ಮಾದಕ ವಸ್ತು ಎಂಡಿಎಂಎ ಸಾಗಾಟ ವಿದೇಶಿ ಪ್ರಜೆಯ ಬಂಧನ

Wednesday, September 21st, 2022
looyal-denial

ಮಂಗಳೂರು : ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಾಟ- ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಸೆನ್ ಅಪರಾಧ ವಿಭಾಗದ ಪೊಲೀಸರು ಬೆಂಗಳೂರಿನಲ್ಲಿ ವಿದೇಶಿ ಪ್ರಜೆಯೊಬ್ಬನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮೂಲತ: ರಿಪಬ್ಲಿಕ್ ಆಫ್ ಸೌತ್ ಸೂಡನ್‌ನ ನಿವಾಸಿ, ಹಾಲಿ ಬೆಂಗಳೂರಿನ ಗುಂಜುರು ಪಾಳ್ಯದಲ್ಲಿ ವಾಸವಿದ್ದ ಲೂಯಲ್ ಡೇನಿಯಲ್ ಜಸ್ಟೀನ್ ಬೌಲೋ ಯಾನೆ ಡ್ಯಾನಿ ಎಂದು ಗುರುತಿಸಲಾಗಿದೆ. 2022ರ ಜೂನ್ 15ರಂದು ಸಿಸಿಬಿ ಪೊಲೀಸರು ಪಡೀಲ್ ಬಳಿ ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಓರ್ವ ಮಹಿಳೆ ಸೇರಿದಂತೆ ನಾಲ್ಕು ಜನರನ್ನು ದಸ್ತಗಿರಿ ಮಾಡಿ […]

ನಿಂಬೆಹಣ್ಣು ಚೀಲಗಳ ನಡುವೆ ಅಕ್ರಮವಾಗಿ 40 ಕೆಜಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರ ವಶ

Saturday, July 3rd, 2021
Ganja

ಮಂಗಳೂರು: ನಿಂಬೆಹಣ್ಣು ತುಂಬಿದ ಚೀಲಗಳ ನಡುವೆ  ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 40 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕೇರಳದ ಶಿಹಾಬುದ್ದೀನ್ ಹಾಗೂ ಲತೀಫ್ ಬಂಧಿತರು. ನಗರದ ಕೊಟ್ಟಾರಚೌಕಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಆರೋಪಿಗಳು ಪತ್ತೆಯಾಗಿದ್ದಾರೆ. ಬೊಲೆರೊ ವಾಹನ ಸಮೇತ ಒಟ್ಟು 11.17 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಂಜಾ ರಾಕೆಟ್  ಮಂಗಳೂರು ಪೊಲೀಸರು ಬೆಂಗಳೂರಿಗೆ ತೆರಳಿ ಬೀದರಹಳ್ಳಿಯಿಂದ 3.50 ಲಕ್ಷ ರೂ.ಮೌಲ್ಯದ 55 ಗ್ರಾಂ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ. […]

ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಒಮನ್ ಪ್ರಜೆ, ಗಾಂಜಾ ಹಾಗೂ ಎಂಡಿಎಂಎ ವಶ

Monday, June 14th, 2021
omanian

ಮಂಗಳೂರು :  ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಒಮನ್ ಪ್ರಜೆ ಹಾಗೂ ಹಿಮಾಚಲ ಪ್ರದೇಶದ ಯುವಕನೊಬ್ಬನನ್ನು ಮಂಗಳೂರು ಪೊಲೀಸರು  ಬಂಧಿಸಿದ್ದಾರೆ. ಬಂಧಿತರನ್ನು ಒಮನ್ ಪ್ರಜೆ ಅಹ್ಮದ್ ಮುಸಬಾ ಅಲ್ ಮಹಾಮಾನಿ (34) ಹಾಗೂ ಹಿಮಾಚಲ ಪ್ರದೇಶದ ರಾಮ್ (22) ಎಂದು ಗುರುತಿಸಲಾಗಿದೆ. ಒಮನ್ ಪ್ರಜೆ ಅಹ್ಮದ್ ಮುಸಬಾ 6 ತಿಂಗಳ ಹಿಂದೆ ಗೋವಾಕ್ಕೆ ಟೂರಿಸ್ಟ್ ವೀಸಾದಲ್ಲಿ ಬಂದಿದ್ದು, ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ಆಗಮಿಸಿದ್ದ. ಈ ಮಧ್ಯೆ ನಗರದ ಹೊಟೇಲೊಂದರಲ್ಲಿ ಹಿಮಾಚಲ ಪ್ರದೇಶದ ರಾಮ್ ಜತೆ ಬಂಧಿಸಲಾಗಿದ್ದು, ಬಂಧಿತರಿಂದ ಎಂಡಿಎಂಎ […]

