Blog Archive

ಇಂದಿರಾ ಕ್ಯಾಂಟೀನ್‌ಗೆ ಮಸಿ ಬಳಿದ ಕಿಡಿಗೇಡಿಗಳು…!

Saturday, February 3rd, 2018
indira-canteen

ಮಂಗಳೂರು: ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳಲ್ಲೊಂದಾದ ಇಂದಿರಾ ಕ್ಯಾಂಟೀನ್‌ಗೆ ಮಸಿ ಬಳಿದು ವಿರೂಪಗೊಳಿಸಿದ ಘಟನೆ ನಗರದ ಸುರತ್ಕಲ್‌ನಲ್ಲಿ ನಡೆದಿದೆ. ಇಂದಿರಾ ಕ್ಯಾಂಟೀನ್‌‌ ರಾಜ್ಯವ್ಯಾಪಿ ಸ್ಥಾಪಿಸುವ ನಿಟ್ಟಿನಲ್ಲಿ ಮಂಗಳೂರಿನಲ್ಲೂ ಕ್ಯಾಂಟೀನ್ ನಿರ್ಮಿಸಲು ಯೋಜಿಸಲಾಗಿದೆ. ಇದರಂತೆ ಸುರತ್ಕಲ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಇಂದಿರಾ ಕ್ಯಾಂಟೀನ್‌ಗೆ ಹಾಗೂ ಅಲ್ಲಿದ್ದ ಇಂದಿರಾ ಗಾಂಧಿ ಭಾವಚಿತ್ರಕ್ಕೆ ಕಿಡಿಗೇಡಿಗಳು ಮಸಿ ಬಳಿದು ವಿರೂಪಗೊಳಿಸಿದ್ದಾರೆ. ಘಟನೆ ತಡರಾತ್ರಿ ನಡೆದಿರಬಹುದೆಂದು ಅಂದಾಜಿಸಲಾಗಿದ್ದು, ಸುರತ್ಕಲ್ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರದ ಸಾಧನೆಯನ್ನು ಸಹಿಸದ ಕೆಲವು ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ […]

ಗುತ್ತಿಗೆದಾರರು ಸಿಗದೆ ಸಾರ್ವಜನಿಕ ಶೌಚಾಲಯಗಳಿಗೆ ಬೀಗ

Thursday, February 1st, 2018
toilet

ಮಂಗಳೂರು: ಇಲ್ಲಿಯ ಬಸ್‌ ನಿಲ್ದಾಣದ ಸಮೀಪ ಇಟ್ಟ ಇ-ಟಾಯ್ಲೆಟ್‌ ಗೆ ಹೋಗಲು ಮಹಿಳೆಯರು, ವಿದ್ಯಾರ್ಥಿಗಳು ಮುಜುಗರ ಪಡುತ್ತಾರೆ. ಕಾರಣ ಎಲ್ಲರಿಗೂ ಕಾಣುವಂತೆ ಒಳಹೋಗಲು ಸಾರ್ವಜನಿಕರು ಅದರಲ್ಲಿಯೂ ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ. ಸುರತ್ಕಲ್‌ ಬಸ್‌ ನಿಲ್ದಾಣದ ಬಳಿ ಇಡಲಾದ ಇ-ಟಾಯ್ಲೆಟ್‌ ಎತ್ತರದಲ್ಲಿದ್ದು, ವಯೋವೃದ್ಧರು ಹತ್ತಲಾರದ ಸ್ಥಿತಿಯಲ್ಲಿದೆ. ಇನ್ನು ಇದಕ್ಕೆ ಎದುರು ಬದಿ ತಡೆಯಿಲ್ಲದ ಕಾರಣ ಎಲ್ಲರ ಮುಂಭಾಗದಲ್ಲಿ ಶೌಚಕ್ಕೆ ಒಳ ಹೋಗಲು ಸಾರ್ವಜನಿಕರು ಮುಜುಗರವಾಗುತ್ತದೆ. ಸುರತ್ಕಲ್‌, ಬೈಕಂಪಾಡಿ ಮತ್ತಿತರೆಡೆ ಲಕ್ಷ ಲಕ್ಷ ಖರ್ಚು ಮಾಡಿ ಸಾರ್ವಜನಿಕ ಶೌಚಾಲಯ ಕಟ್ಟಿದರೂ […]

ನಾರಿ ರೂವಾರಿ ಸ್ಪರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘಕ್ಕೆ ಪ್ರಥಮ ಸ್ಥಾನ

