ಅಮರನಾಥ ಶೆಟ್ಟಿ ಮೇರು ವ್ಯಕ್ತಿತ್ವದ ರಾಜಕೀಯ ಮುತ್ಸದ್ದಿ : ಅಜಿತ್‌ ಕುಮಾರ್ ರೈ

Friday, February 7th, 2020
amarnath-shetty

ಮಂಗಳೂರು : ಅಮರನಾಥ ಶೆಟ್ಟಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾಗಿ ಸಂಘವನ್ನು ನಡೆಸಿರುವ ಬಂಟ ಸಮಾಜದ ಮೆರು ವ್ಯಕ್ತಿತ್ವದ ಹಿರಿಯ ನಾಯಕ ಹಾಗೂ ರಾಜಕೀಯ ಮತ್ಸದ್ದಿಯಾಗಿದ್ದರು ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ ಅಭಿಪ್ರಾಯಿಸಿದ್ದಾರೆ. ಅವರು ಇತ್ತೀಚೆಗೆ ನಿಧನರಾದ ಮಾಜಿ ಸಚಿವ ಅಮರನಾಥ ಶೆಟ್ಟಿಯವರಿಗೆ ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ನಗರದ ಬಂಟ್ಸ್ ಹಾಸ್ಟೆಲ್‌ನ ಶ್ರೀರಾಮಕೃಷ್ಣ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮದ […]

‘ಪ್ರಕಾಶಾಭಿನಂದನೆ’ ಆಮಂತ್ರಣ ಪತ್ರ ಬಿಡುಗಡೆ

Thursday, December 5th, 2019
Prakashabhinandane

ಮಂಗಳೂರು : ಬಂಟ ಸಮಾಜದ ಜತೆಗೆ ಇತರ ಸಮಾಜದವರನ್ನೂ ಪ್ರೀತಿಸುವ ಕೆ.ಪ್ರಕಾಶ್ ಶೆಟ್ಟಿ ಅವರ ಹೃದಯ ಶ್ರೀಮಂತಿಕೆಯಿಂದ ಅವರು ಬಂಟ ಸಮಾಜದಲ್ಲಿ ಮೇಲ್ಪಂಕ್ತಿಯ ನಾಯಕರಾಗಿ ಗುರುತಿಸಿದ್ದಾರೆ. ತಾನು ಮಾಡುವ ಸಮಾಜ ಮುಖಿ ಕೆಲಸ ಕಾರ್ಯಕ್ಕೆ ಪ್ರಚಾರ ಬಯಸದೆ ಇರುವ ಅವರು ದಿ. ಸುಂದರ ರಾಮ ಶೆಟ್ಟಿ, ವಿನಯ ಹೆಗ್ಡೆಯವರಂತೆ ಸಮಾಜದಲ್ಲಿ ಗೌರವದ ಸ್ಥಾನಮಾನವನ್ನು ಪಡೆದಿದ್ದಾರೆ ಎಂದು ಮಾಜೀ ಸಚಿವ, ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜೀ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ ತಿಳಿಸಿದರು. ಮಂಗಳೂರಿನ ಸಾಯಿ […]

ಸ್ನೇಹಿತ ಎಂ.ಸಂಜೀವರ ಜೀವನ ಕಥನ ಬಿಡುಗಡೆ ಮಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

Saturday, November 17th, 2018
h-d-devegouda

ಮಂಗಳೂರು: ಮಾಜಿ ಸಿಎಂ ದಿ.ರಾಮಕೃಷ್ಣ ಹೆಗಡೆ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಆತ್ಮೀಯ ಅವಿಭಜಿತ ಜನತಾದಳ ಮುಖಂಡರಾಗಿದ್ದ ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕದ್ರಿ ಎಂ.ಸಂಜೀವ ಅವರ ಜೀವನ ಕಥನವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಶುಕ್ರವಾರ ರಾತ್ರಿ ಯುನಿಟಿ ಆಸ್ಪತ್ರೆಯ ವಾರ್ಡಿನಲ್ಲಿ ಬಿಡುಗಡೆ ಮಾಡಿದರು. ಮಂಗಳೂರಿಗೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಮಾಜಿ ಪ್ರಧಾನಿ ಎಚ್.ಡಿದೇವೇಗೌಡ ಅವರು ಆಸ್ಪತ್ರೆಗೆ ದಾಖಲಾಗಿದ್ದ ತಮ್ಮ ರಾಜಕೀಯ ಸ್ನೇಹಿತ ಎಂ.ಸಂಜೀವ ಅವರ ಯೋಗ ಕ್ಷೇಮ ವಿಚಾರಿಸಲು ಆಗಮಿಸಿದರು. […]

