ಉಜಿರೆ: ಮನಸ್ಸಿನ ನಿಯಂತ್ರಣದೊಂದಿಗೆ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ನಾಯಕತ್ವ ಗುಣದೊಂದಿಗೆ ಆದರ್ಶ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಶನಿವಾರ ಧರ್ಮಸ್ಥಳದಲ್ಲಿ ಭಜನಾ ಕಮ್ಮಟದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಭಜನೆಯಲ್ಲಿ ಸಾಹಿತ್ಯವಿದೆ. ಸಾಹಿತ್ಯದಲ್ಲಿ ಸಾರ್ಥಕ ಬದುಕಿಗೆ ಬೇಕಾದ ಸಂದೇಶವಿದೆ. ಹಾಡುಗಳ ಅರ್ಥವನ್ನು ತಿಳಿದು ಹಾಡಬೇಕು. ನಿಜ ಜೀವನದಲ್ಲಿಯೂ ಅದನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಯಾವುದೇ ಸಮಸ್ಯೆ ಬಂದಾಗ ಅದನ್ನು ಆತ್ಮವಿಶ್ವಾಸದಿಂದ ಎದುರಿಸುವ ಶಕ್ತಿ-ತಾಳ್ಮೆಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು. […]
ಧರ್ಮಸ್ಥಳ : ಕ್ರಾಂತಿಕಾರಿ ರಾಷ್ಟ್ರಸಂತ ತರುಣ ಸಾಗರ ಮುನಿ ಮಹಾರಾಜರು ಸಮಾಧಿ ಮರಣ ಹೊಂದಿದ ವಿಚಾರ ತಿಳಿಯಿತು. 2007 ರಲ್ಲಿ ಧರ್ಮಸ್ಥಳದಲ್ಲಿ ನಡೆದ ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಪೂಜ್ಯರನ್ನು ಇಲ್ಲಿಗೆ ಆಮಂತ್ರಿಸಿ ಅವರ ಸೇವೆ ಮಾಡುವ ಅವಕಾಶ ನಮಗೆ ದೊರಕಿತ್ತು. ಜೈನ ಧರ್ಮದ ಬಗ್ಯೆ ಆಳವಾದ ಅಧ್ಯಯನ ಮಾಡಿ ಅವರು ಉತ್ತಮ ಸಮನ್ವಯ ದೃಷ್ಟಿಯಿಂದ ಮಂಗಲ ಪ್ರವಚನ ನೀಡುತ್ತಿದ್ದರು. ಪೂಜ್ಯರಿಂದ ಸರ್ವ ಧರ್ಮಿಯರೂ ಪ್ರಭಾವಿತರಾಗಿದ್ದು ವಾಸ್ತವಿಕವಾಗಿ ತಮ್ಮ ಜೀವನದಲ್ಲಿ ಧರ್ಮವನ್ನು ಅನುಷ್ಠಾನಗೊಳಿಸುವ ಬಗ್ಯೆ ಅವರು […]
ಮಂಗಳೂರು: ನೂತನ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಭಾನುವಾರ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದ.ಕ.ಜಿಲ್ಲೆಯ 8 ಕ್ಷೇತ್ರಗಳಲ್ಲಿ 6 ಮಂದಿ ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದವರು ಸೋಲನುಭವಿಸಿದರು. ಯುಟಿ ಖಾದರ್ ಒಬ್ಬರೇ ಗೆದ್ದು ಕಾಂಗ್ರೆಸ್ಸಿನ ಮಾನ ಉಳಿಸಿದ್ದರು. ಬಂಟ್ವಾಳ ಶಾಸಕರಾಗಿದ್ದ ಬಿ. ರಮಾನಾಥ ರೈ, ಮೂಡಬಿದ್ರೆ ಶಾಸಕರಾಗಿದ್ದ ಅಭಯಚಂದ್ರ ಜೈನ್, ಬೆಳ್ತಂಗಡಿ ಶಾಸಕರಾಗಿದ್ದ ವಸಂತ ಬಂಗೇರ, ಪುತ್ತೂರು ಶಾಸಕಿಯಾಗಿದ್ದ ಶಕುಂತಳಾ ಟಿ. ಶೆಟ್ಟಿ ಅವರನ್ನು ನಿವಾಸಕ್ಕೆ ತೆರಳಿ ರಾಜ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾದ ಯು.ಟಿ.ಖಾದರ್ […]