Tuesday, January 30th, 2018
bantara-yane

ಮಂಗಳೂರು: ಪಡುಬಿದ್ರಿ ಬಂಟರ ಸಂಘದ ಮಹಿಳಾ ವಿಭಾಗವು ಪಡುಬಿದ್ರಿ ಬಂಟರ ಭವನದಲ್ಲಿ ಆಯೋಜಿಸಿದ್ದ ನಾರಿ ರೂವಾರಿ ಕಾರ್ಯಕ್ರಮದಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯು 50 ಸಾವಿರ ರೂ. ನಗದು ಶಾಶ್ವತ ಫಲಕದೊಂದಿಗೆ ಕೂಟದಲ್ಲಿ ಪ್ರಥಮ ಸ್ಥಾನ ಗೆದ್ದುಕೊಂಡಿದೆ. ಪಡುಬಿದ್ರೆ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಅಕ್ಷತಾ ಎಸ್. ಶೆಟ್ಟಿ, ಬಂಟರ ಮಾತೃ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ ಪ್ರಶಸ್ತಿಯನ್ನು ಸುರತ್ಕಲ್ ಬಂಟರ ಮಹಿಳಾ ವೇದಿಕೆಯ ಅಧ್ಯಕ್ಷೆ ಚಂದ್ರಕಲಾ […]

ಸುರತ್ಕಲ್ ಸಮೀಪದ ಮಧ್ಯ ದಲ್ಲಿ ಯುವತಿಯ ಚಿನ್ನದ ಸರ ಎಳೆದ ಕಳ್ಳರು

Saturday, January 27th, 2018
thieves

ಮಂಗಳೂರು : ಸುರತ್ಕಲ್ ಮಧ್ಯ   ಎಂಬಲ್ಲಿ ಶನಿವಾರ ಯುವತಿಯೋರ್ವಳು ಟೈಲರಿಂಗ್ ಕೆಲಸಕ್ಕೆ ಮನೆಯಿಂದ ಹೊರಟಾಗ ಕಪ್ಪು ಬಣ್ಣದ ಬೈಕಿನಲ್ಲಿ ಬಂದ ಯುವಕರಿಬ್ಬರು ಆಕೆಯ ಬ್ಯಾಗ್ ಎಳೆದು ಚಿನ್ನದ ಸರ ಎಳೆದ ಪ್ರಕರಣ ನಡೆದಿದೆ.| ಮದ್ಯ ಸಮೀಪದ ವಿಜಯನಗರ ಎಂಬಲ್ಲಿ ಉಷಾ (24) ಎಂಬವರು ಮನೆಯಿಂದ ಬೆಳಿಗ್ಗೆ 9.30ಕ್ಕೆ ಹೊರಟಾಗ ಇಬ್ಬರು ಯುವಕರು ಅನುಮಾನಾಸ್ಪದವಾಗಿ ಆಕೆಯ ಹಿಂದೆ ಬೈಕಿನಲ್ಲಿ ಬರುತ್ತಿದ್ದರು. ಅದನ್ನು ಗಮನಿಸಿದ ಆಕೆ ಗಾಬರಿಗೊಂಡು ಓಡಲಾರಂಬಿಸಿದಾಗ ಬೈಕಿನಲ್ಲಿ ಹಿಂಬಾಲಿಸಿದ ಇಬ್ಬರು ಆಕೆಯ ಬ್ಯಾಗ್ ಎಳೆದು ಚಿನ್ನದ ಸರವನ್ನು […]

ಬಸ್ ಟೈಯರ್ ಸ್ಫೋಟ: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

Monday, January 15th, 2018
surathakal

ಸುರತ್ಕಲ್: ಸುರತ್ಕಲ್ನಿಂದ ಮಂಗಳೂರಿಗೆ ತೆರಳುತ್ತಿದ್ದ 59 ನಂಬರಿನ ಖಾಸಗೀ ಬಸ್ ಟೈಯರ್ ಸ್ಫೋಟಗೊಂಡು ಸೇತುವೆಯಿಂದ ಜಾರಿ ನಿಂತ ಘಟನೆ ಕೂಳೂರು ಮೇಲ್ಸೇತುವೆ ಅಯ್ಯಪ್ಪ ಮಂದಿರದ ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಬಸ್ ನದಿಗೆ ಉರುಳುವುದು ತಪ್ಪಿದೆ. ಬೆಳಗ್ಗಿನ ಟ್ರಿಪ್ ಆಗಿದ್ದರಿಂದ ಬಸ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇದ್ದರು ಎನ್ನಲಾಗಿದೆ.

