ತಮಿಳುನಾಡು ವಿಧಾನಸಭೆ ಚುನಾವಣೆ : ಅಣ್ಣಾಮಲೈ ಹಾಗೂ ನಟಿ ಖುಷ್ಬೂ ಸುಂದರ್ ಅವರಿಗೆ ಟಿಕೆಟ್

Sunday, March 14th, 2021
Annamalai

ಚೆನ್ನೈ:  ತಮಿಳುನಾಡು ವಿಧಾನಸಭೆ ಚುನಾವಣೆಯ 20 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸುತ್ತಿದೆ. ಪಕ್ಷ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹಾಗೂ ನಟಿ ಖುಷ್ಬೂ ಸುಂದರ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಇದೀಗ ಒಟ್ಟೂ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದರು. ಅಣ್ಣಾಮಲೈ ಅವರು ಅರವಕುರಿಚಿ ಕ್ಷೇತ್ರದಿಂದಲೂ ಖುಷ್ಬೂ ಥೌಸಂಡ್ ಲೈಟ್ಸ್ ಕ್ಷೇತ್ರದಿಂದಲೂ ಸ್ಪರ್ಧಿಸಲಿದ್ದಾರೆ. ಇನ್ನೊಂದೆಡೆ ಕಾರೈಕುಡಿ […]

ತುಳು ಹೋರಾಟಕ್ಕೆ ಅಣ್ಣಾಮಲೈ ಬೆಂಬಲ

Tuesday, September 10th, 2019
annamalai

ಉಡುಪಿ : ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇಧಕ್ಕೆ ಸೇರ್ಪಡೆಗೊಳಿಸುವ ತುಳುನಾಡಿಗರ ಪುನರ್ ಹೋರಾಟಕ್ಕೆ ಅನಿರೀಕ್ಷಿತ ವಲಯದಿಂದ ಬೆಂಬಲ ಸಿಕ್ಕಿದೆ. ಸುಮಾರು ಮೂರು ವರ್ಷಗಳ ಕಾಲ ಉಡುಪಿಯಲ್ಲಿ ಎಎಸ್ಪಿ ಹಾಗೂ ಎಸ್ಪಿಯಾಗಿ ಕಾರ್ಯನಿರ್ವಹಿಸಿ ಜಿಲ್ಲೆಯಲ್ಲಿ ಅದರಲ್ಲೂ ಯುವ ಸಮುದಾಯದಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದಿರುವ ‘ಸಿಂಗಂ’ ಅಣ್ಣಾಮಲೈ ಅವರು ತುಳುವರ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಹೋರಾಟಕ್ಕೆ ಬೆಂಬಲವನ್ನು ಘೋಷಿಸಿ ಅಣ್ಣಾಮಲೈ ಅವರು ನಿನ್ನೆ ರಾತ್ರಿ 11:58ಕ್ಕೆ ಟ್ವಿಟ್ ಮಾಡಿದ್ದು, ಅದೀಗ […]

ರಾಜೀನಾಮೆಯ ಬಳಿಕ ಶಬರಿಮಲೆ ಯಾತ್ರೆ ಮಾಡಿದ ಅಣ್ಣಾಮಲೈ ಮುಂದಿನ ನಿಲುವೇನು ?

Monday, June 17th, 2019
Annamalai

ಕಾಸರಗೋಡು  : ರಾಜೀನಾಮೆ ನೀಡಿದ ಬಳಿಕ  ಪೊಲೀಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರು ಕಪ್ಪು ವಸ್ತ್ರ ಧರಿಸಿ ಇರುಮುಡಿ ಕಟ್ಟಿ  ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ರಾಜೀನಾಮೆಯ ನಂತರ ಅವರ ಅಭಿಮಾನಿಗಳಿಗೆ ಬರೆದ ಪತ್ರದಲ್ಲಿ, “ಕಳೆದ ವರ್ಷ ಕೈಲಾಸ ಸರೋವರಕ್ಕೆ ನಾನು ನೀಡಿದ ಭೇಟಿ ನನ್ನ ಜೀವನದ ಆದ್ಯತೆಗಳನ್ನು ಉತ್ತಮಗೊಳಿಸಲು ನೆರವಾಗುವಂತೆ ಕಣ್ಣು ತೆರೆಸಿತು. ಮಧುಕರ್ ಶೆಟ್ಟಿ ಅವರ ಸಾವು ನನ್ನದೇ ಬದುಕನ್ನು ಮರು ಪರೀಕ್ಷೆಗೆ ಒಳಪಡಿಸುವಂತೆ ಮಾಡಿತು” ಎಂದು ಮಾರ್ಮಿಕವಾಗಿ ನುಡಿದಿದ್ದರು. ಇಷ್ಟು ದಿನ ಇಲಾಖೆಯ ಕೆಲಸದೊತ್ತಡದಲ್ಲಿದ್ದ ಅಣ್ಣಾಮಲೈ ಇದೀಗ ಖಾಕಿ […]

ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ನಿಧನ: ಕಂಬನಿ‌ ಮಿಡಿದ ಡಿಸಿಪಿ ಅಣ್ಣಾಮಲೈ

Saturday, December 29th, 2018
annamalai

ಬೆಂಗಳೂರು: ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ನಿಧನಕ್ಕೆ ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ ಅಣ್ಣಾಮಲೈ ಕಂಬನಿ ಮಿಡಿದಿದ್ದಾರೆ. ಮಧುಕರ್ ಶೆಟ್ಟಿ ನಿಧನ ನನಗೆ ಅಘಾತ ತಂದಿದೆ. ಅವ್ರ ಕುಟುಂಬಕ್ಕೆ ಶಾಂತಿ ಸಿಗಲಿ. ಒಬ್ಬ ದಕ್ಷ ಅಧಿಕಾರಿ ಈ ರೀತಿ ಸಿಗಲು ಸಾಧ್ಯವಿಲ್ಲ. ಅವರು ಚಿಕ್ಕಮಗಳೂರಿನಲ್ಲಿ ನೀಡಿದ ಸೇವೆ ಅಭೂತಪೂರ್ವ. ನನಗೆ ಈಗಲೂ ನೆನಪಿದೆ. ಚಿಕ್ಕಮಗಳೂರಿನಲ್ಲಿ ಭೂ ಒತ್ತುವರಿಯಾದಾಗ ಮಧುಕರ್ ಶೆಟ್ಟಿ ಒಂದು ಒಳ್ಳೆ ನಿರ್ಧಾರ ತೆಗೆದುಕೊಂಡಿದ್ದರು. ಅಲ್ಲದೆ ತಮ್ಮ ಜೊತೆ ಕೆಲಸ ಮಾಡುವ ಅಧಿಕಾರಿಗಳನ್ನು ಕೆಲವೊಮ್ಮೆ ತಮ್ಮ […]

ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ ಆಗಿ ಅಣ್ಣಾಮಲೈ ಅಧಿಕಾರ ಸ್ವೀಕಾರ

Monday, October 22nd, 2018
annamalai

ಬೆಂಗಳೂರು: ದಕ್ಷಿಣ ವಿಭಾಗ ಡಿಸಿಪಿ ಆಗಿ ಅಣ್ಣಾಮಲೈ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಖಡಕ್ ಆಫೀಸರ್ ಅಂತಾನೇ ಫೇಮಸ್ ಆಗಿರುವ ಅಣ್ಣಾಮಲೈ ಅವರನ್ನು ರಾಜ್ಯ ಸರ್ಕಾರ ಸಿಟಿಗೆ ಚಾರ್ಜ್ ತೆಗೆದುಕೊಳ್ಳುವಂತೆ ಸೂಚಿಸಿದೆ. ಇನ್ನು ನಿರ್ಗಮಿತ ಡಿಸಿಪಿ ಡಾ. ಶರಣಪ್ಪ ಎಸ್.ಡಿ. ಅವರು ಅಣ್ಣಾಮಲೈ ಅವರನ್ನು ಸ್ವಾಗತಿಸಿದ್ದಾರೆ. ಇನ್ನು ಅಣ್ಣಾಮಲೈ ಅಧಿಕಾರ ಸ್ವೀಕಾರ ಮಾಡಿದ ದಿನವೇ ಎಲ್ಲಾ ಠಾಣೆಗಳಿಗೆ ತೆರಳಿ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದ್ದಾರೆ.

