Blog Archive

‘ಕನ್ನಭಾಗ್ಯ ಎಂದು ಟೀಕಿಸಿದ ಬಿಜೆಪಿಯವರು ಈಗ ಅನ್ನಭಾಗ್ಯ ನಮ್ಮದೆನ್ನುತ್ತಿದ್ದಾರೆ’

Tuesday, January 9th, 2018
gujurat-bjp

ಮಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿಪಕ್ಷದವರು ರಾಜ್ಯ ಸರಕಾರದ ಎಲ್ಲಾ ಜನಪ್ರೀಯ ಯೋಜನೆಗಳು ನಮ್ಮದು ಎನ್ನುತ್ತಿದ್ದಾರೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್ ವ್ಯಂಗ್ಯವಾಡಿದರು. ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಬರುವಾಗ ವಿಪಕ್ಷದವರು ರಾಜ್ಯ ಸರಕಾರದ ಎಲ್ಲಾ ಜನಪ್ರಿಯ ಯೋಜನೆಗಳು ನಮ್ಮದು ಎನ್ನುತ್ತಿದ್ದಾರೆ. ಅದ್ಯಾಕೆ ಗುಜರಾತ್ ಸೇರಿ ಬಿಜೆಪಿ ಆಡಳಿತದ ರಾಜ್ಯದಲ್ಲಿ ಅನ್ನಭಾಗ್ಯ ಈವರೆಗೆ ಜಾರಿಗೆ ತಂದಿಲ್ಲ. ಬಿಜೆಪಿಯವರು ತಾವು ಅಧಿಕಾರದಲ್ಲಿದ್ದಾಗ ಏನೂ ಕೆಲಸ ಮಾಡದೇ ಈಗ ಎಲ್ಲವೂ […]

ಅಮಿತ್ ಶಾ ಬಂದು ಹೋದ ಮೇಲೆ ರಾಜ್ಯದಲ್ಲಿ ಕೋಮು ಗಲಭೆ: ಸಚಿವ ರೇವಣ್ಣ

Tuesday, January 9th, 2018
H-M-Revanna

ರಾಯಚೂರು: ಕರ್ನಾಟಕಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಂದು ಹೋದ ಬಳಿಕ ಕೋಮು ಗಲಭೆ ಆಗುತ್ತಿದೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಇಲ್ಲಿ ಮಂಗಳವಾರ ಆರೋಪ ಮಾಡಿದರು. ಅಮಿತ್ ಶಾ ಸೂಚನೆಯ ಪ್ರಕಾರವೇ ಬಿಜೆಪಿ ನಾಯಕರು ಪ್ರಚೋದನಾಕಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕೂಡ ರೇವಣ್ಣ ಹೇಳಿದ್ದಾರೆ. ಇಷ್ಟು ಕಾಲ ಸುಮ್ಮನಿದ್ದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಂವಿಧಾನ ಬದಲಿಸುವ ಮಾತನಾಡುತ್ತಿದ್ದಾರೆ. ಹರಕು ಬಾಯಿಯ ಶೋಭಾ ಕರಂದ್ಲಾಜೆ, ಪ್ರತಾಪ ಸಿಂಹ ಹೀಗೆ ಅನೇಕರು ಪ್ರಚೋದನಕಾರಿಯಾದಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು […]

ದೀಪಕ್ ಕೊಲೆಯಲ್ಲಿ ಬಿಜೆಪಿ ಕಾರ್ಪೊರೇಟರ್ ಕೈವಾಡದ ಆರೋಪದಿಂದ ಕುಮಾರಸ್ವಾಮಿ ಯೂಟರ್ನ್ ಹೊಡೆದರೆ ?