ಜೆಡಿಎಸ್ ಅಧಿಕಾರಕ್ಕೆ ಬಂದರೆ ನಾನು ನೆಪಮಾತ್ರಕ್ಕೆ ಸಿಎಂ: ಹೆಚ್‌ಡಿಕೆ

Tuesday, March 6th, 2018
JDs-mangaluru

ಮಂಗಳೂರು: ಜೆಡಿಎಸ್ ಅಧಿಕಾರಕ್ಕೆ ಬಂದರೆ ನಾನು ನೆಪಮಾತ್ರಕ್ಕೆ ಸಿಎಂ. ರಾಜ್ಯದ ಆರೂವರೆ ಕೋಟಿ ಜನರೇ ನಿಜವಾದ ಮುಖ್ಯಮಂತ್ರಿಗಳು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಮಂಗಳೂರಿನಲ್ಲಿ ಬಲ್ಲವರೊಡನೆ ಬೌದ್ಧಿಕ ಸಂವಾದ ನಡೆಸಿದ ಅವರು, ಕೇವಲ ಅಧಿಕಾರಿಗಳ ಸಲಹೆಯನ್ನು ಅನುಸರಿಸಿ ರಾಜ್ಯಾಡಳಿತ ಮಾಡುವುದಲ್ಲ. ಜನರ ಸಲಹೆಗೆ ಮನ್ನಣೆ ಕೊಡುವುದೇ ಜೆಡಿಎಸ್‌ನ ಕಲ್ಪನೆ ಎಂದರು. ಎತ್ತಿನಹೊಳೆ ಯೋಜನೆಯ ಬಗ್ಗೆ ತಮ್ಮ ನಿಲುವೇನು ಎಂದು ಪರಿಸರವಾದಿ ದಿನೇಶ್ ಹೊಳ್ಳ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು […]

ಮೂಡುಬಿದಿರೆ:ಆಳ್ವಾಸ್ ಕಾನೂನು ಮಾಹಿತಿ ಕಾರ್ಯಕ್ರಮ

Tuesday, December 19th, 2017
alwas-kanun

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ಪದವಿ ವಿಭಾಗ ಹಾಗೂ ಇನ್ನರ್‍ವೀಲ್ ಕ್ಲಬ್ ಮೂಡುಬಿದಿರೆ ಸಹಯೋಗದಲ್ಲಿ ಮೂಡುಬಿದಿರೆ ವ್ಯಾಪ್ತಿಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ `ಮಕ್ಕಳ ಹಕ್ಕುಗಳ ಉಲ್ಲಂಘನೆ ಮತ್ತು ಕಾನೂನು ಮಾಹಿತಿ ಯೋಜನೆ’ ಕುರಿತು ಸೋಮವಾರ ಕಾರ್ಯಕ್ರಮ ನಡೆಯಿತು. ಇನ್ನರ್‍ವೀಲ್ ಕ್ಲಬ್ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಕ್ಕಳ ಹಕ್ಕುಗಳ ಕಾಯಿದೆಗಳನ್ನು ಸಮರ್ಪಕ ಅನುಷ್ಠಾನಕ್ಕೆ ಪೂರಕವಾಗಿ ಮಕ್ಕಳ ಪೆÇೀಷಕರು, ಶಿಕ್ಷಕರು, ಶಿಕ್ಷಣ ಇಲಾಖೆ ಸೇರಿದಂತೆ ಆಡಳಿತ ವ್ಯವಸ್ಥೆ ಹಾಗೂ ಪ್ರತಿಯೊಬ್ಬ ನಾಗರಿಕರು ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕೆಂದರು. […]