Blog Archive

ಚುನಾವಣೆಯ ದೃಷ್ಟಿಯಿಂದ ಮಂಡಿಸಿದ ಗೊತ್ತು ಗುರಿಗಳಿಲ್ಲದ ಗಿಮಿಕ್ ಬಜೆಟ್: ಕ್ಯಾಪ್ಟನ್ ಕಾರ್ಣಿಕ್

Saturday, February 15th, 2014
Ganesh Karnik

ಮಂಗಳೂರುಃ ರಾಜ್ಯದ ಜನತೆಯಲ್ಲಿ ಯಾವುದೇ ಹೊಸ ಬರವಸೆ ಮೂಡಿಸದ ಕೃಷಿ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಿ ರೈತರ ಸಮಸ್ಯೆಗಳಿಗೆ ಪರಿಹಾರವನ್ನು ಯೋಚಿಸದ ಕೇವಲ ಕಲವೇ ಸಮುದಾಯಗಳನ್ನು ಮುಂದಿಟ್ಟುಕೊಂಡು ಚುನಾವಣೆಗಾಗಿ ಮಂಡಿಸಿದ ಗಿಮಿಕ್ ಬಜೆಟ್ ಇದಾಗಿದೆ. ಈಗಾಗಲೇ 8 ಬಜೆಟ್ ಮಂಡಿಸಿ ಅರ್ಥಿಕ ತಜ್ಞರೆನಿಸಿಕೊಂಡಿದ್ದ ಸನ್ಮಾನ್ಯ ಮುಖ್ಯಮಂತ್ರಿಗಳಿಂದ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯ ನೀಲನಕ್ಷೆಯನ್ನು ನಿರೀಕ್ಷಿಸಿದ್ದ ಸಂದರ್ಭದಲ್ಲಿ ಈ ಬಜೆಟ್ ನಿರಾಶೆ ಮೂಡಿಸಿದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶಾಲಾ ಕಾಲೇಜುಗಳನ್ನು ಅನುದಾನಕ್ಕೊಳಪಡಿಸುವ ಮಾನದಂಡವನ್ನು ಈ ಬಜೆಟ್ನಲ್ಲಿ ಕನಿಷ್ಟ ಇನ್ನೂ 5 ವರ್ಷಗಳಿಗೆ […]

ಬಿಬಿಎಂಪಿಯ ನೂತನ ಮೇಯರ್ ಆಗಿ ಕಟ್ಟೆ ಸತ್ಯನಾರಾಯಣ, ಉಪ ಮೇಯರ್ ಆಗಿ ಇಂದಿರಾ ಅವಿರೋಧ ಆಯ್ಕೆ

Wednesday, September 4th, 2013
satyanarayan

ಬೆಂಗಳೂರು:  ಬಿಬಿಎಂಪಿಯ ನೂತನ ಮೇಯರ್ ಆಗಿ ಬಸವನಗುಡಿ ವಾರ್ಡ್ ಸದಸ್ಯ ಕಟ್ಟೆ ಸತ್ಯನಾರಾಯಣ, ಉಪಮೇಯರ್ ಆಗಿ  ಬ್ಯಾಟರಾಯನಪುರ ವಾರ್ಡ್ ನ  ಎನ್. ಇಂದಿರಾ ಅವಿರೋಧವಾಗಿ  ಬುಧವಾರ ನಡೆದ ಚುನಾವಣೆಯಲ್ಲಿ  ಆಯ್ಕೆಯಾಗಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಸ್ಥಾನಗಳನ್ನು ಹಂಚಿಕೊಂಡವು. ಬಿಬಿಎಂಪಿಯಲ್ಲಿ ಬಿಜೆಪಿ ಆಡಳಿತ ಪಕ್ಷವಾಗಿದೆ. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಬಸವನಗುಡಿ ವಾರ್ಡ್ ಸದಸ್ಯ ಕಟ್ಟೆ ಸತ್ಯನಾರಾಯಣ್ ಅವರ ಹೆಸರನ್ನು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಘೋಷಿಸಿದರು. ಬೇರೆ  ಅಭ್ಯರ್ಥಿಗಳು ಸ್ಪರ್ಧಿಸದ ಕಾರಣ ಅವರು ಮೇಯರ್ […]