ಸುರತ್ಕಲ್‌ನಲ್ಲಿ ಯುವಕನ ಮೇಲೆ ದಾಳಿ ಪ್ರಕರಣ: ಇಬ್ಬರು ಪೊಲೀಸ್ ವಶಕ್ಕೆ?

Thursday, January 11th, 2018
Mohhammed

ಮಂಗಳೂರು: ಸುರತ್ಕಲ್‌ನಲ್ಲಿ ಜನವರಿ 3ರಂದು ರಾತ್ರಿ ಬಂದರ್ ನಿವಾಸಿ ಮುಹಮ್ಮದ್ ಮುಬಶ್ಶಿರ್(22) ಎಂಬವರ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ವಿಶೇಷ ತನಿಖಾ ತಂಡವು ಬುಧವಾರ ರಾತ್ರಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಅವರನ್ನು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ. ವಶಕ್ಕೆ ಪಡೆಯಲಾದ ಇಬ್ಬರೂ ಸಂಘಪರಿವಾರದ ಕಾರ್ಯಕರ್ತರೆಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ. ಜನವರಿ 3ರಂದು ಮಧ್ಯಾಹ್ನ ಕಾಟಿಪಳ್ಳದಲ್ಲಿ ದೀಪಕ್ ರಾವ್ ಹತ್ಯೆ ನಡೆದಿತ್ತು. […]

ದುಷ್ಕರ್ಮಿಗಳಿಂದ ಹತ್ಯೆಯಾದ ದೀಪಕ್, ಬಷೀರ್ ಮನೆಗೆ ಸಿಎಂ ಭೇಟಿ

Monday, January 8th, 2018
deepak-rao

ಮಂಗಳೂರು: ದುಷ್ಕರ್ಮಿಗಳಿಂದ ಕೊಲೆಯಾದ ದೀಪಕ್ ರಾವ್ ಮತ್ತು ಅಬ್ದುಲ್ ಬಷೀರ್ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಸಂಜೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ದಕ್ಷಿಣ ಕನ್ನಡ ಪ್ರವಾಸದಲ್ಲಿದ್ದ ಸಿದ್ದರಾಮಯ್ಯ ಮೊದಲಿಗೆ ಸುರತ್ಕಲ್ ಕಾಟಿಪಳ್ಳದಲ್ಲಿರುವ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಮನೆಗೆ ಸಂಜೆ ವೇಳೆ ಭೇಟಿ ನೀಡಿ ಮನೆಯವರಿಗೆ ಸಾಂತ್ವಾನ ಹೇಳಿದರು. ಸಿ‌.ಎಂ ಅವರೊಂದಿಗೆ ಸಚಿವ ರಮನಾಥ್ ರೈ, ಯು.ಟಿ ಖಾದರ್, ಮಂಗಳೂರು ಮೇಯರ್ ಕವಿತಾ ಸನಿಲ್ ಕೂಡ ದೀಪಕ್ ಮನೆಗೆ ಭೇಟಿ ನೀಡಿದರು. ಸಂಕಷ್ಟಕ್ಕೆ ಸ್ಪಂದಿಸಿದ […]

ದೀಪಕ್‌ ಹತ್ಯೆಗೆ 2 ದಿನ ಮೊದಲೇ ಹೊಂಚು

Saturday, January 6th, 2018
supari

ಮಂಗಳೂರು: ಕಾಟಿಪಳ್ಳದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್‌ ರಾವ್‌ ಅವರನ್ನು ಹತ್ಯೆ ಮಾಡಲು ದುಷ್ಕರ್ಮಿಗಳು ಎರಡು ದಿನ ಮೊದಲೇ ಹೊಂಚು ಹಾಕಿದ್ದರಾದರೂ ಕೊನೆಯ ಗಳಿಗೆಯಲ್ಲಿ ವಿಫಲವಾಗಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. ಬುಧವಾರ ಮಧ್ಯಾಹ್ನ 1.15ಕ್ಕೆ ದೀಪಕ್‌ ರಾವ್‌ ಕೊಲೆಯಾಗಿದ್ದಾರೆ. ಆದರೆ ಅದಕ್ಕೆ ಎರಡು ದಿನ ಹಿಂದೆಯೇ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಆರೋಪಿಗಳು ವಾಹನದಲ್ಲಿ ಆಯುಧಗಳನ್ನು ಹಿಡಿದು ಕೊಂಡು ಕಾಟಿಪಳ್ಳ, ಕೈಕಂಬ ಪ್ರದೇಶದಲ್ಲಿ ಓಡಾಡುತ್ತಿದ್ದರು ಎಂಬ ವಿಚಾರ ನೌಶಾದ್‌ ಮತ್ತು ಮಹಮದ್‌ ಇಶಾìನ್‌ ವಿಚಾರಣೆಯ ವೇಳೆ ಪೊಲೀಸರಿಗೆ […]

