Blog Archive

ಟಿವಿ ನೋಡಲು ಬಂದ ಎಂಟು ವರ್ಷದ ಬಾಲಕಿಯ ಅತ್ಯಾಚಾರಕ್ಕೆ ಯತ್ನ, ಆರೋಪಿಯ ಬಂಧನ

Thursday, August 26th, 2021
Ramakrishna

ಮಂಗಳೂರು : ಮನೆಗೆ ಟಿವಿ ನೋಡಲು ಬಂದ ಎಂಟು ವರ್ಷದ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಲ್ಲಿ ಮನೆಯ ಮಾಲೀಕನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಕಟೀಲು ಪೆರ್ಮುದೆಯ ರಾಮಕೃಷ್ಣ ಬಂಧಿತ ಆರೋಪಿ. ಶಿವಮೊಗ್ಗ ಮೂಲದ ಮಹಿಳೆಯು ಕಟೀಲು ಪೆರ್ಮುದೆಯ ರಾಮಕೃಷ್ಣ ಎಂಬವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು. ಆ.21ಕ್ಕೆ ಬಾಲಕಿಯ ತಾಯಿ ಕೆಲಸದ ನಿಮಿತ್ತ ಶಿವಮೊಗ್ಗಕ್ಕೆ ಪ್ರಯಾಣಿಸಿದ್ದಾರೆ. ಆಗ ತನ್ನ ಮೂವರು ಮಕ್ಕಳನ್ನು ಪೆರ್ಮುದೆಯ ಬಾಡಿಗೆ ಮನೆಯಲ್ಲೇ ಬಿಟ್ಟು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಮಹಿಳೆಯ ಮೂವರು ಮಕ್ಕಳು ಅದೇ ದಿನ […]

ಚಿಕ್ಕಪ್ಪನಿಂದಲೇ ಹೈಸ್ಕೂಲ್ ವಿದ್ಯಾರ್ಥಿನಿಯ ಅತ್ಯಾಚಾರ

Tuesday, August 10th, 2021
Rape

ಮೂಡುಬಿದಿರೆ: ತೆಂಕಮಿಜಾರು ಗ್ರಾಪಂ ಪರಿಸರದಲ್ಲಿ  ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ಆಕೆಯ ಚಿಕ್ಕಪ್ಪನೇ ಅತ್ಯಾಚಾರವೆಸಗಿದ ಘಟನೆ ಸೋಮವಾರ ನಡೆದಿದೆ. ಹೈಸ್ಕೂಲ್ ವಿದ್ಯಾರ್ಥಿನಿಯಾಗಿರುವ ಆಕೆ ಸ್ನೇಹಿತೆ ಜತೆಗೆ ಮನೆಗೆ ತೆರಳುತ್ತಿದ್ದ ಸಂದರ್ಭ ಗುಡ್ಡ ಪ್ರದೇಶದಲ್ಲಿ ಆಕೆಯ ಚಿಕ್ಕಪ್ಪ ಮೂವತ್ತರ ಹರೆಯದ ಕುಮಾರ್ ಅಡ್ಡಗಟ್ಟಿ ವಿದ್ಯಾರ್ಥಿನಿಯರನ್ನು ಹೆದರಿಸಿದ. ಆಗ ಜತೆಗಿದ್ದ ವಿದ್ಯಾರ್ಥಿನಿ ಹೆದರಿ ಓಡಿ ಹೋದಳು. ಈ ಸಂದರ್ಭ ಅತ್ಯಾಚಾರ ನಡೆದಿದೆ. ಮೂಡುಬಿದಿರೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಿದ್ದಾರೆ.

ಮೇಕೆ ಮೇಲೆ ಐವರು ಕಾಮುಕರಿಂದ ಸಾಮೂಹಿಕ ಅತ್ಯಾಚಾರ, ಬಳಿಕ ಹತ್ಯೆ

Friday, July 30th, 2021
Goat

ಇಸ್ಲಾಮ್‍ಬಾದ್:  ಮೇಕೆಯನ್ನು ಹತ್ತಿರದ ಕಾಂಪೌಂಡ್ ಬಳಿ ಕರೆದುಕೊಂಡು ಹೋಗಿ ಐವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಅವರು  ಅತ್ಯಾಚಾರ ಎಸಗಿ, ಕಿರುಕುಳ ನೀಡಿ ಕೊನೆಗೆ ಹತ್ಯೆ ಮಾಡಿದ್ದಾರೆ. ಈ ಘಟನೆ ಪಾಕಿಸ್ತಾನದ ಒಕ್ರಾದಲ್ಲಿ ನಡೆದಿದ್ದು, ಹೀನ ಕೃತ್ಯದ ಬಳಿಕ ಕಾಮುಕರು ಪರಾರಿಯಾದದ್ದನ್ನು ಸ್ಥಳೀಯರು ನೋಡಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಾಕಿಸ್ತಾನದ ನಟಿ ಮಥಿರಾ ಈ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಪ್ರಾಣಿಗಳು ಸಹ ಬುರ್ಕಾ ಧರಿಸುವ […]

