ಏಕನಾಥ ಶೆಟ್ಟಿ ಅವರ ಸಮವಸ್ತ್ರ ಅ. 23ರಂದು ಮನೆಯವರಿಗೆ ಹಸ್ತಾಂತರ

Saturday, October 22nd, 2016
Ekanatha-Shetty

ಬೆಳ್ತಂಗಡಿ: ನಾಪತ್ತೆಯಾದ ಯೋಧ ಏಕನಾಥ ಶೆಟ್ಟಿ ಅವರ ಸಮವಸ್ತ್ರ ಅ. 23ರಂದು ಊರಿಗೆ ಬರಲಿದೆ. ಚೆನ್ನೈಯ ತಾಂಬರಂ ವಾಯುನೆಲೆಯಿಂದ ಅಂಡಮಾನ್‌ ನಿಕೋಬಾರ್‌ಗೆ ಹೊರಟ ಸೇನಾ ವಿಮಾನದಲ್ಲಿದ್ದ 29 ಮಂದಿ ಪೈಕಿ ಯೋಧ ಏಕನಾಥ ಶೆಟ್ಟಿ ಅವರು ಕೂಡ ನಾಪತ್ತೆಯಾಗಿದ್ದರು. ಹುಡುಕಾಟದಲ್ಲಿ ಯಾವುದೇ ಸುಳಿವು ದೊರೆತಿರಲಿಲ್ಲ. ಪರಿಹಾರ ನೀಡುವ ಸಲುವಾಗಿ ಈ ಪ್ರಕರಣದಲ್ಲಿ ಅಷ್ಟೂ ಮಂದಿಯನ್ನು ಸತ್ತಂತೆಯೇ ಎಂದು ಪರಿಗಣಿಸಿ ಆದೇಶ ನೀಡಲಾಗಿತ್ತು. ಏಕನಾಥ ಶೆಟ್ಟಿ ಅವರ ಸಮವಸ್ತ್ರದೊಂದಿಗೆ ಮಿಲಿಟರಿಯವರು ರೈಲಿನಲ್ಲಿ ರವಿವಾರ ಬೆಳಗ್ಗೆ 10.30ಕ್ಕೆ ಮಂಗಳೂರು ತಲುಪಲಿದ್ದಾರೆ. […]

ಯೋಧರ ಮನೆ ಮಂದಿಯ ರಕ್ಷಣೆ ನನ್ನ ಕರ್ತವ್ಯ: ಡಾ| ಜಿ. ಪರಮೇಶ್ವರ್‌

Thursday, July 28th, 2016
Ekanatha-Shetty

ಬೆಳ್ತಂಗಡಿ: ನಾಪತ್ತೆಯಾಗಿರುವ ಸೇನಾ ವಿಮಾನದಲ್ಲಿದ್ದ ಗುರುವಾಯನಕೆರೆಯ ಯೋಧ ಕೆ. ಏಕನಾಥ ಶೆಟ್ಟಿ ಅವರ ಮನೆಗೆ ಗೃಹಸಚಿವ ಡಾ| ಜಿ. ಪರಮೇಶ್ವರ್‌ ದೂರವಾಣಿ ಕರೆ ಮಾಡಿದ್ದಾರೆ. ಯೋಧನ ಪತ್ನಿ ಶಿಕ್ಷಕಿ ಜಯಂತಿ ಅವರ ಜತೆ ಮಾತನಾಡಿದ ಸಚಿವರು ಮಾಜಿ ಹಾಗೂ ಹಾಲಿ ಯೋಧರ ಮನೆ ಮಂದಿಯ ರಕ್ಷಣೆ ನನ್ನ ಕರ್ತವ್ಯ. ನಾನು ಕರೆ ಮಾಡುವಾಗ ಆದ ವಿಳಂಬಕ್ಕೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ. ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಅದಕ್ಕೂ ಮುನ್ನ ಕೇಂದ್ರ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್‌ ಕರೆ […]

ದಾಸರ ಕೀರ್ತನೆಗಳ ಕಂಪನ್ನು ಮನೆ ಮನೆಗೆ ಮುಟ್ಟಿಸಬೇಕು

Monday, February 8th, 2016
Vishnumurty Temple

ಬದಿಯಡ್ಕ: ವೇದ, ಉಪನಿಷತ್ತುಗಳಲ್ಲಿ ಬರುವ ಜಠಿಲವಾದ ವಿಷಯಗಳನ್ನು ಸರಳವಾಗಿ ಕೀರ್ತನೆಗಳ ಮೂಲಕ ಜನ ಸಾಮಾನ್ಯರಿಗೂ ತಿಳಿಯುವಂತೆ ತಿಳಿದು ಹೇಳಿದವರು ಪುರಂದರ ದಾಸರು. ಜಗತ್ತಿನ ಎಲ್ಲಾ ಆಗು ಹೋಗುಗಳನ್ನು ತಮ್ಮ ಕೀರ್ತನೆಯಲ್ಲಿ ಅಳವಡಿಸಿಕೊಂಡಿದ್ದಾರೆ ಎಂದು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆಯಾಗಿದ್ದ ನಿವೃತ್ತ ಪ್ರಾಧ್ಯಾಪಕಿ ಡಾ.ಯು.ಮಹೇಶ್ವರಿ ಅವರು ಹೇಳಿದರು. ಕೂಡ್ಲು ವಿಷ್ಣುಮಂಗಲ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜರಗಿದ ಪುರಂದರ ದಾಸರ ಆರಾಧನಾ ಮಹೋತ್ಸವದಂಗವಾಗಿ ಪುರಂದರದಾಸರ ಸಾಹಿತ್ಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು. ದಾಸ ಪರಂಪರೆಯಲ್ಲಿ ಶ್ರೇಷ್ಠರೆನಿಸಿರುವ […]