ಅಣ್ಣಾಮಲೈ ಸೇರಿ ಐವರು ಐಪಿಎಸ್​ ಅಧಿಕಾರಿಗಳ ವರ್ಗಾವಣೆ

Tuesday, October 16th, 2018
annamalia

ಬೆಂಗಳೂರು: ಮತ್ತೆ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಚಿಕ್ಕಮಗಳೂರಿನಿಂದ ಎಸ್ಪಿ ಅಣ್ಣಾಮಲೈ ಸೇರಿದಂತೆ ವರ್ಗಾವಣೆಗೊಂಡಿರುವ ಅಧಿಕಾರಿಗಳ ಮಾಹಿತಿ ಇಂತಿದೆ… ಹರಿಶೇಖರನ್-ಐಜಿಪಿ, ಎಸಿಪಿ ಟ್ರಾಫಿಕ್ ಬೆಂಗಳೂರು ಅಜಯ್ ಹಿಲೋರಿ-ಕೆಎಸ್ಆರ್ ಪಿ ಕಮಾಂಡೆಂಟ್ 1 ಬ್ಯಾಟಲಿಯನ್, ಕೆ.ಅಣ್ಣಾಮಲೈ-ಡಿಸಿಪಿ,ದಕ್ಷಿಣ ವಿಭಾಗ ಬೆಂಗಳೂರು. ರಾಹುಲ್ ಕುಮಾರ್-ಡಿಸಿಪಿ ಪೂರ್ವ ವಿಭಾಗ ಬೆಂಗಳೂರು. ಹರೀಶ್ ಪಾಂಡೆ- ಅವರನ್ನು ಚಿಕ್ಕಮಗಳೂರು ಎಸ್ಪಿ ಆಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಮಧ್ಯರಾತ್ರಿ ಕಾರಿನ ಟಯರ್ ಪಂಕ್ಚರ್: ಸಂಕಷ್ಟದಲ್ಲಿದ್ದ ಪ್ರವಾಸಿಗರಿಗೆ ನೆರವಾದ ಅಣ್ಣಾಮಲೈ

Monday, December 25th, 2017
annamalai

ಚಿಕ್ಕಮಗಳೂರು: ರಾತ್ರಿ ರಸ್ತೆ ಮಧ್ಯೆ ಕಾರಿನ ಟಯರ್ ಪಂಕ್ಚರ್ ಆಗಿ ಸಂಕಷ್ಟಕ್ಕೆ ಸಿಲುಕಿದ್ದ ಪ್ರವಾಸಿಗರಿಗೆ ನೆರವಾಗುವ ಮೂಲಕ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಘಟನೆ ನಿನ್ನೆ ರಾತ್ರಿ ನಡೆದಿದ್ದು, ಬೆಂಗಳೂರಿನ ಪ್ರವಾಸಿಗರಿದ್ದ ಕಾರೊಂದು ಚಿಕ್ಕಮಗಳೂರು-ಶೃಂಗೇರಿ ಮಾರ್ಗವಾಗಿ ಸಂಚರಿಸುತ್ತಿದ್ದ ವೇಳೆ ಮತ್ತಾವರ ಎಂಬ ಗ್ರಾಮವನ್ನು ತಲುಪಿದಾಗ ಕಾರಿನ ಟಯರ್ ಪಂಕ್ಚರ್ ಆಗಿತ್ತು. ಜನಸಂಖ್ಯೆ ವಿರಳವಾಗಿದ್ದ, ಸುತ್ತಮುತ್ತ ಮರಗಳೇ ಅಧಿಕವಾಗಿದ್ದ ಈ ಪ್ರದೇಶದಲ್ಲಿ ಪ್ರವಾಸಿಗರು ತುಂಬಾ ಆತಂಕಕ್ಕೆ ಒಳಗಾಗಿದ್ದರು. ಅಷ್ಟರಲ್ಲಿ ಆ ದಾರಿಯಾಗಿ ಕೊಪ್ಪದಿಂದ ಚಿಕ್ಕಮಗಳೂರಿಗೆ […]

