ಲಾಕ್ ಡೌನ್ ವೇಳೆ ಎಟಿಎಂ ದೋಚಿದ ಖದೀಮರು

Monday, May 24th, 2021
ATM

ಮಂಡ್ಯ : ಎಟಿಎಂ ಕೇಂದ್ರದಲ್ಲಿ ಕಾವಲುಗಾರ ಇಲ್ಲದಿರುವುದರ ಅವಕಾಶವನ್ನು ಉಪಯೋಗಿಸಿಕೊಂಡಿರುವ ದುಷ್ಕರ್ಮಿಗಳು ಗ್ಯಾಸ್ ಕಟ್ಟರ್ ನಿಂದ ಎಟಿಎಂ ಯಂತ್ರವನ್ನು ತುಂಡರಿಸಿ ಸುಮಾರು 17.50 ಲಕ್ಷಕ್ಕೂ ಹೆಚ್ಚಿನ ಹಣ ದೋಚಿರುವ ಘಟನೆ ಮದ್ದೂರು ಪಟ್ಟಣದ ಕೊಲ್ಲಿ ಸರ್ಕಲ್ ನಲ್ಲಿ ನಡೆದಿದೆ. ತಡರಾತ್ರಿ ನಾಲ್ಕರಿಂದ ಐದು ಮಂದಿ ದುಷ್ಕರ್ಮಿಗಳು ಮೊದಲಿಗೆ ಎಸ್.ಬಿ.ಐ ಎಟಿಎಂ ಕೇಂದ್ರದ ಮುಂಭಾಗ ಇರುವ ಸಿ‌ಸಿಟಿವಿ ಕ್ಯಾಮೆರಾಗಳನ್ನು ಗ್ಯಾಸ್ ಕಟ್ಟರ್ ನಿಂದ ಸುಟ್ಟು ಹಾಕಿ ನಂತರ ಒಳ ನುಗ್ಗಿ ಎಟಿಎಂ ಯಂತ್ರವನ್ನು ಗ್ಯಾಸ್ ಕಟ್ಟರ್ ನಿಂದ ತುಂಡರಿಸಿ […]

ಎಟಿಎಂ ಹಣ ದೋಚಿ ಐಶಾರಾಮಿ ಜೀವನ ನಡೆಸುತ್ತಿದ್ದ 3 ವಿದೇಶಿಯರು ಸೇರಿ ಐವರು ಖತರ್ನಾಕ್ ಕಳ್ಳರ ಬಂಧನ

Tuesday, November 5th, 2019
rama-nagara

ರಾಮನಗರ : ನಕಲಿ ಎಟಿಎಂ ಬಳಸಿ ಹಣ ದೋಚಿ ಐಶಾರಾಮಿ ಜೀವನ ನಡೆಸುತ್ತಿದ್ದ ಮೂವರು ವಿದೇಶಿಯರು ಸೇರಿ ಐವರು ಖತರ್ನಾಕ್ ಕಳ್ಳರನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ. ನೈಜಿರಿಯಾದ ಎರೆಹ್ಮೆನ್ ಸ್ಮಾರ್ಟ್ ಗೋಡ್ಸನ್ (33), ಉಡೋ ಕ್ರಿಸ್ಟಿಯಾನ್ (26), ತಾಂಜಾನಿಯಾದ ಮಥಿಯಾಸ್ ಎ ಶ್ವಾವಾ (32), ಮಹಾರಾಷ್ಟ್ರದ ಪುಣೆಯ ಪ್ರಶಾಂತ್ ಸುರೇಶ್ ಸವಂತ್ (30) ಹಾಗೂ ಅವಿನಾಶ್ ವಸಂತ್ ರನ್ಸೂರೆ (33) ಬಂಧಿತ ಆರೋಪಿಗಳು. ಬಂಧಿತರಿಂದ 1,66,930 ರೂ. ನಗದು ಸೇರಿದಂತೆ ಕೃತ್ಯಕ್ಕೆ ಬಳಸುತ್ತಿದ್ದ ವಸ್ತುಗಳನ್ನು ಪೊಲೀಸರು ವಶಕ್ಕೆ […]

