ಚುಟುಕು ಸಾಹಿತ್ಯ ಪರಿಷತ್ತಿನ 21ನೇ ರಾಜ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ನಾರಾಯಣಯ್ಯ ಮೂಳೂರು ಆಯ್ಕೆ

Thursday, November 16th, 2023
Narayanaya

ಬಂಟ್ವಾಳ: ಬಂಟ್ವಾಳ ತಾಲೂಕಿನ ಮುಡಿಪು ಶ್ರೀ ಭಾರತಿ ಶಾಲೆಯ ಅಮೃತ ಮಹೋತ್ಸವದಲ್ಲಿ ನಡೆದ ಭಾರತಿ ಚುಟುಕು ಸಾಹಿತ್ಯ ಗೋಷ್ಠಿಯ ಸಂದರ್ಭದಲ್ಲಿ ಅದೇ ಶಾಲೆಯ ಮೈದಾನದಲ್ಲಿ ನಡೆಯುವ ರಾಜ್ಯ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ನಾರಾಯಣಯ್ಯ ಮೂಳೂರು ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಹರೀಶ ಸುಲಾಯ ಒಡ್ಡಂಬೆಟ್ಟು ಅವರು ಶ್ರೀ ನಾರಾಯಣಯ್ಯ ಮೂಳೂರು ಅವರಿಗೆ ಶಾಲು ಹೊದಿಸುವ ಮೂಲಕ ಅವರನ್ನು ಸ್ವಾಗತ ಸಮಿತಿಯ ಅಧ್ಯಕ್ಷರಾಗಿ […]

ಸಾಹಸಿ ಯುವತಿಯರಿಗೆ ಉಳ್ಳಾಲ ತೀರದಲ್ಲಿ ಅದ್ದೂರಿ ಸ್ವಾಗತ ಸಚಿವರು, ಶಾಸಕರು, ಗಣ್ಯರಿಂದ ಅಭಿನಂದನೆಗಳು

Monday, November 1st, 2021
adventurous- women

ಮಂಗಳೂರು  : ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಕೈಗೊಳ್ಳಲಾಗಿದ್ದ ಐತಿಹಾಸಿಕ ಯಾನ ಶಿಖರದಿಂದ ಸಾಗರ ಅಭಿಯಾನದಲ್ಲಿ ಭಾಗವಹಿಸಿದ್ದ ರಾಜ್ಯದ ಐವರು ಯುವತಿಯರಿಗೆ ಉಳ್ಳಾಲದ ಕಡಲ ತೀರದಲ್ಲಿ ನ.01ರ ಸೋಮವಾರ ಅದ್ದೂರಿ ಸ್ವಾಗತ ಕೋರಲಾಯಿತು. ಈ ಯುವತಿಯರು ಕಾಶ್ಮೀರದಲ್ಲಿನ ಕೊಲ್ಹೋಯಿ  (5425 ಮೀ) ಶಿಖರವನ್ನು ಏರಿ ತದನಂತರ ಜಗತ್ತಿನ ಅತಿ ಎತ್ತರದ ರಸ್ತೆಯಾದ ಲಡಾಖ್ ನ ಕರ್ ದೂಂಗ್ಲ ಪಾಸ್ ಮೂಲಕ 3350 ಕಿ.ಮೀ, ಸೈಕಲ್ ಯಾನ ಮಾಡುತ್ತಾ ಕಾರವಾರ ತಲುಪಿ, ಅಲ್ಲಿಂದ ರಾಜ್ಯದ ಕರಾವಳಿ ಸಮುದ್ರದಲ್ಲಿ 300 […]

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ “ಪವರ್” ತುಂಬಿದ ಸಚಿವ ಸುನಿಲ್ ಕುಮಾರ್

Friday, September 17th, 2021
Kannada Pradhikara

ಬೆಂಗಳೂರು : ಪವರ್ ಇಲಾಖೆಯಲ್ಲಿ ಸಂಸ್ಕೃತಿ ತರುವ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪವರ್ ತುಂಬುವ ಕೆಲಸ ಮಾಡುತ್ತೇನೆ ಎಂದು ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ದಿನ ಆಶ್ವಾಸನೆ ನೀಡಿದ್ದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಆ ನಿಟ್ಟಿನಲ್ಲಿ ಚಾರಿತ್ರಿಕ ಆದೇಶ ಹೊರಡಿಸು ಮೂಲಕ ದೃಢ ಅಡಿ ಇಟ್ಟಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಬಲಪಡಿಸಿ, ಅದರ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಚಟುವಟಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಅಧಿಕಾರ ವಿಕೇಂದ್ರೀಕರಣ […]

