳಜಿ ನಮ್ಮನ್ನಾಳುವ ರಾಜ್ಯ ,ಕೇಂದ್ರ ಸರಕಾರಗಳಿಗಿಲ್ಲ: ಬಿ.ಕೆ ಇಮ್ತಿಯಾಜ್

Friday, July 27th, 2018
protest

ಮಂಗಳೂರು: ದ.ಕ ಜಿಲ್ಲೆ ಸೇರಿದಂತೆ ಹತ್ತಿರದ ಆರೇಳು ಜಿಲ್ಲೆಯ ಬಡವರ ಎರಡು ಕಣ್ಣುಗಳಂತಿರುವ ಸರಕಾರಿ ಆಸ್ಪತ್ರೆ ವೆನ್ಲಾಕ್ ಮತ್ತು ಲೇಡಿಗೋಶನ್ ಆಸ್ಪತ್ರೆಯ ಸ್ಥಿತಿ ಚಿಂತಾಜನಕವಾಗಿದೆ. ಈ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ರೋಗಿಗಳು ಹಲವು ರೀತಿಯ ಸಮಸ್ಯೆಗಳಿಗೆ ತುತ್ತಾಗಿದ್ದಾರೆ. ಆಸ್ಪತ್ರೆಯನ್ನು ಸ್ಥಾಪಿಸಿದಂತಹ ಸಂದರ್ಭದಲ್ಲಿ ಈ ಜಿಲ್ಲೆಯ ಬಡವರ ಬಗ್ಗೆ ಬ್ರಿಟಿಷರಿಗೆ ಇದ್ದಷ್ಟು ಕಾಳಜಿ ನಮ್ಮನ್ನಾಳುವ ರಾಜ್ಯ, ಕೇಂದ್ರ ಸರಕಾರಗಳಿಗಿಲ್ಲ ಅನ್ನೋದೆ ಬಹಳ ವಿಷಾದನೀಯ ಎಂದು ಡಿವೈಎಫ್ಐ ಜಿಲ್ಲಾದ್ಯಕ್ಷ ಬಿ.ಕೆ ಇಮ್ತಿಯಾಜ್ ಇಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ […]

ಕಟ್ಟಡದಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

Wednesday, July 25th, 2018
suicide

ಮಂಗಳೂರು: ನಗರದ ಕಟ್ಟಡವೊಂದರಿಂದ ವಿದ್ಯಾರ್ಥಿಯೊಬ್ಬ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ. ಜಪ್ಪಿನಮೊಗರು ನಿವಾಸಿ ಮನೋಜ್ ಎಂಬವರ ಪುತ್ರ ಗುರುಪ್ರಸಾದ್ (20) ಮೃತ ವಿದ್ಯಾರ್ಥಿ. ನಗರ ಹೊರವಲಯದ ವಳಚಿಲ್‌ನ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಈತ ಕೆಲವು ಸಮಯದಿಂದ ಖಿನ್ನತೆಗೊಳಗಾಗಿದ್ದ ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಬೆಳಗ್ಗೆ ಸುಮಾರು 8:30ಕ್ಕೆ ಹಂಪನಕಟ್ಟೆ ಸಮೀಪದ ಕಟ್ಟಡವೊಂದರಿಂದ ಹಾರಿದ್ದಾನೆ. ತಕ್ಷಣ ಅಲ್ಲಿದ್ದವರು ಪೊಲೀಸರ ಸಹಕಾರದಿಂದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಕೊನೆಯುಸಿರೆಳೆದ ಎಂದು ತಿಳಿದುಬಂದಿದೆ. ಮನೋಜ್ ಅವರು […]

ಮಂಗಳೂರು ಮಳೆಗೆ ಇಬ್ಬರು ಬಲಿ…ಡಿಸಿಯಿಂದ ಪರಿಹಾರದ ಚೆಕ್‌ ವಿತರಣೆ

Wednesday, May 30th, 2018
sesikanth-senthil

ಮಂಗಳೂರು: ನಿನ್ನೆ ಸುರಿದ ಭಾರಿ ಮಳೆಗೆ ಇಬ್ಬರು ಬಲಿಯಾಗಿದ್ದರು. ಸಂತ್ರಸ್ತರ ಕುಟುಂಬಕ್ಕೆ ತಲಾ ಐದು‌ ಲಕ್ಷ ರೂ. ಪರಿಹಾರದ ಚೆಕನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ವಿತರಿಸಿದರು. ಮಹಾಮಳೆಗೆ‌ ಉದಯನಗರದ ಮೋಹಿನಿ ಮತ್ತು ಕೊಡಿಯಾಲ್ ಬೈಲ್‌ನ ಮುಕ್ತಾಬಾಯಿ ಸಾವನ್ನಪ್ಪಿದರು. ಅವರ ಮೃತದೇಹ ಪೋಸ್ಟ್ ಮಾರ್ಟಂಗಾಗಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಜಿಲ್ಲಾಧಿಕಾರಿ ವೆನ್‌ಲಾಕ್ ಆಸ್ಪತ್ರೆ ಗೆ ತೆರಳಿ ಎರಡು ಕುಟುಂಬದವರಿಗೆ ಪರಿಹಾರದ ಚೆಕ್ ವಿತರಿಸಿದ್ದಾರೆ.

