ಮನೆಯಲ್ಲಿಯೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ

Thursday, January 18th, 2024
kavya

ಬೆಳ್ತಂಗಡಿ: ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಗುರುವಾರ ಮಧ್ಯಾಹ್ನ ಅಳದಂಗಡಿ ಸಮೀಪ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಅಳದಂಗಡಿ ಸಮೀಪದ ಕುಬಲಾಜೆ ಮನೆ ನಿವಾಸಿ ಉದ್ಯಮಿ ಸುನಿಲ್ ಅವರ ಪತ್ನಿ ಕಾವ್ಯ(32) ಎನ್ನಲಾಗಿದೆ. ಮೃತರಿಗೆ ಪತಿ, ಓರ್ವ ಪುತ್ರ, ಪುತ್ರಿ ಇದ್ದಾರೆ. ಆತ್ಮಹತ್ಯೆಗೆ ಕಾರಣವೇನು ಎಂದು ತಿಳಿದು ಬಂದಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ವೇಣೂರು ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ಆತ್ಮಹತ್ಯೆ ಪ್ರಕರಣ..ಎಸ್ಐಟಿಗೆ ನೀಡಬೇಕೆಂದು ಕಾವ್ಯ ಹೆತ್ತವರ ಆಗ್ರಹ!

Saturday, July 7th, 2018
kavya

ಮಂಗಳೂರು: ಕಳೆದ ವರ್ಷ ಜುಲೈ 20 ರಂದು ನಡೆದ ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ಆತ್ಮಹತ್ಯೆ ಪ್ರಕರಣವನ್ನು ಎಸ್ಐಟಿಗೆ ನೀಡಬೇಕೆಂದು ಕಾವ್ಯ ಹೆತ್ತವರು ಮತ್ತು ಜಸ್ಟಿಸ್ ಫಾರ್ ಕಾವ್ಯ ಹೋರಾಟ ಸಮಿತಿ ಆಗ್ರಹಿಸಿದೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾವ್ಯ ತಾಯಿ ಬೇಬಿ ಪೂಜಾರಿ, ಕಾವ್ಯ ಮೃತಪಟ್ಟು ವರ್ಷವಾಗುತ್ತಿದೆ. ಆದರೆ ಮಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಗತಿಯ ಬಗ್ಗೆ ಪೊಲೀಸ್ ಇಲಾಖೆ ಮಾಹಿತಿ ನೀಡುತ್ತಿಲ್ಲ. ಕೇಳಿದರೆ ಒಂದು ವರದಿ ಬರಲು ಬಾಕಿಯಿದೆ ಎನ್ನುತ್ತಾರೆ ಎಂದರು. ಜಸ್ಟಿಸ್ ಫಾರ್ ಕಾವ್ಯ ಹೋರಾಟ […]

ಪತಿಯನ್ನ ಕೊಂದು ಸಹಜ ಸಾವೆಂದು ನಾಟಕವಾಡಿದ್ದ ಪತ್ನಿ ಅರೆಸ್ಟ್

Tuesday, June 5th, 2018
murdered

ಹುಬ್ಬಳ್ಳಿ: ಪತಿಯನ್ನು ಕೊಂದು ಸಹಜ ಸಾವು ಎಂದು ನಾಟಕವಾಡಿದ್ದ ಪತ್ನಿಯನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಕಾವ್ಯ ಅಲಿಯಾಸ್ ಭಾರತಿ(40) ಬಂಧಿತ ಮಹಿಳೆ. ಮೇ 2 ರಂದು ಓಂ ನಗರದಲ್ಲಿ ನಿವಾಸದಲ್ಲಿ ಪತಿ ಶಿವಯೋಗಿ ಹಳೆಮನೆಯನ್ನ ಪತ್ನಿ ಕಾವ್ಯ ಕೊಲೆ ಮಾಡಿದ್ದಳು. ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಕೊಲೆ ಮಾಡಿದ್ದಳು. ಬಳಿಕ ಮಂಚದ ಮೇಲಿಂದ ಬಿದ್ದು ಸತ್ತಿದ್ದಾರೆಂದು ಎಂದು ಕಥೆ ಕಟ್ಟಿದ್ದಳು. ಆದ್ರೆ ಶಿವಯೋಗಿ ಸಹೋದರಿ ರಾಜೇಶ್ವರಿ ಅವರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದರು. […]

ಕಾವ್ಯಳ ಅನುಮಾನಾಷ್ಪದ ಸಾವಿನ ನಿಷ್ಪಕ್ಷಪಾತ ತನಿಖೆಗೆ ಅ.ಭಾ.ವಿ.ಪ ಒತ್ತಾಯ

Saturday, July 29th, 2017
abvp

ಮಂಗಳೂರು : ಪ್ರತಿಭಾವಂತ ಕ್ರೀಡಾಪಟು, ಆಳ್ವಾಸ್ ಶಿಕ್ಷಣ ಸಂಸ್ಥೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಕಾವ್ಯಾ ಸಾವು ಹಲವು ಅನುಮಾನಗಳನ್ನು ಹುಟ್ಟಿಸಿದ್ದು. ಈ ಘಟನೆಯ ಹಿಂದಿರುವ ನಿಗೂಢತೆಯನ್ನು ಬಯಲಿಗೆಳೆದು ನಿಷ್ಪಕ್ಷಪಾತ ತನಿಖೆ ನಡೆಸಲು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ದ.ಕ. ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿತು. ಜುಲೈ 20 ಗುರುವಾರ ಬೆಳಗ್ಗೆ ಬ್ಯಾಡ್ಮಿಂಟನ್ ಪ್ರಾಕ್ಟಿಸ್ ಗೆ ಹೋಗುವಾಗಲು, ಶಾಲೆಗೆ ಹಾಜರಾದಗಲೂ ಲವಲವಿಕೆಯಿಂದ ಇದ್ದ ಕಾವ್ಯಾ, ತರಗತಿಯಿಂದ ಹಿಂತಿರುಗುವಾಗ ತೀವ್ರ ಖಿನ್ನತೆಗೆ ಒಳಗಾಗಿದ್ದು, ಅನುಮಾನಗಳನ್ನು ತಂದಿದೆ. ಆಕೆ ತರಗತಿಯಲ್ಲಿ ಶಿಕ್ಷಕರಿಂದ […]