Blog Archive

ಸಾವಿನಲ್ಲೂ ಬಿಜೆಪಿಯಿಂದ ರಾಜಕಾರಣ… ಯೆಚೂರಿ ಆರೋಪ

Friday, January 5th, 2018
sitaram-yechury

ಮಂಗಳೂರು: ಕರಾವಳಿ ಹಾಗೂ ಇತರೆಡೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಸಾವಿನಲ್ಲೂ ರಾಜಕಾರಣ ಮಾಡುತ್ತಿದೆ ಎಂದು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಆರೋಪಿಸಿದ್ದಾರೆ. ಮೂಡುಬಿದಿರೆಯಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಸಿಪಿಐ(ಎಂ)ನ ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ದೇಶದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಕಳೆದ ಮೂರು ವರ್ಷಗಳಲ್ಲಿ ದೇಶದ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿಲ್ಲ ಎಂದರು. ಈ ಹಿಂದಿನ ಸರ್ಕಾರಕ್ಕಿಂತಲೂ ಪ್ರಬಲವಾಗಿ ನವ ಉದಾರೀಕರಣ ಆರ್ಥಿಕ ನೀತಿಯನ್ನು […]

ದೀಪಕ್ ಹತ್ಯೆ ಪ್ರಕರಣ…ಪೊಲೀಸರ ಕ್ಷೀಪ್ರ ಕಾರ್ಯಾಚರಣೆಗೆ ನಗದು ಬಹುಮಾನ

Friday, January 5th, 2018
nagara-police

ಮಂಗಳೂರು: ಜಿಲ್ಲೆಯ ಬಿಜೆಪಿ ಕಾರ್ಯಕರ್ತ ದೀಪಕ್ ಹತ್ಯೆ ಸಂಬಂಧ ಆರೋಪಿಗಳನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಚೇಸ್‌ ಮಾಡಿ ಬಂಧಿಸಿದ್ದು, ಪೊಲೀಸರ ಕ್ಷೀಪ್ರ ಕಾರ್ಯಾಚರಯನ್ನು ಎಡಿಜಿಪಿ ಕಮಲ್‌ ಪಂತ್‌ ಶ್ಲಾಘಿಸಿದ್ದಾರೆ. ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರ ಈ ಕ್ಷೀಪ್ರ ಕಾರ್ಯಾಚರಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸ್‌ ತಂಡಕ್ಕೆ 1.20 ಲಕ್ಷ ರೂ. ಬಹುಮಾನ ಘೋಷಿಸಿದರು. ಆರೋಪಿಗಳು ಸ್ವಿಫ್ಟ್ ಕಾರಿನಲ್ಲಿ ಕಾವೇರಿ ರಸ್ತೆಯ ಚೆಕ್‌ಪೋಸ್ಟ್ ಬಳಿ ವೇಗವಾಗಿ ಹೋಗುತ್ತಿದ್ದಾಗ […]

ಉದ್ಯಮಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಕೆ.ಪಿ.ನ೦ಜು೦ಡಿಗೆ ಐಟಿ ಶಾಕ್

Thursday, January 4th, 2018
K-P-Nanjundi

ಬೆಂಗಳೂರು: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಹಾಗೂ ಚಿನ್ನದ ಉದ್ಯಮಿ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಕೆ.ಪಿ.ನ೦ಜು೦ಡಿ ಅವರ ಮನೆ, ಕಚೇರಿ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ನಡೆಸಿದ್ದಾರೆ. ಗುರುವಾರ ಬೆಂಗಳೂರಿನಲ್ಲಿರುವ ಕೆ.ಪಿ.ನ೦ಜು೦ಡಿ ಅವರ ಚಿನ್ನದ ಅಂಗಡಿ, ಕಚೇರಿ, ಮನೆ ಮೇಲೆ ಬೆಂಗಳೂರು ಹಾಗೂ ಗೋವಾ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ನ೦ಜು೦ಡಿ ಅವರ ಅಂಗಡಿ ಅಧಿಕಾರಿ ಸೇರಿದಂತೆ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆದಿದ್ದು, ದಾಖಲೆಗಳ […]