ಯೆಸ್‌ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಅನಿತಾ ಪೈ ರವರು ನೇಮಕ

Friday, October 11th, 2019
anitha-pai

ಮಂಗಳೂರು : ಖಾಸಗಿ ವಲಯದ ಮುಂಚೂಣಿ ಬ್ಯಾಂಕ್‌ ಆಗಿರುವ ಯೆಸ್‌ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಮಂಗಳೂರು ಮೂಲದ ಅನಿತಾ ಪೈ ಅವರು ನೇಮಕಗೊಂಡಿದ್ದಾರೆ. ಬ್ಯಾಂಕಿಂಗ್‌ ಮತ್ತು ವಿತ್ತೀಯ ಕ್ಷೇತ್ರದಲ್ಲಿ ಸುದೀರ್ಘ‌ 29 ವರ್ಷಗಳ ಅನುಭವ ಹೊಂದಿರುವ ಅವರು ಈ ಹಿಂದೆ ರೀಟೇಲ್‌ ಮತ್ತು ಕಾರ್ಪೊರೆಟ್‌ ನಿರ್ವಹಣೆ, ಎಟಿಎಂ ಮತ್ತು ಬ್ರಾಂಚ್ ಬ್ಯಾಂಕಿಂಗ್‌ ಸೇವೆ, ಗ್ರಾಹಕ ಸೇವೆ ಮತ್ತು ಸೇವಾ ಗುಣಮಟ್ಟ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಸಿಒಒ ಆಗಿ ಅವರು ಬ್ಯಾಂಕಿನ ಒಟ್ಟು ನಿರ್ವಹಣೆ ಮತ್ತು […]

ಎಟಿಎಂಯೊಂದರಲ್ಲಿ ಇಲಿಗಳು ಸರ್ಜಿಕಲ್‌‌ ಸ್ಟ್ರೈಕ್ಸ್‌‌‌..ಸುಮಾರು 12 ಲಕ್ಷ ರೂಪಾಯಿ ಮೌಲ್ಯದ ನೋಟುಗಳು ಹಾನಿ!

Tuesday, June 19th, 2018
SBI-ATM

ಗುವಾಹತಿ: ಒಂದು ಸಾವಿರ ಮತ್ತು ಐನೂರು ನೋಟುಗಳ ಬ್ಯಾನ್‌ ಬಳಿಕ ಜನತೆಗೆ ಎಟಿಎಂಗಳಲ್ಲಿ ಇನ್ನೂ ಸರಿಯಾಗಿ ಹಣ ಸಿಗುತ್ತಿಲ್ಲ. ದೇಶದ ಅನೇಕ ಕಡೆ ಟಿಎಂಟಿಗಳ ಮುಂದೆ ನಾಗರಿಕರು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಇದೆ. ಆದರೆ, ಈ ನಡುವೆ ಅಸ್ಸೋಂನ ಎಟಿಎಂಯೊಂದರಲ್ಲಿ ಇಲಿಗಳು ಸರ್ಜಿಕಲ್‌‌ ಸ್ಟ್ರೈಕ್ಸ್‌‌‌ ನಡೆಸಿವೆ. ಹೌದು, ತಿನ್ಸುಕಿಯಾ ಜಿಲ್ಲೆಯಲ್ಲಿ ಎಸ್‌ಬಿಐಗೆ ಸೇರಿದ ಎಟಿಎಂನಲ್ಲಿದ್ದ ಸುಮಾರು 12 ಲಕ್ಷ ರೂಪಾಯಿ ಮೌಲ್ಯದ ನೋಟುಗಳನ್ನು ಇಲಿಗಳು ಹಾನಿ ಮಾಡಿವೆ. ಎಲ್ಲಾ ನೋಟುಗಳ ಹೊಸ ಐನೂರು ಹಾಗೂ ಎರಡು ಸಾವಿರ […]

ಎಟಿಎಂಗಳಲ್ಲಿ ಸಿಗದ ಹಣ: ಕೇಂದ್ರ ಸಚಿವ ಜೇಟ್ಲಿ ಹೇಳಿದ್ದೇನು?

Tuesday, April 17th, 2018
arun-jetly

ನವದೆಹಲಿ: ಎಟಿಎಂಗಳಲ್ಲಿ ಎದುರಾಗಿರುವ ಹಣದ ಸಮಸ್ಯೆ ಬಗ್ಗೆ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಪ್ರತಿಕ್ರಿಯಿಸಿದ್ದು, ಇದೊಂದು ತಾತ್ಕಾಲಿಕ ಕೊರತೆ ಎಂದಿದ್ದಾರೆ. ದೇಶದ ಹಲವು ಭಾಗಗಳಲ್ಲಿ ಎಟಿಎಂಗಳಲ್ಲಿ ಹಣ ಸಿಗದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ದೆಹಲಿ, ಉತ್ತರ ಪ್ರದೇಶ, ಗುಜರಾತ್‌, ಬಿಹಾರ, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಲ್ಲಿ ಹಣದ ಸಮಸ್ಯೆ ಎದುರಾಗಿದ್ದು, ಎಟಿಎಂಗಳಲ್ಲಿ ‘ನೋ ಕ್ಯಾಶ್‌’ ಇಲ್ಲವೇ, ‘ನಾಟ್‌ ವರ್ಕಿಂಗ್‌’ ಬೋರ್ಡ್‌ಗಳನ್ನು ಹಾಕಲಾಗಿದೆ. ಇದೀಗ ಈ ಕುರಿತಂತೆ ಪ್ರತಿಕ್ರಿಯಿಸಿರುವ ಅರುಣ್‌ ಜೇಟ್ಲಿ, ದೇಶದಲ್ಲಿನ ಹಣ ಕೊರತೆ ಬಗ್ಗೆ […]

