Blog Archive

ಮುಖ್ಯ ಪೇದೆಗೆ ಕೋವಿಡ್ ಸೋಂಕು, 48 ಗಂಟೆ ಪೊಲೀಸ್‌ ಠಾಣೆ ಬಂದ್

Monday, May 25th, 2020
Vitla-police

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್‌ ಅವರು ಪ್ರತಿಕ್ರಿಯಿಸಿ “ವಿಟ್ಲ ಪೊಲೀಸ್‌ ಠಾಣೆಯನ್ನು ವಿಟ್ಲ ಪಟ್ಟಣ ಪಂಚಾಯತ್‌ ವತಿಯಿಂದ ಸಂಪೂರ್ಣವಾಗಿ ಸ್ಯಾನಿಟೈಸ್‌ ಮಾಡಲಾಗಿದೆ ಹಾಗೂ ರವಿವಾರದಿಂದ ಎರಡು ದಿನಗಳ ಕಾಲ ಪೊಲೀಸ್‌ ಠಾಣೆಯನ್ನು ಮುಚ್ಚಲಾಗಿದೆ ಎಂದಿದ್ದಾರೆ. ವಿಟ್ಲ ಪೊಲೀಸ್‌ ಠಾಣೆಯಲ್ಲಿ ಒಟ್ಟು 40 ಮಂದಿ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಸೋಂಕಿತ ವ್ಯಕ್ತಿಯ ಜತೆ ಪ್ರಾಥಮಿಕ ಸಂಪರ್ಕ ಇರುವವರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ. ಉಳಿದವರನ್ನು ಗೃಹ ನಿಗಾವಣೆಗೆ ಸೂಚನೆ ನೀಡಲಾಗಿದೆ. ಎಷ್ಟು ಮಂದಿ ಸಂಪರ್ಕಿತರು […]

ಸೋಮೇಶ್ವರ ಗ್ರಾಮದ ಮಹಿಳೆಗೆ ಕೋವಿಡ್ ಸೋಂಕು ದೃಢ, ಕುಟುಂಬದ ಐವರ ಗಂಟಲು ದ್ರವ ಪರೀಕ್ಷೆ

Wednesday, May 13th, 2020
Someshwara Covid

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಬುಧವಾರಂದು ಮತ್ತೊಂದು ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಮಂಗಳೂರಿನ ಸೋಮೇಶ್ವರ ಗ್ರಾಮದ ದರಂದಾಬಾಗಿಲುವಿನ 38 ವರ್ಷದ ಮಹಿಳೆಗೆ ಕೋವಿಡ್ ದೃಢಪಟ್ಟಿದೆ. ದ.ಕ.ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 34 ಕ್ಕೇ ಏರಿಕೆಯಾಗಿದೆ.  ಈ ಮಹಿಳೆಗೆ ಫಸ್ಟ್‌ನ್ಯೂರೋ ಆಸ್ಪತ್ರೆಯ ರೋಗಿ ಸಂಖ್ಯೆ ಪಿ-507 ಸಂಪರ್ಕದಿಂದ ಸೋಂಕು ತಗುಲಿದ್ದು ಕೋವಿಡ್ ದೃಢಪಟ್ಟ ಹಿನ್ನಲೆಯಲ್ಲಿ ರೋಗಿಯನ್ನು ವೆನ್ಲಾಕ್‌ ಆಸ್ಪತ್ರೆಗೆ ರವಾನಿಸಲಾಗಿದೆ. ನಿನ್ನೆಯಷ್ಟೇ ಮಂಗಳೂರಲ್ಲಿ ದಾಖಲಾಗಿದ್ದ  ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾಣೂರಿನ ಇಬ್ಬರಿಗೆ ಸೋಂಕು ದೃಢ ಪಟ್ಟಿತ್ತು. ಕೋವಿಡ್ ಸೋಂಕು ದೃಢ ಪಟ್ಟ […]