ನಿಷೇದಿತ ಮಾದಕ ವಸ್ತು ಎಂಡಿಎಂಎ ವಶ, ಇಬ್ಬರ ಬಂಧನ

Sunday, June 13th, 2021
mdma

ಮಂಗಳೂರು : ನಿಷೇದಿತ ಮಾದಕ ವಸ್ತು ಎಂಡಿಎಂಎ ಅನ್ನುಬೆಂಗಳೂರಿನಿಂದ ಕಾಸರಗೋಡಿಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಭಾನುವಾರ ಕೊಣಾಜೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಾಸರಗೋಡಿನ ಶಫೀಕ್‌‌ ಹಾಗೂ ಅಲ್ತಾಫ್‌‌ ಎಂದು ಗುರುತಿಸಲಾಗಿದೆ. ಮಂಜನಾಡಿ ಗ್ರಾಮದ ನಾಟೆಕಲ್‌‌‌ ವಿಜಯನಗರ ಎಂಬಲ್ಲಿ ಪಿಎಸ್‌‌ಐ ಮಲ್ಲಿಕಾರ್ಜುನ ಬಿರದಾರ ಹಾಗೂ ಸಿಬ್ಬಂದಿಗಳೂ ವೇಳೆ ನಾಟೆಕಲ್‌ ಕಡೆಯಿಂದ ಬಂದ ಬಿಳಿ ಬಣ್ಣ ಸ್ವಿಫ್ಟ್‌‌‌‌ ಕಾರನ್ನು ನಿಲ್ಲಿಸಿ ತಪಾಸಣೆ ಮಾಡಿದ್ದು, ಈ ವೇಳೆ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ವಿಚಾರಿಸಿದ ವೇಳೆ ಬೆಂಗಳೂರಿನ ಕಮ್ಮನಹಳ್ಳಿ ಎಂಬಲ್ಲಿಂದ […]

ಎಂಡಿಎಂಎ ಸಿಂಥೆಟಿಕ್ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ವಿದ್ಯಾರ್ಥಿ ಸಹಿತ ಇಬ್ಬರ ಬಂಧನ

Friday, June 4th, 2021
MDMA

  ಮಂಗಳೂರು : ಕಾರಿನಲ್ಲಿ ಅಕ್ರಮವಾಗಿ ಎಂಡಿಎಂಎ ಸಿಂಥೆಟಿಕ್ ಮಾದಕ ದ್ರವ್ಯವನ್ನು ಮಂಗಳೂರು ಹಾಗೂ ಕೇರಳದಲ್ಲಿ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದ ಕೇರಳ ಮೂಲದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 170 ಗ್ರಾಂ ತೂಕದ 10,20,000 ರೂ. ಮೌಲ್ಯದ ಎಂಡಿಎಂಎ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಈ ಬಗ್ಗೆ ವಿವರಿಸಿ ಮಂಗಳೂರು ನಗರದಲ್ಲೇ ಪ್ರಥಮ ಬಾರಿಗೆ ಇಷ್ಟೊಂದು ಪ್ರಮಾಣದ ಎಂಡಿಎಂಎ ಡ್ರಗ್ಸ್ ಮೊದಲ ಬಾರಿಗೆ ಪತ್ತೆಯಾಗಿದೆ. ಮಂಜೇಶ್ವರ ಉಪ್ಪಳ ಗೇಟ್ ಬಳಿ ನಿವಾಸಿ ಮುಹಮ್ಮದ್ ಮುನಾಫ್, ಮುಹಮ್ಮದ್ […]