ದೀಪಕ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡುವಂತೆ ಸಿಟಿ ರವಿ ಆಗ್ರಹ

Thursday, January 4th, 2018
C-T-Ravi

ಮಂಗಳೂರು: ಮಂಗಳೂರು ಹೊರವಲಯದ ಸುರತ್ಕಲ್ ನ ಕಾಟಿಪಳ್ಳದಲ್ಲಿ ದುರ್ಷರ್ಮಿಗಳಿಂದ ಹತ್ಯೆಗೇಡಾದ ದೀಪಕ್ ರಾವ್ ಅವರ ಕುಟುಂಬಕ್ಕೆ ಪರಿಹಾರವಾಗಿ ರಾಜ್ಯ ಸರಕಾರ 25 ಲಕ್ಷ ರೂಪಾಯಿ ನೀಡಬೇಕೆಂದು ಬಿಜೆಪಿ ಮುಖಂಡ ಸಿ.ಟಿ.ರವಿ ಒತ್ತಾಯಿಸಿದ್ದಾರೆ. ದೀಪಕ್ ಕೊಲೆ ಪ್ರಕರಣ, ಸಿನಿಮೀಯ ರೀತಿಯಲ್ಲಿ 4 ಶಂಕಿತರ ಬಂಧನ ದುಷ್ಕರ್ಮಿಗಳ ದಾಳಿಯಲ್ಲಿ ಮೃತಪಟ್ಟ ದೀಪಕ್ ರಾವ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನಗರದ ಎ.ಜೆ.ಆಸ್ಪತ್ರೆಗ ತರಲಾಗಿತ್ತು. ಈ ಹಿನ್ನೆಲೆಯಲ್ಲಿ ಎ.ಜೆ. ಆಸ್ಪತ್ರೆಗೆ ಭೇಟಿ ನೀಡಿದ ಚಿಕ್ಕಮಗಳೂರು ಶಾಸಕ ಹಾಗೂ ಬಿಜೆಪಿ ಮುಖಂಡ ಸಿ.ಟಿ.ರವಿ […]

ಯೋಧರು ಹುತಾತ್ಮರಾಗದ ದೇಶವೇ ಇಲ್ಲ: ಬಿಜೆಪಿ ಸಂಸದ ನೇಪಾಳ್ ಸಿಂಗ್ ವಿವಾದಾಸ್ಪದ ಹೇಳಿಕೆ

Wednesday, January 3rd, 2018
Nepal-singh

ನವದೆಹಲಿ: ಸೇನೆಯಲ್ಲಿ ಯೋಧರು ಪ್ರತೀದಿನ ಹುತಾತ್ಮರಾಗುತ್ತಿರುತ್ತಾರೆ, ಯೋಧರು ಹುತಾತ್ಮರಾಗದ ದೇಶ ಯಾವುದಾದರೂ ಇದೆಯೇ ಎಂದು ಉತ್ತರಪ್ರದೇಶದ ಬಿಜೆಪಿ ಸಂಸದ ನೇಪಾಳ್ ಸಿಂಗ್ ಅವರು ಮಂಗಳವಾರ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಪುಲ್ವಾಮದಲ್ಲಿ ಸಿಆರ್’ಪಿಎಫ್ ತರಬೇತಿ ಕೇಂದ್ರದ ಮೇಲೆ ಉಗ್ರರು ನಡೆಸಿದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವ ವೇಳೆ ನೇಪಾಳ್ ಸಿಂಗ್ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಸೇನೆಯಲ್ಲಿ ಯೋಧರು ಪ್ರತೀನಿತ್ಯ ಹುತಾತ್ಮರಾಗುತ್ತಿರುತ್ತಾರೆ. ಯೋಧರು ಹುತಾತ್ಮರಾಗದೇ ಇರುವ ದೇಶ ಯಾವುದಾದರೂ ಇದೆಯೇ? ಗ್ರಾಮದಲ್ಲಿ ಮಾರಮಾರಿಯಾದಾಗ ಒಬ್ಬರಲ್ಲ ಒಬ್ಬರು ಗಾಯಗೊಳ್ಳುತ್ತಾರೆ. […]

