Blog Archive

ಪಣಂಬೂರು ಬೀಚ್ ನಲ್ಲಿ ನೀರಾಟವಾಡುತ್ತಿದ್ದ ವಿದ್ಯಾರ್ಥಿ ನೀರುಪಾಲು

Monday, April 8th, 2013
Panamburu beach

ಮಂಗಳೂರು : ಪರೀಕ್ಷೆ ಬರೆಯಲೆಂದು ಚಿಕ್ಕಮಗಳೂರಿನಿಂದ ಮಂಗಳೂರಿಗೆ ಆಗಮಿಸಿದ ವಿದ್ಯಾರ್ಥಿಯೊಬ್ಬ ಪಣಂಬೂರು ಬೀಚ್ ನಲ್ಲಿ ನಿರಾಟವಾಡುತ್ತಿದ್ದ ವೇಳೆ ಸಮುದ್ರದ ಸೆಳೆತಕ್ಕೆ ಸಿಲುಕಿ ಮೃತಪಟ್ಟ ಘಟನೆ ರವಿವಾರ ಸಂಭವಿಸಿದೆ. ಮೃತ ದುರ್ದೈವಿ ಚಿಕ್ಕಮಂಗಳೂರಿನ ಅಕಾಶ್ ಕಡೂರ್ (17). ಚಿಕ್ಕಮಗಳೂರಿನಿಂದ ಮಂಗಳೂರಿಗೆ ಎಇಇಇ ಪರೀಕ್ಷೆ ಬರೆಯಲು ಚಿಕ್ಕಮಂಗಳೂರಿನ ನವೋದಯ ವಿದ್ಯಾಲಯದ ಸುಮಾರು 35 ಮಂದಿ ವಿದ್ಯಾರ್ಥಿಗಳು ಆಗಮಿಸಿದ್ದರು. ಪರೀಕ್ಷೆ ಮುಗಿದ ನಂತರ ಪಣಂಬೂರು ಬೀಚ್ ಗೆ ತೆರಳಿದ ವಿದ್ಯಾರ್ಥಿಗಳು ನೀರಿನಲ್ಲಿ ಆಡುತ್ತಿದ್ದು ಅಕಾಶ್ ಅನಿರೀಕ್ಷಿತವಾಗಿ ಬಂದ ಸಮುದ್ರದ ಅಲೆಗೆ ಸಿಕ್ಕಿ ಸೆಳೆಯಲ್ಪಟ್ಟು […]

ಮೂಡಿಗೆರೆಯಲ್ಲಿ ಬೈಕ್‌ ಹಾಗೂ ಬಸ್‌ ನಡುವೆ ಢಿಕ್ಕಿ, ಒಂದು ಸಾವು, ಬಸ್ ಬಸ್ಮ

Thursday, August 11th, 2011
Bus-Accident/ಬೈಕ್‌ ಹಾಗೂ ಬಸ್‌ ಢಿಕ್ಕಿ

ಚಿಕ್ಕಮಗಳೂರು : ಚಿಕ್ಕಮಗಳೂರು-ಮೂಡಿಗೆರೆ ರಸ್ತೆಯ ದಿಣ್ಣೆಕೆರೆ -ಮಾವಿನಹಳ್ಳಿಯ ತಿರುವಿನಲ್ಲಿ ಬುಧವಾರ ಸಂಜೆ ಬೈಕ್‌ ಹಾಗೂ ಬಸ್‌ ನಡುವೆ ಢಿಕ್ಕಿ ಸಂಭವಿಸಿ ಬೈಕ್‌ ಸವಾರ ಮೃತಪಟ್ಟಿದ್ದು , ಖಾಸಗಿ ಬಸ್‌ ಸಂಪೂರ್ಣ ಸುಟ್ಟು ಕರಕಲಾಗಿದೆ. ಬಸ್‌ನಲ್ಲಿದ್ದ 70 ಕ್ಕೂ ಅಧಿಕ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಧರ್ಮಸ್ಥಳದಲ್ಲಿ ನಡೆದ ಅನಿತಾ -ಜಗದೀಶ್‌ ಮದುವೆಗೆ ಭದ್ರಾವತಿಯಿಂದ ಖಾಸಗಿ ಬಸ್ಸಿನಲ್ಲಿ 70ಕ್ಕೂ ಅಧಿಕ ಮಂದಿ ಹೋಗಿದ್ದರು. ಇನ್ನೊಂದೆಡೆ ಶಿವಮೊಗ್ಗದ ವೀರಭದ್ರ ಕಾಲನಿಯ ನಂದೀಶ್‌ ಹಾಗು ಭೈರೇಶ್‌ ಬೈಕಿನಲ್ಲಿ ವಿಹಾರಾರ್ಥ ಧರ್ಮಸ್ಥಳಕ್ಕೆ ತೆರಳುತ್ತಿದ್ದರು. ಬಸ್ […]