ಅತ್ತು ಕರೆದರೂ ಶಾಸಕ ಬಾವಾ ಪರಿಹಾರದ ಚೆಕ್ ತಿರಸ್ಕರಿಸಿದ ದೀಪಕ್ ರಾವ್ ತಾಯಿ

Saturday, January 6th, 2018
MLA-Bava

ಮಂಗಳೂರು: ತಮ್ಮ ವೈಯಕ್ತಿಕ ನೆಲೆಯಲ್ಲಿ ದೀಪಕ್ ರಾವ್ ಕುಟಂಬಕ್ಕೆ ಪರಿಹಾರದ ಚೆಕ್ ನೀಡಲು ಹೋದ ಸ್ಥಳೀಯ ಶಾಸಕ ಶಾಸಕ ಮೋಯ್ದೀನ್ ಬಾವಾ ಅವರನ್ನು ಕುಟುಂಬಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಮಾತ್ರವಲ್ಲ ದೀಪಕ್ ರಾವ್ ಕಟುಂಬ ಬಾವಾ ಅವರ ಚೆಕ್ ಸ್ಥೀಕರಿಸಲು ನಿರಾಕರಿಸಿ ವಾಪಸ್ ಕಳುಹಿಸಿದೆ. ಸುರತ್ಕಲ್ ನ ಕಾಟಿಪಳ್ಳದಲ್ಲಿ ಬರ್ಬರವಾಗಿ ಹತ್ಯೆಗೊಳಗಾದ ದೀಪಕ್ ರಾವ್ ಕುಟುಂಬಕ್ಕೆ ವೈಯಕ್ತಿಕ ನೆಲೆಯಲ್ಲಿ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮೊಯ್ದಿನ್ ಬಾವಾ ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ಘೋಷಿಸಿದ್ದರು. ಈ […]

ಟಾರ್ಗೆಟ್‌ ಗುಂಪಿನ ಇಲ್ಯಾಸ್‌ ಜತೆಗಿರುವ ಫೋಟೊ ವೈರಲ್‌… ಸಚಿವ ಖಾದರ್‌ ಸ್ಪಷ್ಟನೆ ಏನು?

Friday, January 5th, 2018
U-T-Kader

ಮಂಗಳೂರು: ಕೆಲವರು ನನ್ನನ್ನು ಜೈಲಿಗೆ ಕಳುಹಿಸಲು ಮುಂದಾಗಿದ್ದರು. ಆದರೆ, ಕ್ಷೇತ್ರದ ಜನತೆ ನನ್ನನ್ನು ವಿಧಾನಸೌಧಕ್ಕೆ ಕಳುಹಿಸಿದರು ಎಂದು ಆಹಾರ ಸಚಿವ ಯು. ಟಿ. ಖಾದರ್ ಹೇಳಿದ್ದಾರೆ. ಟಾರ್ಗೆಟ್ ಗುಂಪಿನ ಸದಸ್ಯ ಇಲ್ಯಾಸ್ ಜತೆ ತಾನು ಊಟ ಮಾಡುತ್ತಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಕುರಿತು ಮತ್ತು ಸುರತ್ಕಲ್‌ನಲ್ಲಿ ನಡೆದ ದೀಪಕ್ ರಾವ್ ಪ್ರಕರಣ ಹಿನ್ನೆಲೆಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನನ್ನ ರಾಜಕೀಯ ತೇಜೋವಧೆ ಮಾಡುವ ಕೆಲಸ ಬಹಳ ಹಿಂದಿನಿಂದಲೇ ನಡೆಯುತ್ತಿದೆ. ನಾನು ಶಾಸಕನಾಗುವ ಮೊದಲು ನನ್ನ […]