ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಬಾಧಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಭೇಟಿ

Thursday, July 29th, 2021
Bommai

ಅಂಕೋಲಾ : ಮುಖ್ಯಮಂತ್ರಿ ಬಸವರಾಜ.ಎಸ್. ಬೊಮ್ಮಾಯಿ ಅವರು ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ನಡೆಸಿದರು. ಜುಲೈ 23 ರಂದು ಜಿಲ್ಲೆಯಲ್ಲಿ ಧಾರಕಾರ ಮಳೆಯಾದ ಪರಿಣಾಮ ಪ್ರವಾಹ ಪರಿಸ್ಥಿತಿ ಎದುರಾಗಿತ್ತು ಕಾಳಿ, ಗಂಗಾವಳಿ, ಅಘನಾಶಿನಿ ಸೇರಿದಂತೆ ನದಿಗಳು ಉಕ್ಕಿ ಹರಿದ ಪರಿಣಾಮ ಹಲವಾರು ಮನೆಗಳು .ಹಾನಿಗೊಳಗಾಗಿರುವುದಲ್ಲದೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ತಾಲ್ಲೂಕು ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಗಳನ್ನು ಉದ್ಘಾಟಿಸಿದ ಮುಖ್ಯಮಂತ್ರಿಗಳು, ನೆರೆ ಪರಿಹಾರ ವೀಕ್ಷಣೆಗೆ ತೆರಳಿ ಮೊದಲಿಗೆ ಗುಡ್ಡ ಕುಸಿತದಿಂದ ಹಾನಿಗೊಳಗಾದ ಕಳಚೆ ಗ್ರಾಮವನ್ನು ಪರಿಶೀಲಿಸಿದರು. […]

ಭಟ್ಕಳದ ವ್ಯಕ್ತಿಯಿಂದ ರೂ. 13,17,860 ಮೌಲ್ಯದ ಅಕ್ರಮ ಚಿನ್ನ ವಶಪಡಿಸಿಕೊಂಡ ಕಸ್ಟಮ್ ಅಧಿಕಾರಿಗಳು

Friday, May 28th, 2021
gold

ಮಂಗಳೂರು : ಕಸ್ಟಮ್ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಭಟ್ಕಳದ ವ್ಯಕ್ತಿಯನ್ನು ಶುಕ್ರವಾರ ಮೇ 26 ರಂದು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಸಿದ್ದಿಕ್ ಮಿಕ್ದಿಮ್ ಹುಸೈನ್ ಎಂಬಾತ ಚಿನ್ನ ಸಾಗಾಟ ಮಾಡುತ್ತಿದ್ದ ಪ್ರಯಾಣಿಕ. ಆತ ದುಬೈನಿಂದ ಏರ್ ಇಂಡಿಯಾ ವಿಮಾನ IX 384 ಮೂಲಕ ಆಗಮಿಸಿದ್ದ. ಈತನ ತಪಾಸಣೆ ನಡೆಸಿದಾಗ ಗುದನಾಳದಲ್ಲಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಈತನಿಂದ 24 ಕ್ಯಾರೆಟ್ ಪರಿಶುದ್ಧತೆಯ 262 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಇದರ […]

ಶಿಕ್ಷಣ ಮತ್ತು ಸಮೂಹ ಉದ್ಯಮ ಸಂಸ್ಥೆಗಳ ಸ್ಥಾಪಕ ಶ್ರೀ.ಆರ್.ಎನ್. ಶೆಟ್ಟಿ ಇನ್ನು ನೆನಪು ಮಾತ್ರ

Friday, December 18th, 2020
RN Shetty

ಕುಂದಾಪುರ  : ಆರ್.ಎನ್.ಎಸ್. ಶಿಕ್ಷಣ ಮತ್ತು ಉದ್ಯಮ ಸಮೂಹ ಸಂಸ್ಥೆಗಳ ಸ್ಥಾಪಕ ಶ್ರೀ.ಆರ್.ಎನ್. ಶೆಟ್ಟಿ (92) ಗುರುವಾರ  ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ 1928ರ ಆಗಸ್ಟ್ 15ರಂದು ಜನಿಸಿದ ಆರ್.ಎನ್. ಶೆಟ್ಟಿ ಅವರು ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ವೈದ್ಯಕೀಯ, ಆತಿಥ್ಯ, ವಸತಿ, ಔದ್ಯಮಿಕ, ಔದ್ಯೋಗಿಕ, ವಾಣಿಜ್ಯ, ಶೈಕ್ಷಣಿಕ, ಮೂಲಸೌಕರ್ಯ, ವಿದ್ಯುತ್ ಹಾಗೂ ನೀರಾವರಿ ಕ್ಷೇತ್ರ ಸೇರಿದಂತೆ ವಿವಿಧ ರಂಗಗಳಲ್ಲಿ ತೊಡಗಿಸಿಕೊಂಡಿದ್ದರು. 1961ರಲ್ಲಿ ಮೂಲಸೌಕರ್ಯ ಕಂಪನಿ ಹುಟ್ಟು ಹಾಕಿದ ಆರ್.ಎನ್. ಶೆಟ್ಟಿ ಅವರು, ಹಿಡಕಲ್ […]

