Blog Archive

ಮುಂದಿನ 48 ಗಂಟೆಗಳಲ್ಲಿ ಕರಾವಳಿಯಲ್ಲಿ‌ ಭಾರೀ ಮಳೆ..ಹವಾಮಾನ ಇಲಾಖೆಯಿಂದ ಎಚ್ಚರ!

Wednesday, July 11th, 2018
karavali

ಮಂಗಳೂರು: ಕಳೆದ ಎರಡು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿರಾಮ ಪಡೆದಿದ್ದ ಮಳೆರಾಯ ಮತ್ತೆ ಅಬ್ಬರಿಸತೊಡಗಿದ್ದಾನೆ . ಎರಡು ದಿನಗಳಿಂದ ಕರಾವಳಿಯಲ್ಲಿ ಮುಂಗಾರು ಕ್ಷೀಣಗೊಂಡಿತ್ತು. ಆದರೆ ಇಂದು ಮಳೆ ಅಬ್ಬರ ಮತ್ತೇ ಆರಂಭವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂಜಾನೆಯಿಂದ ಜಡಿ ಮಳೆ ಆರಂಭಗೊಂಡಿದೆ. ಪರಿಣಾಮ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ಸೇರಿದಂತೆ ಮಂಗಳೂರಿನಾದ್ಯಂದ ಮಳೆ ಸುರಿಯುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಲ್ಲಿ ಗುಡ್ಡ ಕುಸಿದ ಘಟನೆಗಳು […]

ರಾಜಕೀಯ ಕಾರಣಕ್ಕಾಗಿ ಬಜೆಟ್ ಬಗ್ಗೆ ಟೀಕಿಸುವುದು ಸರಿಯಲ್ಲ: ಐವನ್ ಡಿಸೋಜ

Saturday, July 7th, 2018
ivan-desouza

ಮಂಗಳೂರು: ರಾಜ್ಯ ಸರಕಾರದ ಬಜೆಟ್‌ನಲ್ಲಿ ಕರಾವಳಿಗೆ ಏನೂ ಕೊಡುಗೆ ನೀಡಿಲ್ಲ ಎಂಬ ಬಿಜೆಪಿ ಶಾಸಕರ ಆರೋಪದಲ್ಲಿ ಹುರುಳಿಲ್ಲ. ಮೊದಲು ಅವರು ಬಜೆಟ್ ಪುಸ್ತಕವನ್ನು ಓದಲಿ ಬಳಿಕ ಮಾತನಾಡಲಿ. ಅದು ಬಿಟ್ಟು ರಾಜಕೀಯ ಕಾರಣಕ್ಕಾಗಿ ಬಜೆಟ್ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ. ಶನಿವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಫೆಬ್ರವರಿಯಲ್ಲಿ ಸಿದ್ದರಾಮಯ್ಯ ಸರಕಾರ ಮಂಡಿಸಿದ ಬಜೆಟ್‌ನ ಮುಂದುವರಿದ ಭಾಗ ಎಂದು ಸಿಎಂ ಕುಮಾರಸ್ವಾಮಿ ಮುನ್ನುಡಿಯಲ್ಲೇ ಹೇಳಿದ್ದಾರೆ. ಹಿಂದಿನ ಬಜೆಟ್ […]

ಮೀನಿನಲ್ಲಿ ರಾಸಾಯನಿಕ ಅಂಶ.. ಪತ್ತೆ ಹಚ್ಚುವ ಕಿಟ್‌ ಇದೀಗ ಮಂಗಳೂರಿಗೆ!

Saturday, July 7th, 2018
fisheries

ಮಂಗಳೂರು: ಇತ್ತೀಚೆಗೆ ಮೀನುಗಳಿಗೆ ರಾಸಾಯನಿಕ ಸಿಂಪಡಿಸಿ ತಾಜಾವಾಗಿಡಲಾಗುತ್ತಿದೆ ಎಂಬ ಸುದ್ದಿಗಳು ಹರಡುತ್ತಿರುವುದರಿಂದ ಕರಾವಳಿಯಲ್ಲಿ ಮೀನು ಪ್ರೀಯರು ಆತಂಕಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಮೀನಿನ ತಾಜಾತನ ಕಾಪಾಡುವುದಕ್ಕೆ “ಫಾರ್ಮಾಲಿನ್‌’ ಅಥವಾ “ಅಮೋನಿಯಾ’ ರಾಸಾಯನಿಕ ವಸ್ತುಗಳನ್ನು ಪತ್ತೆ ಹಚ್ಚುವ ಕಿಟ್‌ ಇದೀಗ ಮಂಗಳೂರಿಗೂ ಬಂದಿದೆ. ಈ ಕಿಟ್‌ ಅನ್ನು ಕೇರಳದ ಕೊಚ್ಚಿಯಲ್ಲಿರುವ ಕೇಂದ್ರ ಮೀನುಗಾರಿಕೆ ತಂತ್ರಜ್ಞಾನ ಸಂಸ್ಥೆಯಿಂದ ತರಿಸಿಕೊಳ್ಳಲಾಗಿದೆ. ಜಿಲ್ಲೆಯ ಆಹಾರ ಇಲಾಖೆಯ ಅಧಿಕಾರಿಗಳಿಗೆ ಈ ಕಿಟ್ ಹಸ್ತಾಂತರಿಸಲಾಗಿದ್ದು ಮಾರುಕಟ್ಟೆ ಪ್ರದೇಶದಲ್ಲಿ, ಮೀನು ಮಾರಾಟವಾಗುವ ಜಾಗಗಳಲ್ಲಿ ರಾಸಾಯನಿಕ ಮಿಶ್ರಣ ಕುರಿತಂತೆ ತಪಾಸಣೆ […]

ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್..ಬಜೆಟ್ ನಲ್ಲಿ ಕರಾವಳಿಗೆ ಭಾರಿ ನಿರಾಸೆ!

Thursday, July 5th, 2018
karavali

ಮಂಗಳೂರು: ರಾಜ್ಯದ ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್ ಇಂದು ಮಂಡಿಸಲಾಗಿದೆ. ಬಜೆಟ್ ನಲ್ಲಿ ಕರಾವಳಿ ಭಾಗವನ್ನು ಸಂಪೂರ್ಣ ನಿರ್ಲಕ್ಷಿಸಿದ್ದು, ಹಳೆ ಮೈಸೂರು ಭಾಗಕ್ಕೆ ಮಾತ್ರ ಬಜೆಟ್ ಸೀಮಿತವಾಗಿಸಿದ್ದಾರೆ ಎಂಬ ಆಕ್ರೋಶ ಕರಾವಳಿಯಾದ್ಯಂತ ವ್ಯಕ್ತವಾಗುತ್ತಿದೆ. ಇಂದಿನ ಬಜೆಟ್ ನಲ್ಲಿ ಎಲ್ಲಿಯೂ ಕರಾವಳಿ ಅಭಿವೃದ್ಧಿಗೆ ಒತ್ತು ನೀಡದಿರುವುದು ಕರಾವಳಿ ಭಾಗದ ಶಾಸಕರ ಆಕ್ರೋಶಕ್ಕೆ ಕಾರಣವಾಗಿದೆ. ಸಂಪೂರ್ಣ ಬಜೆಟ್ ನಲ್ಲಿ ಎಲ್ಲಿಯೂ “ಕರಾವಳಿ ” ಅನ್ನುವ ಪದವನ್ನೇ ಬಳಸದ ಕುಮಾರ ಸ್ವಾಮಿ ಚುನಾವಣೆಯ ಫಲಿತಾಂಶದ ಪ್ರತಿಕಾರ ತೀರಿಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ […]

ರೈತರಿಗೆ ದ್ರೋಹ ಮಾಡಿದ ಬಜೆಟ್ ಇದಾಗಿದೆ..ಇದು ಅಣ್ಣ-ತಮ್ಮಂದಿರ ಬಜೆಟ್: ಬಿ.ಎಸ್.ಯಡಿಯೂರಪ್ಪ

Thursday, July 5th, 2018
yedyurappa

ಬೆಂಗಳೂರು: ಮಾತಿಗೆ ತಪ್ಪಿ, ರೈತರಿಗೆ ದ್ರೋಹ ಮಾಡಿದ ಬಜೆಟ್ ಇದಾಗಿದೆ. ಇದು ಅಣ್ಣ-ತಮ್ಮಂದಿರ ಬಜೆಟ್ ಆಗಿದೆ ಎಂದು ಪ್ರತಿಪಕ್ಷ ನಾಯಕ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. 34ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವ ಘೋಷಣೆ ಮಾಡಿದ್ದಾರೆ. ಆದರೆ, ಅದಕ್ಕಾಗಿ ಹಣಕಾಸು ವ್ಯವಸ್ಥೆ ಎಲ್ಲಿಂದ ಮಾಡಿದ್ದಾರೆ. ಅದರ ಬಗ್ಗೆ ಸಿಎಂ ಸ್ಪಷ್ಟೀಕರಣ ನೀಡಬೇಕು. ಸಿಎಂ ಕುಮಾರಸ್ವಾಮಿ ನಂಬಿಕೆ ದ್ರೋಹದ ಬಜೆಟ್ ನೀಡಿದ್ದಾರೆ ಎಂದು ಕಿಡಿಕಾರಿದರು. ಡೀಸೆಲ್, ಪೆಟ್ರೋಲ್, ವಿದ್ಯುತ್ ದರ ಹಚ್ಚಿಸುವ ಮೂಲಕ ಜನರ ಮೇಲೆ ಹೊರೆ ಹಾಕಿದ್ದಾರೆ. […]

ಹೊಸ ಬಜೆಟ್​ನಲ್ಲಿ ಕರಾವಳಿ ಜಿಲ್ಲೆಗೆ ಸಾಕಷ್ಟು ಕೊಡುಗೆಗಳು ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಜನತೆ..!