ಕೋವಿಡ್ ಸೋಂಕಿಗೆ ಬೋಳೂರಿನ 58 ವರ್ಷದ ಮಹಿಳೆ ಮೃತ್ಯು

Wednesday, May 13th, 2020
boloor-death

ಮಂಗಳೂರು : ಕೋವಿಡ್ ಸೋಂಕಿಗೆ ತುತ್ತಾಗಿದ್ದ  ಬೋಳೂರಿನ 58 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮೆದುಳು ಸಂಬಂದಿತ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಗೆ ಸೋಂಕು ತಗಳಿತ್ತು ನಂತರ ಗಂಟಲಿನ ದ್ರವ ಪರೀಕ್ಷೆಗೆ ಒಳಪಡಿಸಲಾಗಿತ್ತು ಅದರ ವರದಿ ಏಪ್ರಿಲ್ 3೦ರಂದು ಬಂದಿದ್ದು ಅದರಲ್ಲಿ ಕೋವಿಡ್ ದೃಢಪಟ್ಟಿತ್ತು ನಂತರ ಅವರನ್ನು ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾರೆ. ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿದ್ದ ಅವಧಿಯಲ್ಲಿ, […]

ಕೇರಳದಲ್ಲಿ ಕೋವಿಡ್ ಸೋಂಕು ತಡೆಯಲು ಕೊಡೆಗಳ ಪ್ರಯೋಗ

Wednesday, April 29th, 2020
kerala-umbrella

ಕೇರಳ  : ಇದೇನು ಕೊರೋನಾ ವೈರಸ್ ಗಳು ಆಕಾಶದಿಂದ ಉದುರುತ್ತವೆ ಅಂದು ಕೊಂಡ್ರ. ಕೊರೋನಾ ವೈರಸ್ ಗಳಿಗೆ ಕೊಡೆಗಳನ್ನು ಕಂಡರೆ ಭಯವೇ, ಅಲ್ಲವೇ ಅಲ್ಲ. ಜನರು ಸಾರ್ವಜನಿಕ ಸ್ಥಳಗಳಲ್ಲಿ ಕೊಡೆಗಳನ್ನು ಬಿಡಿಸಿಕೊಂಡು ನಿಲ್ಲುವುದರಿಂದ ಸೂಕ್ತ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು  ಸಾಧ್ಯ ಎಂಬುದನ್ನು ಕೇರಳದ ಅಲಪ್ಪುಝ ಜಿಲ್ಲೆಯ ಥನೀರ್ ಮುಕ್ಕೊಂ ಪಂಚಾಯತ್ ವ್ಯಾಪ್ತಿಯಲ್ಲಿ ಸಾಧಿಸಿ ತೋರಿಸಲಾಗಿದೆ. ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಅಲಪ್ಪುಝಾದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗಿತ್ತು. ಈ ಸಂದರ್ಭದಲ್ಲೇ ಕೇರಳ ಹಣಕಾಸು ಸಚಿವರಾಗಿರುವ ಥೋಮಸ್ ಐಸಾಕ್ ಅವರು ಸಾಮಾಜಿಕ […]

ಬಂಟ್ವಾಳ ದಲ್ಲಿ ಕೋವಿಡ್ ಸೋಂಕಿನಿಂದ ಮೃತರಾದ ಮಹಿಳೆಯ ಸಂಬಂಧಿಗೂ ಸೋಂಕು ದೃಢ

Thursday, April 23rd, 2020
covid+ve

ಬಂಟ್ವಾಳ: ಇತ್ತೀಚೆಗೆ ಬಂಟ್ವಾಳ ದಲ್ಲಿ ಕೋವಿಡ್-19 ಸೋಂಕಿನ ಕಾರಣ ಮೃತರಾದ ಮಹಿಳೆ (ಸೋಂಕಿತ ಸಂಖ್ಯೆ 390)ರ ಸಂಪರ್ಕದಿಂದ ಮತ್ತೋರ್ವ ಮಹಿಳೆಗೆ ಸೋಂಕು ತಾಗಿರುವುದು ದೃಢವಾಗಿದೆ. 78 ವರ್ಷದ ಮಹಿಳೆ ಇತ್ತೀಚೆಗೆ ಪಾರ್ಶ್ವವಾಯು ಗೆ ಸಂಬಧಿಸಿದಂತೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಮೃತಪಟ್ಟ ಮಹಿಳೆಗೆ ಹತ್ತಿರದ ಸಂಬಂಧಿಯಾಗಿರುವ ಈಕೆಯನ್ನು ಬುಧವಾರ ಖಾಸಗಿ ಆಸ್ಪತ್ರೆಯಿಂದ ಜಿಲ್ಲೆಯ ಕೋವಿಡ್ ಆಸ್ಪತ್ರೆ ವೆನ್ಲಾಕ್ ಗೆ ದಾಖಲಿಸಲಾಗಿತ್ತು. ಇವರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ […]

