ಪರಿಸರ ನಷ್ಟವನ್ನು ತುಂಬಲು ಪ್ರತಿ ವರ್ಷ ಪರಿಸರ ಆಯವ್ಯಯ: ಮುಖ್ಯಮಂತ್ರಿಗಳ ಘೋಷಣೆ

Saturday, September 11th, 2021
CM Forest

ಬೆಂಗಳೂರು : ರಾಜ್ಯದಲ್ಲಿನ ಪರಿಸರ ಹಾನಿಯನ್ನು ತುಂಬಲು ಪರಿಸರ ಆಯವ್ಯಯವನ್ನು ಪ್ರಾರಂಭಿಸಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಅವರು ಇಂದು ಅರಣ್ಯ ಹುತಾತ್ಮರ ದಿನಾಚರಣೆಯ ಅಂಗವಾಗಿ ಹುತಾತ್ಮರಿಗೆ ನಮನ ಸಲ್ಲಿಸಿ ಮಾತನಾಡುತ್ತಿದ್ದರು. ಪ್ರತಿ ವರ್ಷ ರಾಜ್ಯದಲ್ಲಿ ನಾಶವಾಗಿರುವ ಒಟ್ಟು ಹಸಿರು ಪ್ರದೇಶ ಎಷ್ಟು ಎಂಬುದನ್ನು ಅಂದಾಜಿಸುವ ವಿಧಾನ ಪ್ರಾರಂಭಿಸಬೇಕು. ಆಗ ಹಸಿರಿನ ಕೊರತೆ ಎಷ್ಟು ಎಂದೂ ಸಹ ಗೊತ್ತಾಗುತ್ತದೆ. ಪರಿಸರ ಆಯವ್ಯಯವನ್ನು ಪ್ರಾರಂಭಿಸಿದಾಗ ಮಾತ್ರ ಈ ನಷ್ಟವನ್ನು ತುಂಬಿಸಿಕೊಳ್ಳಬಹುದು ಎಂದು ಮುಖ್ಯಮಂತ್ರಿಗಳು ಹೇಳಿದರು. ಅರಣ್ಯ ನಮಗಿಂತ ಮೊದಲು […]

ಅರಣ್ಯ ನಾಶಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮ : ಸಚಿವ ಅರವಿಂದ ಲಿಂಬಾವಳಿ

Monday, March 15th, 2021
Limbavali

ಶಿರಹಟ್ಟಿ : ಅರಣ್ಯಕ್ಕೆ ಬೆಂಕಿ ಬೀಳಲು ಮತ್ತು ಅರಣ್ಯ ನಾಶಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವದು ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಶೆಟ್ಟಿಕೆರಿ, ಸಸ್ಯಪಾಲನಾಲಯ ಹಾಗೂ ಅದರ ಸುತ್ತಮುತ್ತಲ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ, ಬೆಂಕಿ ಬಿದ್ದು ನಾಶವಾದ ಅರಣ್ಯ ಪ್ರದೇಶವನ್ನು ವೀಕ್ಷಿಸಿ ಮಾತನಾಡಿದರು. ಈಗಾಗಲೇ ಅರಣ್ಯ ನಾಶಕ್ಕೆ ಕಾರಣ ಆದ 13 ಪ್ರಕರಣಗಳನ್ನು ದಾಖಲು ಮಾಡಲಾಗಿದ್ದು ತಪ್ಪಿತಸ್ಥರ ವಿರುದ್ಧ ಕಠಿಣವಾದ ಕ್ರಮ ಜರುಗಿಸಲಾಗುವದು […]