Thursday, July 5th, 2018
budjet

ಮಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಡಿಸಲಿರುವ ಬಜೆಟ್ ಕರಾವಳಿ ಜನರ ಸಾಕಷ್ಟು ನಿರೀಕ್ಷೆಗೆ ಕಾರಣವಾಗಿದೆ. ಹೊಸ ಬಜೆಟ್ನಲ್ಲಿ ಕರಾವಳಿ ಜಿಲ್ಲೆಗೆ ಸಾಕಷ್ಟು ಕೊಡುಗೆಗಳು ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಜನರಿದ್ದು, ಎಷ್ಟರಮಟ್ಟಿಗೆ ಬಜೆಟ್ನಲ್ಲಿ ಕರಾವಳಿಗೆ ಪ್ರಾತಿನಿಧ್ಯ ಸಿಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಕರಾವಳಿ ಜಿಲ್ಲೆಯ ಪ್ರಮುಖ ವಹಿವಾಟುಗಳಲ್ಲಿ ಮುಖ್ಯವಾದದ್ದು ಮೀನುಗಾರಿಕೆ. ವಾರ್ಷಿಕ ಸಾವಿರಾರು ಕೋಟಿ ವಹಿವಾಟು ಇರುವ ಈ ಉದ್ಯಮದಲ್ಲಿ ಉತ್ತಮ ವಹಿವಾಟಾದರೆ ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆಗಳು ಸಿಗುತ್ತವೆ. ಸಾವಿರಾರು ಮಂದಿ ಮೀನುಗಾರಿಕೆಯನ್ನೇ ಅವಲಂಬಿಸಿದ್ದು, ಇವರನ್ನು ನಂಬಿ ಸಾವಿರಾರು ಕುಟುಂಬಗಳು […]

ಕರಾವಳಿಯ ಶಾಸ್ತ್ರ ಎಸ್.ಶೆಟ್ಟಿಗೆ ‘ಮಿಸ್ ಕ್ವೀನ್ ಕರ್ನಾಟಕ’ ಪ್ರಶಸ್ತಿ..!

Tuesday, July 3rd, 2018
miss-karnataka

ಉಡುಪಿ: ಬಾಲ್ಯದಲ್ಲೇ ಸೌಂದರ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಬಾಚಿಕೊಂಡ ಕರಾವಳಿಯ ಬೆಡಗಿ ಶಾಸ್ತ್ರ ಎಸ್.ಶೆಟ್ಟಿ ಇದೀಗ ಕೇರಳದ ಕೊಚ್ಚಿಯಲ್ಲಿ ಇತ್ತೀಚೆಗೆ ನಡೆದ ಸ್ಪರ್ಧೆಯಲ್ಲಿ ‘ಮಿಸ್ ಕ್ವೀನ್ ಕರ್ನಾಟಕ’ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. 5 ದಿನದ ಸ್ಪರ್ಧೆಯಲ್ಲಿ ದಕ್ಷಿಣ ಭಾರತದಿಂದ ಸುಮಾರು 22 ಸ್ಪರ್ಧಿಗಳು ಭಾಗವಹಿಸಿದ್ದರು. ತೀವ್ರ ಸ್ಪರ್ಧೆ ಎದುರಿಸಿ, ಐದು ಸುತ್ತಿನಲ್ಲಿ ತಾವು ಒಬ್ಬರಾಗಿ ‘ಮಿಸ್ ಕ್ವೀನ್ ಕರ್ನಾಟಕ’ ಪಟ್ಟ ಆಲಂಕರಿಸಿದ್ದಾರೆ ಶಾಸ್ತ್ರ. ಮೂವತ್ತು ದೇಶಗಳ ಸ್ಪರ್ಧಿಗಳಿಂದ ತೀವ್ರ ಸ್ಪರ್ಧೆ ಎದುರಿಸಿ ಗೆಲುವಿನ ನಗೆ ಬೀರಿರುವ ಶಾಸ್ತ್ರ ಉಡುಪಿಯ […]

ಕರ್ನಾಟಕ ಸೇರಿ 19 ರಾಜ್ಯಗಳಲ್ಲಿ ಭಾರಿ ಮಳೆ, ಅಮರನಾಥ್​ ಯಾತ್ರೆ ಸ್ಥಗಿತ!

