ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ: ಕೇಂದ್ರ ಗೃಹ ಸಚಿವ ಅಮಿತ್ ಷಾ ವಿಶ್ವಾಸ

Thursday, September 2nd, 2021
Amithsha

ದಾವಣಗೆರೆ  : ಬಸವರಾಜ ಬೊಮ್ಮಾಯಿ ಅವರು ಆಡಳಿತದಲ್ಲಿ, ಸಾರ್ವಜನಿಕ ಜೀವನದಲ್ಲಿ ಅಪಾರ ಅನುಭವ ಹೊಂದಿದ್ದು, ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ಮತ್ತೊಮ್ಮೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ ತಮಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದರು. ಅವರು ಇಂದು ದಾವಣಗೆರೆಯ ಜಿಎಂಐಟಿ ಆವರಣದಲ್ಲಿ ವಿವಿಧ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇತ್ತೀಚೆಗೆ ಕರ್ನಾಟಕದ ನೇತೃತ್ವವನ್ನು ಬೇರೆಯವರಿಗೆ ವಹಿಸುವ ಕುರಿತು ಯಡಿಯೂರಪ್ಪ ಜಿ ಅವರು ಸ್ವತಃ ತೀರ್ಮಾನ ಕೈಗೊಂಡರು. ಬಿಜೆಪಿಯು ಬಸವರಾಜ […]

ಜನವರಿ 18ರಂದು ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್​ ಷಾ ಆಗಮನ

Thursday, January 16th, 2020
amith

ಬೆಂಗಳೂರು : ಜನವರಿ 18ರ ಶನಿವಾರ ರಾಜ್ಯಕ್ಕೆ ಆಗಮಿಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯ ಗರಿಗೆದರಿದೆ. ಅಮಿತ್ ಷಾ ಭೇಟಿಗೆ ಉತ್ಸುಕರಾಗಿರೋ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಷಾ ಮುಂದೆ ಚರ್ಚಿಸಲು ಸಿದ್ಧತೆ ನಡೆಸಿದ್ದಾರೆ. ಹಾಗಾಗಿ ಸಚಿವ ಸ್ಥಾನಾಕಾಂಕ್ಷಿಗಳಲ್ಲಿ ಮತ್ತೆ ಆಸೆ ಚಿಗುರಿದೆ. ಅಮಿತ್ ಷಾ ಭೇಟಿ ವೇಳೆ ಕೆಲವು ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಲು ಮುಖ್ಯಮಂತ್ರಿ ಅವರು ಸಿದ್ಧತೆ ನಡೆಸಿದ್ದಾರೆ. ಅದರಲ್ಲಿನ ಪ್ರಮುಖ ವಿಷಯಗಳ […]

ದಕ್ಷಿಣ ಕನ್ನಡದ 7 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಅಂತಿಮ ?

Friday, April 13th, 2018
election

ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಕಣ ರಂಗೇರುತ್ತಿದ್ದು, ವಿವಿಧ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯ ಕಸರತ್ತು ನಡೆಸುತ್ತಿವೆ. ಈ ನಡುವೆ ಬಿಜೆಪಿ ಈಗಾಗಲೇ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿ ಭದ್ರಕೋಟೆಯಂತಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿ ಮಾರ್ಪಟ್ಟಿತ್ತು. ಮೊದಲ ಪಟ್ಟಿಯಲ್ಲಿ ದಕ್ಷಿಣಕನ್ನಡದ ಕೇವಲ ಒಂದು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮಾತ್ರ ಘೋಷಿಸಿತ್ತು. ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಎಸ್. ಅಂಗಾರ ಮತ್ತೆ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಉಳಿದ 7 […]

ಮಾತೃಭಾಷೆಗಿಂತ ಶ್ರೇಷ್ಠ ಯಾವುದೂ ಇಲ್ಲ: ಪುತ್ತೂರಿನಲ್ಲಿ ಅಮಿತ್ ಷಾ

Tuesday, February 20th, 2018
puttur

ಮಂಗಳೂರು: ಮಾತೃಭಾಷೆಗಿಂತ ಶ್ರೇಷ್ಠ ಯಾವುದೂ ಇಲ್ಲ. ಯಾವುದೇ ಹುದ್ದೆಗೆ ಹೋದರೂ ಮಾತೃಭಾಷೆ ಮರೆಯಬೇಡಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದರು. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಷಾ, ಪಕ್ಷವನ್ನು ಪಕ್ಕಕ್ಕಿಟ್ಟು ಮಾತನಾಡುತ್ತೇನೆ. ಸ್ವಾತಂತ್ರ್ಯ ಹೋರಾಟ ಸಂದರ್ಭ ಪಕ್ಷ, ಜಾತಿ ಇರಲಿಲ್ಲ. ಸ್ವರಾಜ್ಯದ ಚಿಂತನೆ ಎಲ್ಲರ ಮನದಲ್ಲಿತ್ತು ಎಂದರು. ಈಗ ವೇದಿಕೆಯಲ್ಲಿ ಐವತ್ತು ದಾಟಿದವರು ಇದ್ದೇವೆ. ಕೆಲವೇ ವರ್ಷದಲ್ಲಿ ಯುವಕರು ಈ ವೇದಿಕೆಯಲ್ಲಿ ಇರಬೇಕು. ಭಾರತದ ಭವಿಷ್ಯದ ಬಾಗಿಲು ಮುಚ್ಚಿತ್ತು. ಭ್ರಷ್ಟಾಚಾರ ಭಾರತ […]

