ಪಕ್ಷಭೇದ ಮರೆತು ಅಭಿವೃದ್ಧಿ: ಶಾಸಕ ಮೊದಿನ್ ಬಾವಾ

Friday, April 20th, 2018
meating

ಮಂಗಳೂರು: ಯಾವುದೇ ಜಾತಿ, ಧರ್ಮ, ಪಕ್ಷ ಭೇದ ಮರೆತು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸವನ್ನು ಮಾಡಿರುತ್ತೇನೆ. ಆದುದರಿಂದ ಕಾಂಗ್ರೆಸ್ ಈ ಬಾರಿ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಟ್ಟು ಮತ ಕೇಳಲಿದೆ ಎಂದು ಶಾಸಕ ಮೊದಿನ್ ಬಾವಾ ಹೇಳಿದರು. ಕವಿತಾ ಸನಿಲ್ ನೇತೃತ್ವದಲ್ಲಿ ಪಚ್ಚನಾಡಿ ವಾರ್ಡ್‌ನಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಸಿದ್ದತಾ ಸಭೆಯಲ್ಲಿ ಮಾತನಾಡಿದರು. ಮಂಗಳೂರು ಉತ್ತರ ವಿಧಾನಸಭಾ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಿ ರಸ್ತೆ ವಿಸ್ತರಣೆ, ಒಳಚರಂಡಿ ಯೋಜನೆ, ಕುಡಿಯುವ ನೀರು ಮತ್ತಿತರ […]

ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ

Saturday, March 31st, 2018
congress

ಮಂಗಳೂರು: ಕ್ಷೇತ್ರದ ಉಸ್ತುವಾರಿ ದೇವಿಪ್ರಸಾದ್ ಶೆಟ್ಟಿ ಅವರು ಸಭೆಯ ಅಧ್ಯಕ್ಷತೆ ವಹಿಸಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು. ಶಾಸಕ ಮೊದಿನ್ ಬಾವಾ ಅವರು ಮಾತನಾಡಿ ಕಾಂಗ್ರೆಸ್ ಸರಕಾರ ಮಾಡುದ ಉತ್ತಮ ಕೆಲಸ ಕಾರ್ಯಗಳನ್ನು ಮತದಾರರಿಗೆ ತಿಳಿ ಹೇಳುವ ಮೂಲಕ ಕಾಂಗ್ರೆಸ್ ಗೆಲುವಿಗೆ ಕಾರ್ಯಕರ್ತರು ಕೆಲಸ ಮಾಡ ಬೇಕು ಎಂದರು. ದೀಪಕ್ ಪೂಜಾರಿ, ಮುಖಂಡರಾದ ಕೆ.ಸದಾಶಿವ ಶೆಟ್ಟಿ,ಪುರುಷೋತ್ತಮ್ ಚಿತ್ರಾಪುರ, ಅಶೋಕ್ ಶೆಟ್ಟಿ, ಮಹಾಬಲ ಮಾರ್ಲ,ಕವಿತಾ ಸನಿಲ್, ಕುಮಾರ್ ಮೆಂಡನ್, ಪ್ರತಿಭಾ ಕುಳಾಯಿ,ಶಕುಂತಳಾ ಕಾಮತ್‌ ಮತ್ತಿತರರು ಭಾಗವಹಿಸಿದ್ದರು.

