Blog Archive

ಹಾಸ್ಯ ಸಾಹಿತಿ, ನಟ ಶೇಖರ ಭಂಡಾರಿ ಕೊರೋನಾ ದಿಂದ ಮೃತ್ಯು

Monday, August 10th, 2020
shekar bhandary

ಮಂಗಳೂರು: ನಾಟಕ ಚಲನಚಿತ್ರ ನಟ, ಹಾಸ್ಯ ಸಾಹಿತಿ, ಪ್ರಾಸ ಕವಿ ಕಾರ್ಕಳ ಶೇಖರ ಭಂಡಾರಿ (72.) ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೆಲವು ದಿನಗಳ ಹಿಂದೆ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಸೋಮವಾರ ನಿಧನರಾದರು. ಅವರ ಗಂಟಲ ದ್ರವ ಪರೀಕ್ಷಾ ವರದಿ ಇಂದು ತಲುಪಿದ್ದು ಅವರಿಗೆ ಕೋವಿಡ್ ಸೋಂಕು ದೃಢವಾಗಿತ್ತು. ಕೈಬೆರಳು ರಹಸ್ಯ, ನಿಮ್ಮ ಯಾವ ಬೆರಳಿನಲ್ಲಿ ಅದೃಷ್ಟವಿದೆ ನೋಡಿ ! ಶೇಖರ ಭಂಡಾರಿ ಕಾರ್ಕಳದ ಬೆಟ್ಟದ ಮನೆ […]

ಕೊರೋನಾ : ಧಾರವಾಡ ಜಿಲ್ಲೆ 191ಸೋಂಕು ಪತ್ತೆ, ಬಲಿ 8

Tuesday, August 4th, 2020
corona positive

ಧಾರವಾಡ : ಸೋಮವಾರ ಜಿಲ್ಲೆಯಲ್ಲಿ 191 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಇದರ ಜೊತೆಗೆ ಕೋವಿಡ್‌ಗೆ ಮತ್ತೆ 8 ಜನ ಸೋಂಕಿತರು ಬಲಿಯಾಗುವ ಮೂಲಕ ಸಾವಿನ ಸಂಖ್ಯೆ 155ಕ್ಕೆ ಏರಿದೆ. 191 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 4644 ಕ್ಕೆ ಏರಿಕೆ ಕಂಡರೆ 88 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೂಲಕ ಗುಣಮುಖರಾದವರ ಸಂಖ್ಯೆ 2152ಕ್ಕೆ ಏರಿದೆ. ಇದರಿಂದ ಈಗ ಜಿಲ್ಲೆಯಲ್ಲಿ 2347 ಪ್ರಕರಣಗಳು ಸಕ್ರಿಯವಾಗಿದ್ದು, 37 ಜನ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ […]

ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೊರೋನಾ ಸೋಂಕು ದೃಢ, ಪುತ್ರಿಗೂ ಸೋಂಕು ದೃಢ

Monday, August 3rd, 2020
cm-yediyurappa

ಬೆಂಗಳೂರು :  ಕರ್ನಾಟಕ  ಸಿಎಂ ಯಡಿಯೂರಪ್ಪ ಅವರಿಗೆ  ಕೊರೋನಾ ಸೋಂಕು ದೃಢಪಟ್ಟಿದೆ. ಖುದ್ದು ಸಿಎಂ ಯಡಿಯೂರಪ್ಪ ಈ ಬಗ್ಗೆ ಟ್ವೀಟ್ ಮಾಡಿದ್ದು, ತಮಗೂ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ. “ನನಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ಆರೋಗ್ಯವಾಗಿದ್ದೇನೆ, ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದೇನೆ, ನನ್ನೊಂದಿಗೆ ಇತ್ತೀಚಿನ ದಿನಗಳಲ್ಲಿ ಸಂಪರ್ಕದಲ್ಲಿದ್ದವರು ಸ್ವಯಂ ಪ್ರೇರಿತರಾಗಿ ಕ್ವಾರಂಟೈನ್ ಗೆ ಒಳಪಟ್ಟು ಆರೋಗ್ಯದ ಮೇಲೆ ನಿಗಾ ವಹಿಸಬೇಕು” ಎಂದು ಸಿಎಂ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ […]

