ಸಚಿವ ಸುನಿಲ್ ಕುಮಾರ ಅವರಿಗೆ ಅಭಿನಂದನೆಯಾಗಿ ಬಂದ ರೂ. 5,20,594 ಮೌಲ್ಯದ ಪುಸ್ತಕಗಳು ಗ್ರಂಥಾಲಯಕ್ಕೆ ಹಸ್ತಾಂತರ

Tuesday, September 7th, 2021
Books

ಕಾರ್ಕಳ : ಕರ್ನಾಟಕ ಸರಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾಗಿ ಆಯ್ಕೆಯಾದ ಸಂದರ್ಭ ಸಚಿವ ಸುನಿಲ್ ಕುಮಾರ್ ರವರನ್ನು ಅಭಿನಂದಿಸಲು ಜನರು ಬಂದಾಗ ಅಭಿನಂದಿಸಲೇ ಬೇಕೆಂದಿದ್ದರೆ ಹಾರ ತುರಾಯಿ ಬದಲಾಗಿ ಪುಸ್ತಕಗಳನ್ನು ಕೊಡಿ ಅದನ್ನು ಗ್ರಂಥಾಲಯಕ್ಕೆ ನೀಡುತ್ತೇನೆ ಎಂಬ ವಿನಂತಿಯನ್ನು ಮಾಡಿದ್ದ ಹಿನ್ನೆಲೆಯಲ್ಲಿ ಕಾರ್ಕಳ, ಉಡುಪಿ ಮತ್ತು ಬೆಂಗಳೂರಿನಲ್ಲಿ ಸಚಿವರಿಗೆ ಅಭಿನಂದನೆಯಾಗಿ ಪುಸ್ತಕ ರೂಪದಲ್ಲಿ ಹಿಂದೂ ಧಾರ್ಮಿಕ ಗ್ರಂಥಗಳು, ಕಾದಂಬರಿ, ಯಕ್ಷಗಾನ, ನಾಟಕ, ಮಹಾನ್ ಪುರುಷರ ಲೇಖನ, ಕಾನೂನು, ಸಂವಿಧಾನ ಪುಸ್ತಕಗಳು ಸೇರಿದಂತೆ […]

ಮಗನ ಮದುವೆ ಸಂಭ್ರಮದಲ್ಲೇ ಚೊಚ್ಚಲ ಕಾದಂಬರಿ ಬಿಡುಗಡೆ

Friday, December 15th, 2017
kadambari

ಮಂಗಳೂರು: ಕಥೆಗಾರ್ತಿ ಅನಿತಾ ನರೇಶ್ ಮಂಚಿಯವರು ತಮ್ಮ ಮಗನ ಮದುವೆಯ ಸಂಭ್ರಮದಲ್ಲಿ ಚೊಚ್ಚಲ ಕಾದಂಬರಿಯನ್ನು ಬಿಡುಗಡೆಗೊಳಿಸಿದ್ದಾರೆ. ಕಥೆಗಾರ್ತಿ ಅನಿತಾ-ನರೇಶ್ ದಂಪತಿಯ ಮಗನ ಮದುವೆ ಸಮಾರಂಭ ನಡೆಯಿತು. ಮಗ ಚೇತನ್, ಸ್ವಾತಿ ಮಂಚಿಯವರನ್ನು ಸಪ್ತಪದಿ ತುಳಿದು ಮನೆತುಂಬಿಸಿಕೊಳ್ಳುವ ಸಂಭ್ರಮದ ಸಂದರ್ಭದಲ್ಲಿ ಅನಿತಾರ `ಪದ ಕುಸಿಯೆ ನೆಲವಿಹುದು’ ಎಂಬ ಕಾದಂಬರಿಯನ್ನು ಅನಾವರಣಗೊಳಿಸಲಾಯಿತು. ದಿಟ್ಟ ಮಹಿಳೆಯೊಬ್ಬಳ ಕಥೆಯನ್ನು ಸಾರುವ ಕೃತಿ ಇದಾಗಿದೆ. ಹೆಸರಿಗೆ ತಕ್ಕ ಹಾಗೆ ಶಾಂತ ಸ್ವಭಾವದ ಶಾಂತಿ ಬದುಕಿನುದ್ದಕ್ಕೂ ಹೋರಾಟದ ಹಾದಿಯಲ್ಲಿ ಸಾಗುವ ನೈಜ ಬದುಕನ್ನಾಧರಿಸಿ ಬರೆದ ಕೃತಿಯನ್ನು […]

ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ “ಢುಂಢಿ” ಕಾದಂಬರಿಯ, ಲೇಖಕನಿಗೆ ಕಠಿಣ ಶಿಕ್ಷೆ ವಿಧಿಸಿ

Friday, August 30th, 2013
Hindu Jagaran Vedike

ಮಂಗಳುರು : ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಶ್ರೀಗಣೇಶನ ಅಪಮಾನ ಮಾಡಿದ “ಢುಂಢಿ” ಕಾದಂಬರಿಯನ್ನು ನಿಷೇಧಿಸಿ, ಲೇಖಕನಿಗೆ ಕಠಿಣ ಶಿಕ್ಷೆ ವಿಧಿಸಿ ಮತ್ತು ದೇವತೆಗಳ ಅಪಮಾನ ತಡೆಯಲು ಪ್ರತ್ಯೇಕ ಕಾನೂನು ಜಾರಿ ಮಾಡಲು ಆಗಸ್ಟ್ 30, ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿಯ ಎದುರು ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸನಾತನ ಸಂಸ್ಥೆಯ ಸದಸ್ಯರಾದ ಸುಕನ್ಯ ಆಚಾರ್ ದಿನಾಂಕ 25.8.2013 ರಂದು ಬೆಂಗಳೂರಿನ ಸಭಾಂಗಣದಲ್ಲಿ ಯೊಗೀಶ್ ಮಾಸ್ಟರ್  ರಚಿಸಿದ  “ಢುಂಢಿ” ಅರಣ್ಯಕನೊಬ್ಬ ಗಣಪತಿಯಾದ ಕಥೆ ಎಂಬ ಕಾದಂಬರಿಯು ಬಿಡುಗಡೆಯಾಗಿದೆ. […]

`ಸರದಿ’ ಕಾದಂಬರಿ ಮರು ಚಿಂತನಾ ಕಾರ್ಯಕ್ರಮ

Monday, October 4th, 2010
ಶ್ರೀನಿವಾಸ ದೇಶಪಾಂಡೆ

ಮಂಗಳೂರು : ದಾಸಜನ ಮಂಗಳೂರು ಹಾಗೂ ಮನೋಹರ ಗ್ರಂಥಮಾಲ ಧಾರವಾಡ ಇವುಗಳ ಸಹಮಿಲನದಲ್ಲಿ ಡಾ| ನಾ. ದಾಮೋದರ ಶೆಟ್ಟಿ ರಚಿಸಿದ `ಸರದಿ’ ಕಾದಂಬರಿಯ ಮರು ಚಿಂತನಾ ಕಾರ್ಯಕ್ರಮ ಸಂತ ಅಲೋಷಿಯಸ್ ಕಾಲೇಜಿನ ಸಭಾಂಗಣದಲ್ಲಿ ಇಂದು ಸಂಜೆ 5.30ಕ್ಕೆ ನಡೆಯಿತು. ದಾರವಾಡದಲ್ಲಿ ಇತ್ತೀಚೆಗೆ ಬಿಡುಗಡೆಗೊಂಡ `ಸರದಿ’ ಕಾದಂಬರಿಯ ಮರು ಚಿಂತನಾ ವಿಷಯದಲ್ಲಿ ಶ್ರೀನಿವಾಸ ದೇಶಪಾಂಡೆ ಮಾತಾಡಿದರು. ಓದುಗನಲ್ಲಿ ಕಾದಂಬರಿಯ ವಿಷಯ ವಿಸ್ತಾರಗೊಳ್ಳಲು ಓದುಗರು ಅದರ ವಿಷಯವನ್ನು ಸಂಭಾಷಿಸ ಬೇಕು, ಕೃತಿ ಚಿಕ್ಕದಾದರೂ ಅದರಲ್ಲಿರುವ ಅನೇಕ ವಿಷಯಗಳು ನಮ್ಮ ಬುದ್ದಿ […]