ಕೆ.ಆರ್. ಆಸ್ಪತ್ರೆಯಲ್ಲಿ ಬುದ್ದಿಮಾಂದ್ಯ ಮಹಿಳೆಯ ಮೇಲೆ ಅಪರಿಚಿತನಿಂದ ಅತ್ಯಾಚಾರ

Saturday, July 10th, 2021
Rape Rape

ಮೈಸೂರು : ಮೈಸೂರು ನಗರದ ಕೆ.ಆರ್. ಆಸ್ಪತ್ರೆಯ ವಾರ್ಡ್ ನಲ್ಲಿ ಬುದ್ದಿಮಾಂದ್ಯ ಮಹಿಳೆ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ವಾರ್ಡ್ ಕಿಟಕಿ ಗ್ರಿಲ್ ಕಿತ್ತು ಹೊಳ ನುಗ್ಗಿ 30 ವರ್ಷದ ಬುದ್ದಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ಮಾಡಿ  ಅಮಾನುಷ ಕೃತ್ಯ ನಡೆಸಿದ್ದಾನೆ. ಪ್ರಕರಣದ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗಿದ್ದ ಆಸ್ಪತ್ರೆ ವೈದ್ಯಾಧಿಕಾರಿಗಳು ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿರುವ ಹೇಯ ಘಟನೆಯೂ ಇದೀಗ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಆಸ್ಪತ್ರೆಯಲ್ಲೇ ಚಿಕಿತ್ಸೆಗೆ ದಾಖಲಾಗಿರುವ ವೃದ್ದೆಯೊಬ್ಬರು  ವಾರದ ಹಿಂದೆಯೇ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. […]

ಆರು ವರ್ಷದ ಬಾಲಕಿಯನ್ನು ಮೂರು ವರ್ಷಗಳ ಕಾಲ ಅತ್ಯಾಚಾರ ಮಾಡಿ ಕೊಲೆಗೈದ ಕಮ್ಯುನಿಸ್ಟ್ ಪಾರ್ಟಿ ಕಾರ್ಯಕರ್ತ

Tuesday, July 6th, 2021
Arjun

ಕಾಸರಗೋಡು  :  ಆರು ವರ್ಷದ ಬಾಲಕಿಯನ್ನು ಮೂರು ವರ್ಷಗಳ ಕಾಲ ಅತ್ಯಾಚಾರ ಮಾಡಿ, ಕೊಲೆ ಮಾಡಿರುವ ಆಘಾತಕಾರಿ ಘಟನೆ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸಂಬಂಧ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ನಾಯಕ  ಅರ್ಜುನ್ (22) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ಕಳೆದ ಮೂರು ವರ್ಷಗಳಿಂದ ಬಾಲಕಿಗೆ ಸ್ವೀಟ್ ಕೊಡಿಸುವ ಅಮಿಷವೊಡ್ದಿ ಆಕೆಯನ್ನು ಭೇಟಿ ಮಾಡಿ ಅತ್ಯಾಚಾರವೆಸಗುತ್ತಿದ್ದ . ಅದೇ ರೀತಿ ಜೂನ್ 30ರಂದು ಆಕೆಯ ಮನೆಯ ಕೋಣೆಯೊಳಗೆ ಹೋದ ಆದ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾನೆ. ಆ ವೇಳೆ ಬಾಲಕಿ ಮೂರ್ಛೆ ಹೋಗಿದ್ದಾಳೆ. […]