ವಿಶ್ವಹಿಂದು ಪರಿಷದ್ ವತಿಯಿಂದ 40 ನೇ ವರ್ಷದ ವರಮಹಾಲಕ್ಷಿ ಪೂಜೆ

Saturday, August 1st, 2020
varamahalashmi pooje

ಮಂಗಳೂರು  : ವಿಶ್ವಹಿಂದು ಪರಿಷದ್ ಮಾತೃಶಕ್ತಿ ಮಂಗಳೂರು ಇದರ ವತಿಯಿಂದ 40 ನೇ ವರ್ಷದ ವರಮಹಾಲಕ್ಷಿ ಪೂಜೆಯು ಶ್ರೀಮಂಗಳಾದೇವಿ ದೇವಸ್ಥಾನ ದಲ್ಲಿ ನಡೆಯಿತು, ಕೊರೋನಾ ಮಹಾಮಾರಿಯಿಂದಾಗಿ ಜಿಲ್ಲಾಡಳಿತದ ಮಾರ್ಗ ಸೂಚಿಯಂತೆ ಸರಳ ರೀತಿಯಲ್ಲಿ ನಡೆಯಿತು, ವೈದಿಕರಾದ ಶ್ರೀ ಶ್ರೀನಿವಾಸ್ ಐತಾಳ್ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ನಡೆಸಿದರು, ವಿಶ್ವಹಿಂದು ಪರಿಷದ್ ಮತ್ತು ಮಾತೃಶಕ್ತಿ ಪ್ರಮುಖರು ಈ ಪೂಜೆಯಲ್ಲಿ ಉಪಸ್ಥಿತಿಯಿದ್ದರು

ಹಿಂದುತ್ವನಿಷ್ಠ ಸಂಘಟನೆಗಳು ‘ಕೊರೋನಾ ಯೋಧ’ರ ಪಾತ್ರವನ್ನು ವಹಿಸುತ್ತಲಿವೆ : ಚಾರುದತ್ತ ಪಿಂಗಳೆ

Saturday, August 1st, 2020
pingale

ಮಂಗಳೂರು  :  ಕೊರೋನಾದ ಮಹಾಮಾರಿಯಾಗಿರಲಿ ಅಥವಾ ಭವಿಷ್ಯದಲ್ಲಿ ಎದುರಾಗುವ ಮೂರನೇ ವಿಶ್ವಯುದ್ಧವಾಗಿರಲಿ, ಕಾಲ ಮಹಾತ್ಮೆ ಗನುಸಾರ ಮುಂಬರುವ ಕಾಲವು ಹಿಂದುತ್ವನಿಷ್ಠರಿಗೆ ಅನುಕೂಲಕರ ಕಾಲವಾಗಿರಲಿದೆ. ಅದಕ್ಕಾಗಿ ನಾವು ನಿರಂತರವಾಗಿ ಹಿಂದೂ ರಾಷ್ಟ್ರದ ಬೇಡಿಕೆಯನ್ನು ಮಾಡುತ್ತಿರಬೇಕು. ಕೊರೋನಾ ಮಹಾಮಾರಿಯ ಕಾಲದಲ್ಲಿ ತಬ್ಲಿಗೀ ಜಮಾತವು ‘ಕೊರೋನಾ ವಾಹಕ’ದ ಪಾತ್ರ ನಿರ್ವಹಿಸಿದರೆ, ಅನೇಕ ಹಿಂದುತ್ವನಿಷ್ಠ ಸಂಘಟನೆಗಳು ‘ಕೊರೋನಾ ಯೋಧ’ರ ಪಾತ್ರವನ್ನು ನಿರ್ವಹಿಸಿದವು. ಪ್ರಸಕ್ತ ಕಾಲದಲ್ಲಿ ರಾಜಕಾರಣ, ಶಿಕ್ಷಣಕ್ಷೇತ್ರ, ಪ್ರಸಾರ ಮಾಧ್ಯಮಗಳು, ಕಲಾಕ್ಷೇತ್ರ ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲಿ ‘ದೇಶಭಕ್ತ ಹಾಗೂ ಧರ್ಮಪ್ರೇಮಿ’ಗಳ ವಿರುದ್ಧ ‘ದೇಶದ್ರೋಹಿ […]

ನಾಗರಪಂಚಮಿಗೂ ಕೊರೋನಾ ಎಫೆಕ್ಟ್, ದೇವಸ್ಥಾನಕ್ಕೆ ಭಕ್ತರಿಗಿಲ್ಲ ಪ್ರವೇಶ..!

