ಚುನಾವಣಾ ನೀತಿ ಸಂಹಿತೆ : ಪಿಲಿಕುಳ ಕಂಬಳ ಮುಂದೂಡಿಕೆ

Wednesday, November 13th, 2024
pilikula-kamabala

ಮಂಗಳೂರು : ಗ್ರಾಮ ಪಂಚಾಯತ್ ಚುನಾವಣೆಯ ಹಿನ್ನಲೆ ಜಿಲ್ಲಾಡಳಿತ ವತಿಯಿಂದ ನವೆಂಬರ್ 17ಮತ್ತು 18ರಂದು ಮೂಡುಶೆಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಪಿಲಿಕುಳ ನಿಸರ್ಗಧಾಮದಲ್ಲಿ ಆಯೋಜಿಸಲಾಗಿದ್ದ ಪಿಲಿಕುಳ ಕಂಬಳೋತ್ಸವವನ್ನು ಮುಂದೂಡಲಾಗಿದೆ. ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಆದೇಶದನ್ವಯ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ/ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯನ್ನು ನಡೆಸಲು ಘೋಷಿಸಿದ್ದು, ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನವೆಂಬರ್ 16ರಿಂದ 26ರವರೆಗೆ ಜಾರಿಯಲ್ಲಿರುತ್ತದೆ. ಅದರಂತೆ, ಮೂಡುಶೆಡ್ಡೆ ಗ್ರಾಮ ಪಂಚಾಯತ್ […]

ಪಿಲಿಕುಲದಲ್ಲಿ ಎಲ್ಲರ ಸಹಭಾಗಿತ್ವದಲ್ಲಿ,ಕಂಬಳ ತುಳುನಾಡ ಉತ್ಸವ-ಯು.ಟಿ.ಖಾದರ್

Thursday, September 12th, 2024
UT-Khader

ಬೆಂಗಳೂರು : ಪಿಲಿಕುಲ ನಿಸರ್ಗ ಧಾಮ ಕ್ಕೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಕಂಬಳ ತುಳು ನಾಡ ಉತ್ಸವವನ್ನು ಎಲ್ಲರ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲು ಸ್ಪೀಕರ್ ಯು.ಟಿ.ಖಾದರ್ ಸಲಹೆ ನೀಡಿದ್ದಾರೆ. ಅವರು ಗುರುವಾರ ವಿಧಾನ ಸಭಾ ಕಚೇರಿಯ ಸಭಾಂಗಣದಲ್ಲಿ ಪಿಲಿಕುಲ ಕಂಬಳ,ತುಳು ನಾಡ ಉತ್ಸವದ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಗಳ ಸಭೆಯನ್ನು ದ್ದೇಶಿಸಿ ಮಾತನಾಡುತ್ತಿದ್ದರು. ಪಿಲಿಕುಲದಲ್ಲಿ ಕೆಲವೊಂದು ಶಾಶ್ವತವಾದ ಕಾಮಗಾರಿಗಳನ್ನು ಕೈ ಗೊಂಡು ಅಭಿವೃದ್ಧಿ ಪಡಿಸಲು ಸಂಘಟಿತ ಪ್ರಯತ್ನ ನಡೆಸಲು ತುಳು ನಾಡು ಉತ್ಸವದ ಮೂಲಕ ತುಳು ನಾಡಿನ ಕಂಬಳ ಸೇರಿದಂತೆ […]

ದಕ್ಷಿಣ ಕನ್ನಡ ಜಿಲ್ಲೆಯ ಕಂಬಳ ವೇಳಾಪಟ್ಟಿ ಪ್ರಕಟ

Wednesday, October 20th, 2021
kambala

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಕಂಬಳ ಸಿದ್ಧತೆ ನಡೆದಿದ್ದು ಜಿಲ್ಲಾ ಕಂಬಳ ಸಮಿತಿಯು 2021-22ನೇ ಸಾಲಿನ ಕಂಬಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ನ.27ರಿಂದ 2020ರ ಮಾರ್ಚ್ 26ರ ವರೆಗೆ ಒಟ್ಟು 17 ಕಂಬಳ ಕೂಟಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಮೊದಲ ಕಂಬಳ ಮೂಡುಬಿದಿರೆಯಲ್ಲಿ ಹಾಗೂ ಕೊನೆಯ ಕಂಬಳ ವೇಣೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ವೇಳಾಪಟ್ಟಿ ಪ್ರಕಟಗೊಂಡಿದ್ದರೂ, ಕೆಲವು ಕಂಬಳಗಳ ದಿನಾಂಕಗಳು ಬದಲಾಗುವ ಸಾಧ್ಯತೆಗಳಿವೆ ಎಂದು ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ ತಿಳಿಸಿದ್ದಾರೆ. ಸಮಿತಿ ಸದಸ್ಯರೊಂದಿಗೆ ಚರ್ಚಿಸಿ ಈ ಬಾರಿ […]

ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದ ರಾಕೆಟ್ ಮೋಡ ಖ್ಯಾತಿಯ ಕಂಬಳದ ಕೋಣ ಇನ್ನು ನೆನಪು ಮಾತ್ರ..!

Wednesday, November 21st, 2018
kambala

ಉಡುಪಿ: ಕಂಬಳ ಕ್ಷೇತ್ರದಲ್ಲಿ ಪದಕಗಳ ಮೇಲೆ ಪದಕ ಬಾಚಿ ಸಾಧನೆ ಮಾಡಿದ್ದ ರಾಕೆಟ್ ಮೋಡ ಖ್ಯಾತಿಯ ಕಂಬಳದ ಕೋಣ ಇನ್ನು ನೆನಪು ಮಾತ್ರ. ಕಳೆದ ಕೆಲವು ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಕಂಬಳದ ಕೋಣ ಮೃತಪಟ್ಟಿದ್ದು, ಕರಾವಳಿಯ ಕಂಬಳ ಪ್ರಿಯರಿಗೆ ದುಃಖ ತಂದಿದೆ. ಕಂಬಳ ಕ್ಷೇತ್ರದಲ್ಲಿ ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ನೂರಾರು ಬಹುಮಾನಗಳನ್ನು ಗೆದ್ದ ಹೆಗ್ಗಳಿಕೆ ಈ ರಾಕೆಟ್ ಮೋಡ ಕೋಣದ್ದಾಗಿತ್ತು. ಇದು ಮಾತ್ರವಲ್ಲದೆ, ಕಂಬಳ ಪ್ರಿಯರಿಗೆ ಇದು ಚಿರಪರಿಚಿತ ಕೋಣವಾಗಿತ್ತು. ಕೊಂಡೊಟ್ಟು ಮೋಡ, ರಾಕೆಟ್ ಮೋಡ […]

ಕಂಬಳ ವಿರುದ್ಧದ ಪೆಟಾ ಅರ್ಜಿ ವಜಾ

Tuesday, March 13th, 2018
peta-kambala

ಮಂಗಳೂರು: ರಾಜ್ಯದಲ್ಲಿ ಕಂಬಳ ಆಯೋಜನೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಪೆಟಾ (ಪೀಪಲ್‌ ಫಾರ್‌ ದ ಎಥಿಕಲ್‌ ಟ್ರೀಟ್‌ಮೆಂಟ್‌ ಆಫ್‌ ಎನಿಮಲ್‌) ಸಂಘಟನೆ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಸುಪ್ರೀಂಕೋರ್ಟ್‌ ವಜಾ ಮಾಡಿದೆ. ಇದರೊಂದಿಗೆ ಕಂಬಳ ಆಯೋಜಿಸುವುದಕ್ಕೆ ಎದುರಾಗಿದ್ದ ಕಾನೂನು ಸಂಘರ್ಷ ಸದ್ಯಕ್ಕೆ ತೆರೆ ಕಂಡಿದೆ. ಈ ಹಿಂದೆ ಪೆಟಾ ಸಲ್ಲಿಸಿದ್ದ ಅರ್ಜಿಯ ಮುಂದುವರಿದ ವಿಚಾರಣೆಯನ್ನು ಸೋಮವಾರ ನಡೆಸಿದ ಸರ್ವೋಚ್ಚ ನ್ಯಾಯಾಲಯದ ತ್ರಿಸದಸ್ಯ ಪೀಠವು ಪೆಟಾ ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿತು. ರಾಜ್ಯದಲ್ಲಿ ಕಂಬಳಕ್ಕೆ ಅವಕಾಶ ನೀಡಿ ಹೊರಡಿಸಿರುವ ಅಧ್ಯಾದೇಶ […]

ಕಂಬಳಕ್ಕೆ ಗ್ರೀನ್‌ ಸಿಗ್ನಲ್‌… ಗ್ರಾಮೀಣ ಕ್ರೀಡೆ ಪರ ನಿಂತ ವೀರೂ!