ಅಮಿತ್ ಷಾ ಪ್ರವಾಸದ ತಿಳಿದು ಕಾಂಗ್ರೆಸ್‌ ಹುಲಿಗಳು ಗುಹೆ ಸೇರಿವೆ: ನಳಿನ್‌ ಕಟೀಲ್ ಲೇವಡಿ

Monday, February 19th, 2018
nalin-kumar

ಮಂಗಳೂರು: ಅಮಿತ್ ಷಾ ನಾಳೆ ಕರಾವಳಿಯಲ್ಲಿ ಪ್ರವಾಸ ಕೈಗೊಳ್ಳಲಿರುವ ಮಾಹಿತಿ ತಿಳಿದು ಕಾಂಗ್ರೆಸ್ ಹುಲಿಗಳು ಗುಹೆ ಸೇರಿದ್ದಾರೆ ಎಂದು ಬಿಜೆಪಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಲೇವಡಿ ಮಾಡಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ನಾಳೆ ಅಮಿತ್ ಷಾ ಕರಾವಳಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವಿಷಯ ತಿಳಿದ ಕಾಂಗ್ರೆಸ್ ಹುಲಿಗಳು ಗುಹೆ ಸೇರಿಕೊಂಡಿದ್ದಾರೆ. ಷಾ ಬಗ್ಗೆ ಕಾಂಗ್ರೆಸ್ ಮುಖಂಡರು ಬೇರೆ ಬೇರೆ ಹೇಳಿಕೆ ನೀಡುತ್ತಿರುತ್ತಾರೆ. ಈ ಹೇಳಿಕೆಗಳಿಂದಲೇ ಅಮಿತ್ ಷಾ ಬಗ್ಗೆ ‌ಕಾಂಗ್ರೆಸ್‌ಗೆ ಭಯವಿದೆ‌ ಎಂದು […]

ಮೈಸೂರಿನಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ… ಸಿಎಂ ವಿರುದ್ಧ ಅಮಿತ್‌ ಷಾ ತೀವ್ರ ವಾಗ್ದಾಳಿ

Thursday, January 25th, 2018
amit-shah

ಮೈಸೂರು: ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳನ್ನು ಹೇಳುತ್ತಾ ಹೋದರೆ 7 ದಿನ ಬೇಕಾಗುತ್ತದೆ. ಅಷ್ಟು ಮಾಹಿತಿ ನನ್ನ ಬಳಿ ಇದೆ, ಭ್ರಷ್ಟ ಸಿದ್ದರಾಮಯ್ಯ ಸರ್ಕಾರವನ್ನು ಕಿತ್ತೊಗೆಯಲೇಬೇಕೆಂದು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದರು. ಇಂದು ಮಹಾರಾಜ ಕಾಲೇಜು ಮೈದಾನದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಭಾವಿ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ತಮ್ಮ ಭಾಷಣ ಆರಂಭಿಸಿದರು. ಮುಖ್ಯಮಂತ್ರಿಗಳ ಬಂದ್ ನಡುವೆಯೇ ಸಾಕಷ್ಟು ಸಂಖ್ಯೆಗಳಲ್ಲಿ ಜನರು ಆಗಮಿಸಿದ್ದೀರಾ. ಭ್ರಷ್ಟ, […]

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ದೇಶವನ್ನು ವಿಭಜಿಸಲು ಕೆಲ ಗುಂಪುಗಳು ಷಡ್ಯಂತ್ರ ನಡೆಸುತ್ತಿದೆ: ಅಮಿತ್ ಷಾ

Monday, August 22nd, 2016
Amith-sha

ಮಂಗಳೂರು: ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ದೇಶವನ್ನು ವಿಭಜಿಸಲು ಕೆಲ ಗುಂಪುಗಳು ಷಡ್ಯಂತ್ರ ನಡೆಸುತ್ತಿದ್ದು, ಇಂತಹವರನ್ನು ಪ್ರತ್ಯೇಕಿಸಿ ದೇಶದ ಐಕ್ಯತೆ ಮೆರೆಯುವ ಕಾರ್ಯವಾಗಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ನಡೆದ ಭಾರತ ತಿರಂಗ ಯಾತ್ರೆ ಹಾಗೂ ಸ್ವಾತಂತ್ರ್ಯ 70ರ ಬಲಿದಾನದ ಕಾರ್ಯಕ್ರಮದಂಗವಾಗಿ ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಉಳ್ಳಾಲದ ರಾಣಿ ಅಬ್ಬಕ್ಕರನ್ನು ಸ್ಮರಿಸುವ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು. ರಾಷ್ಟ್ರ ವಿಭಜನೆಯಂತಹ ಭಾಷಣಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರು ನೀಡಲಾಗುತ್ತಿದ್ದು, ದೇಶದ […]