Friday, July 24th, 2020
naragapanchami

ಮಂಗಳೂರು: ಕೊರೋನಾ  ಎಫೆಕ್ಟ್ ಈ ಬಾರಿಯ ಹಬ್ಬಗಳ ಆಚರಣೆಗೂ ತಟ್ಟಿದೆ, ಹಿಂದೂ ಹಬ್ಬಗಳಲ್ಲಿ ಮೊದಲಿಗೆ ಬರುವ ಹಬ್ಬ ನಾಗರ ಪಂಚಮಿ. ಅದಕ್ಕೂ ಕೊರೋನಾಮಹಾಮಾರಿ ತಡೆಯೊಡ್ಡಿದೆ. ಈ ಬಾರಿ ನಾಗರ ಪಂಚಮಿಯನ್ನು ಭಕ್ತರು ದೇವಸ್ಥಾನಗಳಿಗೆ ತೆರಳಿ ಆಚರಿಸುವಂತಿಲ್ಲ. ಮಂಗಳೂರು ಸಮೇತ ರಾಜ್ಯದ ಎಲ್ಲಾ ನಾಗ ದೇವಸ್ಥಾನಗಳಲ್ಲಿ ನಾಗರಪಂಚಮಿ ಜುಲೈ 25 ರ ಶನಿವಾರ  ಆಚರಿಸುವಂತಿಲ್ಲ. ಮಂಗಳೂರಿನ ಇತಿಹಾಸ ಪ್ರಸಿದ್ದ ಕುಡುಪು‌ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಈ ಬಾರಿ ಅರ್ಚರು ಮಾತ್ರ ನಾಗನಿಗೆ ಹಾಲೆರೆಯುವ ಮತ್ತು ಇತರ ಸೇವೆಗಳನ್ನು ಮಾಡಲಿದ್ದಾರೆ. ಮಂಗಳೂರಿನ […]

ಜನರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಬದಲು ಕಾಂಗ್ರೆಸ್ಸಿಗರು ಭಯ ಮೂಡಿಸುತ್ತಿದ್ದಾರೆ : ನಳಿನ್‌ ಕುಮಾರ್

Thursday, July 23rd, 2020
nalinKumar

ಮಂಗಳೂರು :  ಕೊರೊನಾ ಸಂದರ್ಭದಲ್ಲಿ ಜನರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕೆಲಸವನ್ನು ನಾವು ಜನಪ್ರತಿನಿಧಿಗಳು ಮಾಡಬೇಕಿದೆ. ಅದು ಬಿಟ್ಟು ಕಾಂಗ್ರೆಸ್ಸಿಗರು ರಾಜಕಾರಣ ಮಾಡಲು ಹೊರಟಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿ‌ ಜನರನ್ನು ಆತಂಕಕ್ಕೀಡುಮಾಡುವ ಕೆಲಸವನ್ನು ಮೊದಲು ನಿಲ್ಲಿಸಲಿ. ಎಲ್ಲರೂ ಒಟ್ಟಾಗಿ ಕೊರೋನಾ ವಿರುದ್ಧದ ಸಮರ ಗೆಲ್ಲುವುದು ನಮ್ಮೆಲ್ಲರ ಗುರಿಯಾಗಲಿ ಎಂದು ನಳಿನ್‌ ಕುಮಾರ್‌ ಕಟೀಲ್  ಟ್ವೀಟ್‌ ಮೂಲಕ  ಹೇಳಿದ್ದಾರೆ. ಕೊರೋನಾದಿಂದ ಹಾದಿಬೀದಿಯಲ್ಲಿ ಜನ ಸಾಯುತ್ತಿದ್ದಾರೆ ಎಂದು ಹಸಿ ಸುಳ್ಳು ಹಳಿ ಜನರಲ್ಲಿ ಅನಗತ್ಯ ಆತಂಕ ಸೃಷ್ಟಿಸುವ ಕೆಲಸದಲ್ಲಿ ಕಾಂಗ್ರೆಸ್ ನಾಯಕರು ನಿರತರಾಗಿದ್ದಾರೆ. ಕಾಮಾಲೆ […]

ಕೊರೋನಾ ನಿಯಮಗಳನ್ನು ಪಾಲಿಸಲು ರಸ್ತೆಯಲ್ಲಿಯೇ ಮದುವೆ ಮಾಡಿಕೊಂಡ ಜೋಡಿ

Wednesday, July 22nd, 2020
ಕೊರೋನಾ ನಿಯಮಗಳನ್ನು ಪಾಲಿಸಲು ರಸ್ತೆಯಲ್ಲಿಯೇ ಮದುವೆ ಮಾಡಿಕೊಂಡ ಜೋಡಿ