Tuesday, February 20th, 2018
sehwag

ಹೈದರಾಬಾದ್‌: ಕರ್ನಾಟಕ ಗ್ರಾಮೀಣ ಕ್ರೀಡೆ ಕಂಬಳದ ಬಗ್ಗೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್‌ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕರ್ನಾಟಕದ ಗ್ರಾಮೀಣ ಕ್ರೀಡೆ ಕಂಬಳಕ್ಕೆ ನಿನ್ನೆ ರಾಷ್ಟ್ರಪತಿ ರಾಮನಾಥ್‌ ಕೋವಿಂದರಿಂದ ಅಂಕಿತ ಬಿದ್ದ ವಿಷಯ ತಿಳಿದ ಸೆಹ್ವಾಗ್, ಕಂಬಳಕ್ಕೆ ಇದ್ದ ತಡೆ ನಿವಾರಣೆಯಾಗಿದ್ದು ಒಳ್ಳೆಯ ಸಂಗತಿ. ಗ್ರಾಮೀಣ ಕ್ರೀಡೆಗಳನ್ನು ಉಳಿಸಲೇಬೇಕಾಗಿದ. ರಾಷ್ಟ್ರಪತಿಗಳು ಕಂಬಳ ಬಿಲ್‌ ಪಾಸ್‌ ಮಾಡಿದ್ದು ನಿಜಕ್ಕೂ ಗ್ರೇಟ್‌. ಇನ್ಮುಂದೆ ಕಂಬಳ ಕರ್ನಾಟಕದಲ್ಲಿ ಕಾನೂನುಬದ್ಧ ಗ್ರಾಮೀಣ ಕ್ರೀಡೆಯಾಗಿದೆ. ಯುವಕರ ಚೈತನ್ಯವೃದ್ಧಿಸುವಂತಹ ಕ್ರೀಡೆಗಳನ್ನು ತಡೆಯಲು ಯತ್ನಿಸುತ್ತಿರುವ ಕೆಲ ಸಂಸ್ಥೆಗಳ ಯತ್ನವನ್ನು […]

ಕಂಬಳದ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳ ಅಂಕಿತ

Tuesday, February 20th, 2018
kambala

ಮಂಗಳೂರು: ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ರಾಷ್ಟ್ರಪತಿಗಳ ಅಂಕಿತ ಸಿಕ್ಕಿದೆ. ಕಂಬಳ ವಿಧೇಯಕಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಸಹಿ ಹಾಕಿದ್ದಾರೆ. ರಾಷ್ಟ್ರಪತಿಗಳು ಸಹಿ ಹಾಕಿರುವ ಹಿನ್ನೆಲೆಯಲ್ಲಿ ಕರಾವಳಿಗರಲ್ಲಿ ಹರ್ಷ ವ್ಯಕ್ತವಾಗಿದೆ. ಕಂಬಳ ಕ್ರೀಡೆ ಉಳಿವಿಗೆ ಕಂಬಳ ಸಮಿತಿ ನಡೆಸಿದ ಅವಿರತ ಹೋರಾಟಕ್ಕೆ ಜಯ ಸಿಕ್ಕಿದಂತಾಗಿದೆ. ಕಂಬಳಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ ಸಿಕ್ಕಿರುವುದಕ್ಕೆ ಕಂಬಳ ಸಮಿತಿ ಅಧ್ಯಕ್ಷ ಬಾರ್ಕುರು ಶಾಂತರಾಮ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ಕಂಬಳ ಕ್ರೀಡೆ ಅಭಿಮಾನಿ ಮಂಗಳೂರಿನ ಗಿರೀಶ್ […]

