Blog Archive

ಆರೋಪ-ಪ್ರತ್ಯಾರೋಪಗಳ ನಂತ್ರ ಕೈಕುಲುಕಿದ ಹಾಲಿ-ಮಾಜಿ ಪ್ರಧಾನಿಗಳು!

Wednesday, December 13th, 2017
Narendra-modi

ನವದೆಹಲಿ: ಗುಜರಾತ್ ಚುನಾವಣಾ ಪ್ರಚಾರದ ವೇಳೆ ಆರೋಪ-ಪ್ರತ್ಯಾರೋಪಗಳನ್ನು ನಡೆಸಿದ ಬೆನ್ನಲ್ಲೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿಯಾಗಿ ಕೈಕುಲುಕಿ ಮಾತನಾಡಿದರು. 2001ರ ಸಂಸತ್ ದಾಳಿಯ ವರ್ಷಾಚರಣೆ ಹಿನ್ನೆಲೆಯಲ್ಲಿ ಮೃತಪಟ್ಟವರಿಗೆ ಗೌರವ ನಮನ ಸಲ್ಲಿಸಲು ಆಗಮಿಸಿದ್ದ ವೇಳೆ ಹಾಲಿ ಹಾಗೂ ಮಾಜಿ ಪ್ರಧಾನಿಗಳ ಸಮಾಗಮ ಆಗಿದೆ. ದಾಳಿಯಲ್ಲಿ ಮೃತಪಟ್ಟವರಿಗೆ ಗೌರವ ನಮನ ಸಲ್ಲಿಸಲು ಸಂಸತ್‌ ಕಟ್ಟಡ ಪ್ರವೇಶಿಸುವ ಮುನ್ನ ಉಭಯ ನಾಯಕರು ಪರಸ್ಪರ ಭೇಟಿಯಾಗಿ ಕೈಕುಲುಕಿ ಕುಶಲೋಪರಿ ವಿಚಾರಿಸಿದರು. ಗುಜರಾತ್ ಚುನಾವಣಾ […]

ನರೇಂದ್ರ ಮೋದಿ ಹಿಂಸಾಚಾರವನ್ನು ವಿರೋಧಿಸಿದರೆ, ಶಿಷ್ಯರು ಹಿಂಸಾಚಾರ ನಡೆಸುತ್ತಿದ್ದಾರೆ

Thursday, December 7th, 2017
Rai

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಧರ್ಮದ ಹಿಂಸಾಚಾರವನ್ನು ವಿರೋಧಿಸುವುದಾಗಿ ಹೇಳಿದರೆ, ಅವರ ಶಿಷ್ಯರು ಧರ್ಮದ ಹೆಸರಿನಲ್ಲಿ ಹಿಂಸೆಗೆ ಪ್ರಚೋದಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ರಾಜ್ಯ ಬಿಜೆಪಿ ಮುಖಂಡರನ್ನು ಟೀಕಿಸಿದ್ದಾರೆ. ಮೋದಿಯವರ ಶಿಷ್ಯರು ಧರ್ಮ, ದೇವರು, ದೇಶಪ್ರೇಮದ ಹೆಸರಿನಲ್ಲಿ ಹಿಂಸಾಚಾರ ನಡೆಸುತ್ತಿದ್ದಾರೆ. ಇಂತಹ ಶಿಷ್ಯರಿಗೆ ಎಂದಿಗೂ ಜನಸಾಮಾನ್ಯರು ಮಣೆ ಹಾಕಬಾರದು ಎಂದರು. ಈ ನಿಟ್ಟಿನಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಕಾನೂನಿಗಿಂತ ಮೇಲೆ ಹೋಗಿದ್ದಾರೆ. ಸಂಸದರಿಗೆ ಕಾನೂನು ಎಂಬುದು ತಿಳಿಯದಿದ್ದರೆ ಸಾಮಾನ್ಯರ ಕಥೆ ಏನು ಎಂದು […]

