Blog Archive

ಕಾಂಗ್ರೆಸ್‌ನಲ್ಲಿ ಶುರುವಾದ ಜಾತಿ ಲೆಕ್ಕಾಚಾರ

Saturday, February 24th, 2018
city-corporation

ಮಂಗಳೂರು: ಕಾಂಗ್ರೆಸ್ ಬಹುಮತ ಇರುವ ಪ್ರಸಕ್ತ ಪಾಲಿಕೆ ಆಡಳಿತ ಮಂಡಳಿಯ ಕೊನೆಯ ಮೇಯರ್‌– ಉಪಮೇಯರ್‌ ಸ್ಥಾನದ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ಮೇಯರ್‌ ಸ್ಥಾನಕ್ಕೆ ಏರಲು ತೆರೆಮರೆಯ ಕಸರತ್ತುಗಳು ತೀವ್ರಗೊಂಡಿವೆ. ಕಾಂಗ್ರೆಸ್‌ ಆಡಳಿತದ ಐದನೇ ಹಾಗೂ ಕೊನೆಯ ಅವಧಿಯ ಮೇಯರ್‌ ಹಾಗೂ ಉಪಮೇಯರ್‌ ಸ್ಥಾನಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರೊಂದಿಗೆ ಮೇಯರ್‌–ಉಪಮೇಯರ್‌ ಸ್ಥಾನಕ್ಕೆ ತೀವ್ರ ರಾಜಕೀಯ ಲಾಬಿ ಶುರುವಾಗಿದೆ. ಹಾಲಿ ಮೇಯರ್‌ ಕವಿತಾ ಸನಿಲ್‌, ಉಪಮೇಯರ್‌ ರಜನೀಶ್‌ ಅವರ ಅಧಿಕಾರ ಅವಧಿ ಮಾರ್ಚ್‌ […]

ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ವಾಗ್ವಾದ

Thursday, February 15th, 2018
kavitha-sanil

ಮಂಗಳೂರು: ಎಡಿಬಿ ನೆರವಿನೊಂದಿಗೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆ ಕುರಿತು ಇಂದು ಮನಪಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾಲೋಚನಾ ಸಭೆ ಆರೋಪ-ಪ್ರತ್ಯಾರೋಪ ಮಾತ್ರವಲ್ಲದೆ ಸಾರ್ವಜನಿಕರ ನಡುವೆ ವಾಗ್ವಾದಕ್ಕೂ ಕಾರಣವಾಯಿತು. ನಗರದಲ್ಲಿ ಕೆಯುಐಡಿಎಫ್‌ಸಿ ಕೈಗೆತ್ತಿಕೊಂಡಿರುವ ಕಾಮಗಾರಿಯ ಗುತ್ತಿಗೆ ನೀಡುವಿಕೆಯಲ್ಲಿ ಅವ್ಯವಹಾರವಾಗಿದ್ದು, ಇದರಲ್ಲಿ ಸ್ಥಳೀಯ ಶಾಸಕರು ಶಾಮೀಲಾ ಗಿದ್ದಾರೆಂದು ಡಿವೈಎಫ್‌ಐ ಮುನೀರ್ ಕಾಟಿಪಳ್ಳ ಅವರು ಫೇಸ್‌ಬುಕ್ ಮೂಲಕ ಆರೋಪ ಮಾಡಿದ್ದರು. ಮೇಯರ್ ಕವಿತಾ ಸನಿಲ್ ಅಧ್ಯಕ್ಷತೆಯಲ್ಲಿ ಇಂದು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಎಡಿಬಿ ನೆರವಿನ ಜಲಸಿರಿ […]

ದ.ಕ. ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಯುತ್ತಿದೆ ಪರಿಹಾರ ಕ್ರಮ: ಆಯುಕ್ತರು

Thursday, February 1st, 2018
mayor-kavitha

ಮಂಗಳೂರು: ಕೂಳೂರು, ಬೆಂಗರೆ, ಜೋಕಟ್ಟೆಯ ತೋಕೂರು ಪ್ರದೇಶಗಳಲ್ಲಿ ಫಲ್ಗುಣಿ ನದಿ ನೀರು ಕಲುಷಿತಗೊಳ್ಳುತ್ತಿರುವ ಬಗ್ಗೆ ಇಂದು ನಡೆದ ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ಪ್ರಸ್ತಾಪಗೊಂಡಿತು. ಮೇಯರ್ ಕವಿತಾ ಸನಿಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯ ದಯಾನಂದ ಶೆಟ್ಟಿ ಈ ಬಗ್ಗೆ ಪ್ರಸ್ತಾಪಿಸಿ, ಫಲ್ಗುಣಿ ನದಿಯಲ್ಲಿ ಕಲುಷಿತ ನೀರು ಹರಿಯುತ್ತಿರುವುದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿರುವ ಬಗ್ಗೆ ವರದಿಯಾಗಿದೆ. ಕಳೆದ ಬಾರಿ ಮರವೂರಿನಲ್ಲಿ ಸಮಸ್ಯೆ ಎದುರಾದಾಗ ಸಮಿತಿ ರಚಿಸಲಾಗಿದ್ದು, ಅದರ ವರದಿ ಏನಾಗಿದೆ ಎಂದು ಪ್ರಶ್ನಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮನಪಾ […]