ಸುಕುಮಾರ ಶೆಟ್ಟರಿಗೆ ಸಂಕಟ

Wednesday, January 3rd, 2018
sukumar-shetty

ಉಡುಪಿ: ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅವರ ಆಗಮನ ಬೈಂದೂರು ವಿಧಾನಸಭಾ ಕ್ಷೇತ್ರದ ರಾಜಕೀಯ ರಂಗೇರಲು ಕಾರಣವಾಗಿದೆ. ಟಿಕೆಟ್‌ ಯಾರಿಗೆ ಎಂಬ ಪ್ರಶ್ನೆ ಉದ್ಭವಿಸಿರುವುದರಿಂದ ಈ ಕ್ಷೇತ್ರ ಕುತೂಹಲದ ಕೇಂದ್ರವಾಗಿದೆ. ಕಳೆದ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ ಬಿಜೆಪಿ ಮುಖಂಡ ಬಿ.ಎಂ. ಸುಕುಮಾರ ಶೆಟ್ಟಿ ಅವರು ಈ ಬಾರಿ ಗೆಲ್ಲಲು ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಟಿಕೆಟ್ ಸಹ ಅವರಿಗೇ ಸಿಗುವ ನಿರೀಕ್ಷೆ ಇದೆ. ಆದರೆ, ಹಿರಿಯ ರಾಜಕಾರಣಿ ಕೆ. ಜಯಪ್ರಕಾಶ್ ಹೆಗ್ಡೆ ಅವರು ಸಹ ಇದೇ […]

ವಿಶ್ವಕರ್ಮ ಸಮಾಜ ಓಲೈಕೆಯತ್ತ ಬಿಎಸ್‌ವೈ

Tuesday, January 2nd, 2018
Yediyorappa

ತುಮಕೂರು: ತಾವು ಅಧಿಕಾರಕ್ಕೆ ಬಂದರೆ, ವಿಶ್ವಕರ್ಮ ಸಮಾಜ ಸೇರಿದಂತೆ ವಿವಿಧ 103 ಹಿಂದುಳಿದ ವರ್ಗಗಳ ಸಮುದಾಯದ ಅಭಿವೃದ್ಧಿಗೆ ಒಂದು ಸಾವಿರ ಕೋಟಿ ರೂ. ಅನುದಾನವನ್ನು ಮೊದಲ ವರ್ಷದಲ್ಲೇ ಬಿಡುಗಡೆ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ವಾಗ್ದಾನ ಮಾಡಿದ್ದಾರೆ. ಅವರು ಕೈದಾಳದಲ್ಲಿ ನಡೆದ ಅಮರ ಶಿಲ್ಪಿ ಜಕಣಾಚಾರ್ಯರ ಸಂಸ್ಮರಣಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ವಿಶ್ವಕರ್ಮ ಸಮಾಜದ ಮುಖಂಡ ಕೆ.ಪಿ. ನಂಜುಂಡಿಯನ್ನು ಪರಿಷತ್ ಸದಸ್ಯರನ್ನಾಗಿ ಮಾಡುವುದಲ್ಲದೆ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ಹೇಳಿ ವಿಶ್ವಕರ್ಮ ಸಮಾಜವನ್ನು […]

ವಿಷಯವಿಲ್ಲದ್ದಕ್ಕೆ “ಅನ್ನಭಾಗ್ಯ’ ಟೀಕೆ: ಖಾದರ್‌

Saturday, December 30th, 2017
U-T-Kader

ಮಂಗಳೂರು: ರಾಜ್ಯ ಸರ್ಕಾರದ ಬಗ್ಗೆ ಮಾತನಾಡಲು ಯಾವುದೇ ವಿಚಾರ ಸಿಗದ ಹಿನ್ನೆಲೆಯಲ್ಲಿ ಬಿಜೆಪಿಯವರು ಈಗ ಅನ್ನಭಾಗ್ಯ ವನ್ನು ನಮ್ಮ ಭಾಗ್ಯ ಎನ್ನುತ್ತಿದ್ದಾರೆ ಎಂದು ಆಹಾರ ಸಚಿವ ಯು.ಟಿ.ಖಾದರ್‌ ಟೀಕಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಕ್ಕಿಗೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತಿರುವುದು ನಿಜ. ಆಹಾರ ಭದ್ರತೆ ಕಾಯಿದೆ ಯನ್ನು ಯುಪಿಎ ಸರ್ಕಾರ ಜಾರಿಗೆ ತಂದ ನಂತರ ಕೇಂದ್ರದಿಂದ ಸಬ್ಸಿಡಿ ಕೊಡಲಾಗುತ್ತಿದೆ. ಸಬ್ಸಿಡಿಯನ್ನು ಕೇವಲ ಕರ್ನಾಟಕಕ್ಕೆ ಮಾತ್ರ ಕೊಡುತ್ತಿಲ್ಲ. ಅದನ್ನು ಎಲ್ಲ ರಾಜ್ಯಗಳಿಗೂ ಕೊಡುತ್ತಿದೆ. ಎಲ್ಲ ರಾಜ್ಯಗಳಿಗೂ ಸಬ್ಸಿಡಿ […]