Saturday, June 30th, 2018
rainy

ನವದೆಹಲಿ: ಪ್ರಸಕ್ತ ವರ್ಷ ದೇಶದಲ್ಲಿ ವಾಡಿಕೆಗೂ ಮೊದಲೇ ಮಾನ್ಸೂನ್ ಮಳೆ ಆಗಮನವಾಗಿದ್ದು, ಅನೇಕ ಕಡೆ ಈಗಾಗಲೇ ಅಬ್ಬರದ ಮಳೆ ಸುರಿಯುತ್ತಿದೆ. ಹೀಗಾಗಿ ಕಣಿವೆ ನಾಡು ಜಮ್ಮು-ಕಾಶ್ಮೀರದಲ್ಲಿ ಕಳೆದೆರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಅಮರನಾಥ್ ಯಾತ್ರೆ ಸ್ಥಗಿತಗೊಳಿಸಲಾಗಿದೆ. ಇದರ ಮಧ್ಯೆ ಕೆಟ್ಟ ಹವಾಮಾನ ಬೀಸುತ್ತಿರುವ ಕಾರಣ ಮುಂದಿನ ಎರಡು ದಿನಗಳ ಕಾಲ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಪ್ರಮುಖವಾಗಿ ಕರಾವಳಿ ಮತ್ತು ದಕ್ಷಿಣ ಕರ್ನಾಟಕ, […]

ಕರಾವಳಿ ಕುಂಬಾರರ ಯುವವೇದಿಕೆ ಬಂಟ್ವಾಳ ಕ್ಷೇತ್ರ ಇದರ ಕಾರ್ಯಕಾರಿ ಸಮಿತಿ ಸಭೆ!

Tuesday, June 19th, 2018
karavali

ಬಂಟ್ವಾಳ: ಕರಾವಳಿ ಕುಂಬಾರರ ಯುವವೇದಿಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ಇದರ ಕಾರ್ಯಕಾರಿ ಸಮಿತಿ ಸಭೆಯು ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ನಾರಾಯಣ ಸಿ ಪೆರ್ನೆ ಯವರ ಅಧ್ಯಕ್ಷತೆಯಲ್ಲಿ ಜರಗಿತು. ಮುಂದಿನ ಸಾಲಿನ ನೂತನ ಅಧ್ಯಕ್ಷರಾಗಿ ಸುಕುಮಾರ್ ಬಂಟ್ವಾಳ ಅವಿರೋಧವಾಗಿ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ನಾರಾಯಣ ಸಿ.ಪೆರ್ನೆ, ಕಾರ್ಯದರ್ಶಿಯಾಗಿ ಹರಿಪ್ರಸಾದ್, ಉಪಾಧ್ಯಕ್ಷರಾಗಿ ಸತೀಶ್ ಜಕ್ರಿಬೆಟ್ಟು, ಸತೀಶ ಸಂಪಾಜೆ, ಖಜಾಂಚಿಯಾ ಕವಿರಾಜ್ , ಸಂತೋಷ್ ಮರ್ತಾಜೆ, ಕ್ರೀಡಾ ಕಾರ್ಯದರ್ಶಿ ಜಯರಾಜ್ ಬಂಗೇರಾ, ಸಾಂಸ್ಕೃತಿಕ ಕಾರ್ಯದರ್ಶಿ ಯಾದವ ಅಗ್ರಬೈಲು, ಗೌರವ ಸಲಹೆಗಾರರಾಗಿ ಶೇಷಪ್ಪ […]

ಕರಾವಳಿಯಲ್ಲಿ ಸಂಭ್ರಮದ ಈದ್ ಉಲ್ ಫಿತ್ರ್‌

Friday, June 15th, 2018
id-mubarak

ಮಂಗಳೂರು: ಕೇರಳದ ಕ್ಯಾಲಿಕಟ್‌ನಲ್ಲಿ ನಿನ್ನೆ ಚಂದ್ರದರ್ಶನ ಆಗಿರುವುದರಿಂದ ಇಂದು (ಶುಕ್ರವಾರ) ಈದುಲ್ ಫಿತರ್‌ ಆಚರಿಸಲು ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ . ಕರಾವಳಿಯಲ್ಲಿ ಹಿಂದಿನಿಂದಲೂ ರಾಜ್ಯದ ಉಳಿದೆಡೆಗಿಂತ ಒಂದು ದಿನ ಮುಂಚೆ ಈದುಲ್‌ ಫಿತರ್ ಆಚರಿಸಲಾಗುತ್ತದೆ. ‌ ಕರಾವಳಿಯಲ್ಲಿ ನಿನ್ನೆ ರಂಜಾನ್ ಉಪವಾಸವನ್ನು ಕೊನೆಗೊಳಿಸಿದ  ಮುಸ್ಲಿಮರು ಇಂದು ಹಬ್ಬವನ್ನು ಆಚರಿಸಲಿದ್ದಾರೆ.