ಶಾಂತಿ, ಸಹನೆ, ಸಂಯಮ ನಮ್ಮ ಉಸಿರಾಗಲಿ: ಸಚಿವ ರೈ

Friday, January 26th, 2018
ramanath

ಮಂಗಳೂರು: ಸಹಬಾಳ್ವೆಯ ಬದುಕನ್ನು ನಮ್ಮದಾಗಿಸಿಕೊಂಡು ಶಾಂತಿ, ಸಹನೆ, ಸಂಯಮವನ್ನು ಉಸಿರಾಗಿಸಿಕೊಳ್ಳೋಣ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕರೆ ನೀಡಿದರು. ನಗರದ ನೆಹರೂ ಮೈದಾನದಲ್ಲಿ ಇಂದು ಬೆಳಗ್ಗೆ ನಡೆದ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಸಂಭ್ರಮಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಶಾಸಕರಾದ ಜೆ.ಆರ್.ಲೋಬೋ, ಬಿ.ಎ.ಮೊಯ್ದಿನ್ ಬಾವ, ಮೇಯರ್ ಕವಿತಾ ಸನಿಲ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ರಾಜ್ಯ ಗೇರು ಅಭಿವೃದ್ಧಿ ನಿಗಮದ […]

ಪಂಪ್‌ವೆಲ್‌ನಲ್ಲಿ ಹೊಸ ಬಸ್‌ ನಿಲ್ದಾಣ

Thursday, November 30th, 2017
ಪಂಪ್‌ವೆಲ್‌ನಲ್ಲಿ ಹೊಸ ಬಸ್‌ ನಿಲ್ದಾಣ

ಮಂಗಳೂರು: ಸ್ಮಾರ್ಟ್‌ ಸಿಟಿ ಮಂಗಳೂರು ಯೋಜನೆಯಡಿ ಪಂಪ್‌ವೆಲ್‌ನಲ್ಲಿ 7.23 ಎಕರೆಯಲ್ಲಿ ಹೊಸ ಖಾಸಗಿ ಬಸ್‌ ನಿಲ್ದಾಣ ಸ್ಥಾಪನೆಗೆ ಹಸುರು ನಿಶಾನೆ ಸಿಕ್ಕಿದೆ. ಬೆಂಗಳೂರಿನಲ್ಲಿ ಬುಧವಾರ ನಡೆದ ಸ್ಮಾರ್ಟ್‌ಸಿಟಿ ಎಸ್‌ಪಿವಿ (ವಿಶೇಷ ಉದ್ದೇಶ ವಾಹಕ) ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿದೆ. ಉದ್ದೇಶಿತ ಬಸ್‌ ನಿಲ್ದಾಣವನ್ನು ಖಾಸಗಿ-ಸರಕಾರಿ ಸಹಭಾಗಿತ್ವದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಕೈಗೆತ್ತಿಕೊಳ್ಳುವಂತೆ ಮಂಗಳವಾರ ಮೇಯರ್‌ ಕವಿತಾ ಸನಿಲ್‌ ಅಧ್ಯಕ್ಷತೆಯಲ್ಲಿ ನಡೆದ ಮಂಗಳೂರು ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಇದಕ್ಕೆ ಬೆಂಗಳೂರಿನಲ್ಲಿ ಬುಧವಾರ ನಡೆದ ಎಸ್‌ಪಿವಿ ಸಭೆಯಲ್ಲಿ […]