ವೆನ್ಲಾಕ್ ಆಸ್ಪತ್ರೆಯ ಪೈಪ್‌ಲೈನ್ ಒಡೆದು ತ್ಯಾಜ್ಯಗಳು ಹೊರಗೆ

Friday, July 21st, 2017
pipiline

ಮಂಗಳೂರು : ನಗರದ ಸರಕಾರಿ ಆಸ್ಪತ್ರೆಯಾಗಿರುವ ವೆನ್ಲಾಕ್ ಬಳಿ ಕಳೆದ ಕೆಲವು ದಿನಗಳಿಂದ ಪೈಪ್‌ಲೈನ್ ಒಡೆದು ಆಸ್ಪತ್ಯೆ ತ್ಯಾಜ್ಯಗಳು ಹೊರಬರುತ್ತಿದ್ದರೂ ಅದನ್ನು ದುರಸ್ತಿ ಮಾಡುವಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ನಿರ್ಲಕ್ಷ ತೋರಿದೆ. ನಗರದ ಹಂಪನಕಟ್ಟೆ ಸಿಗ್ನಲ್‌ನಿಂದ ವೆನ್ಲಾಕ್ ಆಸ್ಪತ್ರೆಯ ಹಿಂಬದಿಯಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ಈ ರಸ್ತೆಯ ಬದಿ ತೆರೆದ ಚರಂಡಿ ಇದ್ದು, ಈ ಚರಂಡಿಯ ಒಳಗಿನಿಂದ ಆಸ್ಪತ್ರೆ ತಾಜ್ಯಗಳು ಹಾದುಹೋಗಲು ಪೈಪ್‌ಲೈನ್‌ನನ್ನು ಅಳವಡಿಸಲಾಗಿದೆ. ಆದರೆ, ಈ ಪೈಪ್‌ಲೈನ್ ಒಡೆದಿರುವುದರಿಂದ ಆಸ್ಪತ್ರೆಯ ತ್ಯಾಜ್ಯಗಳು ಚರಂಡಿಯನ್ನು ಸೇರುತ್ತಿವೆ. ಇದರಿಂದಾಗಿ […]

ಹೃದಯ ಸಂಬಂಧಿ ಕಾಯಿಲೆಯಿಂದ ಮಂಗಳೂರಿನ ಕಾರಾಗೃಹದಲ್ಲಿ ಕೈದಿ ಸಾವು

Monday, April 3rd, 2017
Mangalore Jail

ಮಂಗಳೂರು : ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಮೃತಪಟ್ಟವರನ್ನ ಬೆಳುವಾಯಿಯ ಸದಾನಂದ (40) ಎಂದು ಗುರುತಿಸಲಾಗಿದೆ. ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 2015ರಲ್ಲಿ ಸದಾನಂದ ಮೂಡುಬಿದಿರೆ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಶನಿವಾರ ತಡರಾತ್ರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಜಿಲ್ಲಾ ಕಾರಾಗೃಹದಲ್ಲಿ ಕೆಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಸದಾನಂದ ಬಳಲುತ್ತಿದ್ದರು. ಆದರೆ ಜೈಲು ಸಿಬ್ಬಂದಿಗಳು ಅವರನ್ನು ಆಸ್ಪತ್ರೆಗೆ ದಾಖಲಿಸದೆ […]

ಜೀವ ನೀಡುವ ಶಕ್ತಿ ಹೇಗೆ ನಮಗಿಲ್ಲವೋ ಅದೇ ರೀತಿ ಜೀವ ತೆಗೆಯುವ ಅಧಿಕಾರವೂ ನಮಗಿಲ್ಲ: ರಮೇಶ್ ಕುಮಾರ್

Saturday, December 10th, 2016
Wenlock Hospital

ಮಂಗಳೂರು: ಜೀವ ನೀಡುವ ಶಕ್ತಿ ಹೇಗೆ ನಮಗಿಲ್ಲವೋ ಅದೇ ರೀತಿ ಜೀವ ತೆಗೆಯುವ ಅಧಿಕಾರವೂ ನಮಗಿಲ್ಲ. ಕೊಡುವುದು ಇಲ್ಲವಾದರೆ ಪಡೆಯುವುದು ಅಸಾಧ್ಯ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದರು. ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ ಅವರು ನರ್ಸಿಂಗ್ ವಿದ್ಯಾರ್ಥಿಗಳಿಗೆ ಪಾಠ ಮಾಡಿದರು. ವೈದ್ಯರು, ದಾದಿಗಳ ಅಸಡ್ಡೆ, ಅಪ್ರಾಮಾಣಿಕತೆಯ ಸೇವೆಯಿಂದ ಜೀವ ಹೋದರೆ ಕೊಲೆಗಡುಕರಾಗುತ್ತಾರೆ. ರೋಗಿಗಳ ಜೀವ ನಿಮ್ಮ ಕೈಯಲ್ಲಿದೆ. ರೋಗಿಯ ಕುಟುಂಬ ನಿಮ್ಮ ಮೇಲೆ ನಂಬಿಕೆಯಿಟ್ಟಿರುತ್ತದೆ. ಶಕ್ತಿ ಮೀರಿ ಪ್ರಾಣ ಉಳಿಸುವ ಕಾರ್ಯ ನಿಮ್ಮದು. […]