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆ : ಅಧ್ಯಕ್ಷರಾಗಿ ಸಂದೇಶ್.ಕೆ.ಎಲ್. ಆಯ್ಕೆ

Friday, July 19th, 2013
University College Students’ Union

ಮಂಗಳೂರು : ನಗರದ ಪ್ರತಿಷ್ಠಿತ ಸರ್ಕಾರಿ ಕಾಲೇಜಾದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿ ಚುನಾವಣೆಯಲ್ಲಿ. ಎಬಿವಿಪಿ ಒಟ್ಟು 31 ಸೀಟ್ ನಲ್ಲಿ 26 ಸೀಟುಗಳನ್ನು ಜಯಿಸಿದ್ದಾರೆ. ಈ ಮೂಲಕ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸಂದೇಶ್.ಕೆ.ಎಲ್. ಮೂರನೇ ಬಿಎಸ್ಸಿ, ಕಾರ್ಯದರ್ಶಿ ಯಾಗಿ ಮಹೇಶ್ ರಾಜ್ ಮೂರನೇ ಬಿಎ, ಲಲಿತಕಲಾ ಕಾರ್ಯದರ್ಶಿ ಯಾಗಿ ಅವಿನಾಶ್ ಮೂರನೇ ಬಿಎ, ಜೊತೆ ಕಾರ್ಯದಶರ್ಿಯಾಗಿ ಶ್ವೇತಾ ಮೂರನೇ ಬಿಬಿಎಂ, ಜೊತೆ ಲಲಿತಕಲಾ ಕಾರ್ಯದರ್ಶಿ ಯಾಗಿ ಪವಿತ್ರಾ ಮೂರನೇ ಬಿಕಾಂ ಆಯ್ಕೆಯಾಗಿದ್ದಾರೆ. ಚುನಾವಣೆಯ ನಂತರ ವಿದ್ಯಾರ್ಥಿ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡ 74.23 ಮತದಾನ

Monday, May 6th, 2013
Assembly election Mangalore

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭೆ ಕ್ಷೇತ್ರಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಒಟ್ಟು ಶೇ.74.23ರಷ್ಟು ಮತದಾನ ನಡೆದಿದೆ. ಬೆಳಗ್ಗೆ 7  ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆದ ಮತದಾನ ಬಹುತೇಕ ಕಡೆಗಳಲ್ಲಿ ಶಾಂತಿಯುತವಾಗಿ ನಡೆಯಿತು.  ಉರಿ ಬಿಸಿಲಿನ ನಡುವೆಯು ಮತದಾರರು ಮತದಾನ ಕೇಂದ್ರಕ್ಕೆ ಆಗಮಿಸಿ ಮತಚಲಾಯಿಸಿದರು. ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣೆಯಲ್ಲಿ ಮತದಾರರಿಗೆ ಭಾವಚಿತ್ರವಿರುವ ಗುರುತುಚೀಟಿಯೇ ಬೇಕು,ಭಾವಚಿತ್ರವಿರುವ ಮತದಾರರ ಪಟಿಯೇ ಬೇಕು ಎಂಬ ಮತಗಟ್ಟೆ ಅಧಿಕಾರಿಗಳ ವಾದಗಳು ಸ್ವಲ್ಪಮಟ್ಟಿನ ಗೊಂದಲವನ್ನು ಸೃಷ್ಟಿಸಿತು. ಜಿಲ್ಲೆಯಲ್ಲಿ ಇದೇ […]

ಬಿಜೆಪಿ ಚುನಾವಣೆಯ ಸಂದರ್ಭದಲ್ಲಿ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ : ಮಮತಾ ಗಟ್ಟಿ