ದುಬೈನಿಂದ ಮಂಗಳೂರಿಗೆ ಬಂದ 15 ಪ್ರಯಾಣಿಕರಲ್ಲಿ ಕೊರೊನಾ ಸೋಂಕು

Friday, May 15th, 2020
dubai15

ಮಂಗಳೂರು :  ಮಂಗಳವಾರ ದುಬೈನಿಂದ ಮಂಗಳೂರಿಗೆ ಆಗಮಿಸಿರುವ ಪ್ರಯಾಣಿಕರ ಪೈಕಿ 15 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಮೇ.12 ರಂದು ವಿಶೇಷ ವಿಮಾನದ ಮೂಲಕ ಬಂದಿಳಿದ 179 ಮಂದಿ ಪೈಕಿ, ದ.ಕ ದ ಮೂಲದ 69 ಜನರ ಗಂಟಲಿನ ದ್ರವ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಪೈಕಿ 15 ಮಂದಿಗೆ ಕೊರೊನಾ ತಗುಲಿರುವುದು ಖಚಿತವಾಗಿದೆ. ಇವರಲ್ಲಿ 12 ಪುರುಷರಿಗೆ ಮತ್ತು 4 ಮಹಿಳೆಯರಿಗೆ ಸೋಂಕು ದೃಢವಾಗಿದೆ. ೧5 ಮಂದಿ ಪೈಕಿ ಓರ್ವರು ಉತ್ತರ ಕನ್ನಡ ಜಿಲ್ಲೆಯವರಾಗಿದ್ದಾರೆ. ದುಬೈನಿಂದ ಬಂದ ವಿಮಾನದಲ್ಲಿ […]

ಭೀಕರ ಅಪಘಾತ: ತಾಯಿ-ಮಗಳು ಸೇರಿ ಐವರು ಸ್ಥಳದಲ್ಲೇ ಸಾವು

Sunday, September 16th, 2018
honnavara accident1

ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟ್ಯಾಂಕರ್ ಹಾಗೂ ಟೆಂಪೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಸ್ಥಳದಲ್ಲಿಯೇ ಮೃತಪಟ್ಟು 7 ಮಂದಿ ತೀವ್ರವಾಗಿ ಗಾಯಗೊಂಡ ಘಟನೆ ಶನಿವಾರ ಸಂಜೆ ನಡೆದಿದೆ. ಘಟನೆಯಲ್ಲಿ ಮೃತಪಟ್ಟವರನ್ನು ನಾಗರಾಜ ನಾಯ್ಕ (28), ಟೆಂಪೋ ಚಾಲಕ ಕಮಲಾಕರ ಭಂಡಾರಿ(ಬಾಬು)(35), ಮೋಹನ ಮೇಸ್ತಾ(50), ಸುಮತಿ ಮಡಿವಾಳ(32) ಹಾಗೂ ಆಕೆಯ ಮಗಳು ಸಿಂಚನಾ ಮಡಿವಾಳ(6) ಎಂದು ಗುರುತಿಸಲಾಗಿದೆ. ಹೊನ್ನಾವರದಿಂದ ಕಾರವಾರದೆಡೆ ಚಲಿಸುತ್ತಿದ್ದ ಟ್ಯಾಂಕರ್ ಹಾಗೂ ಕುಮಟಾದಿಂದ ಪ್ರಯಾಣಿಕರನ್ನು ಹೊತ್ತು ಹೊನ್ನಾವರಕ್ಕೆ ಸಾಗುತ್ತಿದ್ದ […]

ಮರದ ಮೇಲಿದ್ದ ಮೃತ್ಯು ಬೈಕ್ ಮೇಲೆರಗಿದಾಗ ಏನಾಯ್ತು ನೋಡಿ

Sunday, July 15th, 2018
Yellapura accident

ಕಾರವಾರ : ರಾಷ್ಟ್ರೀಯ ಹೆದ್ದಾರಿ 63ರ ಬಿರಗದ್ದೆ ಕ್ರಾಸ್ ಬಳಿ ಚಲಿಸುತ್ತಿದ್ದ ಬೈಕ್ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ  ಶನಿವಾರ ನಡೆದಿದೆ. ಮೃತ್ಯು ಈ ಅಮಾಯಕ ಬೈಕ್ ಸವಾರರನ್ನೇ ಕಾಯುತಿತ್ತೆನೋ. ಅಂಕೋಲಾ ತಾಲೂಕಿನ ಕನಕನಹಳ್ಳಿ ಗ್ರಾಮದ ಸುಭಾಶ್ ಚಿಪ್ಕರ್ (50) ಹಾಗೂ ನಾಗರಾಜ್ ಸಲಗಾವ್ಕರ್(25) ಯಲ್ಲಾಪುರದಿಂದ‌ ಅಂಕೋಲಾ ಕಡೆಗೆ ತೆರಳುತಿದ್ದಾಗ ಬೈಕ್ ಮೇಲೆ ಮರ ಬಿದ್ದಿದೆ.  ಸಾವು ಸಮೀಪ ವಿದ್ದರೂ ಅವರಿಗೆ […]