ಕುವೈತ್ ನ ಅಗ್ನಿ ದುರಂತದಲ್ಲಿ ಕಾಸರಗೋಡಿನ ಇಬ್ಬರು ಸೇರಿ, ಕೇರಳದ ಹನ್ನೊಂದು ಮಂದಿ ಮೃತ

Thursday, June 13th, 2024
Kerala-Residents

ಕಾಸರಗೋಡು : ಕುವೈತ್ ನ ಬಹುಮಹಡಿ ಕಟ್ಟಡದಲ್ಲಿ ಬುಧವಾರ ಮುಂಜಾನೆ ಉಂಟಾದ ಭೀಕರ ಅಗ್ನಿ ಅನಾಹುತದಲ್ಲಿ ಕಾಸರಗೋಡು ಮೂಲದ ಇಬ್ಬರು ಸೇರಿ ರಾಜ್ಯದ ಒಟ್ಟು ಹನ್ನೊಂದು ಮಂದಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಚೆರ್ಕಳ ಕುಂಡಡ್ಕದ ರಂಜಿತ್ ( 34) ಹಾಗೂ ತೃಕ್ಕರಿಪುರ ಎಳಂಬಚ್ಚಿಯ ಪಿ . ಕುಂಞ ಕೇಳು ( 55) ಮೃತಪಟ್ಟವರು. ರಂಜಿತ್ ಕಳೆದ ಎಂಟು ವರ್ಷಗಳಿಂದ ಕುವೈತ್ ನಲ್ಲಿ ಉದ್ಯೋಗದಲ್ಲಿದ್ದರು. ಒಂದು ವರ್ಷದ ಹಿಂದೆ ಊರಿಗೆ ಬಂದು ಮರಳಿದ್ದರು . ಚೆರ್ಕಳ – ಕುಂಡಡ್ಕದ […]

ಚಪ್ಪಲಿ ಗೋದಾಮಿನಲ್ಲಿ ಆಕಸ್ಮಿಕ ಅಗ್ನಿ ಅವಘಡ ಲಕ್ಷಾಂತರ ರೂಪಾಯಿ ನಷ್ಟ

Monday, May 13th, 2013
Fire mishap footwear shop

ಕುಂದಾಪುರ : ಕುಂದಾಪುರ ಶಾಸ್ತ್ರಿ ಸರ್ಕಲ್ ಸಮೀಪದ ವೈಶಾಲಿ ಕಾಂಪ್ಲೆಕ್ಸ್ ನ ಕೊನೆಯ ಮಹಡಿಯಲ್ಲಿರುವ ಪಾದುಕಾಲಯ ಎಂಬ ಚಪ್ಪಲಿ ಅಂಗಡಿಯೊಂದರ ಚಪ್ಪಲಿ ದಾಸ್ತಾನು ಗೋದಾಮಿನಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ದುರಂತದಿಂದಾಗಿ ಲಕ್ಷಾಂತರ ಮೌಲ್ಯದ ಚಪ್ಪಲಿ ಸುಟ್ಟು ಭಸ್ಮವಾದ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ. ಬೆಳಗ್ಗೆ ಸುಮಾರು 8.30 ರ ವೇಳೆಗೆ ಗೋದಾಮಿನಲ್ಲಿ ಸಣ್ಣಪ್ರಮಾಣ ದಲ್ಲಿ ಕಾಣಿಸಿಕೊಂಡ ಬೆಂಕಿ ಕೆಲವೇ ಗಂಟೆಯಲ್ಲಿ ಗೋದಾಮಿನ ತುಂಬಾ ಆವರಿಸಿತು. ವಿಷಯವನ್ನರಿತು ಸ್ಥಳಕ್ಕಾಗಮಿಸಿದ  ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಪ್ರಯತ್ನಿಸಿದರಾದರು, […]

ಕುಂದಾಪುರ : ಅಂಕದಕಟ್ಟೆ ಸಮೀಪದ ಮನೆಯೊಂದರಲ್ಲಿ ಅಗ್ನಿ ದುರಂತ, ಲಕ್ಷಾಂತರ ರೂಪಾಯಿ ನಷ್ಟ

Tuesday, April 2nd, 2013
Ankadakatte fire mishap

ಕುಂದಾಪುರ : ಕುಂದಾಪುರ ಸಮೀಪದ ಅಂಕದಕಟ್ಟೆ ಎಂಬಲ್ಲಿ  ಸುಮತಿ ಎಂಬುವವರಿಗೆ ಸೇರಿದ ಮನೆಯಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಅಗ್ನಿ ದುರಂತದಿಂದಾಗಿ ಮನೆ ಹಾಗು ಮನೆಯೊಳಗಿನ ವಸ್ತುಗಳು ಸಂಪೂರ್ಣ ಹತ್ತಿ ಉರಿದಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಸುಮತಿ ಎಂಬುವವರು ಈ ಮನೆಯಲ್ಲಿ ಅವರ ತಮ್ಮ ತಮ್ಮಂದಿರಾದ ರವಿಕುಮಾರ್, ಪ್ರತಾಪ್ ರೊಂದಿಗೆ ವಾಸವಾಗಿದ್ದು  ರಾತ್ರಿ ೧.೩೦ ರ ಸುಮಾರಿಗೆ ವಸ್ತುಗಳು ಬೀಳುವ ಸದ್ದು ಕೇಳಿ ಮನೆಮಂದಿ ಎಚ್ಚರಗೊಂಡಿದ್ದಾರೆ. ಆದರೆ ಆ ವೇಳೆಗಾಗಲೇ  ಬೆಂಕಿ ಹತ್ತಿ ಉರಿಯುತ್ತಿದ್ದು ಏನೂ ಮಾಡಲು […]

ಕೊಲ್ಕತ್ತಾ ಮಾರುಕಟ್ಟೆ ಸಂಕೀರ್ಣದಲ್ಲಿ ಅಗ್ನಿ ದುರಂತ ಸಾವಿನ ಸಂಖ್ಯೆ19 ಕ್ಕೆ ಏರಿಕೆ

Wednesday, February 27th, 2013
Kolkata market complex

ಕೊಲ್ಕತ್ತಾ  : ಬುಧವಾರ ಕೇಂದ್ರ ಕೊಲ್ಕತ್ತಾ ದ ಸೀಲ್ಡಾ ಪ್ರದೇಶದಲ್ಲಿ ಗೋದಾಮು ಮತ್ತು ಕಚೇರಿ ಸಂಕೀರ್ಣಗಳಿರುವ ಮಾರುಕಟ್ಟೆಯಲ್ಲಿ ನಸುಕಿನ ಜಾವ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಸುಮಾರು 19 ಜನರು ಮೃತಪಟ್ಟಿದ್ದು, 12ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ  26 ತಂಡಗಳು ಸತತವಾಗಿ ಮೂರು ಗಂಟೆಗಳ ಸತತ ಪರಿಶ್ರಮದಿಂದ ಬೆಂಕಿಯನ್ನು ಶಮನಗೊಳಿಸಲು ಪ್ರಯತ್ನಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ನಸುಕಿನ ಜಾವ 4 ಗಂಟೆ ಸುಮಾರಿಗೆ ಈ ಬೆಂಕಿ ಆಕಸ್ಮಿಕ ಉಂಟಾಗಿದ್ದು, ಮೃತರಲ್ಲಿ […]