ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಮಾಜಿ ಪ್ರಧಾನಿ ಹೆಚ್‌‌.ಡಿ. ದೇವೇಗೌಡ ಭೇಟಿ

Saturday, October 8th, 2016
kollur-shree-mookambika

ಉಡುಪಿ: ಜಿಲ್ಲೆಯ ಐತಿಹಾಸಿಕ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಮಾಜಿ ಪ್ರಧಾನಿ ಹೆಚ್‌‌.ಡಿ. ದೇವೇಗೌಡ ಭೇಟಿ ನೀಡಿದ್ದರು. ಪತ್ನಿ ಚೆನ್ನಮ್ಮ ಅವರ ಜೊತೆ ಆಗಮಿಸಿದ ಗೌಡರು ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ನವರಾತ್ರಿ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇಂದು ಬೆಳಗ್ಗೆ ಶೃಂಗೇರಿಯಿಂದ ಕೊಲ್ಲೂರಿಗೆ ಆಗಮಿಸಿದ ವೇಳೆ ಮಾತನಾಡಿದ ಅವರು, ರಾಜಕೀಯ ಗೊಂದಲಕ್ಕೆ ಬಲಿಯಾದ ಕಾವೇರಿ ವಿವಾದಕ್ಕೆ ವಿಷಾಧ ವ್ಯಕ್ತಪಡಿಸಿದರು. ಮಹದಾಯಿ ಹೋರಾಟಕ್ಕೂ ತಮ್ಮ ಬೆಂಬಲ ಇದೆ ಎಂದು ತಿಳಿಸಿದರು. ಸರ್ವರಿಗೂ ನ್ಯಾಯಕ್ಕಾಗಿ ಹೋರಾಡುತ್ತೇನೆ, ತಮ್ಮ ಕೊನೆಯ […]

ನಾಡಹಬ್ಬ ದಸರಾ ಮಹೋತ್ಸವಕ್ಕೆ ಶ್ರೀಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ವಿದ್ಯುಕ್ತ ಚಾಲನೆ

Saturday, October 1st, 2016
dasara

ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ನಾಡ ಅಧಿದೇವತೆ ಶ್ರೀಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಹಿರಿಯ ಸಾಹಿತಿ, ನಾಡೋಜ ಚೆನ್ನವೀರ ಕಣವಿ ಹಾಗೂ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ವಿದ್ಯುಕ್ತ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಾಹಿತಿ, ನಾಡೋಜ ಚೆನ್ನವೀರ ಕಣವಿ, ಅತ್ಯಂತ ಸಂತೋಷದಿಂದ ದಸರಾ ಉದ್ಘಾಟಿಸಿದ್ದೇನೆ. 74 ವರ್ಷದ ಹಿಂದೆ 1942ರಲ್ಲಿ ಮೊದಲ ಬಾರಿ ದಸರಾ ನೋಡಿದ್ದೆ. ಬರಗಾಲದ ಸಂದರ್ಭ ಸರಳ, ಸಾಂಪ್ರದಾಯಿಕ ದಸರಾ ಔಚಿತ್ಯ ಸರಿ ಇದೆ […]

ಕಾವೇರಿ ವಿವಾದ ಇತ್ಯರ್ಥಕ್ಕೆ ಗೋಕರ್ಣನಾಥ ಕ್ಷೇತ್ರದಲ್ಲಿ ಪೂಜಾರಿ ಉರುಳು ಸೇವೆ

Monday, September 19th, 2016
janardana-poojary

ಮಂಗಳೂರು: ಕಾವೇರಿ ನದಿ ನೀರು ಹಂಚಿಕೆ ಹಿನ್ನೆಲೆಯಲ್ಲಿ ಮೂರು ರಾಜ್ಯಗಳ ನದಿ ವಿವಾದದ ಇತ್ಯರ್ಥಕ್ಕಾಗಿ ಹಿರಿಯ ಕಾಂಗ್ರೆಸ್ ನಾಯಕ, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಉರುಳು ಸೇವೆ ಮಾಡಿದರು. ಗೋಕರ್ಣನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಬೆಳ್ಳಿಯ ರಥದಲ್ಲಿ ದೇವರ ರಥೋತ್ಸವ ನಡೆಯಿತು. ರಥವನ್ನು ಎಳೆಯುತ್ತಿದ್ದಂತೆ ಮುಂಭಾಗದಲ್ಲಿ ಜನಾರ್ದನ ಪೂಜಾರಿ ಉರುಳು ಸೇವೆ ನಡೆಸಿದರು. 20 ನಿಮಿಷದಲ್ಲಿ ದೇವಸ್ಥಾನದ ಹೊರಾಂಗಣದಲ್ಲಿ ಒಂದು ಸುತ್ತು ಉರುಳು ಸೇವೆ ನಡೆಸಿದರು. ಶಾಸಕ ಜೆ.ಆರ್.ಲೋಬೋ, […]

ಕಾವೇರಿ ವಿವಾದ..ಪ್ರಧಾನಿ ಮಧ್ಯ ಪ್ರವೇಶ ಸಾಧ್ಯವೇ ಇಲ್ಲವೆಂದ ಯಡಿಯೂರಪ್ಪ

Friday, September 16th, 2016
yadiyoorappa

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದ ವಿಚಾರದಲ್ಲಿ ಪ್ರಧಾನಿ ಮಧ್ಯ ಪ್ರವೇಶ ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಇಂದು ನಗರದ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ವಿವಾದ ಕೋರ್ಟ್ ಮುಂದೆ ಇರುವುದರಿಂದ ಪ್ರಧಾನಿ ಮಧ್ಯ ಪ್ರವೇಶ ಪ್ರಯೋಜನ ಸಾಧ್ಯವಿಲ್ಲ ಎಂದರು. ರಾಜಕೀಯ ಕಾರಣದಿಂದ ಪ್ರಧಾನಿ ಮಧ್ಯ ಪ್ರವೇಶಕ್ಕೆ ಒತ್ತಾಯಿಸಲಾಗುತ್ತಿದೆ. ಇದರಿಂದ ಯಾವುದೇ ಪ್ರಯೋಜನ ಇಲ್ಲ. ಕಾವೇರಿ ವಿಷಯದಲ್ಲಿ ಪ್ರಧಾನಿ ಮಧ್ಯ ಪ್ರವೇಶಕ್ಕೆ ಒತ್ತಾಯಿಸುವುದರಲ್ಲಿ ಅರ್ಥವಿಲ್ಲ ಎಂದು ಸಿಎಂ […]