ಲಾಕ್‌ಡೌನ್‌ ಜೂ.30 ರವರೆಗೂ ವಿಸ್ತರಿಸಬೇಕು : ಎಚ್‌.ಡಿ.ರೇವಣ್ಣ

Tuesday, June 1st, 2021
HD Revanna

ಹಾಸನ: ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.5 ಕ್ಕಿಂತ ಕೆಳಗೆ ಇಳಿಯುವರೆಗೂ ಅನ್‌ಲಾಕ್‌ ಮಾಡಕೂಡದು. ರಾಜ್ಯದಲ್ಲಿ ಲಾಕ್‌ಡೌನ್‌ ಜೂ.30 ರವರೆಗೂ ವಿಸ್ತರಿಸಬೇಕು ಎಂದು ಜೆಡಿಎಸ್‌ ಮುಖಂಡ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್‌.ಡಿ.ರೇವಣ್ಣ,  ಕೆಲವು ಸಚಿವರಿಗೆ ಕೊರೊನಾ ದುಷ್ಪರಿಣಾಮದ ವಾಸ್ತವವೇ ಗೊತ್ತಾಗುತ್ತಿಲ್ಲ. ಹಾಗಾಗಿ ಲಾಕ್‌ಡೌನ್‌ ತೆರವುಗೊಳಿಸಬೇಕು ಎಂದು ಹೇಳುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕೆಲವು ಸಚಿವರಿಗೆ ಕಲೆಕ್ಷನ್‌ ಕಡಿಮೆಯಾಗಿರಬಹುದು. ಹಾಗಾಗಿ ಲಾಕ್‌ ಡೌನ್‌ ತೆರವಿಗೆ ಮುಂದಾಗಿರಬಹುದು ಎಂದು  ಲೇವಡಿ ಮಾಡಿದರು. ರಾಜ್ಯದಲ್ಲಿ ಕೊರೊನಾದಿಂದ 25 ಸಾವಿರಕ್ಕೂ ಹೆಚ್ಚು ಜನರು […]

ಕಚಡಾ ನನ್ ಮಕ್ಳು..” ಎಂದು ಪತ್ರಕರ್ತರನ್ನು ನಿಂದಿಸಿದ ಎಚ್.ಡಿ.ರೇವಣ್ಣ

Monday, July 15th, 2019
HD-Revanna

ಮಂಗಳೂರು  : ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರಕಾರ ಉಳಿಸಿಕೊಳ್ಳಲು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು  ದೇವಸ್ಥಾನ ಸುತ್ತುವುದನ್ನು ಕವರೇಜ್ ಮಾಡಲು ಹೋದ  ಪತ್ರಕರ್ತರನ್ನು ಮತ್ತು ಛಾಯಾಗ್ರಾಹಕರನ್ನು ಕಚಡಾ ನನ್ ಮಕ್ಳು..”  ಎಂದು ನಿಂದಿಸಿ ಪತ್ರಕರ್ತರಲ್ಲಿದ್ದ ಆ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಭದ್ರತಾ ಸಿಬ್ಬಂದಿಗಳ ಮೂಲಕ ಡಿಲೀಟ್ ಮಾಡಿಸಿದ  ಘಟನೆ  ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ  ಭಾನುವಾರ ನಡೆದಿದೆ ಭಾನುವಾರ ಕೊಲ್ಲೂರು, ಆನೆಗುಡ್ಡೆ, ಹಟ್ಟಿಯಂಗಡಿ ಸೇರಿದಂತೆ ಕಟೀಲು ದೇವಳಗಳಿಗೆ ಭೇಟಿ ನೀಡಿದ್ದಾರೆ.  ಸಂಜೆ 03.20 ಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ […]