ಕೋವಿಡ್ ಸೋಂಕಿಗೆ ಬಂಟ್ವಾಳದ ಮಹಿಳೆ ಬಲಿ ; ಅರೋಗ್ಯ ಇಲಾಖೆ ಅಧಿಕಾರಿಗಳ ಮಾರ್ಗದರ್ಶಶನದಂತೆ ಶವ ಸಂಸ್ಕಾರ

Sunday, April 19th, 2020
Bantwal death

ಮಂಗಳೂರು : ಬಂಟ್ವಾಳ ಕಸ್ಬಾ ನಿವಾಸಿ 50 ವರ್ಷದ ಮಹಿಳೆಯೊಬ್ಬರು ಕೋವಿಡ್ ಸೋಂಕಿಗೆ ತುತ್ತಾಗಿ ತೀವ್ರ ಉಸಿರಾಟದ ತೊಂದರೆಯಿಂದ ಭಾನುವಾರ ಮಂಗಳೂರಿನಲ್ಲಿ ಬೆಳಿಗ್ಗೆ 9.15 ಕ್ಕೆ ನಿಧನ ಹೊಂದಿದ್ದಾರೆ. ಇದು ದಕ್ಷಿಣ ಕನ್ನಡದಲ್ಲಿ ಕೋವಿಡ್ ಸೋಂಕಿನ ಮೊದಲ ಬಲಿ ಎನ್ನಲಾಗಿದೆ. ಮಹಿಳೆ ಉಸಿರಾಟದ ತೊಂದರೆಯಿಂದ ಶನಿವಾರ ಸಂಜೆ ವೆನ್ ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರನಿಗಾದಲ್ಲಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆಂದು ಜಿಲ್ಲಾಧಿಕಾರಿಯವರ ಪ್ರಕಟಣೆ ತಿಳಿಸಿದೆ. ಮೃತರ ಗಂಟಲು ದ್ರವ ಪರೀಕ್ಷೆಯ ವರದಿ ಭಾನುವಾರ ಮಧ್ಯಾಹ್ನ ಸಿಗುವ ಮೊದಲೇ ಸಾವನ್ನಪ್ಪಿದ್ದಾರೆ. […]

ನೇಪಾಳದ ಮಸೀದಿಯಲ್ಲಿದ್ದ ಮೂವರು ಭಾರತೀಯರಿಗೆ ಕೋವಿಡ್ ಸೋಂಕು

Monday, April 13th, 2020
nepal-mosque

ಕಠ್ಮಂಡು : ನೇಪಾಳದಲ್ಲಿರುವ ಮೂವರು ಭಾರತೀಯರಿಗೆ ಕೋವಿಡ್ ಸೋಂಕು ಹರಡಿದೆ. ಧಾರ್ಮಿಕ ಆಚರಣೆಯಲ್ಲಿ ಭಾಗಿಯಾಗಿದ್ದ ಇವರು, ಲಾಕ್‌ ಡೌನ್‌ ಆದ ಹಿನ್ನೆಲೆಯಲ್ಲಿ ಅಲ್ಲಿನ ಮಸೀದಿಯೊಂದರಲ್ಲಿ ವಾಸವಿದ್ದರು ಎನ್ನಲಾಗಿದೆ. ದೇಶದಾದ್ಯಂತ 8 ದಿನಗಳ ಕಾಲ ಅಂದರೆ ಏ. 15ರ ತನಕ ನೇಪಾಳದಲ್ಲಿ ಲಾಕ್‌ ಡೌನ್‌ ವಿಸ್ತರಣೆ ಮಾಡಿರುವುದರಿಂದ, ಸೋಂಕಿತರು ಕಠ್ಮಂಡುವಿನಿಂದ 135 ಕಿ.ಮೀ ದೂರದಲ್ಲಿರುವ ಬಿರ್‌ ಗುಂಜ್‌ ನಗರದಲ್ಲಿ ವಾಸವಾಗಿದ್ದರು ಎಂದು ಸ್ಥಳೀಯ ವಾಹಿನಿಯೊಂದು ವರದಿ ಮಾಡಿದೆ.