ಜಂಟಿ ಕ್ರಿಯಾ ಸಮಿತಿ ಮತ್ತು ನಾಗರಿಕ ಸೇವಾ ಟ್ರಸ್ಟ್‌ನ ನಿಯೋಗದಿಂದ ಮನವಿ

Tuesday, November 7th, 2017
ಜಂಟಿ ಕ್ರಿಯಾ ಸಮಿತಿ ಮತ್ತು ನಾಗರಿಕ ಸೇವಾ ಟ್ರಸ್ಟ್‌ನ ನಿಯೋಗದಿಂದ ಮನವಿ

ಮಂಗಳೂರು: ಜಂಟಿ ಕ್ರಿಯಾ ಸಮಿತಿ ಮತ್ತು ನಾಗರಿಕ ಸೇವಾ ಟ್ರಸ್ಟ್‌ನ ನಿಯೋಗ ಸಂಸದ ನಳಿನ್ ಕುಮಾರ್ ಕಟೀಲ್ ಇವರನ್ನು ತಾ.6-7-2017  ರಂದು ಮಂಗಳೂರು ಸರ್ಕ್ಯುಟ್ ಹೌಸ್‌ನಲ್ಲಿ ಭೇಟಿಯಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ತಾ.29-10-2017 ರಂದು ಉಜಿರೆಯಲ್ಲಿ, ಹಲವು ಭೂ ಹಗರಣ ಮತ್ತಿತರ ಕಾನೂನು ಉಲ್ಲಂಘನೆಗಳ ಕ್ರಿಮಿನಲ್ ಕೇಸ್‌ಗಳ ತನಿಖೆ ಎದುರಿಸುತ್ತಿರುವ ಶ್ರೀ ಡಿ.ವೀರೇಂದ್ರ ಹೆಗ್ಗಡೆಯವರ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಮಾತ್ರವಲ್ಲದೆ ಭಾರೀ ಹೊಗಳಿಕೆ ಮಾಡಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಮನವಿ ಸಲ್ಲಿಸಿತು. ಸಂಸದರು ಪ್ರಧಾನಿಯವರಿಗೆ ನಾವು […]

ಸ್ವಸಹಾಯ ಸಂಘಗಳಲ್ಲಿ ತೊಡಗಿಸಿಕೊಂಡರೆ ಆರ್ಥಿಕ ಅಭಿವೃದ್ಧಿ ಸಾಧ್ಯ:ನರೇಂದ್ರ ಮೋದಿ

Monday, October 30th, 2017
rupay card

ಮಂಗಳೂರು: ಮೀನುಗಾರಿಕೆಗೆ ರಜಾ ಇರುವ 45 ದಿನಗಳ ಅವಧಿಯಲ್ಲಿ ಬೆಳೆಯಬಹುದಾದ ಔಷಧಿ ಮಹತ್ವದ ಜಲ ಸಸ್ಯ ಕೃಷಿಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳು ತೊಡಗಿಸಿಕೊಂಡರೆ ಮೀನುಗಾರರೂ ಸೇರಿದಂತೆ ತಳ ಸಮುದಾಯದ ಆರ್ಥಿಕ ಅಭಿವೃದ್ಧಿ ಸಾಧ್ಯವಾಗಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಉಜಿರೆಯ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಇಂದು ನಡೆದ ಬೃಹತ್ ಸಮಾರಂಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 12 ಲಕ್ಷ ಸ್ವಸಹಾಯ ಸಂಘದ ಸದಸ್ಯರಿಗೆ ರುಪೇ ಕಾರ್ಡ್ ವಿತರಣೆ, ತಂತ್ರಾಂಶ ಆಧಾರಿತ […]