ಬೆಂಗಳೂರಲ್ಲಿ ನಡೆದ ಸಾಮೂಹಿಕ ರೇಪ್, ಪ್ರಮುಖ ಆರೋಪಿಯನ್ನು ಗುಂಡುಹಾರಿಸಿ ಬಂದಿಸಿದ ಪೊಲೀಸರು

Wednesday, June 2nd, 2021
Saboob

ಬೆಂಗಳೂರು : ನಗರದಲ್ಲಿ ನಡೆದ ಯುವತಿಯ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಶೂಬೂಜ್ ಪೇಪರ್ ಆಯುವವರ ಶೆಡ್ ನಲ್ಲಿ ಇರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಪೊಲೀಸರು ಆತನನ್ನು ಅಲ್ಲಿಂದ ವಶಕ್ಕೆ ಪಡೆದಿದ್ದಾರೆ.  ಆದರೆ ಆತ ಪೊಲೀಸರಿಂದ ತಪ್ಪಿಸಲೆತ್ನಿಸಿದಾಗ ಆತನ ಮೇಲೆ ಗುಂಡು ಹಾರಿಸಿದ್ದಾರೆ. ಶೂಬೂಜ್ ಯುವತಿಯ ಗುಪ್ತಾಂಗಕ್ಕೆ ಕಾಲಲ್ಲಿ ಒದ್ದು, ವಿಕೃತಿ ಮೆರೆದಿದ್ದ.   ಆತನನ್ನು ಕರೆ ತರುವಾಗ ಮೂತ್ರ ಬರುತ್ತಿದೆ ಎಂದು ಹೇಳಿದ್ದ ಒಂದು ವೇಳೆ ನಿಲ್ಲಿಸದೇ ಇದ್ದರೆ ಜೀಪ್ ಒಳಗಡೆಯೇ ಮೂತ್ರ ಮಾಡುತ್ತೇನೆ ಎಂದು ಪೊಲೀಸರಿಗೆ ಧಮ್ಕಿ ಹಾಕಿದ್ದ. ಆರ್ […]

ಯುವತಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿ ಮದ್ಯದ ಬಾಟ್ಲಿಇಟ್ಟ ಬಾಂಗ್ಲಾದೇಶಿ ಕಾಮುಕರು

Friday, May 28th, 2021
Gang Rape

ಬೆಂಗಳೂರು : ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ಆಧಾರ್ ಕಾರ್ಡ್ ಪಡೆದು  ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎನ್ ಆರ್ ಐ ಲೇಔಟ್  ನಲ್ಲಿ ಇದ್ದ ಗುಂಪೊಂದು ಯುವತಿಯೊಬ್ಬಳನ್ನು ಸಾಮೂಹಿಕವಾಗಿ ಅತ್ಯಾಚಾರವೆಸಗಿ ಆಕೆಯ ಖಾಸಗಿ ಅಂಗಕ್ಕೆ ಮದ್ಯದ ಬಾಟಲಿ ಇಟ್ಟು ಪೈಶಾಚಿಕ ಕೃತ್ಯವೆಸಗಿದ ಆಘಾತಕಾರಿ ಘಟನೆ ಎನ್ ಆರ್ ಐ ಲೇಔಟ್‌ನಲ್ಲಿ ನಡೆದಿದೆ. ಎನ್ ಆರ್ ಐ ಲೇಔಟ್‌ನಲ್ಲಿರುವ ಮನೆಗೆ ಆಗಾಗ ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿದ್ದರು. 6 ದಿನಗಳ ಹಿಂದಷ್ಟೇ ಆತ್ಯಾಚಾರಕ್ಕೆ ಒಳಗಾದ […]

ಇವಳ ಗಂಡನ ನೀವು ಎಲ್ಲಿಯಾದರೂ ಕಂಡಿರಾ? 

Friday, May 14th, 2021
Ambika

ಕೋಲಾರ: ಕೊರೋನಾ ಅಲೆಯಲ್ಲಿ ಬೀದಿ ಬೀದಿಗಳು ನಿರ್ಜನ. ಕಾಲೇಜು, ಕಚೇರಿಗಳೂ ಬಂದಾಗಿ ನಿಂತ ದೃಶ್ಯ. ಒಬ್ಬರನೊಬ್ಬರ ಮುಖ ನೋಡಲೂ ಅಳುಕುವ ಪರಿಸ್ಥಿತಿ. ಸಾರಿಗೆ ಸಂಚಾರವೂ ಇಲ್ಲ. ಮಾತನಾಡಲು ಇನ್ನೊಬ್ಬ ಎದುರು ಕಾಣ ಸಿಗುತ್ತಿಲ್ಲ. ಕೊರೋನಾ ಸೋಂಕಿನ ಭೀತಿಯಲ್ಲಿ ಮನುಜ ತನ್ನ ಸರಿಸಾಟಿ ಮನುಜನನ್ನೇ ದೂರ ಇಟ್ಟು ಬಿಟ್ಟಿರುವ ದುರಂತ ಪರಿಸ್ಥಿತಿ! ಆದರೆ ಇಂಥ ಅತ್ಯಂತ ಕ್ಲಿಷ್ಟ ದಿನಗಳಲ್ಲಿಯೂ ಇಲ್ಲೊಬ್ಬಾಕೆ ತನ್ನ ಗಂಡನನ್ನು ಹುಡುಕಿಕೊಂಡು ಊರೂರು ಅಲೆಯುತ್ತಿರುವ ಕತೆ ಅತ್ಯಂತ ವಿಧ್ರಾವಕ ಎನಿಸುತ್ತದೆ. ಸ್ವಯಂಕೃತ ಅಪರಾಧಕ್ಕೆ ಶಿಕ್ಷೆಯನ್ನೂ ತಾನೇ […]