Tuesday, January 9th, 2018
Kumaraswamy

  ಮಂಗಳೂರು: ಕಾಟಿಪಳ್ಳದ ದೀಪಕ್ ರಾವ್ ಕೊಲೆ ಪ್ರಕರಣದ ಕುರಿತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ಈಗ ದೊಡ್ಡ ವಿವಾದವಾಗಿ ಬೆಳೆದಿದೆ. ಮೈಸೂರಲ್ಲಿ ಸೋಮವಾರ ಬೆಳಗ್ಗೆ ಮಾತನಾಡಿದ ಕುಮಾರಸ್ವಾಮಿ, ದೀಪಕ್ ಕೊಲೆ ಕೇಸಲ್ಲಿ ಬಿಜೆಪಿ ಕಾರ್ಪೊರೇಟರ್ ಒಬ್ಬರ ಕೈವಾಡವಿದೆ ಎಂದು ಹೇಳಿದ್ದು ವರದಿಯಾಗಿತ್ತು. ಬಳಿಕ ಈ ಬಗ್ಗೆ ಕುಮಾರಸ್ವಾಮಿ ಯೂಟರ್ನ್ ಹೊಡೆದು ತನಗೆ ಬಂದಿರುವ ಮಾಹಿತಿ ತಪ್ಪಿರಬಹುದು ಎಂದು ಹೇಳಿದ್ದಾರೆ ಎಂದು ಸುದ್ದಿಯಾಯಿತು. ಕುಮಾರಸ್ವಾಮಿ ಹೇಳಿಕೆಗೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ […]

ದೀಪಕ್‌ ರಾವ್‌ ಹತ್ಯೆ ಬಗ್ಗೆ ಹೆಚ್‌ಡಿಕೆ ಆರೋಪ ಸುಳ್ಳು: ತಿಲಕ್‌ ರಾಜ್‌

Monday, January 8th, 2018
Kumaraswamy

ಮಂಗಳೂರು: ದೀಪಕ್ ರಾವ್ ಹತ್ಯೆಗೆ ಸ್ಥಳೀಯ ಕಾರ್ಪೋರೇಟರ್ ಸುಪಾರಿ ನೀಡಿದ್ದಾರೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿವರ ಆರೋಪವನ್ನು ಕಾರ್ಪೋರೇಟರ್ ತಿಲಕ್ ರಾಜ್ ತಳ್ಳಿಹಾಕಿದ್ದಾರೆ. ಬಿಜೆಪಿ ಮಂಗಳೂರು ಉತ್ತರ ಬ್ಲಾಕ್ ಅಧ್ಯಕ್ಷ ಭರತ್ ಶೆಟ್ಟಿ ಹಾಗೂ ತಿಲಕ್ ರಾಜ್ ಕರೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಮೊಯ್ದಿನ್ ಬಾವ ಅವರು ತಮ್ಮ ಸೋದರ ಫಾರೂಕ್ ಮುಖಾಂತರ ಕುಮಾರಸ್ವಾಮಿಯವರು ಇಂಥದ್ದೊಂದು ಆರೋಪ ಮಾಡಿದ್ದಾರೆ. ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ. ನನಗೆ ಪೊಲೀಸರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಅವರು ಕೂಲಂಕಷವಾಗಿ […]

ಉಡುಪಿ ಜಿಲ್ಲೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ

Monday, January 8th, 2018
Baindoor

ಬೈಂದೂರು: ಹೆಲಿಕಾಪ್ಟರ್ ಮೂಲಕ ಮಂಗಳೂರಿನಿಂದ ಉಡುಪಿಯ ಬೈಂದೂರಿನ ಅರೆಶಿರೂರು ಹೆಲಿಪ್ಯಾಡ್ ಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೈಂದೂರು, ಕಾಪು, ಉಡುಪಿ ಕ್ಷೇತ್ರಗಳಲ್ಲಿ ಸೋಮವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕರಾವಳಿಯ ಸದ್ಯದ ಪರಿಸ್ಥಿತಿಗೆ ಕೋಮುವಾದಿಗಳು‌ ಕಾರಣ. ಇದಕ್ಕೆಲ್ಲ ಸಂಘ ಪರಿವಾರದ ‌ಕುಮ್ಮಕ್ಕು ಅವರು ಬಿಟ್ರೆ ಯಾರೂ ಇಲ್ಲಿ ಗಲಭೆ ಮಾಡಲ್ಲ, ಆದ್ದರಿಂದ ಬಿಜೆಪಿ‌ ಕೋಮುವಾದ ಬಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಪಿಎಫ್ ಐ, ಬಜರಂಗದಳ, ಶ್ರೀ ರಾಮಸೇನೆ ಮೇಲೆ ನಿಗಾ ಇಡಲು […]

ಬಿಜೆಪಿಯವರು ಊಸರವಳ್ಳಿ ಇದ್ದ ಹಾಗೆ: ಸಿದ್ದರಾಮಯ್ಯ ವ್ಯಂಗ್ಯ

Monday, January 8th, 2018
mangaluru

ಮಂಗಳೂರು: “ಬಿಜೆಪಿಯವರು ಊಸರವಳ್ಳಿ ಇದ್ದ ಹಾಗೆ; ಆಗಾಗ ಬಣ್ಣ ಬದಲಾಯಿಸುವವರು,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪುತ್ತೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು. “ಕೆಲವರಿಗೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರಕಾರ ಬರುತ್ತದೆ ಎಂದು ಭಯವಿದೆ. ನಾನು ಸರಕಾರ ಹಣದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಹೇಳುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಗುಜಾರಾತ್ ಹಾಗೂ ವಿದೇಶಕ್ಕೆ ತಮ್ಮ ಸ್ವಂತ ದುಡ್ಡಿನಲ್ಲಿ ಹೋಗುತ್ತಾರಾ?,” ಎಂದು ಪ್ರಶ್ನಿಸಿದರು . ದಕ್ಷಿಣ […]

ಹಿಂದೂಗಳಿಗೆ ಅಭದ್ರತೆ: ಮಟ್ಟಾರು

Saturday, January 6th, 2018
Rathnakar-hegde

ಉಡುಪಿ: ಹಿಂದೂಗಳಿಗೆ ಕರ್ನಾಟಕದಲ್ಲಿ ಅಭದ್ರತೆ ಕಾಡುತ್ತಿದೆ. ಉಡುಪಿ, ದ.ಕ., ಉ.ಕ. ಜಿಲ್ಲೆಗಳಲ್ಲಿ ಕ್ಷೋಭೆ ಆವರಿಸಿದೆ. ಲವ್‌ ಜೆಹಾದ್‌ ಮೂಲಕ ಹಿಂದೂ ಯುವತಿ ಯ ರನ್ನೂ ದಾರಿ ತಪ್ಪಿಸುವ ಕಾರ್ಯವಾಗುತ್ತಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಮಂಗಳೂರಿನಲ್ಲಿ ಶಾಸಕ ಮೊದಿನ್‌ ಬಾವಾ ಅವರು ಆರೋಪಿಯ ಭಾವ ಕಾಪು ಬಿಜೆಪಿ ಕಾರ್ಯಕರ್ತನೆಂದು ಹೇಳಿದ್ದಾರೆ. ಇದು ಶುದ್ಧ ಸುಳ್ಳು. ಆರೋಪ ಕೇಳಿಬಂದಾಗ ಸ್ವತಃ ಪರಿಶೀಲಿಸಿದಾಗ ಕಾಪುವಿನಲ್ಲಿ ಅಂತಹ ಕಾರ್ಯ ಕರ್ತನೇ ಬಿಜೆಪಿಯಲ್ಲಿ ಇಲ್ಲವೆನ್ನುವ ಸತ್ಯ ಗೊತ್ತಾಗಿದೆ. ಬಾವಾ […]