ಕೆಲಸಕ್ಕಿದ್ದ ಮನೆಯಿಂದ ಎಟಿಎಂ ಕದ್ದು 3.59 ಲಕ್ಷ ಎಗರಿಸಿದ್ದ ದಂಪತಿ ಅರೆಸ್ಟ್‌‌‌

Tuesday, July 4th, 2017
Fathima Selvam

ಮಂಗಳೂರು : ಫಳ್ನೀರ್ ರಸ್ತೆಯ ಮನೆಯೊಂದರಲ್ಲಿ  ಕೆಲಸಕ್ಕಿದ್ದ  ತಮಿಳು ಮೂಲದ ಗಂಡ ಹೆಂಡತಿ ಎಟಿಎಂ ಹಾಗೂ ಪಾಸ್‌ವರ್ಡ್‌ ಬರೆದಿಟ್ಟಿದ್ದ ಡೈರಿ ಕದ್ದು ಸುಮಾರು 3.59 ಲಕ್ಷ ನಗದು ಡ್ರಾ ಮಾಡಿ ತಲೆ ಮರೆಸಿಕೊಂಡಿದ್ದ ಪ್ರಕರಣಕ್ಕೆ ಸಂಭಂದಿಸಿದಂತೆ ದಂಪತಿಯನ್ನು ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ತಮಿಳುನಾಡು ವೆಲ್ಲೂರಿನ ಫಾತಿಮಾ (28) ಹಾಗೂ ಆಕೆಯ ಪತಿ ಸೆಲ್ವಂ (31) ಎಂದು ಗುರುತಿಸಲಾಗಿದೆ. ಬಂಧಿತರಿಂದ 2.20 ಲಕ್ಷ ನಗದು ಹಾಗೂ ಡ್ರಾ ಮಾಡಿದ ಹಣದಿಂದ ಖರೀದಿಸಿದ 20 ಗ್ರಾಂ ತೂಕದ ಚಿನ್ನದ ಸರವನ್ನು ವಶಕ್ಕೆ […]

ಎಟಿಎಂ ಹಣ ಎಗರಿಸಿದ ಚಾಲಕಿ ಕಳ್ಳರ ತಂಡ, ಗಂಟೆಯೊಳಗೆ ಹಿಡಿದ ಪೊಲೀಸರು

Friday, December 16th, 2011
ATM Thieves

ಮಂಗಳೂರು : ನಗರದ ಹಂಪನಕಟ್ಟೆಯ ವಿಲಾಗ್ರೀಸ್ ಬಳಿ ಕೆಎಂಸಿ ಡೆಂಟಲ್‌ ಕಾಲೇಜು ಕಟ್ಟಡದಲ್ಲಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಎಟಿಎಂ ಯಂತ್ರಕ್ಕೆ ನಗದು ತುಂಬಿಸಲು ಬಂದಿದ್ದ ಪ್ರೋ ಇಂಟರ್ಯಾಕ್ಟಿವ್‌ ಸರ್ವೀಸಸ್‌ನ ಆಮ್ನಿ ವಾಹನದಿಂದ ಹಣವಿದ್ದ ಪೆಟ್ಟಿಗೆಯನ್ನು ಗುರುವಾರ ಮಧ್ಯಾಹ್ನ ಸುಮಾರು 12.15ರ ವೇಳೆಗೆ ಕಳ್ಳರು ಅಪಹರಿಸಿ ಪರಾರಿಯಾಗಿದ್ದಾರೆ. ಚಾಲಕಿ ಕಳ್ಳರ ತಂಡ ಎಟಿಎಂ ಬಳಿ ನಿಲ್ಲಿಸಲಾಗಿದ್ದ ವಾಹನದಲ್ಲಿ ಚಾಲಕ ಮಾತ್ರ ಇರುವುದನ್ನು ಗಮನಿಸಿ ಅಲ್ಲಿಗೆ ಬಂದ ತಂಡದ ವ್ಯಕ್ತಿಯೊಬ್ಬ ಹತ್ತು ರೂ.ಗಳ ಸುಮಾರು 25 ನೋಟುಗಳನ್ನು ಕಾರಿನ […]