ಹೊಟ್ಟೆಯ ಹಸಿವನ್ನು ಆಹಾರ ನೀಗಿಸಿದರೆ – ಜ್ಞಾನದ ಹಸಿವನ್ನು ಭಜನೆ ನೀಗಿಸುವುದು – ಕಲ್ಕೂರ

Sunday, November 28th, 2021
Kalkura

ಮಂಗಳೂರು  : ನಾವು ತಿನ್ನುವ ಆಹಾರ ನಮ್ಮ ಹಸಿವನ್ನು ನೀಗಿಸಿದರೆ, ಭಜನಾ ಸಂಕೀರ್ತನೆಯು ಜ್ಞಾನದ ಹಸಿವನ್ನು ನೀಗಿಸುವುದು. ಕೊರೋನಾ ತಡೆಗಟ್ಟುವಲ್ಲಿ ಮುಖಗವಸು ರಕ್ಷಣೆ ನೀಡಿದಂತೆ ವಿಕೃತ ಮನಸ್ಸಿನಿಂದ ರಕ್ಷಿಸಿಕೊಳ್ಳಲು ‘ಭಜನಾ ಸಂಕೀರ್ತನೆ’ಯೂ ಒಂದು ಸಾತ್ವಿಕವಾದ ರಕ್ಷಾ ಕವಚವಿದ್ದಂತೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ನುಡಿದರು. ಕದ್ರಿ ಕಂಬಳ, ಮಲ್ಲಿಕಾ ಬಡಾವಣೆಯ, ಮಂಜುಪ್ರಾಸಾದ, ವಾದಿರಾಜ ಮಂಟಪದ ಪೇಜಾವರ ವಿಶ್ವೇಶತೀರ್ಥ ವೇದಿಕೆಯಲ್ಲಿ ನಗರದ […]

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರದೀಪ ಕುಮಾರ ಕಲ್ಕೂರ ರಿಗೆ ಸನ್ಮಾನ

Monday, September 20th, 2021
Kalkura

ಬೆಂಗಳೂರು  : ಕನ್ನಡ ಸಾಹಿತ್ಯ ಪರಿಷತ್ತಿನ ಚರಿತ್ರೆಯಲ್ಲೇ ಪ್ರಪ್ರಥಮವಾಗಿ ಸತತ 5 ಬಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಸಮರ್ಥ ಸೇವೆ ಸಲ್ಲಿಸುವ ಮೂಲಕ ಸರ್ವತ್ರ ಶ್ಲಾಘನೆಗೆ ಪಾತ್ರರಾದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ ಕಲ್ಕೂರ ಅವರನ್ನು ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಬೆಂಗಳೂರಿನ ವಿದ್ಯಾಪೀಠದಲ್ಲಿ ತಮ್ಮ ಚಾತುರ್ಮಾಸ್ಯ ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಿದರು. ಕಲೆ, ಸಾಹಿತ್ಯ, ನಾಡು-ನುಡಿ, ರಾಷ್ಟ್ರಧರ್ಮವನ್ನು ಪಾಲಿಸುವ ಮೂಲಕ ಕನ್ನಡದ ಕಾಯಕದಲ್ಲಿ […]

ವಿಶ್ವಾಸದ ಸ್ವಾವಲಂಬಿ ಬದುಕಿನೊಂದಿಗೆ ಸಾಧಕರಾಗೋಣ : ಕಲ್ಕೂರ

Friday, March 6th, 2020
kalkura

ಮಂಗಳೂರು : ಬದುಕಿನ ಎಲ್ಲ ನೆಲೆಯಲ್ಲೂ ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ, ಧಾರ್ಮಿಕವಾಗಿ ಸರ್ವರೀತಿಯಲ್ಲೂ ಸ್ವಾತಂತ್ರ್ಯ ಹೊಂದಿರುವ ವಿಶಿಷ್ಠವಾದ ದೇಶ ನಮ್ಮದು. ಆದುದರಿಂದ ವಿಶ್ವಾಸದಿಂದ ಸ್ವಾವಲಂಬಿ ಬದುಕನ್ನು ನಡೆಸುತ್ತಾಯಾವ ಸ್ತರದಲ್ಲೂ ಇಲ್ಲಿ ಓರ್ವ ಮಹಿಳೆಯೂ ಸಾಧಕಿಯಾಗಲು ಸಾಧ್ಯವಿದೆ ಎಂದು ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಹೇಳಿದರು. ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಲ್ಮಠ ಇದರ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ಜ್ಞಾನ ಸಂಪಾದಿಸುವುದರ ಜೊತೆ ಜೊತೆಗೆ ಜೀವನಾನುಭವವನ್ನು […]