ಮುಸ್ಲಿಮರಲ್ಲಿ ಹೆಚ್ಚಿನವರು ಎಸ್.ಡಿ.ಪಿ.ಐ ನವರು ಅವರನ್ನು ನಂಬಲು ಸಾದ್ಯವಿಲ್ಲ: ಕವಿತಾ ಸನಿಲ್

Friday, March 23rd, 2018
kavita-sanil

ಮಂಗಳೂರು: ಕರಾವಳಿಯಲ್ಲಿ ವಿಧಾನಸಭಾ ಚುನಾವಣಾ ಅಖಾಡಾ ರಂಗೇರುತ್ತಿದೆ. ಕರಾವಳಿಯಲ್ಲಿ ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ಪ್ರವಾಸ ಕರಾವಳಿ ಕೈ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಆದರೆ ಈ ನಡುವೆ ಕರಾವಳಿಯ ಕಾಂಗ್ರೆಸ್ ಮುಖಂಡರು ಒಂದರ ಮೇಲೊಂದು ಎಡವಟ್ಟುಗಳನ್ನು ಮಾಡಿಕೊಳ್ಳುತಲೇ ಇದ್ದು ಚುನಾವಣೆಯಲ್ಲಿ ಇದು ಹಿನ್ನಡೆಯಾಗಿ ಪರಿಣಮಿಸಬಹುದೇ ಎಂಬ ಅನುಮಾನ ಕಾಡುತ್ತಿದೆ. ಒಂದೆಡೆ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಯ್ಕೆ ಸಂದರ್ಭದಲ್ಲಿ ಈ ಬಾರಿ ಮುಸ್ಲಿಂ ಸಮುದಾಯಕ್ಕೆ ಅವಕಾಶ ನೀಡಬೇಕೆಂದು ಕಾಂಗ್ರೆಸ್ನ ಮುಸ್ಲಿಂ ಮುಖಂಡರು ಭಾರೀ ಒತ್ತಡ ಹೇರಿದ್ದರು. ಅದರೆ […]

ಎಐಸಿಸಿ ಸದಸ್ಯರಾಗಿ ಕವಿತಾ ಸನಿಲ್ ನೇಮಕ

Wednesday, March 14th, 2018
kavitha-sanil

ಮಂಗಳೂರು: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸದಸ್ಯರಾಗಿ ಮಂಗಳೂರು ಮಹಾನಗರ ಪಾಲಿಕೆ ನಿಕಟಪೂರ್ವ ಮೇಯರ್ ಕವಿತಾ ಸನಿಲ್ ನೇಮಕವಾಗಿದ್ದಾರೆ. ಕವಿತಾ ಸನಿಲ್ ಅವರು ಮನಪಾ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ನಗರ ಯೋಜನಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಮಂಗಳೂರು ಮಹಾನಗರದ ಮೇಯರ್ ಹುದ್ದೆ ಅಲಂಕರಿಸಿದ್ದರು. ಇವರ ಕಾರ್ಯವೈಖರಿಗೆ ಪಕ್ಷದ ಹಿರಿಯ ಮುಖಂಡರು ಶ್ಲಾಘನೆ ವ್ಯಕ್ತಪಡಿಸಿ ಇದೀಗ ಎಐಸಿಸಿ ಸದಸ್ಯರಾಗಿ ನೇಮಕಗೊಳಿಸಿದ್ದಾರೆ.

ಮಹತ್ವದ ತೀರ್ಮಾನ, ಅಭಿವೃದ್ಧಿ ಕಾರ್ಯ ಅನುಷ್ಠಾನ ತೃಪ್ತಿ ತಂದಿದೆ

Thursday, March 8th, 2018
kavitha-sanil-mayor

ಮಂಗಳೂರು: ಮಸಾಜ್‌ ಪಾರ್ಲರ್‌ ಹಾಗೂ ಸ್ಕಿಲ್‌ ಗೇಮ್‌ಗಳಿಗೆ ದಾಳಿ, ಪುರಭವನದ ಬಾಡಿಗೆ ದರ ಇಳಿಕೆ ಸೇರಿದಂತೆ ಹಲವಾರು ಮಹತ್ವಪೂರ್ಣ ತೀರ್ಮಾನ ಕೈಗೊಂಡು, 180 ಕೋ.ರೂ.ಗಳಿಗೂ ಅಧಿಕ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸುವ ಮೂಲಕ ನನ್ನ ಒಂದು ವರ್ಷ ಅವಧಿಯ ಮೇಯರ್‌ ಹುದ್ದೆ ತೃಪ್ತಿ ತಂದಿದೆ ಎಂದು ಮನಪಾ ನಿರ್ಗಮನ ಮೇಯರ್‌ ಕವಿತಾ ಸನಿಲ್‌ ಹೇಳಿದರು. ಬುಧವಾರ ನಗರದ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಚಿವರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಕಾರ್ಪೊರೇಟರ್‌ಗಳು, ಅಧಿಕಾರಿಗಳು, ಮಾಧ್ಯಮದವರ ಸಹಕಾರದಿಂದ ನನ್ನ […]