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪ್ರಧಾನಿ, ಮಂಜುನಾಥನ ದರ್ಶನ

Monday, October 30th, 2017
modi visit

ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥನ ದರ್ಶನ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಪಡೆದರು. ಬೆಳಗ್ಗೆ 10:40ರ ಸುಮಾರಿಗೆ ಮಂಗಳೂರು ಏರ್‌ಪೋರ್ಟ್‌ಗೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಮೇಯರ್‌ ಕವಿತಾ, ಸಚಿವ ಖಾದರ್‌ ಕೇಂದ್ರ ಸಚಿವ ಅನಂತ್‌ಕುಮಾರ್‌ ಹಾಗೂ ಬಿಜೆಪಿ ನಾಯಕರು ಆತ್ಮೀಯವಾಗಿ ಬರ ಮಾಡಿಕೊಂಡರು. ನಂತರ ಪ್ರಧಾನಿ ಹೆಲಿಕಾಪ್ಟರ್‌ ಮೂಲಕ ನೇರವಾಗಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬಂದರು. ಬೆಳಗ್ಗೆ 10:40ರ ಸುಮಾರಿಗೆ ಮಂಗಳೂರು ಏರ್‌ಪೋರ್ಟ್‌ಗೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಮೇಯರ್‌ ಕವಿತಾ, ಸಚಿವ ಖಾದರ್‌ ಕೇಂದ್ರ ಸಚಿವ […]

ನಕಲಿ ಗೋರಕ್ಷಕರು ಎಂಬ ಹೇಳಿಕೆ ಸುಳ್ಳು :ಜಗದೀಶ್ ಶೇಣವ

Wednesday, October 18th, 2017
vishva hindu parishath

ಮಂಗಳೂರು: ಗೋವುಗಳ ರಕ್ಷಣೆಗೆ ಮುಂದಾಗುವವರೆಲ್ಲ ಪ್ರಧಾನಿ ನರೇಂದ್ರ ಮೋದಿಯವರ ನಕಲಿ ಗೋರಕ್ಷಕರು ಎಂಬ ಹೇಳಿಕೆಯನ್ನು ವಿರೋಧಿಸುವುದಾಗಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹೇಳಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ, ನಮ್ಮ ಅನಿಸಿಕೆ ಪ್ರಕಾರ ದೇಶದಲ್ಲಿ ಯಾರೂ ನಕಲಿ ಗೋರಕ್ಷಕರಿಲ್ಲ. ಇರುವವರೆಲ್ಲ ಗೋವುಗಳನ್ನು ಪ್ರೀತಿಸುವವರು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಕಲಿ ಗೋ ರಕ್ಷಕರು ಎಂಬ ಹೇಳಿಕೆಯನ್ನು ವಿರೋಧಿಸುವುದಾಗಿ ತಿಳಿಸಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಅಕ್ರಮ ಕಸಾಯಿಖಾನೆ ಕುರಿತು ಮಾಹಿತಿ ನೀಡಿದ ಸಾಫ್ಟ್‌‌ವೇರ್ […]

ರೋಶನ್ ಬೇಗ್ ವಿರುದ್ಧ ದ.ಕ. ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಕಾರ್ಯಕರ್ತರ ಪ್ರತಿಭಟನೆ

Tuesday, October 17th, 2017
BJP

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರನ್ನು ಅವಹೇಳನಕಾರಿಯಾಗಿ ನಿಂದಿಸಿರುವ ರಾಜ್ಯ ನಗರಾಭಿವೃದ್ಧಿ ಮತ್ತು ಹಜ್ ಸಚಿವ ರೋಶನ್ ಬೇಗ್ ವಿರುದ್ಧ ದ.ಕ. ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಕಾರ್ಯಕರ್ತರು ನಗರದ ಪಿವಿಎಸ್ ವೃತ್ತದ ಬಳಿ ರಸ್ತೆ ತಡೆದು ಪ್ರತಿಭಟಿಸಿದರು. ರಸ್ತೆಯಲ್ಲಿ ಕುಳಿತು ಪ್ರತಿಭಟಿಸುವ ಮೂಲಕ ಸಂಚಾರವನ್ನು ತಡೆದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು. ಮಹಿಳಾ ಕಾರ್ಯಕರ್ತರು ಕೂಡಾ ಪ್ರತಿಭಟನೆಯಲ್ಲಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಮಾಜಿ ಶಾಸಕ ಎನ್. […]

