ಕಾಂಗ್ರೆಸ್ ಕಾರ್ಯಕರ್ತನ ನಿಗೂಢ ಸಾವು
Sunday, March 6th, 2016ಕಾಸರಗೋಡು: ಕಾಂಗ್ರೆಸ್ ಕಾರ್ಯಕರ್ತನ ಮೃತದೇಹ ಮನೆಯೊಳಗೆ ಮೃತಪಟ್ಟಿ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿನಲ್ಲಿ ನಿಗೂಢತೆ ಉಂಟಾದ ಹಿನ್ನೆಲೆಯಲ್ಲಿ ಮೃತದೇಹವನ್ನು ಹೆಚ್ಚಿನ ಮರಣೋತ್ತರ ಪರೀಕ್ಷೆಗಾಗಿ ಪೆರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಉದುಮ ಮಾಂಗಾಡ್ ಮೇಲ್ಬಾರ ಕಾಲನಿ ನಿವಾಸಿ ಬಾಲಕೃಷ್ಣನ್ ಅವರ ಪುತ್ರ ಚಂದ್ರನ್(40) ಮೃತಪಟ್ಟವರು. ಚಂದ್ರನ್ ಶನಿವಾರ ರಾತ್ರಿ ತೃಕ್ಕನ್ನಾಡ್ ಕ್ಷೇತ್ರ ಆರಾಟು ಮಹೋತ್ಸವಕ್ಕೆ ತೆರಳಿದ್ದರು. ಮನೆಯ ಇತರರು ಬೇರೆಡೆಗೆ ಕಾರ್ಯಕ್ರಮ ನಿಮಿತ್ತ ತೆರಳಿದ್ದರು. ಆದಿತ್ಯವಾರ ಬೆಳಗ್ಗೆ ಅವರು ಮನೆಗೆ ಮರಳಿದಾಗ ಚಂದ್ರನ್ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಕಂಡು […]