Blog Archive

ಉಳ್ಳಾಲದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ನಿರಾಸೆ

Thursday, March 22nd, 2018
congress

ಮಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಜನಾಶೀರ್ವಾದ ಯಾತ್ರೆಗೆ ಉಳ್ಳಾಲದಲ್ಲಿ ಮಂಗಳವಾರ ರಾತ್ರಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದರೂ, ಕಲ್ಲಾಪು, ತೊಕ್ಕೊಟ್ಟು ಓವರ್‌ ಬ್ರಿಡ್ಜ್ ಬಳಿ ರಾಹುಲ್‌ ಗಾಂಧಿ ವಾಹನ ನಿಲ್ಲಿಸದ ಕಾರಣ ಕಾರ್ಯಕರ್ತರಿಗೆ ನಿರಾಸೆಯನ್ನುಂಟು ಮಾಡಿದರು. ರಾತ್ರಿ 9.30ಕ್ಕೆ ಸಮಯ ನಿಗದಿಯಾಗಿದ್ದರಿಂದ ರಾ.ಹೆ. 66ರ ಕಲ್ಲಾಪುವಿನಿಂದ ಉಳ್ಳಾಲ ಜಂಕ್ಷನ್‌, ದರ್ಗಾವರೆಗೆ ಸಂಪೂರ್ಣ ವಿದ್ಯುದ್ದೀಪಗಳಿಂದ ಅಲಂಕೃತ ಮಾಡಿದ್ದು, ಇದರೊಂದಿಗೆ ಹೆಜ್ಜೆಗೊಂದರಂತೆ ಜನಪ್ರತಿನಿಧಿಗಳ, ಕಾರ್ಯಕರ್ತರ ಸ್ವಾಗತ ಕೋರುವ ಬ್ಯಾನರ್‌ ರಾರಾಜಿಸುತ್ತಿತ್ತು. ದರ್ಗಾದಲ್ಲೂ ವಿಶೇಷ ವೇದಿಕೆಯನ್ನು ಸಜ್ಜುಗೊಳಿಸಲಾಗಿತ್ತು. ಬಳಿಕ ಸಚಿವ […]

ಉಳ್ಳಾಲ ಕೊಲೆ ಯತ್ನ ಆರೋಪಿಯ ಬಂಧನ

Monday, February 12th, 2018
Rajaneesh

ಮಂಗಳೂರು  : ಉಳ್ಳಾಲ ಗ್ರಾಮದ ಮುಕ್ಕಚ್ಚೇರಿಯಲ್ಲಿ ಸಮೂಸಾ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ಮನೆಯಿಂದ ಹೊರಟು ಉಳ್ಳಾಲ ಪೇಟೆಯಲ್ಲಿರುವ ರೆಹಮಾನಿಯಾ ಮಸೀದಿ ಬಳಿಗೆ ರಾತ್ರಿ 10-00 ಗಂಟೆಗೆ ತನ್ನ ಬೈಕ್ ನಲ್ಲಿ ಕೆಲಸದ ನಿಮಿತ್ತ ಬರುತಿದ್ದ ನೌಷಾದ್ ಹುಸೈನ್ ಎಂಬವರಿಗೆ ಬೈಕ್ ನಲ್ಲಿ ಬಂದು ತಲವಾರಿನಿಂದ ಹಲ್ಲೆ ನಡೆಸಿದ ಪ್ರಮುಖ ಆರೋಪಿಯನ್ನು ರೌಡಿ ನಿಗ್ರಹ ದಳ ಸಿಬ್ಬಂದಿ ಗಳು ಸೋಮವಾರ ಬಂಧಿಸಿದ್ದಾರೆ. ಈ ಪ್ರಕರಣದ ಕುರಿತು 2017 ರ ಮಾರ್ಚ್ 26 ರಂದು ರಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ರಿ […]

ಟಾರ್ಗೆಟ್ ಗ್ಯಾಂಗ್ ಇಲ್ಯಾಸ್ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಬಂಧನ

Friday, February 9th, 2018
iliyas

ಮಂಗಳೂರು: ಮಹತ್ವದ ಕಾರ್ಯಾಚರಣೆ ಒಂದರಲ್ಲಿ ಮಂಗಳೂರು ಪೊಲೀಸರು ಕುಖ್ಯಾತ ಟಾರ್ಗೆಟ್ ಗ್ಯಾಂಗ್ ಇಲ್ಯಾಸ್ ಹತ್ಯೆ ಪ್ರಕರಣದ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಉಳ್ಳಾಲ ನಿವಾಸಿ ಸಮೀರ್ (26) ಎಂದು ಗುರುತಿಸಲಾಗಿದೆ. ಈತನನ್ನು ಮಂಗಳೂರು ಸಿಸಿಬಿ ಪೊಲೀಸರು ಕೇರಳದ ಅಡಗುತಾಣದಿಂದ ಬಂಧಿಸಿದ್ದಾರೆ ಎಂದು ಹೇಳಲಾಗಿದೆ.ಬಂಧಿತ ಆರೋಪಿ ಸಮೀರ್ ಜನವರಿ 13ರಂದು ಬೆಳಿಗ್ಗೆ ಇಲ್ಯಾಸ್ ಮೇಲೆ ನಡೆದ ದಾಳಿಯಲ್ಲಿ ನೇರವಾಗಿ ಭಾಗಿಯಾಗಿದ್ದ ಎನ್ನಲಾಗಿದೆ. ಹಲವಾರು ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಇಲ್ಯಾಸ್ ಜಾಮೀನಿನ ಮೇಲೆ ಹೊರಗೆ ಬಂದಿದ್ದ. ದಾಳಿ […]

ಹಲವು ಪ್ರಕರಣಗಳ ಆರೋಪಿ ಸೆರೆ

Tuesday, February 6th, 2018
mangaluru

ಮಂಗಳೂರು: ಒಂಟಿ ಮಹಿಳೆಯಿದ್ದ ಮನೆಯೊಳಗೆ ನುಗ್ಗಿ ಆಕೆಯನ್ನು ಬೆದರಿಸಿ ಚಿನ್ನದ ಸರ ದರೋಡೆಗೈದು ತಲೆಮರೆಸಿಕೊಂಡಿದ್ದ ರೌಡಿಶೀಟರ್ ನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ಸುಂದರಿಭಾಗ್ ನಿವಾಸಿ ರಮೀಝ್ ಯಾನೆ ಲೆಮನ್ ಟೀ ರಮೀಝ್ (26) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಹಲವಾರು ಕಳವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿ. 1 ರಂದು ಉಳ್ಳಾಲ ಠಾಣೆ ವ್ಯಾಪ್ತಿಯ ಸುಭಾಷನಗರದ ಪುಷ್ಪ ರೆಡ್ಡಿ (70) ಎಂಬವರು ಮನೆಯಲ್ಲಿ ಒಬ್ಬರೇ ಇದ್ದಾಗ ಆರೋಪಿ ಮತ್ತು ತಂಡ […]

ಡಿವೈಎಫ್ ಐ ಉಳ್ಳಾಲ: ದೀಪಕ್, ಬಶೀರ್ ಅವರ ಗೌರವಾರ್ಥ ಶ್ರದ್ಧಾಂಜಲಿ ಸಭೆ

Friday, January 12th, 2018
deepak

ಮಂಗಳೂರು: ಕೋಮುವಾದ, ಮತೀಯವಾದದ ಹೆಸರಿನಲ್ಲಿ ದಾಳಿ, ದಬ್ಬಾಳಿಕೆಗಳು ನಿರಂತರವಾಗಿ ನಡೆದು ಜಿಲ್ಲೆಯ ಹೆಸರನ್ನು ಹಾಳು ಮಾಡುತ್ತಿದೆ. ಧರ್ಮಗಳ ನಡುವಿನ ಸಂಬಂಧಗಳಿಗೆ ಹುಳಿ ಹಿಂಡಿ, ಅಧಿಕಾರದ ಖುರ್ಚಿಗೆ ಅಮಾಯಕರ ಕೊಲೆ ನಡೆಸಿ ಸಮಾಜದ ಅಶಾಂತಿಗೆ ಹಲವರು ಕಾರಣ ರಾಗುತ್ತಿದ್ದಾರೆ. ಇದರಿಂದಾಗಿ ಜನರ ನಡುವೆ ಅಪನಂಬಿಕೆ ಸೃಷ್ಟಿ ಮಾಡುವ ತುಳುನಾಡಿನ ಸೌಹಾರ್ದತೆಗೆ ಏಟನ್ನು ನೀಡುವ ಕೆಲಸ ಆಗಿದೆ. ಮತೀಯವಾ ದದ ಹೆಸರಿನಲ್ಲಿ ನಡೆಯುವ ಕೊಲೆಗಳಿಂದಾಗಿ ಭಾವೈಕ್ಯತೆಯನ್ನು ನಾಶ ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ […]

ಮಂಗಳೂರಿಗರಿಗೆ ಸಂತಸದ ಸುದ್ದಿ, ಉಳ್ಳಾಲದಲ್ಲಿ ಸ್ಕೂಬಾ ಡೈವಿಂಗ್ ಆರಂಭ

Monday, January 1st, 2018
scuba-driving

ಮಂಗಳೂರು: ಸಮುದ್ರದ ಆಳಕ್ಕಿಳಿದು ಅಲ್ಲಿಯ ಪ್ರಾಕೃತಿ ವಿಸ್ಮಯಗಳನ್ನು ಕಣ್ತುಂಬಿಕೊಳ್ಳುವ ಕನಸು ಕಾಣುವ ಮಂಗಳೂರಿಗರಿಗೆ ಸಂತಸದ ಸುದ್ದಿ ಇಲ್ಲಿದೆ. ಇನ್ಮುದೆ ಸ್ಕೂಬಾ ಡೈವಿಂಗ್ ನ ರೋಮಾಂಚಕ ಅನುಭವ ಪಡೆಯಲು ಉತ್ತರ ಕನ್ನಡ ಜಿಲ್ಲೆಯ ನೆತ್ರಾಣಿ ಅಥವಾ ಉಡುಪಿಯ ಕಾಪುಗೆ ಹೋಗಬೇಕಾಗಿಲ್ಲ. ಸ್ಕೂಬಾ ಡೈವಿಂಗ್ ನ ಸಹಾಸಿ ಅನುಭವ ಮಂಗಳೂರಿನಲ್ಲಿಯೂ ದೊರೆಯಲಿದೆ. ಹೌದು..ಸ್ಕೂಬಾ ಡೈವಿಂಗ್ ಮೂಲಕ ಕಡಲಾಳದ ಬೆರಗುಗಳಿಗೆ ಸಾಕ್ಷಿಯಾಗುವ ಸಾಹಸ ಜಲಕ್ರೀಡೆ ಮಂಗಳೂರು ಹೊರವಲಯದ ಉಳ್ಳಾಲ ಕಡಲತೀರದಲ್ಲಿ ಆರಂಭಗೊಳ್ಳಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಜಿಲ್ಲಾಡಳಿತ ಸ್ಕೂಬಾ […]

ನನ್ನ ಗೆಲುವಿಗೆ ಮುಸ್ಲಿಂ ಸಮುದಾಯ ಕಾರಣ: ರಮಾನಾಥ ರೈ

Friday, December 29th, 2017
Ramanath-rai

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಬಂಟ್ವಾಳ ಕ್ಷೇತ್ರದಲ್ಲಿ ತಾನು 6 ಬಾರಿ ಗೆದ್ದು ಬರಲು ಮುಸ್ಲಿಂ ಸಮುದಾಯ ಪ್ರಮುಖ ಪಾತ್ರ ವಹಿಸಿದ್ದಾರೆ. ಜನಪ್ರತಿನಿಧಿಗಳಿಗೆ ಮಗ್ಗುಲ ಮುಳ್ಳಾಗಲಿದಿಯೇ ಎತ್ತಿನ ಹೊಳೆ? ಮುಸ್ಲಿಂ‌ ಸಮುದಾಯದ ಜನರ ಋಣ ಜನ್ಮ ಜನ್ಮಾಂತರಗಳಿಗೂ ತೀರಿಸಲು ಸಾಧ್ಯವಿಲ್ಲ ಎಂಬ ಹೇಳಿಕೆ ನೀಡುವ ಮೂಲಕ ಬಂಟ್ವಾಳ ವಿಧಾನಸಭಾ ಕ್ಷೇತ್ರ ದ ಹಿಂದೂ ಸಮುದಾಯದ‌ ಜನರ‌ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಕುರಿತ ವಿಡಿಯೋ ತುಣುಕು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ […]

ಲಾರಿಯಡಿ ಸಿಲುಕಿ ಬೈಕ್ ಸವಾರ ದಾರುಣವಾಗಿ ಸಾವು

Thursday, October 12th, 2017
bike accident

ಮಂಗಳೂರು: ತೊಕ್ಕೊಟ್ಟು ಜಂಕ್ಷನ್ ಬಳಿ ಲಾರಿಯಡಿ ಸಿಲುಕಿ ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಮೃತ ಯುವಕ ಕೆ.ಸಿ ರೋಡ್ ನಿವಾಸಿ ಸಲೀಂ(30) ಎಂದು ಗುರುತಿಸಲಾಗಿದ್ದು, ಸ್ಕೂಟರ್‌ನಲ್ಲಿ 2 ಪ್ಯಾಕೆಟ್ ಗಾಂಜಾ ಪತ್ತೆಯಾಗಿದ್ದು, ಉಳ್ಳಾಲ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಂಗಳೂರಿನಿಂದ ತಲಪಾಡಿ ಕಡೆಗೆ ತೆರಳುವ ಲಾರಿಯ ಹಿಂಭಾಗದಿಂದ ಬರುತ್ತಿದ್ದ ಬೈಕ್ ಸವಾರ ಆಯತಪ್ಪಿ ಲಾರಿ ಹಿಂದುಗಡೆ ಚಕ್ರಕ್ಕೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಬೈಕ್ ಸವಾರ ಹೆಲ್ಮೆಟ್ ಧರಿಸಿದ್ದರೂ, ಲಾರಿಯಡಿ ಸಿಲುಕಿ ತಲೆಯ ಜತೆಗೆ […]

ಕರ್ನಾಟಕ ರಕ್ಷಣಾ ವೇದಿಕೆಯ ಉಳ್ಳಾಲ ಘಟಕ ಉದ್ಘಾಟನ ಸಮಾರಂಭ

Monday, October 9th, 2017
ullala

ಮಂಗಳೂರು: ರಾಜ್ಯ, ರಾಷ್ಟ್ರ ರಹಿತವಾಗಿ ಕನ್ನಡದ ಜನರ ಏಳಿಗೆಗಾಗಿ ಹೋರಾಡುತ್ತಾ ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆ ಯುವಸಮುದಾಯಕ್ಕೆ ನಾಯಕತ್ವದ ಗುಣವನ್ನು ಕಲಿಸುತ್ತಾ ಬಂದಿದೆ ಎಂದು ಕರವೇ ಚಿಕ್ಕಮಗಳೂರು ಹಾಗೂ ದ.ಕ. ಉಸ್ತುವಾರಿ ಜಿಲ್ಲಾಧ್ಯಕ್ಷ ಜಗದೀಶ್‌ ಅರಸ್‌ ತೇಗೂರು ಹೇಳಿದ್ದಾರೆ. ಅವರು ಉಳ್ಳಾಲ ಸಮುದಾಯ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಉಳ್ಳಾಲ ಘಟಕ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಳ್ಳಾಲದಲ್ಲಿ ಈ ನಡುವೆ ಕನ್ನಡವೇ ಜಾತಿ, ಧರ್ಮ ಎನ್ನುವುದನ್ನು ಪಾಲಿಸುತ್ತಾ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆಯನ್ನು […]

ಉಳ್ಳಾಲ: ರೌಡಿ ಗ್ಯಾಂಗ್‌ ವಿರುದ್ಧ ಸಹಿ ಸಂಗ್ರಹ ಮತ್ತು ದೂರು, ಜುಬೇರ್‌ ಕೊಲೆಗೆ ಕಾರಣ

Friday, October 6th, 2017
juber

ಉಳ್ಳಾಲ: ರೌಡಿ ಗ್ಯಾಂಗ್‌ನಿಂದ ಹತ್ಯೆಗೀಡಾದ ಅಬ್ದುಲ್‌ ಜುಬೇರ್‌ ರೌಡಿ ಗ್ಯಾಂಗ್‌ ವಿರುದ್ಧ ಸಹಿ ಸಂಗ್ರಹಿಸಿ ದೂರು ನೀಡಿದ್ದೇ ಕಾರಣವಾಗಿದ್ದು, ಕೊಲೆ ಬೆದರಿಕೆಯನ್ನು ನಿರ್ಲಕ್ಷಿಸಿದ್ದ ಜುಬೇರ್‌ನ ಸಾವಿನಿಂದ ಇಡೀ ಕುಟುಂಬವೇ ಅತಂತ್ರ ಸ್ಥಿತಿಯಲ್ಲಿದೆ. ಉಳ್ಳಾಲದ ಫಿಶ್‌ಮಿಲ್‌ನಲ್ಲಿ ಇಲೆಕ್ಟ್ರಿಕಲ್‌ ಕೆಲಸ ಮುಗಿಸಿ ಮುಕ್ಕಚ್ಚೇರಿಯ ಮಸೀದಿಯಲ್ಲಿ ನಮಾಝ್ ಮುಗಿಸಿ ಸ್ನೇಹಿತ ಇಲ್ಯಾಸ್‌ನೊಂದಿಗೆ ಬೈಕ್‌ನಲ್ಲಿ ಕುಳಿತು ಮಾತನಾಡುತ್ತಿದ್ದಾಗ ಸುಹೈಲ್‌ ನೇತೃತ್ವದ ನಾಲ್ವರ ತಂಡ ತಲವಾರಿನಿಂದ ಯದ್ವಾತದ್ವಾ ಹಲ್ಲೆ ನಡೆಸಿ ಪರಾರಿಯಾಗಿತ್ತು. ಗಂಭೀರ ಗಾಯಗೊಂಡಿದ್ದ ಜುಬೈರ್‌ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದರು. ಇಲ್ಯಾಸ್‌ ಕೈಗೆ ತಲವಾರಿನ […]