Blog Archive

ಯಾವ ನಿರ್ಧಾರ ಕೈಗೊಳ್ಳಬೇಕೆಂಬ ಸ್ವಂತಿಕೆ ನನ್ನಲ್ಲಿದೆ :ಹರಿಕೃಷ್ಣ ಬಂಟ್ವಾಳ

Tuesday, October 31st, 2017
Harikrishna bantwal

ಮಂಗಳೂರು: ಕಾಂಗ್ರೆಸ್‌‌‌ನ‌ ಮಾಜಿ ಹಿರಿಯ ಮುಖಂಡ ಹರಿಕೃಷ್ಣ ಬಂಟ್ವಾಳ ಅವರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್‌‌‌ಗೆ, ನಾನು ಭಾರತೀಯ ಬಿಲ್ಲವ. ಕಾಂಗ್ರೆಸ್‌ನ ಬಿಲ್ಲವ ಅಲ್ಲ. ಕಾಂಗ್ರೆಸ್‌ನ ದಾಸ ಬಿಲ್ಲವನೂ ಅಲ್ಲ. ಯಾವ ಪಕ್ಷ ಸೇರಬೇಕು ಎನ್ನುವ ಸ್ವಂತಿಕೆ, ನಿರ್ಧಾರ ನನಗೆ ಬಿಟ್ಟದ್ದು. ಆದರೆ ನೀವು ನನ್ನ ಸುದ್ದಿಗೆ ಬರಬೇಡಿ ಎಂದು ಟಾಂಗ್ ನೀಡಿದ್ದಾರೆ. ಹರಿಕೃಷ್ಣ ಬಂಟ್ವಾಳ ಬಿಜೆಪಿ ಸೇರುವ ವಿಚಾರಕ್ಕೆ ಸಂಬಂಧಿಸಿ ಇತ್ತೀಚೆಗೆ ಹರೀಶ್ ಕುಮಾರ್‌ ಮಾಧ್ಯಮಗೋಷ್ಠಿ ನಡೆಸಿ ಟೀಕಿಸಿದ್ದರು. ಆದರೆ, ಇದೀಗ ಹರೀಶ್ ಕುಮಾರ್‌ಗೆ ತಿರುಗೇಟು […]

ಶಾಸಕ ಜೆ.ಆರ್.ಲೋಬೊ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

Monday, October 30th, 2017
JR lobo

ಮಂಗಳೂರು: ಶಾಸಕ ಜೆ.ಆರ್.ಲೋಬೊ ಅವರು ಜಪ್ಪಿನಮೊಗರು ವಾರ್ಡ್ ನಲ್ಲಿ ನಡೆದ ಮನೆ ಮನಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಶಾಸಕರ ಅಭಿವೃದ್ಧಿ ಕಾಯಕ್ರಮಗಳ ಬಗ್ಗೆ ಯುವಕರು ಮೆಚ್ಚಿ ಸ್ಥಳೀಯ ಜನರ ಮತ್ತು ಶಾಸಕರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡರು ಅವರು ಮನೆ ಮನೆಗೆ ಕಾಂಗ್ರೆಸ್ ಪಕ್ಷ ಕಾರ್ಯಕ್ರಮದಲ್ಲಿ ಪಾಲ್ಗೊಂಡರು

ಜಾತಿಯನ್ನು ಮುಂದಿಟ್ಟು ಪಕ್ಷವನ್ನು ದೂರುವುದು ಶೋಭೆಯಲ್ಲ : ಹರೀಶ್ ಕುಮಾರ್

Saturday, October 28th, 2017
Harish Kumar

ಮಂಗಳೂರು :  ಜಾತಿಯನ್ನು ಮುಂದಿಟ್ಟು ಪಕ್ಷವನ್ನು ದೂರುವುದು ಶೋಭೆಯಲ್ಲ, ಬಿಲ್ಲವರಿಗೆ ಬಹಳಷ್ಟು ಸ್ಥಾನಗಳನ್ನು ಕಾಂಗ್ರೆಸ್ ನೀಡಿದ್ದರೂ ಕೂಡಾ ಬಿಲ್ಲವರಿಗೆ ಪಕ್ಷ ಏನೂ ಮಾಡಿಲ್ಲ ಎಂದು ಆರೋಪಿಸಿ ಕೆಲವರು ಪಕ್ಷ ತ್ಯಜಿಸಲು ಹೊರಟಿರುವುದರಲ್ಲಿ ಅರ್ಥವಿಲ್ಲ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಕಾಂಗ್ರೆಸ್ ಪಕ್ಷ ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಬಿಲ್ಲವರಿಗೆ ಬಹಳಷ್ಟು ಒತ್ತು ನೀಡಿದೆ, ಕಾಂಗ್ರೆಸ್ ಪಕ್ಷದಿಂದ ಬಹಳಷ್ಟು ಅವಕಾಶಗಳನ್ನು ಪಡೆದು ಸ್ವಾರ್ಥಕ್ಕಾಗಿ ಇದೀಗ ಜಾತಿಯನ್ನು ಮುಂದಿಟ್ಟು […]