ಅತ್ಯಾಚಾರ : ಮಗಳ ಕೈಗೆ ಗಂಡು ಮಗು ನೀಡಿದ ಅಪ್ಪನಿಗೆ 12 ವರ್ಷ ಜೈಲು

Wednesday, March 17th, 2021
Sirsi Baby

ಶಿರಸಿ : ಹರೆಯದ ಮಗಳ ಮೇಲೆ ಸತತ ಅತ್ಯಾಚಾರ ನಡೆಸಿ ಆಕೆಯ ಕೈಗೆ ಗಂಡು ಮಗು ನೀಡಿದ್ದ ನಗರದ ಹುಬ್ಬಳ್ಳಿ ರಸ್ತೆಯ ನಿವಾಸಿಗೆ ಕಾರವಾರದ ಹೆಚ್ಚುವರಿ ಮತ್ತು ಸತ್ರ ಎಫ್‌ಟಿಎಸ್‌ಸಿ 1ನೇ ನ್ಯಾಯಾಲಯ 12 ವರ್ಷಗಳ ಜೈಲು ಮತ್ತು 30 ಸಾವಿರ ರು. ದಂಡ ವಿಧಿಸಿದೆ. ಮಹಮ್ಮದ್‌ ಉಬೇದುಲ್ಲಾ ಶೇಖ್‌ ಶಿಕ್ಷೆಗೊಳಗಾದ ವ್ಯಕ್ತಿ. ಆರೋಪಿ 2018ರ ಜೂನ್‌ ತಿಂಗಳಿನಲ್ಲಿ ಈ ಕೃತ್ಯ ನಡೆಸಿದ್ದ. ಅತ್ಯಾಚಾರ ನಡೆಸಿದ ವಿಷಯವನ್ನು ಯಾರಿಗಾದರೂ ಹೇಳಿದರೆ ವಿಷ ಹಾಕಿ ಕೊಂದುಬಿಡುವುದಾಗಿಯೂ ಬೆದರಿಕೆ ಹಾಕಿದ್ದ. […]

ಬಾಲಕಿಯನ್ನು ಅತ್ಯಾಚಾರಗೈದು ಮೊಬೈಲ್ ನಲ್ಲಿ ನಗ್ನ ಫೋಟೋ ತೆಗೆದು ಬೆದರಿಕೆ : ಪ್ರಕರಣ ದಾಖಲು

Thursday, February 11th, 2021
Child Rape

ಬಂಟ್ವಾಳ : ಬೋಳಂತೂರು ಗ್ರಾಮದ  ಬಾಲಕಿಯೊಬ್ಬಳನ್ನು ಅತ್ಯಾಚಾರಗೈದು ಬಳಿಕ ಮೊಬೈಲ್ ನಲ್ಲಿ ಆಕೆಯ ನಗ್ನ ಫೋಟೋಗಳನ್ನು ತೆಗೆದು ಬೆದರಿಕೆ ಹಾಕಿರುವ ಆರೋಪದಲ್ಲಿ ಇಬ್ಬರು ಯುವಕರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ಅಬೂಬಕರ್‌ ಸಿದ್ದೀಕ್‌ ಮತ್ತು ಚಪ್ಪಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ‌ ಬೋಳಂತೂರು ಗ್ರಾಮದ ಬಾಲಕಿಯನ್ನು ಆಕೆಯ ನೆರೆಮನೆಯವನಾದ ಆರೋಪಿ ಅಬೂಬಕರ್‌ ಸಿದ್ದೀಕ್ ಮತ್ತು ಆತನ ಸ್ನೇಹಿತ ಚಪ್ಪಿ ಪುಸಲಾಯಿಸಿ ಜ.25ರಂದು ಅತ್ಯಾಚಾರ ಎಸಗಿದ್ದಾರೆ ಎಂದು […]