ಮಂಗಳೂರು ಮೇಯರ್ ಅಭ್ಯರ್ಥಿ ಆಯ್ಕೆ ಬಿಕ್ಕಟ್ಟು ಅಂತ್ಯ: ಅಭ್ಯರ್ಥಿಯ ಹೆಸರು ಪ್ರಕಟ

Thursday, March 8th, 2018
bhasker-moily

ಮಂಗಳೂರು: ಮಹಾನಗರ ಪಾಲಿಕೆಯ ಮುಂದಿನ ಸಾಲಿನ ಮೇಯರ್ ಹುದ್ದೆಯ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಗೊಂದಲ ಕೊನೆಗೂ ಮುಕ್ತಾಯ ಕಂಡಿದ್ದು, ಹಿರಿಯ ಕಾರ್ಪೊರೇಟರ್ ಭಾಸ್ಕರ ಮೊಯ್ಲಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಉಪ ಮೇಯರ್ ಹುದ್ದೆಗೆ ಅಭ್ಯರ್ಥಿಯಾಗಿ ಮುಹಮ್ಮದ್ ಕುಂಜತ್ತಬೈಲ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಇಂದು ಬೆಳಗ್ಗೆ 7 ಗಂಟೆಯಿಂದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಕಾರ್ಪೊರೇಟರ್‌ಗಳನ್ನು ಹೊರಗಿಟ್ಟು ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ, ಮೊಯ್ದಿನ್ ಬಾವ ಹಾಗೂ […]

ಮಂಗಳೂರನ್ನು ರಾಜ್ಯದ 2ನೇ ಮುಖ್ಯ ನಗರವನ್ನಾಗಿಸಲು ಪಣ: ಲೋಬೋ

Wednesday, March 7th, 2018
j-r-lobo

ಮಂಗಳೂರು  : ಮಂಗಳೂರನ್ನು ಕರ್ನಾಟಕದ 2ನೇ ಮುಖ್ಯ ನಗರವನ್ನಾಗಿ ಅಭಿವೃದ್ಧಿಪಡಿಸಲು ಎಲ್ಲ ರೀತಿಯಲ್ಲಿ ಪ್ರಯತ್ನಿಸಲಾಗುವುದು ಎಂದು ಶಾಸಕ ಜೆ.ಆರ್‌. ಲೋಬೋ ಹೇಳಿದರು. ಬೆಂದೂರ್‌ವೆಲ್‌ ಸೈಂಟ್‌ ಸೆಬಾಸ್ಟಿಯನ್‌ ಪ್ಲಾಟಿನಂ ಜ್ಯೂಬಿಲಿ ಆಡಿಟೋರಿಯಮ್‌ನಲ್ಲಿ ಮಂಗಳವಾರ ನಡೆದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಂಗಳೂರಿನ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಸ್ಮಾರ್ಟ್‌ ಸಿಟಿ ಯೋಜನೆ, ಅಮೃತ್‌ ಯೋಜನೆ ಸಹಿತ ಹಲವಾರು ಯೋಜನೆಗಳು ಮಂಜೂ ರಾಗಿದೆ. ನಗರದಲ್ಲಿ ಸುಮಾರು 2,500 ಕೋಟಿ ರೂ. ಯೋಜನೆಗಳು […]

ಜನ ಸುರಕ್ಷಾ ಯಾತ್ರೆ ಜನರ ದಾರಿ ತಪ್ಪಿಸುವ ಯಾತ್ರೆ: ಸಚಿವ ರೈ

Monday, March 5th, 2018
ramanath-rai

ಮಂಗಳೂರು: ಬಿಜೆಪಿಯು ಜನ ಸುರಕ್ಷಾ ಯಾತ್ರೆಯನ್ನು ಪ್ರಚೋದನಾಕಾರಿ ಭಾಷಣ ಮಾಡುವ ಉದ್ದೇಶದಿಂದ ನಡೆಸಲಾಗುತ್ತಿದ್ದು, ಇದು ಜನರ ದಾರಿ ತಪ್ಪಿಸುವ ಯಾತ್ರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಆರೋಪಿಸಿದ್ದಾರೆ. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಸಾಮಾಜಿಕ ಸಾಮರಸ್ಯವನ್ನು ಕದಡುವವರು, ಬಿಜೆಪಿಗೆ ಸುರಕ್ಷಾ ಯಾತ್ರೆ ಕೈಗೊಳ್ಳುವ ಯೋಗ್ಯತೆ ಇಲ್ಲ ಎಂದವರು ಹೇಳಿದರು. ಜಿಲ್ಲೆಯಲ್ಲಿ ಎರಡು ಮತೀಯ ಸಂಘಟನೆಗಳೇ ಘರ್ಷಣೆ, ಹತ್ಯೆ ಹಾಗೂ ಅಹಿತಕರ ಘಟನೆಗಳಿಗೆ ಕಾರಣವಾಗುತ್ತಿವೆ. ಯಾವುದೇ ಪ್ರಕರಣಗಳಲ್ಲಿ […]