ಕಾಪು: ಅಶಕ್ತ, ಅನಾಥ ಮಕ್ಕಳೊಂದಿಗೆ ಕಾಂಗ್ರೆಸ್ ದೀಪಾವಳಿ ಆಚರಣೆ

Thursday, October 19th, 2017
Diwali celebration

ಮಂಗಳೂರು:  ಕಾಪು ಕಾಂಗ್ರೆಸ್ ಹಿಂದುಳಿದ ವರ್ಗ ಕಟಪಾಡಿ ಬಳಿಯ ಶಂಕರ ಪುರ ವಿಶ್ವಾಸದ ಮನೆಯಲ್ಲಿ ಅಶಕ್ತ, ಅನಾಥ ಮಕ್ಕಳೊಂದಿಗೆ ಹಾಗೂ ವಯೋ ವೃದ್ಧರೊಂದಿಗೆ ದೀಪಾವಳಿ ಸಂಭ್ರವನ್ನು ಆಚರಿಸಿತು. ಇಲ್ಲಿಯ ಮಕ್ಕಳಿಗೆ ವಯೋವೃದ್ಧರಿಗೆ ಸಿಹಿ ತಿಂಡಿ ಹಾಗೂ ಬಟ್ಟೆ ಬರೆಗಳನ್ನು ಈ ಸಂದರ್ಭ ವಿತರಿಸಲಾಯಿತು. ಕಾಪು ಶಾಸಕ ವಿನಂ ಕುಮಾರ್ ಸೊರಕೆ ಮಾತನಾಡಿ, ದೀಪಾವಳಿ ಹಬ್ಬದ ಪ್ರಥಮ ದಿನವನ್ನು ಶಂಕರಪುರದ ಅನಾಥರ ವಿಶ್ವಾಸದ ಮನೆಯಲ್ಲಿ ಕಾಪು ಕಾಂಗ್ರೆಸ್ ಆಚರಿಸುತ್ತಿರುವುದು ಅತ್ಯಂತ ಸಂತಸ ತಂದಿದೆ. ವಿಶ್ವಾಸದ ಮನೆಗೆ ನಮ್ಮ ರಾಜ್ಯಕ್ಕೆ […]

ಮಲ್ಲಿಕಟ್ಟೆ: ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ವಿಭಾಗದ ನೂತನ ಕಚೇರಿ ಉದ್ಘಾಟನೆ

Wednesday, October 18th, 2017
Mallikatte

ಮಂಗಳೂರು: ನಗರದ ಮಲ್ಲಿಕಟ್ಟೆಯ ಇಂದಿರಾ ಜನ್ಮ ಶತಾಬ್ಧಿ ಭವನದಲ್ಲಿರುವ ದ.ಕ.ಜಿಲ್ಲಾ ಕಾಂಗ್ರೆಸ್‌ನ ಇತರ ಹಿಂದುಳಿದ ವರ್ಗಗಳ ವಿಭಾಗದ ನೂತನ ಕಚೇರಿಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಉದ್ಘಾಟಿಸಿದರು. ಈ ಸಂದರ್ಭ ಕೆಪಿಸಿಸಿ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಸದಾಶಿವ ಉಳ್ಳಾಲ್, ಹಿಂದುಳಿದ ವರ್ಗಗಳ ಜಿಲ್ಲಾ ಅಧ್ಯಕ್ಷ ಧರಣೇಂದ್ರ ಕುಮಾರ್, ಉಪಾಧ್ಯಕ್ಷ ಸುಂದರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶೋಭಾ ಕೇಶವ, ಬ್ಲಾಕ್ ವಿಭಾಗದ ಅಧ್ಯಕ್ಷರಾದ ಪ್ರಕಾಶ್ ಸಾಲ್ಯಾನ್, ಜನಾರ್ದನ್, ಗಣೇಶ ಪೂಜಾರಿ, ಶಂಕರ ಆಚಾರ್ಯ, ಪದ್ಮ […]

ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ : ಶಾಸಕ ಜೆ.ಆರ್.ಲೋಬೊ

Tuesday, October 17th, 2017
lobo

ಮಂಗಳೂರು: ಶಾಸಕ ಜೆ.ಆರ್.ಲೋಬೊ ಅವರು 37 ನೇ ಮರೋಳಿ ವಾರ್ಡ್ ನ 47 ನೇ ಬೂತ್ ವತಿಯಿಂದ ನಡೆದ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಪಕ್ಷದ ಸಾಧನೆಯ ಬಗ್ಗೆ ಕಾರ್ಯಕರ್ತರು ಶ್ರದ್ಧಯಿಂದ ಕೆಲಸ ಮಾಡುವಂತೆ ಕರೆ ನೀಡಿದರು. ಕೇಂದ್ರದ ಬಿಜೆಪಿ ಸರ್ಕಾರದ ವೈಫಲ್ಯತೆಯ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವಂತೆ ತಿಳಿಸಿದರಲ್ಲದೇ ಮನೆ ಮನೆ ಭೇಟಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಯಶಸ್ವಿಯಾಗಲು ಶ್ರಮಿಸುವಂತೆ ಶಾಸಕ ಜೆ.ಆರ್.ಲೋಬೊ ಅವರು ಕರೆ ನೀಡಿದರು

ಆಡಳಿತ ಪಕ್ಷ ಹಾಗೂ ವಿಪಕ್ಷ ಸದಸ್ಯರ ಪರಸ್ಪರ ಪ್ರತಿಭಟನೆ

Tuesday, October 17th, 2017
ivarnadu

ಮಂಗಳೂರು: ಐವರ್ನಾಡು ಗ್ರಾ.ಪಂ. ಪಿಡಿಒ ವರ್ಗಾವಣೆಗೆ ಸೂಚಿಸುವ ಮೂಲಕ ಉಸ್ತುವಾರಿ ಸಚಿವರು ಜಿ.ಪಂ. ಆಡಳಿತದಲ್ಲಿ ಹಸ್ತಕ್ಷೇಪ ನಡೆಸಿದ್ದಾರೆ ಎಂದು ಆಡಳಿತ ಪಕ್ಷ ಬಿಜೆಪಿ ಸದಸ್ಯರು ಹಾಗೂ ಜಿ.ಪಂ. ಅಧ್ಯಕ್ಷರು ಮರಳು ಮಾಫಿಯಾದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಹೆಸರು ಉಲ್ಲೇಖೀಸಿದರು ಎಂದು ಆರೋಪಿಸಿ ವಿಪಕ್ಷ ಕಾಂಗ್ರೆಸ್‌ ಸದಸ್ಯರು ಸದನದ ಬಾವಿಗಿಳಿದು ಪರಸ್ಪರ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ನಡೆದಿದೆ. ಆಡಳಿತ ಪಕ್ಷ ಹಾಗೂ ವಿಪಕ್ಷ ಸದನದಲ್ಲಿ ಏಕಕಾಲದಲ್ಲಿ ಸದನದ ಬಾವಿಗಿಳಿದು ಪರಸ್ಪರ ಪ್ರತಿಭಟನೆ […]

ಎನ್‌ಡಿಎ ಜತೆ ಕೇಂದ್ರ ಚುನಾವಣಾ ಅಯೋಗ ಶಾಮೀಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಆರೋಪ

Saturday, October 14th, 2017
congress

ಮಂಗಳೂರು: ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಹಿಮಾಚಲ ಪ್ರದೇಶ ಹಾಗೂ ಗುಜರಾತ್‌ನಲ್ಲಿ ಏಕಕಾಲದಲ್ಲಿ ಚುನಾವಣಾ ದಿನಾಂಕವನ್ನು ಪ್ರಕಟಿಸಬೇಕಿದ್ದ ಚುನಾವಣಾ ಆಯೋಗವು ಎನ್‌ಡಿಎ ಸರಕಾರದ ಜತೆ ಶಾಮೀಲಾಗಿರುವುದರಿಂದ ಗುಜರಾತ್‌ನಲ್ಲಿ ಬಿಜೆಪಿಗೆ ರಾಜಕೀಯ ತಂತ್ರಗಾರಿಕೆಗೆ ಅವಕಾಶ ನೀಡುವ ಸಲುವಾಗಿ ದಿನಾಂಕವನ್ನು ಪ್ರಕಟಿಸದೆ ತಾರತಮ್ಯವೆಸಗಿದೆ ಎಂದರು. ಗುಜರಾತ್‌ನಲ್ಲಿ ಬಿಜೆಪಿಗೆ ಸೋಲಿನ ಭೀತಿ ಆವರಿಸಿರುವುದರಿಂದ ಚುನಾವಣಾ ತಂತ್ರಗಾರಿಕೆಗೆ ಸಮಯಾವಕಾಶ ಒದಗಿಸಲು ಅನುಕೂಲವಾಗುವಂತೆ ಆಯೋಗ ಅನುವು ಮಾಡಿಕೊಟ್ಟಿದೆ ಎಂದು ದೂರಿದರು. ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 100ನೇ […]

ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ರಾಜ್ಯ ಭ್ರಷ್ಟಾಚಾರದಲ್ಲಿ ಪ್ರಥಮ ಸ್ಥಾನದತ್ತ ಸಾಗುತ್ತಿದೆ : ಸಂಜೀವ ಮಠಂದೂರು

Friday, August 4th, 2017
Matandoor

ಮಂಗಳೂರು : ದೇಶ ಕಂಡ ಮಹಾನ್ ಭ್ರಷ್ಟಾಚಾರಿಗಳ ಪಟ್ಟಿಯಲ್ಲಿ  ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ರಾಜ್ಯ ಪ್ರಥಮ ಸ್ಥಾನದತ್ತ ಸಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಆರೋಪಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಾಯ ತೆರಿಗೆ ಇಲಾಖೆ ರಾಜ್ಯದ ಎಲ್ಲಾ ಭ್ರಷ್ಟರ ಪಟ್ಟಿ ಮಾಡಿ ದಾಳಿ ನಡೆಸುವ ಮೂಲಕ ಕರ್ನಾಟಕವನ್ನು ಭ್ರಷ್ಟಾಚಾರ ಮುಕ್ತವಾಗಿಸಬೇಕು ಎಂದು ತೀರ್ಮಾನ ಮಾಡಿದೆ ಎಂದು ಹೇಳಿದರು. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮನೆ ಮೇಲೆ ದಾಳಿ ನಡೆಯುತ್ತಿರುವಾಗಲೇ ಮುಖ್ಯಮಂತ್ರಿಗಳು ತನಿಖೆಗೆ […]

ಶರತ್ ಸಾವಿನ ಸುದ್ದಿಯನ್ನು ಮುಚ್ಚಿಟ್ಟು ಮುಖ್ಯಮಂತ್ರಿಗಳು ಕಾಂಗ್ರೆಸ್ ಸಮಾವೇಶ ಮಾಡುತ್ತಾರೆ : ಕರಂದ್ಲಾಜೆ

Thursday, July 13th, 2017
BJP Mahila Morcha

ಮಂಗಳೂರು :ಶರತ್ ಗುರುವಾರ ಮಧ್ಯರಾತ್ರಿಯೆ ಮೃತಪಟ್ಟಿದ್ದಾರೆ ಎಂದು ಗೊತ್ತಿದ್ದೂ ಮುಖ್ಯಮಂತ್ರಿಗಳು ಮಂಗಳೂರಲ್ಲಿ ಕಾರ್ಯಕರ್ತರ ಸಮಾವೇಶ ಮಾಡಿ ಸಂಭ್ರಮ ಆಚರಿಸಿದ್ದಾರೆ. ಮುಖ್ಯಮಂತ್ರಿ ಹೋಗುವವರೆಗೆ ಶರತ್ ಸಾವಿನ ಸುದ್ದಿಯನ್ನು ಮುಚ್ಚಿಟ್ಟು ಕಾಂಗ್ರೆಸ್ ನಾಯಕರು ಸಮಾವೇಶ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿಷಾದ ವ್ಯಕ್ತ ಪಡಿಸಿದರು. ದ.ಕ. ಜಿಲ್ಲಾ ಬಿ.ಜೆ.ಪಿ. ಮಹಿಳಾ ಮೋರ್ಚಾದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು , ಒಂದು ವೇಳೆ ಪ್ರಭಾಕರ ಭಟ್  ಅವರನ್ನು  ಮುಟ್ಟಿದ್ದೇ ಆದಲ್ಲಿ, ಅದು ಕಾಂಗ್ರೆಸ್ ಶವ ಪೆಟ್ಟಿಗೆಯ ಮೇಲಿನ ಕೊನೆಯ ಮೊಳೆ […]