ಭಾನುವಾರ ನಡೆಯಲಿದೆ ‘ಜಯ-ವಿಜಯ’ ಕಂಬಳ

Friday, February 9th, 2018
kambala

ಮಂಗಳೂರು: ಇದೇ ಭಾನುವಾರ ನೇತ್ರಾವತಿ ನದಿ ತೀರದ ಜಪ್ಪಿನಮೊಗರು ಕಂಬಳ ಗದ್ದೆಯಲ್ಲಿ ಜಯ-ವಿಜಯ ಜೋಡುಕೆರೆ ಕಂಬಳ ಕೂಟ ಆಯೋಜಿಸಲಾಗಿದೆ. ಜೆ. ಜಯಗಂಗಾಧರ ಶೆಟ್ಟಿ- ಮನ್ಕು ತೋಟ ಗುತ್ತು ಹಾಗೂ ನಾಡಾಜೆ ಗುತ್ತು, ಸ್ಮರಣಾರ್ಥ ಈ ಕಂಬಳ ನಡೆಯುತ್ತಿದ್ದು, ಇದು ಆರನೇ ವರ್ಷದ ಕಂಬಳ ಕೂಟ. ಮಂಗಳೂರು ನಗರದ ಆಸುಪಾಸು ನಡೆಯುವ ಕೆಲವೇ ಕಂಬಳ ಕೂಟಗಳಲ್ಲಿ ಈ ಕಂಬಳ ಕೂಟವು ಅತ್ಯಂತ ಪ್ರಮುಖ ಎನ್ನಲಾಗುತ್ತದೆ. ತುಳುವರ ಹೆಮ್ಮೆ ಹಾಗೂ ಅವರ ಅಸ್ಮಿತೆಯ ಭಾಗವೂ ಕಂಬಳವನ್ನು ಉಳಿಸಲು ಈ ಪ್ರಯತ್ನವನ್ನು […]

ಪುತ್ತೂರಿನಲ್ಲಿ ಕಂಬಳ… ಕೋಣಗಳ ಕಾಲಿನಡಿ ಸಿಲುಕಿದ್ದ ಬಾಲಕ ಅಪಾಯದಿಂದ ಪಾರು

Tuesday, January 23rd, 2018
kambala

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಿನ್ನೆ ನಡೆದ ಕಂಬಳದಲ್ಲಿ ಕೋಣಗಳಿಂದ ತುಳಿಯಲ್ಪಟ್ಟ ಬಾಲಕ ಕೂದಳೆಲೆಯ ಅಂತರದಲ್ಲಿ ಪಾರಾದ ಘಟನೆ ನಡೆಯಿತು. ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪರೈ ನೇತೃತ್ವದಲ್ಲಿ 25 ನೇ ವರ್ಷದ ಅದ್ಧೂರಿ ಕಂಬಳ ನಡೆದಿತ್ತು. ಕಂಬಳ ಗದ್ದೆಯಿಂದ ಫಿನಿಶಿಂಗ್ ಪಾಯಿಂಟ್‌ಗೆ ಕೋಣಗಳು ಓಡಿಕೊಂಡು ಬಂದಾಗ ಕಂಬಳ ನೋಡುತ್ತಿದ್ದ ಬಾಲಕನೋರ್ವ ಕೋಣದ ಕಾಲಿನಡಿಗೆ ಬಿದ್ದಿದ್ದ. ಆದರೆ ಯಾವುದೇ ಗಾಯವಾಗದೇ ಪವಾಡ ಸದೃಶವಾಗಿ ಬಾಲಕ ಪಾರಾಗಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ […]

ಜ. 20: ಐತಿಹಾಸಿಕ ಕೋಟಿ- ಚೆನ್ನಯ ಕಂಬಳ

Thursday, January 18th, 2018
Kambala

ಪುತ್ತೂರು: ರಜತ ಸಂಭ್ರಮದಲ್ಲಿರುವ ಹೊನಲು ಬೆಳಕಿನ ಪುತ್ತೂರು ಕೋಟಿ- ಚೆನ್ನಯ ಜೋಡುಕರೆ ಕಂಬಳ ಜ. 20ರಂದು ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಎನ್‌. ಚಂದ್ರಹಾಸ ಶೆಟ್ಟಿ ಹೇಳಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 25ನೇ ವರ್ಷದ ಹಿನ್ನೆಲೆಯಲ್ಲಿ ಕಂಬಳದ ಕೋಣಗಳು ಕರೆಗೆ ಇಳಿಯುವಾಗಲೇ ವಿಶೇಷತೆ ಇದೆ. ಭಾಗವಹಿಸುವ ಎಲ್ಲ 150ಕ್ಕೂ ಅಧಿಕ ಜೋಡಿ ಕೋಣಗಳಿಗೆ 1 ಮುಡಿ ಅಕ್ಕಿ, ರಜತ ಫಲಕ ನೀಡಲಾಗುವುದು. ಈ ಬಾರಿ ಕಂಬಳ ಸ್ಪರ್ಧಾ […]