ಹೆಣ್ಣು ಮಕ್ಕಳ ಸ್ವರಕ್ಷಣ ತರಬೇತಿ ಉದ್ಘಾಟನೆ

Thursday, November 23rd, 2017
kavita-sanil

ಅತ್ತಾವರ: ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ ತಾಲೂಕು ಮಟ್ಟದ ಹೆಣ್ಣು ಮಕ್ಕಳ ಸ್ವರಕ್ಷಣ ತರಬೇತಿಯ ಉದ್ಘಾಟನ ಕಾರ್ಯಕ್ರಮ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ಇಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ಜರಗಿತು. ಕರಾಟೆಯಿಂದ ಆತ್ಮವಿಶ್ವಾಸ ವೃದ್ಧಿಉದ್ಘಾಟಿಸಿದ ಮೇಯರ್‌ ಕವಿತಾ ಸನಿಲ್‌ ಮಾತನಾಡಿ, ಕರಾಟೆ ತರಬೇತಿಯು ನಿರಂತರವಾಗಿ ನಡೆಯಬೇಕು. ಆಗ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಕರಾಟೆಯು ಕೇವಲ ಸಾಧನೆಗೆ ಸೀಮಿತವಾಗದೆ ಆರೋಗ್ಯ ಮತ್ತು ಆತ್ಮರಕ್ಷಣೆಗೆ ದಾರಿಯಾಗಬೇಕು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ. ಜ್ಞಾನೇಶ್‌ ಮಾತನಾಡಿ, ಶಿಕ್ಷಣವನ್ನು ಮಾಧ್ಯಮದಿಂದ […]

ಇಂಡಿಯನ್‌ ಇಂಟರ್‌ನ್ಯಾಷನಲ್‌ ಟ್ರಾವೆಲ್‌ ಎಕ್ಸಿಬಿಷನ್ ಭಾರತದ ಉತ್ಕೃಷ್ಟ ಸಾರಿಗೆ ಮತ್ತು ಪ್ರವಾಸೋದ್ಯಮ ಪ್ರದರ್ಶನ

Saturday, October 28th, 2017
travelling agency

ಮಂಗಳೂರು : ಇಂಡಿಯಾ ಇಂಟರ್ ನ್ಯಾಷನಲ್‌ ಟ್ರಾವೆಲ್‌ ಎಕ್ಸಿಬಿಷನ್ 3 ದಿನಗಳ ಕಾಲ ಮಂಗಳೂರಿನ ನವಭಾರತ ಸರ್ಕಲ್ ಬಳಿಯಿರುವ ಟಿ.ವಿ. ರಮಣ ಪೈ ಕನ್ವನ್‌ಷನ್ ಸೆಂಟರ್‌ನಲ್ಲಿ ಭಾರತದ ಅತ್ಯುತ್ಕೃಷ್ಟ ಸಾರಿಗೆ ಮತ್ತು ಪ್ರವಾಸೋದ್ಯಮದ ಬೃಹತ್ ಪ್ರದರ್ಶನವು ಆರಂಭಗೊಳ್ಳಲಿದೆ. ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀಮತಿ ಕವಿತಾ ಸನಿಲ್ ಉದ್ಘಾಟಿಸಲಿದ್ದಾರೆ. ಏರ್ಪಡಿಸಲಾಗಿರುವ ಈ ಎಕ್ಸಿಬಿಷನ್‌ನಲ್ಲಿ ಸಾರಿಗೆ, ಪ್ರವಾಸ, ರೈಲ್ವೇಸ್, ಆತಿಥ್ಯ ಮತ್ತಿನ್ನಿತರ ಇದಕ್ಕೆ ಪೂರಕವಾದ ಸಂಗತಿಗಳ ಬಗ್ಗೆ ಜನರಿಗೆ ಪರಿಚಯಿಸಲಾಗುತ್ತದೆ. ಈ 3 ದಿನಗಳ ಕಾಲದ ಪ್ರವಾಸಿ ಪ್ರದರ್ಶನದಲ್ಲಿ ಮುಖ್ಯವಾಗಿ ಅಂತರಾಷ್ಟ್ರೀಯ […]

ಮೇಯರ್ ಅವರಿಗೆ ಅವರ ಪಾಲಿಕೆ ವ್ಯಾಪ್ತಿಗೆ ಬರುವ ರಸ್ತೆಗಳ ದುಸ್ಥಿತಿ ಏಕೆ ಕಾಣುತ್ತಿಲ್ಲ ?