ಮಣಿಪಾಲ : ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿ ಬಂಧನ

Thursday, October 15th, 2020
Fazal

ಉಡುಪಿ, : ಮಣಿಪಾಲದಲ್ಲಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯೋರ್ವನನ್ನು ಬಂಧಿಸುವಲ್ಲಿ ಉಡುಪಿ  ಪೊಲೀಸರು ಯಶಸ್ವಿಯಾಗಿದ್ದಾರೆ. ಅಕ್ರಮ ದಂಧೆಯಲ್ಲಿ ತೊಡಗಿದ ವ್ಯಕ್ತಿಯನ್ನು ಉಡುಪಿ ತಾಲೂಕಿನ ಬ್ರಹ್ಮಾವರದ ಮಹಮ್ಮದ್ ಫಝಲ್ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಆರೋಪಿ ಮಣಿಪಾಲದ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲೆಂದು ತಂದಿದ್ದ ನಿಷೇಧಿತ ಎಂಡಿಎಂಎ ಮಾತ್ರೆಗಳು, ಬ್ರೌನ್ ಶುಗರ್ ಪತ್ತೆಯಾಗಿದ್ದು ಅವುಗಳನ್ನು ಪೊಲೀಸರು ವಶಪಡಿಸಿಕೊಂದಿದ್ದಾರೆ. ಅಲ್ಲದೇ ಮಾರಾಟ ಸಂವಹನಕ್ಕೆಂದು ಬಳಸಲಾಗುತ್ತಿದ್ದ ಎರಡು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾದ ಡ್ರಗ್ಸ್ ಹಾಗೂ ಸೊತ್ತುಗಳ ಅಂದಾಜು ಮೌಲ್ಯ […]

ಮೂವರು ಡ್ರಗ್ಸ್ ಆರೋಪಿಗಳು ಸಿಸಿಬಿ ವಶಕ್ಕೆ

Saturday, October 3rd, 2020
drugs

ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರು ನೈಜೀರಿಯಾದ ಘಾನಾ ಪ್ರಜೆ ಸಹಿತ ಪ್ರಮುಖ ಮೂವರು ಆರೋಪಿಗಳನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ  ಬೆಂಗಳೂರು ಹಾಗೂ ಮುಂಬಯಿಯಿಂದ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಘಾನಾ ರಾಜ್ಯದ ಕುಮಾಸ್‌ ನಿವಾಸಿ ಫ್ರ್ಯಾಂಕ್‌ ಸಂಡೇ ಇಬೆಬುಚಿ (33), ಮಂಗಳೂರಿನ ಕೂಳೂರು ಗುಡ್ಡೆಯಂಗಡಿಯ ಶಮೀನ್‌ ಫೆರ್ನಾಂಡಿಸ್‌ ಯಾನೆ ಸ್ಯಾಮ್‌ (28) ಮತ್ತು ತೊಕ್ಕೊಟು ಹಿದಾಯತ್‌ ನಗರದ ನಿವಾಸಿ ಶಾನ್‌ ನವಾಸ್‌ (34) ಪೊಲೀಸರ ವಶದಲ್ಲಿದ್ದಾರೆ. ಬೆಂಗಳೂರಿನ ಕಟ್ಟಿಗೆನಹಳ್ಳಿಯಲ್ಲಿ ಸುಮಾರು 2 ವರ್ಷಗಳಿಂದ ವಾಸ್ತವ್ಯ ಮಾಡುತ್ತಿದ್ದ ಫ್ರಾಂಕ್‌ ಸಂಡೇ […]

ಬೀಚ್ ಗಳಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರ ಬಂಧನ

Saturday, July 20th, 2019
MDMA

ಮಂಗಳೂರು : ಬೀಚ್ ಗಳಲ್ಲಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಪಣಂಬೂರು ಪೊಲೀಸರು ಕಾರ್ಯಾಚರಣೆ ನಡೆಸಿ ಶುಕ್ರವಾರ ಮೂವರನ್ನು ಬಂಧಿಸಿದ್ದು ಲಕ್ಷಾಂತರ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಉಳ್ಳಾಲ ಒಳಪೇಟೆಯ ಅಬೂಬಕ್ಕರ್‌ ಮಿಸ್ಭಾ (24), ಸೋಮೇಶ್ವರದ ಪೆರ್ಮನ್ನೂರು ಗ್ರಾಮ ಶಬ್ಬೀರ್‌ ಅಹಮ್ಮದ್‌(27) , ಉಳ್ಳಾಲದ ಶಿಹಾಬ್‌ ಅಬ್ದುಲ್‌ ರಝಾಕ್ (27)  ಬಂಧಿತ ಆರೋಪಿಗಳು. ಬಂಧಿತರಿಂದ 80 ಮೌಲ್ಯದ 16.45 ಗ್ರಾಂ ತೂಕದ ಎಂಡಿಎಂಎ, 25000 ರೂ ಮೌಲ್ಯದ ಸ್ಕೂಟರ್, 2 ಸಾವಿರ ಮೌಲ್ಯದ 4 […]