ಚಾಮರಾಜನಗರ : ಕೇರಳದ ವರ ಮತ್ತು ಶಿವಮೊಗ್ಗ ಜಿಲ್ಲೆಯ ವಧು ಈ ಜಿಲ್ಲೆಯ ಮೂಲೆಹೋಲ್ ಚೆಕ್ ಪೋಸ್ಟ್ ಬಳಿ  ರಸ್ತೆಯಲ್ಲಿಯೇ ಪರಸ್ಪರ ಹೂಮಾಲೆ ಬದಲಾಯಿಕೊಂಡು ಕೊರೋನಾ ನಿಯಮಗಳನ್ನು ಉಲ್ಲಂಘಿಸದಂತೆ ಮದುವೆ ಮಾಡಿಕೊಂಡರು. ಕೇರಳದೊಂದಿಗೆ ತನ್ನ ಗಡಿಯನ್ನು ಹಂಚಿಕೊಳ್ಳುವ ಚಾಮರಾಜನಗರ ಜಿಲ್ಲೆಯ ಗುಂಡಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಅಭಯಾರಣ್ಯದಲ್ಲಿರುವ ಕರ್ನಾಟಕ ಗಡಿಯ ಮೂಲೆಹೋಲ್‌ನಲ್ಲಿ ಜುಲೈ 21 ರ ಮಂಗಳವಾರ ಈ ಮದುವೆ ನಡೆಯಿತು. ಮಂಗಳವಾರ ಮಧ್ಯಾಹ್ನ, ಇಬ್ಬರು ಹೂಮಾಲೆಗಳನ್ನು ವಿನಿಮಯ ಮಾಡಿಕೊಂಡರು ಮತ್ತು ವರನು ಮಂಗಳಸೂತ್ರವನ್ನು ಹುಡುಗಿಯ ಕುತ್ತಿಗೆಗೆ ಕಟ್ಟಿದನು. ಕರೋನಾ ನಿಯಮವನ್ನು ಉಲ್ಲಂಘಿಸದಿರಲು […]

ಎರಡು ತಿಂಗಳ ಮಗುವನ್ನು ಬಲಿ ಪಡೆದ ಕೊರೋನಾ, ನಂದಿಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ‌ ಅಂತ್ಯಸಂಸ್ಕಾರ

Saturday, July 18th, 2020
kodimbala

ಮಂಗಳೂರು : ಆ ಪುಟ್ಟ ಮಗುವನ್ನೂ ಬಿಡಲಿಲ್ಲ ಕೊರೋನಾ, ಮಗು ಹುಟ್ಟಿ ಕೇವಲ ಎರಡೇ ತಿಂಗಳು, ಇನ್ನಷ್ಟೇ  ಪ್ರಪಂಚ ನೋಡಬೇಕಿತ್ತು. ಆದರೆ ಆ ಮಗುವಿಗೆ ದೈತ್ಯ  ಕೊರೋನಾ ದ ಜೊತೆ ಹೋರಾಡಲು ಸಾಧ್ಯವಾಗಲೇ ಇಲ್ಲ. ಕೊರೋನಾ ತನ್ನ ಮನೆಯವರನ್ನು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು  ಬಿಡಲಿಲ್ಲ ಕೊನೆಗೆ ಮಗುವಿನ ಅಂತ್ಯಸಂಸ್ಕಾರ ವನ್ನು ಬಜರಂಗದಳದ ಕಾರ್ಯಕರ್ತರು ನಡೆಸಬೇಕಾಯಿತು. ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಗಾಣದಕೊಟ್ಯದ ದಂಪತಿಯ ಎರಡು ತಿಂಗಳ ಈ ಮಗು ವಾಂತಿ, ಕಫದಿಂದ ಬಳಲುತ್ತಿತ್ತು. ಆದ್ದರಿಂದ ಚಿಕಿತ್ಸೆಗೆ ಮಂಗಳೂರಿನ ಖಾಸಗಿ […]

ಪಾಂಡೇಶ್ವರದಲ್ಲಿರುವ ಪ್ರಧಾನ ಅಂಚೆ ಕಚೇರಿಗೂ ಬಂತು ಕೊರೋನಾ, ಸೋಮವಾರ 13 ಅಂಚೆ ಕಚೇರಿಗಳು ಬಂದ್

Saturday, July 18th, 2020
headpost-office

ಮಂಗಳೂರು :  ಪ್ರಧಾನ ಅಂಚೆ ಇಲಾಖೆಯ ಇಬ್ಬರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಮಂಗಳೂರಿನ 13 ಅಂಚೆ ಕಚೇರಿಗಳು ಸೋಮವಾರದಂದು ಸಾರ್ವಜನಿಕ ಸೇವೆ ಲಭ್ಯವಿರುವುದಿಲ್ಲ ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಎನ್ ತಿಳಿಸಿದ್ದಾರೆ. ಮಂಗಳೂರಿನ ಪಾಂಡೇಶ್ವರದಲ್ಲಿರುವ ಪ್ರಧಾನ ಅಂಚೆ ಕಚೇರಿ, ಹಂಪನಕಟ್ಟಾ, ಅಶೋಕನಗರ, ಗಾಂಧಿನಗರ, ಬೋಳೂರು, ಕೂಳೂರು, ಕೊಂಚಾಡಿ, ಕಾವೂರು, ಬಿಜೈ, ಕೊಡಿಯಾಲ್ ಬೈಲ್, ಫಳ್ನೀರ್, ಫಿಶರಿಸ್ ಕಾಲೇಜ್, ಮಂಗಳೂರು ಕಲೆಕ್ಟರೇಟ್, ಎಸ್ ಓ ಅಂಚೆ ಕಚೇರಿಗಳು ಸೋಮವಾರದಂದು ಸಾರ್ವಜನಿಕ […]