ಪಿಲಿಕುಳ: ದೇಶದ ಪ್ರಥಮ 3ಡಿ ಹೈಬ್ರೀಡ್ ತಾರಾಲಯ ಲೋಕಾರ್ಪಣ

Thursday, March 1st, 2018
pilukula

ಮಂಗಳೂರು: ಪಿಲಿಕುಳದ ಡಾ.ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ಭಾರತದ ಪ್ರಥಮ ‘ಸ್ವಾಮಿ ವಿವೇಕಾನಂದ’ ತ್ರಿಡಿ 8ಕೆ ಹೈಬ್ರೀಡ್ ತಾರಾಲಯವನ್ನು ಇಂದು ರಾಜ್ಯದ ಯೋಜನೆ, ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್. ಸೀತಾರಾಂ ಲೋಕಾರ್ಪಣೆಗೊಳಿಸಿದರು. ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ನಿರ್ಮಾಣವಾಗಿರುವ ‘ಸ್ವಾಮಿ ವಿವೇಕಾನಂದ ತಾರಾಲಯ’ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಮೇಯರ್ ಕವಿತಾ ಸನಿಲ್ ಹಾಗೂ ಶಾಸಕ ಜೆ.ಆರ್. ಲೋಬೋ ಸೇರಿದಂತೆ ಗಣ್ಯರೊಂದಿಗೆ ‘ನಾವು ನಕ್ಷತ್ರಗಳು’ ಎಂಬ ತ್ರಿಡಿ ಪ್ರದರ್ಶನವನ್ನು ವೀಕ್ಷಿಸಿದ ಬಳಿಕ […]

ಮಂಗಳೂರು ಮೇಯರ್ ಎಸ್ಸೆಸ್ಸೆಲ್ಸಿ ಫೇಲ್, ಸಾಮಾನ್ಯ ಸಭೆಯಲ್ಲಿ ಅದೇ ಚರ್ಚೆ!

Wednesday, February 28th, 2018
kavitha-sanil

ಮಂಗಳೂರು: ರಫ್ ಅಂಡ್ ಟಫ್ ಮೇಯರ್ ಎಂದೇ ಹೇಳುವ ಮಂಗಳೂರು ಮೇಯರ್ ಕವಿತಾ ಸನಿಲ್ ಶೈಕ್ಷಣಿಕ ವಿಚಾರ ಭಾರೀ ಚರ್ಚೆಯಲ್ಲಿದೆ. ಕವಿತಾ ಸನಿಲ್ ಎಸ್ಸೆಸ್ಸೆಲ್ಸಿ ಫೇಲ್ ಆಗಿದ್ದಾರೆ ಎಂಬುದು ಸದ್ಯಕ್ಕೆ ವಿಪಕ್ಷಗಳು ಮಾಡುತ್ತಿರುವ ಆರೋಪ. ಅಷ್ಟೇ ಅಲ್ಲ, ಹೀಗೆ ಎಸ್ಸೆಸ್ಸೆಲ್ಸಿ ಫೇಲಾದ ಕವಿತಾ ಸನಿಲ್ ತಮ್ಮದು ಪದವಿ ಆಗಿದೆ ಎಂದು ಸುಳ್ಳು ಹೇಳಿದ್ದಾರೆ ಎಂಬುದು ಆಕ್ಷೇಪ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಮುಖಂಡ ಹಾಗೂ ವಿಪಕ್ಷ ನಾಯಕ ಗಣೇಶ್ ಹೊಸಬೆಟ್ಟು ಇದೇ […]