ರೋಷನ್ ಬೇಗ್ ವಿರುದ್ಧ ಬಿಜೆಪಿ ನಾಯಕರ ಕಾನೂನು ಸಮರ

Saturday, October 14th, 2017
arun kumar

ಮಂಗಳೂರು :  ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷ ರಹೀಂ ಉಚ್ಚಿಲ್ ಸಚಿವ ರೋಷನ್ ಬೇಗ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ನ್ಯಾಯಾಲಯದಲ್ಲಿ ಸಚಿವ ರೋಷನ್ ಬೇಗ್ ವಿರುದ್ಧ ದೂರು ದಾಖಲಿಸುವುದಾಗಿ ಹೇಳಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಾಚ್ಯ ಶಬ್ದ ಬಳಸಿ ಅವಹೇಳನಕಾರಿ ಹೇಳಿಕೆ ನೀಡಿದ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ವಿರುದ್ಧ ಬಿಜೆಪಿ ನಾಯಕರು ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಬೆಂಗಳೂರಿನ ಪುಲಕೇಶಿನಗರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ರೋಷನ್ ಬೇಗ್, ಪ್ರಧಾನಿ ಮೋದಿಯವರನ್ನು ಸೂ…. ಮಗ, […]

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಾಚ್ಯ ಶಬ್ಧ ಬಳಸಿದ ಸಚಿವ ರೋಷನ್‌ ಬೇಗ್‌

Friday, October 13th, 2017
roshan baig

ಬೆಂಗಳೂರು : ಬಹಿರಂಗ ಸಭೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಾಚ್ಯ ಶಬ್ಧ ಬಳಸಿ ಸಚಿವ ರೋಷನ್‌ ಬೇಗ್‌ ಅವರು ಹೊಸದೊಂದು ವಿವಾದ ಹುಟ್ಟು ಹಾಕಿದ್ದಾರೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಬೇಗ್‌ ಅವರನ್ನು ಸಂಪುಟದಿಂದ ವಜಾ ಮಾಡಬೇಕು,.ಇಲ್ಲವಾದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇವೆ ಎಂದು ಬಿಜೆಪಿ ಗುಡುಗಿದೆ. ಪುಲಕೇಶಿ ನಗರದಲ್ಲಿ ಅಕ್ಟೋಬರ್‌ 10 ರಂದು ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ತಮಿಳು ಭಾಷೆಯಲ್ಲಿ ಮಾತನಾಡಿದ ಸಚಿವ ಬೇಗ್‌ ನೋಟು ಅಪನಗದೀಕರಣ ವಿಚಾರದ ಕುರಿತು ವಾಗ್ದಾಳಿ ನಡೆಸುವ […]

ಜಿಎಸ್‌ಟಿ ಬದಲಾವಣೆಯಿಂದಾಗಿ ದೀಪಾವಳಿ ಬೇಗನೆ ಬಂದಿದೆ :ಮೋದಿ

Saturday, October 7th, 2017
modi

ದ್ವಾರಕಾ: ಈ ಬಾರಿಯ ಸರಕು ಮತ್ತು ಸೇವಾ ತೆರಿಗೆ ಸಮಿತಿ ಸಭೆಯಲ್ಲಿ ತೆಗೆದುಕೊಂಡ ಉತ್ತಮ ನಿರ್ಧಾರಗಳಿಂದ ಈ ಬಾರಿಯ ದೀಪಾವಳಿ ಹಬ್ಬ ಅತ್ಯಂತ ಮುಂಚಿತವಾಗಿ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎರಡು ದಿನಗಳ ಗುಜರಾತ್‌ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಈ ವೇಳೆ ಮಾತನಾಡಿರುವ ಅವರು, 27 ಸರಕು, ಸೇವೆಗಳ ತೆರಿಗೆ ದರ ಇಳಿಸಲು ಶುಕ್ರವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿರುವುದನ್ನು ಉಲ್ಲೇಖಿಸಿದ್ದಾರೆ. ಇದೇ ವೇಳೆ ಮಾತನಾಡಿದ […]