Tuesday, March 5th, 2013
Mahila Congress Chief

ಮಂಗಳೂರು : ಬಿಜೆಪಿ ಯು ಅಧಿಕಾರಕ್ಕೆ ಬಂದ ನಂತರ ಚುನಾವಣೆಯ ಸಂದರ್ಭದಲ್ಲಿ ಕೊಟ್ಟ ಯಾವುದೇ ಆಶ್ವಾಸನೆಗಳನ್ನು ಈಡೇರಿಸಿಲ್ಲ. ಆದ್ದರಿಂದ ಈ ಚುನಾವಣೆಯಲ್ಲಿ ಜನರು ಬಿಜೆಪಿ ಯನ್ನು ಸೋಲಿಸುವುದು ಖಂತಡಿತ ಎಂದು ಜಿಲ್ಲಾ ಮಹಿಳಾ ಕಾಂಗ್ರಸ್ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದರು. ಅವರು ಸೋಮವಾರ ನಗರದಲ್ಲಿ  ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಅನಾಚಾರ, ಅತ್ಯಾಚಾರ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ. ಹಾಲಿನ ದರ, ವಿದ್ಯುತ್ ದರದಲ್ಲಿ ಗಣನೀಯವಾಗಿ ಹೆಚ್ಚಳವನ್ನು ಮಾಡಿ ಮಹಿಳೆಯರನ್ನು […]

ಬಿಜೆಪಿ ಮುಂದಿನ ಚುನಾವಣೆಗೆ ಸಾಕಸ್ಟು ಸಿದ್ದತೆ : ಸಿ. ಟಿ. ರವಿ

Wednesday, January 2nd, 2013
CT Ravi

ಮಂಗಳೂರು :ಬಿಜೆಪಿ ಪಕ್ಷವು ಮುಂದಿನ ಚುನಾವಣೆಗೆ ಸಾಕಸ್ಟು ಸಿದ್ದತೆಗಳನ್ನು ಮಾಡಿಕೊಂಡಿದ್ದು, ಮುಂದಿನ ಚುನಾವಣೆಯಲ್ಲೂ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸ ತಮಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಮಂಗಳೂರಿನ ಪತ್ರಿಕಾ ಭವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರಕಾರದ 12.5 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣವಾಗಿರುವ ಪತ್ರಿಕಾ ಭವನದ ಸಭಾಂಗಣಕ್ಕೆ ಅವಶ್ಯ ಇರುವ ಸೀಲಿಂಗ್‌ ಮತ್ತು ವಿದ್ಯುತ್‌ ಜೋಡಣೆ ಕಾಮಗಾರಿಗೆ ಅವಶ್ಯ ನೆರವು ಒದಗಿಸುವುದಾಗಿ ಭರವಸೆ […]

ಇದು ಕರಾವಳಿ “ಪೊಲಿ’ಟಿಕ್ಸ್”!

Tuesday, November 13th, 2012
Karavali Politics

ಮಂಗಳೂರು :2013ರಲ್ಲಿ ಕರ್ನಾಟಕ ರಾಜ್ಯ ವಿಧಾನ ಸಭಾ ಮತ್ತು 2014ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಪ್ರಮುಖ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಮತ್ತು ಬಿಜೆಪಿ ಹಾಗು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಈಗಾಗಲೆ ಮಂಗಳೂರಿನಲ್ಲಿ ತನ್ನ ಚುನಾವಣಾ ಕಸರತ್ತು ಆರಂಭಿಸಿದೆ. ಅಕ್ಟೋಬರ್ 18ರಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳೂರಿಗೆ ಆಗಮಿಸಿ ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಪಕ್ಷದ ಕಾರ್ಯಕರ್ತರಲ್ಲಿ ಹುರುಪು ತುಂಬುವಂತೆ ಮಾಡಿದ್ದಾರೆ. ರಾಜ್ಯ ಬಿಜೆಪಿ ಸರಕಾರವನ್ನು ಕಿತ್ತೊಗೆಯುವಂತೆ ಕರೆ ನೀಡಿದ್ದಾರೆ. ಸೋನಿಯಾರ ಮಂಗಳೂರು ಭೇಟಿಯ ಸಂಪೂರ್ಣ ಹೊಣೆ […]