ಕೊಲ್ಲೂರು ಮೂಕಾಂಬಿಕಾ ದೇವಿಯ ಲಕ್ಷಾಂತರ ರೂ. ಬೆಲೆಬಾಳುವ ಚಿನ್ನಾಭರಣ ಕ್ಷೇತ್ರಕ್ಕೆ ಹಸ್ತಾಂತರ

Wednesday, August 3rd, 2016
Kollur-Temple

ಕೊಲ್ಲೂರು: ಕೊಲ್ಲೂರು ಮೂಕಾಂಬಿಕಾ ದೇವಿಯ ಲಕ್ಷಾಂತರ ರೂ. ಬೆಲೆಬಾಳುವ ಚಿನ್ನಾಭರಣಗಳನ್ನು ಕದ್ದು ವಿವಿಧ ಬ್ಯಾಂಕ್‌ ಹಾಗೂ ಲೇವಾದೇವಿ ಸಂಸ್ಥೆಗಳಲ್ಲಿ ಅಡವಿಟ್ಟಿದ್ದ ದೇಗುಲದ ನೌಕರ ಶಿವರಾಮ ಮಡಿವಾಳ ಅವರಿಂದ ವಶಪಡಿಸಿಕೊಳ್ಳಲಾದ 2 ಕಿ.ಜಿ. 289 ಗ್ರಾಂ. ಚಿನ್ನಾಭರಣಗಳನ್ನು ಪೊಲೀಸ್‌ ಅದಿಕಾರಿಗಳು ಸೋಮವಾರ ಕಾರ್ಯನಿರ್ವಹಣಾದಿಕಾರಿಯವರ ಸಮ್ಮುಖದಲ್ಲಿ ದೇಗುಲಕ್ಕೆ ಹಸ್ತಾಂತರಿಸಿದರು. ಸುಮಾರು ರೂ. 75 ಲಕ್ಷಕ್ಕೂ ಮಿಕ್ಕಿ ಕಳವಾದ ಚಿನ್ನಾಭರಣಗಳ ಬಗ್ಗೆ ಪೊಲೀಸ್‌ ವರಿಷ್ಠಾದಿಕಾರಿ ಅಣ್ಣಾಮಲೈ ಮಾರ್ಗದರ್ಶನದಲ್ಲಿ ಅಂದಿನ ಡಿವೈ.ಎಸ್‌.ಪಿ. ಮಂಜುನಾಥ ಶೆಟ್ಟಿ, ಸರ್ಕಲ್‌ ಇನ್ಸ್‌ಪೆಕ್ಟರ್‌ ಸುದರ್ಶನ್‌, ಎಸ್‌.ಐ. ಶೇಖರ ಅವರ […]

ಕಾರ್ಕಳದಲ್ಲಿ 1 ಕೋಟಿಗೂ ಹೆಚ್ಚು ಮೌಲ್ಯದ ಬೃಹತ್ ಪ್ರಮಾಣದ ಅಕ್ರಮ ಸ್ಫೋಟಕ ಪತ್ತೆ

Thursday, March 27th, 2014
Explosive

ಕಾರ್ಕಳ : ಒಟ್ಟು ರೂ. 1 ಕೋಟಿಗೂ ಹೆಚ್ಚು ಮೌಲ್ಯದ ಬೃಹತ್ ಪ್ರಮಾಣದ ಅಕ್ರಮ ಸ್ಫೋಟಕ ಕಾರ್ಕಳ ತಾಲ್ಲೂಕಿನ ಮೂರು ಕಡೆ ಮಂಗಳವಾರ ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಖಚಿತ ಮಾಹಿತಿ ಮೇರೆಗೆ ಎಎಸ್‍ಪಿ ಅಣ್ಣಾಮಲೈ ನೇತೃತ್ವದ ಪೊಲೀಸ್ ಸಿಬ್ಬಂದಿ ಏಕಕಾಲಕ್ಕೆ ತಾಲ್ಲೂಕಿನ ನಕ್ರೆ ಗ್ರಾಮದ ವರ್ಣಬೆಟ್ಟು, ಪಟ್ಟಣದ ಸಮೀಪವಿರುವ ಕೋಟಿ ಚೆನ್ನಯ ಥೀಂ ಪಾರ್ಕ್ ಸಮೀಪದ ಗಂಧದ ಬಟ್ಟಿ ಎಂಬಲ್ಲಿನ ತೋಟದಲ್ಲಿ ಹಾಗೂ ತೆಳ್ಳಾರು ಸಮೀಪದ ದುರ್ಗಾ ಗ್ರಾಮದಲ್ಲಿ ನಡೆಸಿದ ದಾಳಿಯಲ್ಲಿ ಇವು ದೊರೆತಿವೆ. […]