ಧರ್ಮಸ್ಥಳ: ಸುರಾನ ವಿದ್ಯಾ ಸಂಸ್ಥೆಗಳ ವತಿಯಿಂದ ಮಂಗಳವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಜೀವಮಾನ ಶ್ರೇಷ್ಠ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಸುರಾನ ವಿದ್ಯಾ ಸಂಸ್ಥೆಗಳ ವತಿಯಿಂದ 2017 ರ ಸಾಲಿನ ಜೀವಮಾನ ಶ್ರೇಷ್ಠ ಸಾಧಕ ಪ್ರಶಸ್ತಿಯನ್ನು ಮಂಗಳವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು. ಸುರಾನ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಡಾ. ಅರ್ಚನಾ ಸುರಾನ ಮತ್ತು ವಿವಿಧ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಪ್ರಶಸ್ತಿ ಸ್ವೀಕರಿಸಿದ ಹೆಗ್ಗಡೆಯವರು ಮಾತನಾಡಿ ಸುರಾನ […]
ಬೆಳ್ತಂಗಡಿ: ಸಂಪೂರ್ಣ ಸುರಕ್ಷಾ ಯೋಜನೆಯು ಜನರಲ್ಲಿ ವಿಶೇಷ ಚೈತನ್ಯ ಉಂಟು ಮಾಡಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಗುರುವಾರ ಸ್ವಸಹಾಯ ಸಂಘಗಳ ಸದಸ್ಯರ ಆರೋಗ್ಯ ರಕ್ಷಣೆಗಾಗಿ ಸದಸ್ಯರ ಸಹಭಾಗಿತ್ವದಲ್ಲಿ ಮಾಡಿಕೊಳ್ಳಲಾದ ಸಂಪೂರ್ಣ ಸುರಕ್ಷಾ ಆರೋಗ್ಯ ವಿಮಾ ಯೋಜನೆ 2018-19ರ ಸಾಲಿನ ವಿಮಾ ಪ್ರೀಮಿಯಂ ಮೊತ್ತವನ್ನು ವಿವಿಧ ವಿಮಾ ಕಂಪೆನಿಗಳಿಗೆ ಹಸ್ತಾಂತರಿಸಿ ಮಾತನಾಡಿದರು. ಧರ್ಮಸ್ಥಳ ಯೋಜನೆಯ ಅನುದಾನದೊಂದಿಗೆ ಅನುಷ್ಠಾನಗೊಳ್ಳುತ್ತಿರುವ ಈ ವಿಮಾ ಯೋಜನೆಯ 2018-19ನೇ ಸಾಲಿಗೆ ಸುಮಾರು 10 […]
ಮಂಗಳೂರು: ದೇವರ ಬಗ್ಗೆ ಭಯ ಇರಬಾರದು. ಭಕ್ತಿ, ಪ್ರೀತಿ ಮತ್ತು ನಂಬಿಕೆ ಇರಬೇಕು. ದೇವರ ಭಕ್ತಿ ಮಾಡುವಾಗ ಭಯ, ಸಂಶಯ, ಅಪನಂಬಿಕೆ ಇರಬಾರದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಧರ್ಮಸ್ಥಳದಲ್ಲಿ ಶಿವರಾತ್ರಿ ಸಂದರ್ಭ ಆಹೋರಾತ್ರಿ ನಡೆಯುವ ಶಿವಪಂಚಾಕ್ಷರಿ ಪಠಣವನ್ನು ಅವರು ಉದ್ಘಾಟಿಸಿ ಮಾತನಾಡಿದರು. ದೇಹ ಮತ್ತು ಆತ್ಮದ ವ್ಯತ್ಯಾಸವನ್ನು ನಾವು ಅರಿತು ಸತ್ಕಾರ್ಯ, ವ್ರತ, ನಿಯಮಗಳು, ಉಪವಾಸ, ಭಕ್ತಿ, ಪ್ರಾರ್ಥನೆ ಮೊದಲಾದ ಧ್ಯಾನದಿಂದ ನಮ್ಮ ದೋಷಗಳನ್ನೆಲ್ಲ ಕಳೆದು ಆತ್ಮವನ್ನು ಪವಿತ್ರ ಹಾಗೂ ಪರಿಶುದ್ಧವಾಗಿ ಮಾಡಬೇಕು. […]