ಕರಾವಳಿಯ ಪ್ರವಾಸೋದ್ಯಮದಿಂದ ದೂರ ಉಳಿದ ಸಸಿಹಿತ್ಲು !

Monday, January 28th, 2013

ಮಂಗಳೂರು : ನಂದಿನಿ ಮತ್ತು ಶಾಂಭವಿ ನದಿಗಳು ಅರಬ್ಬಿ ಸಮುದ್ರಕ್ಕೆ ಸೇರಿ ತ್ರಿವೇಣಿ ಸಂಗಮದ ಕೇಂದ್ರ ಬಿಂದು ಎಣಿಸಿರುವ ಸಸಿಹಿತ್ಲು ಎಂಬ ಪುಟ್ಟ ಗ್ರಾಮಕ್ಕೆ ತನ್ನ ಅಜ್ಞಾತವಾಸ ಮತ್ತೂ ಮುಂದುವರಿಯುವ ಆತಂಕ ಎದುರಾಗಿದೆ. ಒಂದು ಕಡೆ ನದಿ ಕಡಲಿನ ತ್ರಿವೇಣಿ ಸಂಗಮದ ಅಳಿವೆ ಬಾಗಿಲು, ಸಸಿಹಿತ್ಲು ಕಡೆಯ ಜಾಗವನ್ನು ಕಬಳಿಸುತ್ತಾ ಬರುತ್ತಿದೆ. ಮತ್ತೊಂದು ಕಡೆ ಮೂರು ದಶಕದಿಂದ ಭರವಸೆಯಾಗಿರುವ ಸಸಿಹಿತ್ಲು ನಂದಿನಿ ನದಿ ಸೇತುವೆ ಇನ್ನೂ ಮರಿಚಿಕೆಯಾಗಿಯೇ ಉಳಿದಿದೆ. ಪ್ರವಾಸೋದ್ಯಮದ ಪಟ್ಟಿಯಲ್ಲಿ ಹೆಸರು ಪಡೆದಿರುವ ಸಸಿಹಿತ್ಲು ಗ್ರಾಮದತ್ತ […]

ಪಣಂಬೂರು ಬೀಚ್‌ ಉತ್ಸವಕ್ಕೆ ತೆರೆ

Monday, January 28th, 2013
Panambur Beach Fest

ಮಂಗಳೂರು : ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶವಿದೆ, ಕೇರಳ-ಗೋವಾ ರಾಜ್ಯಗಳ ಮಾದರಿಯಲ್ಲಿ ಕರಾವಳಿಯಲ್ಲೂ ಬೀಚ್ ಅಭಿವದ್ಧಿಗೆ ಅವಕಾಶಗಳಿದ್ದು ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಕಷ್ಣ ಜೆ. ಪಾಲೆಮಾರ್ ಹೇಳಿದರು. ಅವರು ಪಣಂಬೂರಿನಲ್ಲಿ ರವಿವಾರ ನಡೆದ ಬೀಚ್‌ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರವಿವಾರ ಪಣಂಬೂರು ಬೀಚ್‌ ಉತ್ಸವಕ್ಕೆ ಅಪಾರ ಜನಸಾಗರವೇ ಹರಿದು ಬಂದಿದ್ದು, ಬೀಚ್ ನಲ್ಲಿ ಏರ್ಪಡಿಸಲಾದ ವಿವಿಧ ಸ್ಪರ್ದೆಗಳಲ್ಲಿ ಜನರು ಭಾಗವಹಿಸಿ ಸಂತಸಪಟ್ಟರು. ಈ ಬಾರಿ ಬೀಚ್‌ […]

ನವೆಂಬರ್ 24, 25 ರಂದು ಉಳ್ಳಾಲ ಕಡಲ ತೀರದಲ್ಲಿ ಬೀಚ್ ಉತ್ಸವ

Saturday, November 24th, 2012
Ullal Beach Utsava

ಮಂಗಳೂರು : ಸುಕುಮಾರ್ ತೊಕ್ಕೋಟ್ಟು ;  ಉಳ್ಳಾಲ ಈ ದೇಶದ ಮೊಟ್ಟಮೊದಲ ಸ್ವಾತಂತ್ಯ್ರ ಸಮರಕ್ಕೆ ಕಹಳೆ ಊದಿದ ತಾಣ. ಉಳ್ಳಾಲದ ರಾಣಿ ಅಬ್ಬಕ್ಕ ಪೋರ್ಚುಗೀಸರ ವಿರುದ್ದ ಹೋರಾಟ ಮಾಡಿದ್ದು ಇಲ್ಲೇ ಎನ್ನುವುದು ಬಹು ಮುಖ್ಯ ಸಂಗತಿ. ಅಬ್ಬಕ್ಕಳ ಆರಾಧ್ಯದೇವರು ಸೋಮನಾಥ. ಪ್ರತೀ ದಿನವೂ ಈ ದೇವಾಲಯಕ್ಕೆ ಅಬ್ಬಕ್ಕ ಬಂದು ಸೋಮನಾಥ ದೇವರಿಗೆ ಪೂಜೆ ಸಲ್ಲಿಸುವ ಪರಿಪಾಠವಿತ್ತು. ಆಕೆ ಬದುಕಿರುವಷ್ಟು ಕಾಲವೂ ಈ ದೇವಾಲಯಕ್ಕೆ ಬಂದು ದೇವರಿಗೆ ಕೈಮುಗಿದ ಮೇಲೆಯೇ ಯಾವುದೇ ಕೆಲಸ ಮಾಡುತ್ತಿದ್ದಳು. ಆಕೆ ಕೊನೆಯುಸಿರೆಳೆದಾಗಲೂ ಜೈ […]