ಯುವ ಜನತೆಯು ಸಾಹಿತ್ಯದಲ್ಲಿ ಅಭಿರುಚಿ ಮೂಡಿಸಿಕೊಳ್ಳಬೇಕು

Friday, February 28th, 2020
sahitya

ಮಂಗಳೂರು : ಯುವ ಜನತೆಯು ಸಾಹಿತ್ಯದಲ್ಲಿ ಅಭಿರುಚಿ ಮೂಡಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ವಿವಿಧ ಸಾಹಿತ್ಯಿಕ ಕಾರ್ಯಕ್ರಮಗಳನ್ನು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅವರ ಮಾರ್ಗದರ್ಶನದೊಂದಿಗೆ ಹಮ್ಮಿಕೊಳ್ಳಲಿದೆ ಎಂದು ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ವಿಜಯಲಕ್ಷ್ಮಿ.ಬಿ. ಶೆಟ್ಟಿ ನುಡಿದರು. ಅವರು ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು. ವಿವಿಧ ದತ್ತಿ ಕಾರ್ಯಕ್ರಮಗಳನ್ನು ವಿವಿಧ ಕಾಲೇಜುಗಳಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. […]

ಎಸ್. ಪ್ರದೀಪ ಕುಮಾರ ಕಲ್ಕೂರ ರವರಿಗೆ ಸಮಾಜ ಭೂಷಣ ಪ್ರಶಸ್ತಿ

Friday, January 17th, 2020
samaja-bhusha

ಉಡುಪಿ : ಸಾಹಿತ್ಯ, ಸಾಮಾಜಿಕ, ಧಾರ್ಮಿಕ, ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಕಳೆದ ಹಲವು ದಶಕಗಳಿಂದ ಸೇವಾ ನಿರತರಾಗಿದ್ದು ಕೊಂಡಿರುವುದಲ್ಲದೆ, ಸತತ 5 ಬಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅನನ್ಯವಾದ ಸಾಧನೆಗೈದಿರುವ ಎಸ್. ಪ್ರದೀಪ ಕುಮಾರ ಕಲ್ಕೂರ ಅವರನ್ನು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಜರಗಿದ ಸಮಾರಂಭದಲ್ಲಿ ಪರ್ಯಾಯ ಪೂರೈಸುತ್ತಿರುವ ಪಲಿಮಾರು ಮಠಾಧೀಶ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು ಸಮಾಜ ಭೂಷಣ ಪ್ರಶಸ್ತಿ ನೀಡಿ ಅಭಿನಂದಿಸಿದರು. ಕಲ್ಕೂರ ಅವರು ಪಲಿಮಾರು ಶ್ರೀಗಳ ಪ್ರರ್ಯಾಯದ ಆರಂಭದಿಂದಲೂ ವಿಶೇಷವಾದ ಸೇವೆಯನ್ನು […]

ಸಾಹಿತ್ಯ ಸಮ್ಮೇಳನ : ಬಹುತ್ವದ ಸಂಸ್ಕೃತಿಯ ಅನಾವರಣ; ಕಲ್ಕೂರ

Saturday, January 11th, 2020
kalkura

ಮಂಗಳೂರು : ತುಳುನಾಡಿನ ಬಹುತ್ವದ ಸಂಸ್ಕೃತಿಯು ಸಾಹಿತ್ಯ ಸಮ್ಮೇಳನದ ಮೂಲಕ ಅನಾವರಣಗೊಳ್ಳಲಿ ಎಂದು ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹೇಳಿದರು. ಜನವರಿ 29ರಂದು ಸಂತ ಆಗ್ನೇಸ್‌ ಕಾಲೇಜಿನಲ್ಲಿ ಜರಗಲಿರುವ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಮುಖ್ಯವಾಗಿ ವಿದ್ಯಾರ್ಥಿಗಳು ಸಾಹಿತ್ಯ ಹಾಗೂ ಸಂಸ್ಕೃತಿಯ ಬಗ್ಗೆ ಹೆಚ್ಚು ಒಲವನ್ನು ತೋರಿಸಬೇಕು. ಈ ನೆಲೆಯಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನವು ಪರಿಣಾಮಕಾರಿಯಾಗಿ ಯಶಸ್ಸನ್ನು ಕಾಣುವಂತಾಗಲೆಂದರು. ಈ ಸಂದರ್ಭ […]

ವಚನಗಳ ಸಾರ ಸಾತ್ವಿಕ ಜೀವನಕ್ಕೆ ಮಾರ್ಗದರ್ಶಿ : ಎಸ್. ಪ್ರದೀಪ ಕುಮಾರ ಕಲ್ಕೂರ

Wednesday, November 27th, 2019
Akka Mahadevi

ಮಂಗಳೂರು : ಅಕ್ಕಮಹಾದೇವಿಯವರು ಬರೆದ ವಚನಗಳ ಸಾರ ನಮ್ಮ ಸಾತ್ವಿಕಜೀವನಕ್ಕೆ ಮಾರ್ಗದರ್ಶಿಯಾಗಿದೆ ಎಂದು ದ.ಕ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ ನುಡಿದರು. ಅವರು ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘ ಏರ್ಪಡಿಸಿದ್ದ 5ನೇ ವರ್ಷದ ವಚನ ಸಂಭ್ರಮ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ವಚನ ಸಾರಗಳನ್ನು ನಾವು ಅರಿತುಕೊಳ್ಳುವುದಷ್ಟೇ ಅಲ್ಲ ಮುಂದಿನ ಪೀಳಿಗೆಗೂ ಇದರ ಮಹತ್ವವನ್ನು ತಿಳಿಸಿ ಹೇಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದ.ಕ. ಇದರ […]