ಅಬ್ದುಲ್ ಬಷೀರ್ ಕೊಲೆ ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ

Tuesday, February 6th, 2018
murder

ಮಂಗಳೂರು: ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ದುಷ್ಕರ್ಮಿಗಳ ದಾಳಿಗೆ ಮೃತಪಟ್ಟ ಅಬ್ದುಲ್ ಬಷೀರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮತ್ತೊರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಬಂಟ್ವಾಳದ ಕೇಪು ಗ್ರಾಮದ ಅಭಿಷೇಕ್ ಆರ್. ಎಸ್. ಎಂದು ಗುರುತಿಸಲಾಗಿದೆ. ಆರೋಪಿಯನ್ನು ಪುತ್ತೂರಿನ ಬನ್ನೂರು ಎಂಬಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಆಕಾಶ ಭವನ ನಿವಾಸಿಯಾಗಿದ್ದ ಅಬ್ದುಲ್ ಬಷೀರ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಪೊಲೀಸರು ಕಿಶನ್ ಪೂಜಾರಿ, ಶ್ರೀಜಿತ್, ಧನುಷ್ ಪೂಜಾರಿ, ಸಂದೆಶ್ ಕೋಟ್ಯಾನ್, ಪುಷ್ಪರಾಜ್ ಹಾಗೂ ಲತೇಲ್ […]

ಅಬ್ದುಲ್ ಬಷೀರ್ ಹತ್ಯೆಗೆ ಜೈಲಲ್ಲಿ ಸಂಚು: ಮಂಗಳೂರು ಪೊಲೀಸ್ ಆಯುಕ್ತ

Thursday, January 25th, 2018
bashir

ಮಂಗಳೂರು: ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಜನವರಿ 3 ರ ರಾತ್ರಿ ನಡೆದ ಅಬ್ದುಲ್ ಬಷೀರ್ ಅವರ ಹತ್ಯೆಗೆ ಮಂಗಳೂರು ಜೈಲಿನಲ್ಲಿಯೇ ಸಂಚು ರೂಪಿಸಲಾಗಿತ್ತು ಎಂದು ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಬುಧವಾರ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಅವರು, ಅಬ್ದುಲ್ ಬಷೀರ್ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ತನಿಖೆಗೆ ಒಳಪಡಿಸಿದಾಗ ಈ ಹತ್ಯಾ ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಬಗ್ಗೆ ಮಾಹಿತಿ ದೊರೆಯಿತು ಎಂದು ಅವರು […]

ರಾಜ್ಯದಲ್ಲಿ ರಾಜಕೀಯ ಹಿನ್ನಲೆಯಲ್ಲಿ ಹತ್ಯೆಗಳು ನಡೆಯುತ್ತಿವೆ :ಇಂದ್ರಜಿತ್ ಲಂಕೇಶ್

Tuesday, January 9th, 2018
indrajit-lankesh

ಮಂಗಳೂರು: ಮಂಗಳೂರಿನ ಕಾಟಿಪಳ್ಳದಲ್ಲಿ ನಡೆದ ದೀಪಕ್ ರಾವ್ ಹಾಗೂ ಕೊಟ್ಟಾರ ಚೌಕಿಯಲ್ಲಿ ನಡೆದ ಅಬ್ದುಲ್ ಬಷೀರ್ ಅವರ ಸಾವು ತುಂಬಾ ನೋವು ತಂದಿದೆ,” ಎಂದು ಹೇಳಿದ ಅವರು, “ರಾಜ್ಯದಲ್ಲಿ ರಾಜಕೀಯ ಹಿನ್ನಲೆಯಲ್ಲಿ ಹತ್ಯೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ,” ಎಂದು ಆರೋಪಿಸಿದರು. “ಮಂಗಳೂರಿನಲ್ಲಿ ನಡೆದ ಎರಡು ಸಾವಿನಲ್ಲೂ ರಾಜಕೀಯ ನಡೆಯುತ್ತಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, “ರಾಜಕೀಯಕ್ಕಾಗಿ ಹಾಗೂ ಮತಗಳಿಕೆಯ ಲಾಭಕ್ಕಾಗಿ ಈ ಇಬ್ಬರ ಸಾವನ್ನು ಬಳಸಿಕೊಳ್ಳಬೇಡಿ,” ಎಂದು ಮನವಿ ಮಾಡಿಕೊಂಡರು. “ರಾಜ್ಯದಲ್ಲಿ ಚುನಾವಣೆ ಹತ್ತಿರ […]