ರೈಗಳೇ ನಿಮ್ಮ ಹೆಸರು ‘ರಸತ್ತುಲ್ಲಾ’ ಅಂತ ಬದಲಾಯಿಸಿಕೊಳ್ಳಿ

Friday, December 29th, 2017
jaggesh

ಬೆಂಗಳೂರು: ‘ಅಲ್ಲಾಹು ಕೃಪೆ ಮತ್ತು ಬಂಟ್ವಾಳದ ಮುಸ್ಲಿಮರ ಜಾತ್ಯಾತೀತ ನಿಲುವಿನಿಂದ ನಾನು 6 ಬಾರಿ ಶಾಸಕನಾಗಿ ಆಯ್ಕೆಯಾಗಲು ಸಾಧ್ಯವಾಯಿತು’ ಎಂದು ಹೇಳಿಕೆ ನೀಡಿದ ಸಚಿವ ರಮನಾಥ ರೈ ಅವರಿಗೆ ಬಿಜೆಪಿ ನಾಯಕ,ನವರಸ ನಾಯಕ ಜಗ್ಗೇಶ್‌ ಹೆಸರು ಬದಲಾಯಿಸಿಕೊಳ್ಳಲು ಸಲಹೆ ನೀಡಿ ಟಾಂಗ್‌ ನೀಡಿದ್ದಾರೆ. ‘ದಯಮಾಡಿ ಈಗಲೆ ಮುಲ್ಲಾ ಕರೆಸಿ ಕತ್ನ ಮಾಡಿಸಿಕೊಂಡು..ಮುಸಲ್ಮಾನರಿಗಾದರೂ ವಿಧೇಯರಾಗಿ..!5 ಬಾರಿ ನಮಾಜ್‌ ಶುರುಮಾಡಿ..!ಯಾವುದೇ ಕಾರಣಕ್ಕೂ ಹಿಂದುಗಳ ಮತ ಕೇಳಬೇಡಿ..ನಿಮ್ಮ ಹೆಸರು ರಸತ್ತುಲ್ಲಾ ಅಂತ ಬದಲಾಯಿಸಿಕೊಂಡು ಚನ್ನಾಗಿ ಬಾಳಿ!’ ಎಂದು ಜಗ್ಗೇಶ್‌ ಟ್ವೀಟ್‌ ಮಾಡಿದ್ದಾರೆ […]

ಜನರ ಸಂಕಷ್ಟಗಳಿಗೆ ಕಾಂಗ್ರೆಸ್ ಮತ್ತು ಬಿಜೆಪಿ ನೇರ ಕಾರಣ : ಸಾತಿ ಸುಂದರೇಶ್

Monday, December 25th, 2017
sundaresh

ಮಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ಆಡಳಿತಾವಧಿಗಳಲ್ಲಿ ಜನರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಿ ಅವರ ಬೇಡಿಕೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ತನ್ನ ತಪ್ಪು ಆರ್ಥಿಕ ಹಾಗೂ ಸಾಮಾಜಿಕ ನೀತಿಗಳ ಪರಿಣಾಮವಾಗಿ ಇಂದು ಭಾರತೀಯರು ಪರಿತಪಿಸುವಂತಾಗಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರಕಾರ ಬೆಲೆ ಏರಿಕೆಯಂತಹ ಜನರ ಮೂಲಭೂತ ಕಷ್ಟವನ್ನು ಪರಿಹರಿಸಲು ವಿಫಲವಾದಾಗ ಅದು ಅಧಿಕಾರವನ್ನು ಕಳೆದುಕೊಂಡಿತು. ಅನಂತರ ಬಂದ ಈಗಿನ ಬಿಜೆಪಿ ನೇತೃತ್ವದ ಎನ್ ಡಿ ಎ ಸರಕಾರ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಈಗಿನ ಸರಕಾರಕ್ಕೆ ಜನರ […]