ಶಿರಾಡಿ ಘಾಟ್ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ: ಯು.ಟಿ.ಖಾದರ್

Monday, July 16th, 2018
kader-meeting

ಮಂಗಳೂರು: ಕಾಂಕ್ರೀಟ್ ರಸ್ತೆ ಕಾಮಗಾರಿ ಬಳಿಕ ಶಿರಾಡಿ ಘಾಟ್ ಮಾರ್ಗ ವಾಹನಗಳಿಗೆ ಮುಕ್ತವಾಗಿದೆ. ಆದರೆ, ಲಘು ವಾಹನಗಳು ಮಾತ್ರ ಸಂಚಾರ ನಡೆಸಬಹುದು. ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅಭಿವೃದ್ಧಿಗೊಂಡಿರುವ ಶಿರಾಢಿ ಘಾಟ್ ರಸ್ತೆಯನ್ನು ಉದ್ಘಾಟಿಸಿದ್ದಾರೆ. ಭಾನುವಾರ ಮಧ್ಯಾಹ್ನ 3ಗಂಟೆಯಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮೊದಲ ದಿನ ಸಾವಿರಕ್ಕೂ ಅಧಿಕ ವಾಹನಗಳು ಕಾಂಕ್ರೀಟ್‌ರಸ್ತೆಯಲ್ಲಿ ಸಂಚಾರ ನಡೆಸಿದವು. ಮೊದಲ ದಿನ ಕಾರು, ಬಸ್, ಕಂಟೈನರ್ ಸೇರಿದಂತೆ ಎಲ್ಲಾ ವಿಧದ ವಾಹನಕ್ಕೆ ಅವಕಾಶ […]

ಚಾರ್ಮಾಡಿ ರಸ್ತೆಯನ್ನು ವೀಕ್ಷಿಸಿದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ

Tuesday, June 19th, 2018
Revanna

ಮಂಗಳೂರು : ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಮಂಗಳವಾರ ಮಳೆಯ ನಡುವೆಯೇ ಚಾರ್ಮಾಡಿ ರಸ್ತೆಯನ್ನು ವೀಕ್ಷಿಸಿ ಅಧಿಕಾರಿಗಳಿಗೆ ಕಾಮಗಾರಿಗಳನ್ನು ಶೀಘ್ರವೇ ಮುಗಿಸಬೇಕು ಎಂದು ಸೂಚನೆ ನೀಡಿದರು. ರಸ್ತೆ ವೀಕ್ಷಣೆ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಳ್ತಂಗಡಿಯ ಶಾಂತಿವನದಲ್ಲಿ ಭೇಟಿ ಮಾಡಿದರು. ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಇಬ್ಬರು ನಾಯಕರು ಭೇಟಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧರ್ಮಸ್ಥಳದ ಶಾಂತಿವನದಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ಖಾತೆ ಹಂಚಿಕೆ ಮುಕ್ತಾಯ…ಇನ್ನು ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ!

Wednesday, June 13th, 2018
kumarswamy

ಬೆಂಗಳೂರು : ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಒಂದು ಹಂತಕ್ಕೆ ಮುಗಿದಿದೆ. ಇದೀಗ ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ನೀಡಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮುಂದಾಗಿದ್ದಾರೆ. ಈ ನಡುವೆ ಕೆಲ ಸಚಿವರ ಅಸಮಾಧಾನದ ಹಿನ್ನೆಲೆಯಲ್ಲಿ, ಖಾತೆಗಳನ್ನು ಬದಲಾವಣೆ ಮಾಡಲು ಸಿಎಂ ಚಿಂತನೆ ನಡೆಸಿದ್ದಾರೆ. ಸಚಿವರ ಜೊತೆ ಮಾತುಕತೆ ನಡೆಸಿದ ಬಳಿಕವೇ ಸಿಎಂ ಖಾತೆ ಬದಲಾವಣೆಗೆ ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಉಳಿದಂತೆ ಬೇರೆ ಯಾವುದೇ ಸಚಿವರ ಖಾತೆಗಳಲ್ಲಿ ಯಾವುದೇ […]