ಪ್ರತೀಕಾರ ದಾಳಿಯ ಭಯ, ಸಂಜೆಯಾಗುತ್ತಿದ್ದಂತೆ ಮಂಗಳೂರು ಸ್ತಬ್ಧ

Tuesday, January 9th, 2018
Mangaluru

ಮಂಗಳೂರು: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಎರಡು ಹತ್ಯೆ ಪ್ರಕರಣಗಳು ಜನರನ್ನು ಬೆಚ್ಚಿಬೀಳಿಸಿವೆ. ಅಮಾಯಕರಿಬ್ಬರು ದುಷ್ಕರ್ಮಿಗಳ ದಾಳಿಗೆ ಬಲಿಯಾದ ಬಳಿಕ ಮತ್ತೆ ನಗರದಲ್ಲಿ ಪ್ರತಿಕಾರದ ದಾಳಿಗಳ ಭೀತಿ ಆವರಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಸಂಜೆಯಾಗುತ್ತಿದ್ದಂತೆ ಸ್ಥಬ್ಧವಾಗುತ್ತಿದೆ. ಕತ್ತಲಾಗುತ್ತಿದ್ದಂತೆ ಜನರು ಮನೆ ಸೇರಿಕೊಳ್ಳುತ್ತಿದ್ದು ಮಂಗಳೂರಿನ ರಸ್ತೆಗಳಲ್ಲಿ ರಾತ್ರಿ ಹೊತ್ತು ಅಘೋಷಿತ ಬಂದ್ ಜಾರಿಯಲ್ಲಿರುತ್ತದೆ. ಮತೀಯ ದ್ವೇಷದ ಎಲ್ಲಾ ಕೊಲೆಗಳ ಮರು ತನಿಖೆಗೆ ಮುನೀರ್ ಕಾಟಿಪಳ್ಳ ಒತ್ತಾಯ ಮೊಬೈಲ್ ಕರೆನ್ಸಿ ಮತ್ತು ಸಿಮ್ ಕಾರ್ಡ್ ಮಾರಾಟ ಮಾಡಿಕೊಂಡಿದ್ದ ದೀಪಕ್ ರಾವ್ ಅವರನ್ನು […]

ಮತೀಯ ದ್ವೇಷದ ಎಲ್ಲಾ ಕೊಲೆಗಳ ಮರು ತನಿಖೆಗೆ ಮುನೀರ್ ಕಾಟಿಪಳ್ಳ ಒತ್ತಾಯ

Tuesday, January 9th, 2018
deepak

ಮಂಗಳೂರು: ದೀಪಕ್ ರಾವ್, ಅಬ್ದುಲ್ ಬಷೀರ್ ಕೊಲೆ ಪ್ರಕರಣ ಸೇರಿದಂತೆ 2000 ಇಸವಿಯ ನಂತರ ನಡೆದ ಎಲ್ಲಾ ಕೋಮು ದ್ವೇಷ, ಪ್ರತೀಕಾರದ ಕೊಲೆ ಪ್ರಕರಣಗಳನ್ನು ಮರು ತನಿಖೆಗೆ ಒಳಪಡಿಸಬೇಕು. ಅದಕ್ಕಾಗಿ “ವಿಶೇಷ ತನಿಖಾ ತಂಡ”ವನ್ನು ರಚಿಸಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ. ಸುರತ್ಕಲ್ ಡಿವೈಎಫ್ಐ ಘಟಕದ ವತಿಯಿಂದ ದೀಪಕ್ ರಾವ್ ಮತ್ತು ಅಬ್ದುಲ್ ಬಷೀರ್ ಗೌರವಾರ್ಥ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಈ ಒತ್ತಾಯ ಮಾಡಿದ್ದಾರೆ. “ದೀಪಕ್ ರಾವ್, ಅಬ್ದುಲ್ ಬಶೀರ್ ಕೊಲೆ […]