ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠೀ, ಬ್ರಹ್ಮರಥೋತ್ಸವ

Sunday, December 20th, 2020
Kukke subrahmanya

ಸುಬ್ರಹ್ಮಣ್ಯ : ದಕ್ಷಿಣ ಭಾರತದ ಪ್ರಮುಖ ನಾಗ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠೀ ಮಹೊತ್ಸವ ಸಂಪನ್ನಗೊಂಡಿದೆ. ದೇವಳದ ರಾಜಮಾರ್ಗದಲ್ಲಿ ಯಶಸ್ವಿನಿ ಅನೆಯೊಂದಿಗೆ ಸಂಭ್ರಮದ ಬ್ರಹ್ಮರಥೋತ್ಸವ ಜರಗಿತು.ಕೋಟ್ಯಾಂತರ ಭಕ್ತರ ಅರಾಧ್ಯ ದೈವ ಸುಬ್ರಹ್ಮಣ್ಯ ಸ್ವಾಮಿ ಮುಂಜಾನೆಯ 7.25 ರ ಧನು ಲಗ್ನ ಸುಮುಹೂರ್ತದಲ್ಲಿ ಬ್ರಹ್ಮರಥದಲ್ಲಿ ರಥಾರೂಢನಾಗಿ ಭಕ್ತರಿಗೆ ದರ್ಶನ ನೀಡಿದ್ದಾನೆ. ಕೋವಿಡ್ ಕಾರಣದಿಂದಾಗಿ ಪರ ಊರಿನ ಭಕ್ತರಿಗೆ ಪ್ರವೇಶ ನಿರ್ಬಂನಿರ್ಬಂಧವಿದ್ದರೂ ಕೂಡಾ ಅಪಾರ ಸಂಖ್ಯೆಯಲ್ಲಿ ಭಕ್ತರು  ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮ ರಥೋತ್ಸವವನ್ನು ನೋಡಿ ಕಣ್ತುಂಬಿಕೊಂಡರು. […]

ಕುಕ್ಕೆಚಂಪಾಷಷ್ಠಿ ಜಾತ್ರೋತ್ಸವ: ಎಡೆಸ್ನಾನ

Friday, November 24th, 2017
edesnana

ಸುಬ್ರಹಣ್ಯ: ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಚೌತಿಯ ದಿನವಾದ ಬುಧವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ೯೪ಮಂದಿ ಎಡೆಸ್ನಾನ ಸೇವೆಗೈದರು. ಗೋವು ಸೇವಿಸಿದ ಎಲೆಯ ಮೇಲೆ ಭಕ್ತರು ಉರುಳು ಸೇವೆ ನಡೆಸುವ ಮೂಲಕ ಚಂಪಾಷಷ್ಠಿಯ ಜಾತ್ರೋತ್ಸವದ ಚೌತಿಯ ದಿನದಂದು ಎಡೆಸ್ನಾನ ಹರಕೆ ಸೇವೆ ಸಲ್ಲಿಸಿದರು. ಧಾರ್ಮಿಕ ದತ್ತಿ ಇಲಾಖೆಯ ಶೈವಾಗಮ ಪಂಡಿತ ವೇದಮೂರ್ತಿ ಡಾ.ಎಚ್.ರಾಜ್‌ಗೋಪಾಲ್ ಮತ್ತು ಆಗಮ ಪಂಡಿತ ಪ್ರೊ.ಶಿವಕುಮಾರ್ ಅವರು ಎಡೆಸ್ನಾನದ ಕುರಿತು ಮಾರ್ಗದರ್ಶನ ನೀಡಿದರು. ಅದರಂತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಧ್ಯಾಹ್ನ ಮಹಾಪೂಜೆ ಬಳಿಕ […]

ಉಡುಪಿ ಕೃಷ್ಣ ಮಠದಲ್ಲಿ ಮಡೆಸ್ನಾನದ ಬದಲು ಎಡೆಸ್ನಾನ ಸಂಪ್ರದಾಯ

Tuesday, December 6th, 2016
Ede-snana

ಉಡುಪಿ: ಮಡೆಸ್ನಾನ ಮತ್ತು ಎಡೆಸ್ನಾನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವಾಗಲೇ ಉಡುಪಿಯಲ್ಲಿ ಮಡೆಸ್ನಾನದ ಬದಲು ಎಡೆಸ್ನಾನ ಸಂಪ್ರದಾಯ ಆರಂಭವಾಗಿದೆ. ಇಲ್ಲಿನ ಶ್ರೀ ಕೃಷ್ಣ ಮಠದ ಸುಬ್ರಹ್ಮಣ್ಯ ಗುಡಿಯ ಮುಂದೆ ಏಳು ಮಂದಿ ಭಕ್ತರು ಎಡೆಸ್ನಾನ ಮಾಡಿ ಹರಕೆ ತೀರಿಸಿದರು. 500 ವರ್ಷಗಳ ಹಿಂದಿನ ಸಂಪ್ರದಾಯವನ್ನು ಮುರಿದ ಪೇಜಾವರ ಶ್ರೀಗಳು ತಮ್ಮ ಪರ್ಯಾಯದಲ್ಲಿ ಮೊದಲ ಬಾರಿಗೆ ಐತಿಹಾಸಿಕ ನಿರ್ಧಾರ ಕೈಗೊಂಡು ಮಡೆಸ್ನಾನಕ್ಕೆ ತಿಲಾಂಜಲಿ ಇಟ್ಟರು. ಮಡೆಸ್ನಾನ ಮತ್ತು ಎಡೆಸ್ನಾನದ ಬಗ್ಗೆ ಅವಿಭಜಿತ ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆ, ಪ್ರತಿಭಟನೆಗಳು ನಡೆದಿವೆ. […]

ಮಡೆಸ್ನಾನ: ನಿಡುಮಾಮಿಡಿ ಸ್ವಾಮೀಜಿ ದ್ವಂದ್ವ ನಿಲುವು ಶ್ರೀಗಳಿಗೆ ಶೋಭೆ ತರುವಂತದಲ್ಲ ಪೇಜಾವರ ಶ್ರೀ

Thursday, December 27th, 2012
ಮಡೆಸ್ನಾನ: ನಿಡುಮಾಮಿಡಿ ಸ್ವಾಮೀಜಿ ದ್ವಂದ್ವ ನಿಲುವು ಶ್ರೀಗಳಿಗೆ ಶೋಭೆ ತರುವಂತದಲ್ಲ ಪೇಜಾವರ ಶ್ರೀ

ಮಂಗಳೂರು : ಸುಬ್ರಹ್ಮಣ್ಯ ದೇವಸ್ಥಾನದಲ್ಲಿನ ಮಡೆಸ್ನಾನಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಮಡೆಸ್ನಾನಕ್ಕೆ ಬದಲಾಗಿ ಎಡೆಸ್ನಾನ ಜಾರಿಗೊಳಿಸುವಂತೆ ಸಲಹೆ ನೀಡಿದಾಗ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದ ನಿಡುಮಾಮಿಡಿ ಸ್ವಾಮೀಜಿ, ಇದೀಗ ಸಾರ್ವಜನಿಕ ಸಭೆಗಳಲ್ಲಿ ನಮ್ಮನ್ನು ಅವಮಾನಿಸುವಂತಹ ಮಾತುಗಳನ್ನಾಡಿರುವುದು ಶ್ರೀಗಳಿಗೆ ಶೋಭೆ ತರುವಂತದಲ್ಲ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಆರೋಪಿಸಿದರು. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು ಈ ಆಚರಣೆಯಿಂದ ಜನರ ಭಾವನೆಗಳಿಗೆ ಧಕ್ಕೆ ಬರುವುದಾದರೆ ಅದನ್ನು ನಿಲ್ಲಿಸಿ ಎಂಜಲೆಲೆಯ ಬದಲಿಗೆ ದೇವರ […]