ಹೆಣ್ಣು ಕೃಷ್ಣ ಮೃಗದ ಮರಿ, ಚರ್ಮ, ತಲೆ ವಶಕ್ಕೆ ಪಡೆದ ಅರಣ್ಯ ಸಂಚಾರಿ‌ ದಳ

Monday, September 7th, 2020
Krishna Mruga

ಮಂಗಳೂರು  : ಫಾರೆಸ್ಟ್ ಸ್ಕ್ವಾಡ್ ನ(ಅರಣ್ಯ ಸಂಚಾರಿ‌ ದಳ) ಅಧಿಕಾರಿ ಹಾಗೂ ಸಿಬ್ಬಂದಿಗಳು ಖಚಿತ ಮಾಹಿತಿ ಮೇರೆಗೆ ಯಾದಗಿರಿಗೆ ತೆರಳಿ ಕೃಷ್ಣ ಮೃಗದ ಚರ್ಮದ ಬೃಹತ್ ದಂಧೆಯನ್ನು ಬೇಧಿಸಿದ್ದು, ಆರು ಜನ ಆರೋಪಿಗಳ ಸಹಿತ ಸೊತ್ತುಗಳನ್ನು ಸ್ಥಳೀಯ ಅರಣ್ಯಾಧಿಕಾರಿಗಳ ವಶಕ್ಕೆ ಒಪ್ಪಿಸಿರುವ ಬಗ್ಗೆ ವರದಿಯಾಗಿದೆ. ಈ ಬೃಹತ್ ಕಾರ್ಯಾಚರಣೆ ವೇಳೆ 20 ಕೃಷ್ಣ ಮೃಗದ ಚರ್ಮ, 2 ಕೃಷ್ಣ ಮೃಗದ ಟ್ರೋಫಿ (ತಲೆಯ ಭಾಗ), ಒಂದು ಜೀವಂತ ಹೆಣ್ಣು ಮರಿ ಹಾಗೂ ದಂಧೆಗೆ ಬಳಸಿದ ಮೂರು ಬೈಕ್ […]

ಅರಣ್ಯ ಕಬಳಿಸಿ ಅಡಕೆ ತೋಟ ಮಾಡಿದ ಪರಿಸರವಾದಿಗಳು ?

Wednesday, May 27th, 2020
Hubli Ankola Train

ಹುಬ್ಬಳ್ಳಿ : ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಕನಸು ಸುಮಾರು ದಶಕಗಳದು. ಈ ರೈಲು ಮಾರ್ಗ ನಿರ್ಮಾಣವಾದರೆ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಕ್ಕೆ ಸುಲಭವಾಗಿ ಸಂಪರ್ಕ ಸಾಧ್ಯವಾಗುತ್ತದೆ. ರೈಲು ಮಾರ್ಗ ಅನುಷ್ಠಾನಕ್ಕೆ ಒಂದೆಡೆ ಹೋರಾಟ ನಡೆಸಿದರೆ ಮತ್ತೊಂದೆಡೆ ಈ ಮಾರ್ಗ ದಿಂದ ಅರಣ್ಯನಾಶವಾಗಿ ವನ್ಯಜೀವಿಗಳಿಗೆ ತೊಂದರೆಯಾಗುತ್ತದೆ ಎಂಬುದು ಪರಿಸರವಾದಿಗಳು ವಾದಿಸುತ್ತಿದ್ದಾರೆ. ಆದರೆ, ಇತ್ತೀಚೆಗೆ ವನ್ಯ ಜೀವಿ ಮಂಡಳಿ ಈ ರೈಲು ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಿ ಕಾಮಗಾರಿ ಆರಂಭಕ್ಕೆ ಮುನ್ನುಡಿ ಬರೆದಿದೆ. ಇತ್ತ ರೈಲು ಮಾರ್ಗ ಆರಂಭಕ್ಕೆ […]

ಅರಣ್ಯ ರಕ್ಷಣೆ ದೃಷ್ಟಿಕೋನ ವಿಸ್ತಾರವಾಗಲಿ: ರಮಾನಾಥ ರೈ

Sunday, August 4th, 2013
Laksha Vruksha

ಮಂಗಳೂರು : ಪ್ರಾಕೃತಿಕ ಸಮತೋಲನ ಕಾಯ್ದು ಕೊಳ್ಳುವ ಹೊಣೆ ಪ್ರತಿಯೊಬ್ಬರದ್ದು. ಪರಿಸರವಿಲ್ಲದೆ ಜೀವರಾಶಿ ಇಲ್ಲ ಎಂಬ ಸತ್ಯವನ್ನು ಅರಿತು ಮರಗಿಡಗಳನ್ನು ಬೆಳೆಸುವ ಹೊಣೆ ಎಲ್ಲರದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಶ್ರೀ ಬಿ ರಮಾನಾಥ ರೈ ಅವರು ಹೇಳಿದರು. ಅವರು ನಗರದ ಪುರಭವನದಲ್ಲಿ ಜುಲೈ3, ಶನಿವಾರ ಆಯೋಜಿಸಲಾದ ರಾಜ್ಯ ಮಟ್ಟದ ‘ಲಕ್ಷ ವೃಕ್ಷ’ ಅಭಿಯಾನ ಉದ್ಘಾಟಿಸಿ ಮಾತನಾಡುತ್ತಿದ್ದರು. ಪರಿಸರ ಸಂರಕ್ಷಣೆ, ಅರಣ್ಯ ನಿರ್ಮಾಣ ಕೇವಲ ಅರಣ್ಯ ಇಲಾಖೆಯ ಹೊಣೆಯಲ್ಲ; ಜನರಲ್ಲಿ […]