ದೀಪಕ್ ರಾವ್ ಹತ್ಯೆ ಖಂಡಿಸಿ ಜ.8ರಂದು ರಾಜ್ಯಾದ್ಯಂತ ಬಿಜೆಪಿ ಧರಣಿ

Saturday, January 6th, 2018
BJP-rally

ಬೆಂಗಳೂರು: ರಾಜ್ಯದಲ್ಲಿ ನಡೆದಿರುವ ಹಿಂದೂ ಕಾರ್ಯಕರ್ತರ ಹತ್ಯೆ ಮತ್ತು ಹದಗೆಟ್ಟ ಕಾನೂನು-ಸುವ್ಯವಸ್ಥೆಯನ್ನು ಸುಧಾರಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ ಖಂಡಿಸಿ, ಬೆಂಗಳೂರಿನಲ್ಲಿ ಜ.8ರಂದು ಬಿಜೆಪಿ ವತಿಯಿಂದ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಆಯೋಜನೆಗೊಂಡಿದೆ. ಅಂದು ಪಕ್ಷದ ಮುಖಂಡರು, ಶಾಸಕರು, ಬಿ.ಬಿ.ಎಂ.ಪಿ. ಸದಸ್ಯರು ಮತ್ತು ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ […]

“ಬಷೀರ್ ಬಗ್ಗೆ ಮಾತನಾಡದ ಬಿಜೆಪಿಗೆ ಅಲ್ಪ ಸಂಖ್ಯಾತರ ಘಟಕ ಯಾಕೆ?”

Saturday, January 6th, 2018
busheer

ಮಂಗಳೂರು: ದೀಪಕ್ ರಾವ್ ಕೊಲೆಯ ವಿರುದ್ದ ಬಂದ್, ರಸ್ತೆ ತಡೆ ಅಂತ ಬೀದಿಗಿಳಿದಿರುವ ಬಿಜೆಪಿ ಮುಖಂಡರು ಸಾವು ಬದುಕಿನ ಮಧ್ಯೆ ಒದ್ದಾಡುತ್ತಿರುವ ಅಬ್ದುಲ್ ಬಷೀರ್ ಬಗ್ಗೆ ಯಾಕೆ ಮಾತಾಡುವುದಿಲ್ಲ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಕಿಡಿಕಾರಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ದೀಪಕ್ ಹತ್ಯೆಗೆ ಪ್ರತೀಕಾರ ಎಂದು ರಸ್ತೆಯಲ್ಲಿ ಹೋಗುವ ಅಮಾಯಕ ಮುಸಲ್ಮಾನನ್ನು ಕಡಿದು ಕೊಲೆ ಮಾಡುವುದು ಬಿಜೆಪಿಗೆ ಸಮ್ಮತವೇ?” ಎಂದು ಪ್ತಶ್ನಿಸಿದ್ದಾರೆ. “ಬಿಜೆಪಿ ಮುಖಂಡರಾದ ಸಿ.ಟಿ. ರವಿ, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ […]

ದೀಪಕ್ ರಾವ್ ಹತ್ಯೆ ಹಿಂದೆ ಬಿಜೆಪಿ ಕೈವಾಡ: ಶಾಸಕ ಮೊಯ್ದಿನ್ ಬಾವಾ ಆರೋಪ

Friday, January 5th, 2018
MLA-Bava

ಮಂಗಳೂರು: ಕಾಟಿಪಳ್ಳದಲ್ಲಿ ನಡೆದ ದೀಪಕ್ ರಾವ್ ಹತ್ಯೆಯ ಹಿಂದೆ ಬಿಜೆಪಿಯ ರಾಜಕೀಯ ಉದ್ದೇಶವಿದೆ ಎಂದು ಮಂಗಳೂರು ಉತ್ತರ ಶಾಸಕ ಮೊಯ್ದಿನ್ ಬಾವಾ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕುರಿತು ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಯನ್ನು ಕೋರಲಾಗಿದೆ ಎಂದು ಹೇಳಿದರು. ದೀಪಕ್ ರಾವ್ ಹತ್ಯೆ ಆರೋಪಿಗಳಾದ ಪಿಂಕಿ ನವಾಜ್‍ನ ಸಹೋದರ ಲಾದನ್ ಇಸ್ಮಾಯಿಲ್ ಹಾಗೂ ಆತನ ಅಕ್ಕನ ಗಂಡ (ಬಾವ) ಕಾಪುವಿನಲ್ಲಿ ಬಿಜೆಪಿ ಕಾರ್ಯಕರ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹತ್ಯೆಯ ಹಿಂದೆ ಇರಬಹುದಾದ ಬಿಜೆಪಿಯ […]