Friday, October 13th, 2017
mayor kavitha sanil

  ಮಂಗಳೂರು: ಮಂಗಳೂರಿನಲ್ಲಿ ನಡೆಯುತ್ತಿರುವ ಅಕ್ರಮ ಮಸಾಜ್ ಪಾರ್ಲರ್ ಗಳ ವಿರುದ್ಧ ಸಮರ ಸಾರಿದ್ದ ಮಂಗಳೂರಿನ ಮೇಯರ್ ಕವಿತಾ ಸನಿಲ್ ಇತ್ತೀಚೆಗೆ ಅಕ್ರಮ ಫ್ಲಾಟ್ ಗಳ ಮೇಲೆ ದಾಳಿ ಆರಂಭಿಸಿದ್ದಾರೆ. ಮಂಗಳೂರು ಮೇಯರ್ ಅವರ ಈ ಡೇರ್ ಡೆವಿಲ್ ವ್ಯಕ್ತಿತ್ವಕ್ಕೆ ಹ್ಯಾಟ್ಸ್ ಆಫ್ ಅನ್ನಲೇಬೇಕು . ಆದರೆ ಈ ಎಲ್ಲ ಅಕ್ರಮಗಳ ವಿರುದ್ಧ ತಿರುಗಿ ಬಿದ್ದಿರುವ ಮೇಯರ್ ಅವರಿಗೆ ಅವರ ಪಾಲಿಕೆ ವ್ಯಾಪ್ತಿಗೆ ಬರುವ ರಸ್ತೆಗಳ ದುಸ್ಥಿತಿ ಏಕೆ ಕಾಣುತ್ತಿಲ್ಲ ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ಮಂಗಳೂರು ಮಹಾನಗರ […]

ಮಂಗಳೂರು‌: ‘ಬ್ಯಾರಿ ಬಾಷಾ ಅಭಿವೃದ್ಧಿ ರಥ’ ಗೆ ಚಾಲನೆ

Wednesday, October 4th, 2017
byari.kalarang

ಮಂಗಳೂರು‌:  ‘ಬ್ಯಾರಿ ಬಾಷಾ ಬಲರ್ಮೆರೊ ತೇರ್‌’ (ಬ್ಯಾರಿ ಭಾಷೆ ಅಭಿವೃದ್ಧಿ ರಥ)ಗೆ ಬ್ಯಾರಿ ಕಲಾರಂಗ ಮಂಗಳೂರು ವತಿಯಿಂದ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಜರಗಿದ ಸಮಾರಂಭದಲ್ಲಿ ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಕರಪತ್ರ ಬಿಡುಗಡೆ ಮಾಡಿ ತೇರಿಗೆ ಚಾಲನೆ ನೀಡಿದರು. ಮಾತೃಭಾಷೆಯ ಬಗ್ಗೆ ಪ್ರತಿಯೋರ್ವರು ಅಭಿಮಾನ ತಾಳಿ ಅದನ್ನು ಬೆಳೆಸುವ ಕಾರ್ಯ ಮಾಡಬೇಕು ಎಂದು ಟಿ.ಆರ್‌. ಸುರೇಶ್‌ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಮೇಯರ್‌ ಕವಿತಾ ಸನಿಲ್‌ ಮಾತನಾಡಿ, ಬ್ಯಾರಿ ಭಾಷೆಯ ಸಂರಕ್ಷಣೆ ಮತ್ತು ಅಭಿವೃದ್ಧಿ ಬಗ್ಗೆ ಜಾಗೃತಿ ಮೂಡಿಸುವ […]

ಮಲೇರಿಯಾ ಉತ್ಪತ್ತಿ ತಾಣಗಳಿಗೆ ಮಹಾನಗರ ಪಾಲಿಕೆಯ ವತಿಯಿಂದ ದಾಳಿ

Wednesday, July 5th, 2017
Malaria

ಮಂಗಳೂರು : ಮಹಾನಗರ ಪಾಲಿಕೆಯ ವತಿಯಿಂದ ಈಗಾಗಲೇ ಗುರುತಿಸಲಾಗಿರುವ ಮಲೇರಿಯಾ ಉತ್ಪತ್ತಿ ತಾಣಗಳಿಗೆ ದಾಳಿ ನಡೆಸಿ ದಂಡ ವಿಧಿಸುವುದು ಹಾಗೂ ಕಟ್ಟಡ ಪರವಾನಿಗೆ ರದ್ದು ಪಡಿಸುವ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಮೇಯರ್ ಕವಿತಾ ಸನಿಲ್ ಎಚ್ಚರಿಸಿದ್ದಾರೆ. ಪತ್ರಿಕಾ ಘೋಷ್ಟಿಯಲ್ಲಿ ಮಾತನಾಡಿದ ಮೇಯರ್ ಮಲೇರಿಯಾ ಹಾಗೂ ಡೆಂಗ್ಯೂ ನಂತಹ ಸಾಂಕ್ರಾಮಿಕ ರೋಗಗಳಿಂದ ಮಂಗಳೂರು ಮಹಾನಗರ ಪಾಲಿಕೆಯ ಜನರನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ ಎಂದು ಅವರು ಹೇಳಿದ್ದಾರೆ . ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಮಲೇರಿಯಾ ರೋಗ ಪ್ರಕರಣಗಳಲ್ಲಿ ಇಳಿಕೆ […]