ಚೆನ್ನಪ್ಪಗೌಡ ಮಂಗಳೂರು ಡಿ.ಸಿಯಾಗಿ ಅಧಿಕಾರ ಸ್ವೀಕಾರ

Monday, May 16th, 2011
ಚೆನ್ನಪ್ಪಗೌಡ ಮಂಗಳೂರು ಡಿ.ಸಿಯಾಗಿ ಅಧಿಕಾರ ಸ್ವೀಕಾರ

ಮಂಗಳೂರು: ದಕ್ಷಿಣ ಕನ್ನಡ ನೂತನ ಡಿ.ಸಿ ಯಾಗಿ ಚೆನ್ನಪ್ಪಗೌಡ ಇಂದು ಪ್ರಭಾರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮರಿಂದ ಅಧಿಕಾರ ವಹಿಸಿಕೊಂಡರು. 1982ರಲ್ಲಿ ಭಾರತ ಸೇವಾ ಆಯೋಗದಿಂದ ಅಧಿಕಾರ ವಹಿಸಿ ಮೊದಲ ಬಾರಿಗೆ ಭದಾವತಿಯಲ್ಲಿ ಮುನಿಸಿಪಲ್ ಕಮಿಷನರಾಗಿ ನೇಮಕಗೊಂಡು ನಂತರ ಬೆಂಗಳೂರು, ತುಮಕೂರಿನಲ್ಲಿ ಕಮಿಷನರ್ ಆಗಿ, ಮೈಸೂರು ಜಿಲ್ಲಾ ಪಂಚಾಯತ್ನಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ, ರಾಮನಗರದಲ್ಲಿ ವಿಶೇಷ ಅಧಿಕಾರಿಯಾಗಿ ಮಂಗಳೂರಿನಲ್ಲಿ ಮೂಡ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಾರೆ. ಮೈಸೂರು, ಉತ್ತರ ಕನ್ನಡ, ರಾಮನಗರ ಹಾಗೂ ಚಿಕ್ಕಮಗಳೂರುಗಳಲ್ಲಿ ಜಿಲ್ಲಾಧಿಕಾರಿ ಸೇವೆ ಸಲ್ಲಿಸಿ […]

ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ರಾಜೀನಾಮೆ

Tuesday, September 21st, 2010
ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ರಾಜೀನಾಮೆ

ಬೆಂಗಳೂರು : ಚಿಕ್ಕಮಗಳೂರು ಶಾಸಕರಾಗಿ ಮೂರು ಬಾರಿ ಆಯ್ಕೆಯಾಗಿದ್ದ ಶಾಸಕ ಸಿ.ಟಿ.ರವಿ ಅಸಮಾಧಾನದಿಂದ ಶಾಸಕ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ಸಲ್ಲಿಸುವ ಮೂಲಕ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಗೊಂಡಿದೆ. ಚಿಕ್ಕಮಗಳೂರಿನಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದರೂ ಕೂಡ ಯಾವುದೇ ಬೆಲೆ ಸಿಕ್ಕಿಲ್ಲ ಎಂಬ ಅಸಮಾಧಾನದಿಂದ ಸಿ.ಟಿ.ರವಿ ತಮ್ಮ ರಾಜೀನಾಮೆ ಪತ್ರವನ್ನು ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರಿಗೆ ಇಂದು ಬೆಳಿಗ್ಗೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟ ಪುನಾರಚನೆ ಕುರಿತಾಗಿ ಹೈಕಮಾಂಡ್ ಜೊತೆ ಮಾತುಕತೆ […]