ಮಂಗಳೂರು ಬಿಜೆಪಿ ಕಚೇರಿಯಲ್ಲಿ 75ನೇ ಸ್ವಾತಂತ್ರ್ಯೋತ್ಸವ

Sunday, August 15th, 2021
BJP-office

ಮಂಗಳೂರು  : ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಲುವಾಗಿ ಧ್ವಜಾರೋಹಣ ಮಾಡುವ ಮೂಲಕ ಸರಳವಾಗಿ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯ ವಕ್ತಾರರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಈ ದೇಶದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಜನರು ಹುತಾತ್ಮರಾಗಿದ್ದಾರೆ. ಅವರ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಮೂಲಕ ಅವರ ವಿಚಾರಗಳನ್ನು ಜೀವಂತವಾಗಿಡಬೇಕು ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಮಾತನಾಡಿ, ಭಾರತದ ಅಗಾಧ ಸಂಪತ್ತಿನ ಮೇಲಿನ ವ್ಯಾಮೋಹದಿಂದ ವಿದೇಶಿ ಆಕ್ರಮಣಕಾರರು ಭಾರತದ […]

ಮಂಗಳೂರು ನೆಹರೂ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ

Sunday, August 15th, 2021
S angara

ಮಂಗಳೂರು : ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಜಿಲ್ಲಾಡಳಿತದ ವತಿಯಿಂದ ನಗರದ ನೆಹರೂ ಮೈದಾನ ದಲ್ಲಿ  ಆ.15ರ ಭಾನುವಾರ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ನಮ್ಮ ದೇಶವಿಂದು ಇಡೀ ವಿಶ್ವದಲ್ಲೇ ಒಂದು ಚಾರಿತ್ರಿಕ ಕಾಲಘಟ್ಟದಲ್ಲಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ  ದೊರೆತು ೭೫ವರ್ಷ ತುಂಬಿತು. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಇದನ್ನು ಅಮೃತ ಮಹೋತ್ಸವ ಎನ್ನಲಾಗುತ್ತಿದೆ. ಸನ್ಮಾನ್ಯ ಪ್ರಧಾನ […]

ಎರಡು ದಿನ ವಾರಾಂತ್ಯ ಕರ್ಫ್ಯೂ, ಸರಳವಾಗಿರಲಿದೆ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ

Friday, August 13th, 2021
KV-Rajendra

ಮಂಗಳೂರು : ದೇಶದಾದ್ಯಂತ 2021ರ ಆಗಸ್ಟ್ 15 ರಂದು 75 ನೇ ವರ್ಷದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಕೋವಿಡ್-19 ಸೋಂಕು ಕಾರಣ ಜಿಲ್ಲೆಯಲ್ಲಿ ಕೋವಿಡ್ 19 ಮಾರ್ಗಸೂಚಿಗಳು ಜಾರಿಯಲ್ಲಿದ್ದು, ಆಗಸ್ಟ್ 15 ರಂದು ವಾರಾಂತ್ಯ ಕರ್ಫ್ಯೂ ಕೂಡ ಜಾರಿಯಲ್ಲಿರುತ್ತದೆ. ಆದ ಕಾರಣ ಈ ಬಾರಿಯ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಆಚರಣೆ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಸಾರ್ವಜನಿಕರು ಪಾಲಿಸಲು ಸೂಚಿಸಲಾಗಿದೆ. ಕಾರ್ಯಕ್ರಮದ ಆಯೋಜಕರು ಧ್ವಜಾರೋಹಣ ನಡೆಸುವ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರನ್ನು ಸೇರಿಸದಂತೆ, ಕೋವಿಡ್ ಸಮುಚಿತ ವರ್ತನೆಗಳನ್ನು […]

ಅಮೃತ ಮಹೋತ್ಸವ ಸಾಪ್ತಾಹಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ಎಲ್ಲ ಅಧಿಕಾರಿಗಳ ಸಹಕಾರ ಅಗತ್ಯ: ಶಶಿಧರ ಮಾಡ್ಯಾಳ

Tuesday, August 3rd, 2021
Shashidhara Madyala

ಹುಬ್ಬಳ್ಳಿ : ಆಗಸ್ಟ್ 15 ರಂದು ಜರುಗುವ 75 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಅಂದು ಅಮೃತ ಮಹೋತ್ಸವ ಸಾಪ್ತಾಹಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು, ಆದರೆ ತಾಲೂಕಿನ ಎಲ್ಲ ಅಧಿಕಾರಿಗಳು ಭಾಗಿಯಾಗಿ ಸಹಕಾರ ನೀಡುವುದು ಅವಶ್ಯಕ ಎಂದು ಶಹರ ತಹಶೀಲ್ದಾರ ಶಶಿಧರ ಮಾಡ್ಯಾಳ ಹೇಳಿದರು. ಇಲ್ಲಿಯ ಮಿನಿ ವಿಧಾನಸೌಧದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಕುರಿತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಅವರು ಮಾತನಾಡಿದರು. ಕೊರೊನಾ ಇರುವುದರಿಂದ ಕೆಲವು ಕಾರ್ಯಕ್ರಮ ಮಾಡಲು ತೊಂದರೆಯಾಗುತ್ತದೆ. ಎಲ್ಲ ಇಲಾಖೆಗಳಲ್ಲಿ ಅಧಿಕಾರಿಗಳು […]