ಕಾರಾಗೃಹದ ಕೈದಿ ಹೃದಯಾಘಾತದಿಂದ ಸಾವು

Wednesday, September 14th, 2016
heart-attack

ಮಂಗಳೂರು: ನಗರದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಕಾರ್ಕಳ ಹೊಸ್ಮಾರು ಈದು ಗ್ರಾಮ ಬಾಬು ಯಾನೆ ಮಬು (60) ಅವರು ಮಂಗಳವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅನಾರೋಗ್ಯ ಹೊಂದಿದ್ದ ಅವರಿಗೆ ಹಲವು ಬಾರಿ ನಗರದ ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗಿತ್ತು. ಮಂಗಳವಾರವೂ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದು, ಕೂಡಲೇ ಸಿಬ್ಬಂದಿಗಳ ಭದ್ರತೆಯೊಂದಿಗೆ ವೆನ್‌ಲಾಕ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಅವರನ್ನು ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ ಮಾರ್ಗದ ಮಧ್ಯೆಯೇ ಮೃತಪಟ್ಟಿರುವ ಬಗ್ಗೆ ದೃಢಪಡಿಸಿದ್ದಾರೆ. ಬಾಬು ಅವರು ಮೂಡಬಿದಿರೆ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣದ ಆರೋಪಿಯಾಗಿ […]

ವೆನ್ಲಾಕ್ ಆಸ್ಪತ್ರೆಯಲ್ಲಿ ‘ಜೀವನ ಶೈಲಿ ನಿರ್ವಹಣೆ ಹಾಗೂ ಯೋಗದ ಕರ್ಯಾಗಾರ’

Thursday, July 10th, 2014
Yoga

ಮಂಗಳೂರು : ಆಧುನಿಕ ಜೀವನ ಶೈಲಿಯಿಂದ ಉಂಟಾಗುವ ರೋಗಗಳ ಬಗ್ಗೆ ಆಯುಷ್ ಜನಜಾಗೃತಿ ಅಭಿಯಾನದ ಮೂಲಕ ಜಿಲ್ಲೆಯಾದ್ಯಂತ ಅರಿವು ಮೂಡಿಸುವ ಕಾರ್ಯಕ್ರಮವು ದಿನಾಂಕ 08.07.2014 ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಜರುಗಿತು. ಕರ್ನಾಟಕ ರಾಜ್ಯ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘದ ವತಿಯಿಂದ ಅಂತರಾಷ್ಟ್ರೀಯ ಯೋಗ ತೀರ್ಪುಗಾರರಾದ ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿಯವರಿಂದ ಜೀವನಶೈಲಿ ನಿರ್ವಹಣೆ ಹಾಗೂ ಯೋಗದ ಕರ್ಯಾಗಾರ ಹಮ್ಮಿಕೊಳ್ಳಲಾಯಿತು. ವೆನ್ಲಾಕ್ ಆಸ್ಪತ್ರೆಯ ಶುಶ್ರೂಷಕರು, ಕಿರಿಯ ಆರೋಗ್ಯ ಸಹಾಯಕರು, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಅರೆವೈದ್ಯಕೀಯ ಸಿಬ್ಬಂದಿಗಳು ಮುಂತಾದ […]

ವೆನ್ಲಾಕ್ ಆಸ್ಪತ್ರೆಯಲ್ಲಿ ಜನಸ್ನೇಹಿ ವಾತಾವರಣವಿರಲಿ: ಯು.ಟಿ.ಖಾದರ್

Saturday, June 15th, 2013
UT Khader Visits Lady Ghosen Hospital

ಮಂಗಳೂರು  : ಮಾನ್ಯವಾಗಿ ಜನರು ಸರ್ಕಾರಿ ಶಾಲೆ ಹಾಗೂ ಆಸ್ಪತ್ರೆ ಎಂದರೆ ಅನುಮಾನದಿಂದ ದೂರ ಉಳಿಯುತ್ತಾರೆ. ಆದ್ದರಿಂದ  ಅವರಲ್ಲಿ ವಿಶ್ವಾಸ ತುಂಬುವ, ಪ್ರೀತಿ ಸೌಹಾರ್ದಮಯ ಪರಿಸರ ನಿರ್ಮಾಣದ ಅಗತ್ಯ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿರಬೇಕೆಂದು ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ ಶ್ರೀ ಯು.ಟಿ.ಖಾದರ್ ಅವರು ತಿಳಿಸಿದ್ದಾರೆ. ಅವರು ಇಂದು ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ, ಡೆಂಗಿ ಹಾಗೂ ಮಲೇರಿಯಾ ರೋಗ ಹರಡದಂತೆ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನಗೋಪಾಲ ಅವರೊಂದಿಗೆ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ […]