ಕಾಶ್ಮೀರದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ನಿಲ್ಲಲು, ಹಿಂದೂಗಳು ಸಂಘಟಿತರಾಗಬೇಕು ! – ರಾಹುಲ ಕೌಲ್

Saturday, August 8th, 2020
Rahul_Kaul

ಮಂಗಳೂರು : ಕಲಂ 370 ರದ್ದು ಪಡಿಸಿದ ನಂತರ ದೇಶದಾದ್ಯಂತ ಹಿಂದೂಗಳಿಗೆ ನೆಮ್ಮದಿ ಸಿಕ್ಕಿದರೂ, ಜಿಹಾದಿ ಭಯೋತ್ಪಾದಕರು ತದನಂತರ 22 ಭಯೋತ್ಪಾದಕ ಚಟುವಟಿಕೆಗಳಲ್ಲಿ ಹಿಂದೂಗಳ ಹತ್ಯೆ ಮಾಡಿದ್ದಾರೆ. 1990 ರಲ್ಲಿ ಕಾಶ್ಮೀರಿ ಹಿಂದೂಗಳ ವಂಶನಾಶದಂತೆ ಇಂದಿಗೂ ನಡೆಯುತ್ತಿದೆ. ಹೀಗಾದರೆ ಹಿಂದೂಗಳ ಪುನರ್ವಸತಿ ಹೇಗಾಗಬಹುದು ? ಇದನ್ನು ತಡೆಗಟ್ಟಲು ಕೇಂದ್ರ ಸರಕಾರವು ‘ಕಾಶ್ಮೀರಿ ಹಿಂದೂಗಳ ವಂಶನಾಶವಾಗಿದೆ’, ಎಂಬುದನ್ನು ಕಾನೂನು ಮಾಡಿ ಪ್ರಪ್ರಥಮವಾಗಿ ಒಪ್ಪಿಕೊಳ್ಳಬೇಕು. ನಾವು ಈ ಬಗ್ಗೆ ‘ಪನೂನ್ ಕಾಶ್ಮೀರ ದೌರ್ಜನ್ಯ ಹಾಗೂ ನರಸಂಹಾರ ನಿರ್ಮೂಲನೆ ವಿಧೇಯಕ 2020’ […]

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ಧು ಎಬಿವಿಪಿಯಿಂದ ವಿಜಯೋತ್ಸವ ; ಪೊಲೀಸರಿಂದ ವಿರೋಧ

Tuesday, August 6th, 2019
Abvp

ಮಂಗಳೂರು : ಸೋಮವಾರ ಕೇಂದ್ರ ಸರ್ಕಾರ ಐತಿಹಾಸಿಕ ತೀರ್ಮಾನವನ್ನು ತೆಗೆದುಕೊಂಡು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ರದ್ಧುಗೊಳಿಸಿರುವುದನ್ನು ಮಂಗಳೂರು ಎಬಿವಿಪಿ ಘಟಕವು ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ವಿಜಯೋತ್ಸವವನ್ನಾಗಿ ಆಚರಿಸಿತು. ಈ ಸಂದರ್ಭ ಅಲ್ಲೇ ಇದ್ದ ಪೊಲೀಸರು ವಿಜಯೋತ್ಸವವನ್ನು ತಡೆಯಲು ಮುಂದಾದರು. ಇದನ್ನು ವಿರೋಧಿಸಿದ ಎಬಿವಿಪಿ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.  

ಶರಣಾದ ಉಗ್ರ ಭಾರತೀಯ ಸೇನೆ ಸೇರಿ ಹುತಾತ್ಮನಾದ

Tuesday, November 27th, 2018
soldier

ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾನುವಾರ ನಡೆದ ಕಾರ್ಯಾಚರಣೆಯಲ್ಲಿ ಉಗ್ರರ ಗುಂಡಿಗೆ ಎದೆಯೊಡ್ಡಿ ಹುತಾತ್ಮನಾದ ಲ್ಯಾನ್ಸ್ ನಾಯಕ್ ನಜೀರ್ ಅಹ್ಮದ್ ವಾನಿ ಒಂದು ಕಾಲದಲ್ಲಿ ಉಗ್ರಗಾಮಿ ಚಟುವಟಿಕೆಯಲ್ಲಿ ನಿರತರಾಗಿದ್ದರು. ಶರಣಾಗತರಾಗುವ ಉಗ್ರರನ್ನು ಕಾಶ್ಮೀರದಲ್ಲಿ ಇಖ್ವಾನ್ ಎಂದು ಕರೆಯುತ್ತಾರೆ. ಇದೇ ರೀತಿ ಶರಣಾಗಿ ಭಾರತೀಯ ಸೇನಾಪಡೆ ಸೇರಿದವರು ನಜೀರ್. ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಆರು ಉಗ್ರಗಾಮಿಗಳು ಯೋಧರ ಗುಂಡಿಗೆ ಬಲಿಯಾಗಿದ್ದರು. ಇದೇ ಕಾರ್ಯಾಚರಣೆಯಲ್ಲಿ ಗುಂಡೇಟು ತಿಂದು ಗಂಭೀರವಾಗಿ ಗಾಯಗೊಂಡಿದ್ದ ನಜೀರ್ ಅವರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, […]

ಕನ್ಯಾಕುಮಾರಿ ಟು ಕಾಶ್ಮೀರ… ಸ್ಕೂಟರ್​ನಲ್ಲೇ ದೇಶ ಸುತ್ತಿದ ಗೆಳೆಯರು!

Friday, July 20th, 2018
border

ಮಂಗಳೂರು: ಬೈಕ್ನಲ್ಲಿ ಟ್ರೆಕ್ಕಿಂಗ್ ಮಾಡಲು ಗಡುಸಾದ ವಾಹನಗಳನ್ನೇ ಬಯಸುತ್ತಾರೆ. ಗಾಡಿಯ ಸಿಸಿ ಸಾಮರ್ಥ್ಯವನ್ನು ಪರೀಕ್ಷಿಸಿ ಟ್ರೆಕ್ಕಿಂಗ್ ಹೊರಡುತ್ತಾರೆ. ಆದ್ರೆ ಮಂಗಳೂರು ನಿವಾಸಿಗಳಿಬ್ಬರು ಸ್ಕೂಟರ್ ಮೂಲಕ ಕಾಶ್ಮೀರ ತಲುಪಿ ಗಮನ ಸೆಳೆದಿದ್ದಾರೆ. ಹೌದು.., ಮಂಗಳೂರಿನ ಯುವಕರಿಬ್ಬರು ಹಳೇ ಲ್ಯಾಂಬಿ, ಲ್ಯಾಂಬ್ರೆಟ್ಟಾ ಸ್ಕೂಟರ್ ನಲ್ಲಿ ಕನ್ಯಾಕುಮಾರಿಯಿಂದ ಹೊರಟು ಕಾಶ್ಮೀರದ ಶಿಖರವನ್ನು ಯಶಸ್ವಿಯಾಗಿ ಏರಿದ್ದಾರೆ. ಅಷ್ಟೆ ಅಲ್ಲ, ಹಳೆಯ ಲ್ಯಾಂಬ್ರೆಟ್ಟಾ ಮೋಡೆಲ್ನ ವಾಹನವೂ ಪರ್ವತವನ್ನು ಏರಬಲ್ಲುದು ಎಂಬುದನ್ನು ಇದೇ ಮೊದಲ ಬಾರಿಗೆ ತೋರಿಸಿದ್ದಾರೆ. ಗಿರೀಶ್ ಪಿ ವಿ ಮತ್ತು ಸೂರಜ್ ಹೆನ್ರಿ […]

ದೇಶವಿರೋಧಿ ಘೊಷಣೆ ಕೂಗುವವರನ್ನು ನಿಯಂತ್ರಿಸಲು ನೂತನ ಕಾನೂನು ರೂಪಿಸಿಲು ಪ್ರತಿಭಟನೆ

Monday, February 19th, 2018
hindu

ಮಂಗಳೂರು: ಮದರಸಾದಿಂದಾಗುವ ದೇಶವಿರೋಧಿ ಕೃತ್ಯದ ಬಗ್ಗೆ ಆಳವಾಗಿ ವಿಚಾರಣೆಯನ್ನು ಮಾಡಲು ಸ್ವತಂತ್ರವಾದ ತಂಡವನ್ನು ನಿರ್ಮಿಸಬೇಕು ಹಾಗೆಯೇ ದೇಶವಿರೋಧಿ ಘೊಷಣೆ ಕೂಗುವವರನ್ನು ನಿಯಂತ್ರಿಸಲು ನೂತನ ಕಾನೂನು ರೂಪಿಸಬೇಕೆಂದು ಒತ್ತಾಯಿಸಿ ಮಂಗಳೂರು ಜಿಲ್ಲಾಧಿಕಾರಿ ಕಛೇರಿ ಮುಂಭಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಆಂದೋಲವನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಉಪೇಂದ್ರ ಆಚಾರ್ಯ, ’ಕಾಶ್ಮೀರದ ಸರ್ಕಾರವು ಒಂದೆಡೆ ಭಾರತೀಯ ಸೈನಿಕರ ಮೇಲೆ ಕಲ್ಲೆಸುವ 9730 ದೇಶದ್ರೋಹಿಗಳ ಮೇಲಿನ ಅಪರಾಧವನ್ನು ಹಿಂಪಡೆಯುತ್ತದೆ ಮತ್ತೊಂದೆಡೆ ಸೈನಿಕರು ಆತ್ಮರಕ್ಷಣೆಗಾಗಿ ಮಾಡಿದ ಕಾರ್ಯಾಚರಣೆಯಲ್ಲಿ ಇಬ್ಬರು ಕಲ್ಲುತೂರಾಟ ಮಾಡುವ ದೇಶದ್ರೋಹಿಗಳು […]

ಯೇನಪೊಯದಲ್ಲಿ ಕಾಶ್ಮೀರದ ಬಡ ರೋಗಿಗೆ ಕಿಡ್ನಿ ಕಸಿ

Thursday, January 11th, 2018
kashmir

ಮಂಗಳೂರು: ದೇರಳಕಟ್ಟೆಯ ಯೇನಪೊಯ ಮೆಡಿಕಲ್‌ ಕಾಲೇಜ್‌ ಆಸ್ಪತ್ರೆಯು ಲಿಂಫೊಸೈಟ್‌ ಕ್ರಾಸ್‌ಮ್ಯಾಚ್‌ ಮತ್ತು ಅತ್ಯಂತ ಕನಿಷ್ಠ ಶಸ್ತ್ರಕ್ರಿಯೆಯನ್ನು ಒಳಗೊಂಡ ರೊಬೊಟಿಕ್‌ ಕಸಿ ವಿಧಾನದ ಮೂಲಕ ಕಾಶ್ಮೀರದ ಬಡ ರೋಗಿಯೊಬ್ಬರಿಗೆ ಮೂತ್ರಪಿಂಡ ಕಸಿ ನಡೆಸಿ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇರಿಸಿದೆ. ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯ ಅವಿಭಾಜ್ಯ ಭಾಗವಾದ ಲಿಂಫೋಸೈಟ್‌ ಕ್ರಾಸ್‌ ಮ್ಯಾಚ್‌ ಮಾಡುವ ಸೌಲಭ್ಯ ಮಂಗಳೂರಿನಲ್ಲಿ ಯೇನಪೊಯ ಮೆಡಿಕಲ್‌ ಕಾಲೇಜ್‌ ಆಸ್ಪತ್ರೆಯಲ್ಲಿದೆ. ಈಗ ಈ ವೈದ್ಯಕೀಯ ಕಾಲೇಜು ಆಸ್ಪತ್ರೆ ರಾಜ್ಯದ ಗಡಿಯನ್ನು ಮೀರಿ, ಜಮ್ಮು ಮತ್ತು ಕಾಶ್ಮೀರದ ಬಡ […]

ಗೋವಂಶ ರಕ್ಷಣೆಗೆ ಬಿಜೆಪಿ ಕಾರ್ಯಕರ್ತರ ಒಕ್ಕೊರಳ ಧ್ವನಿ

Saturday, September 4th, 2010
ಗೋವಂಶ ರಕ್ಷಣೆಗೆ ಬಿಜೆಪಿ ಕಾರ್ಯಕರ್ತರ ಒಕ್ಕೊರಳ ಧ್ವನಿ

ಮಂಗಳೂರು : ಗೋ ಹತ್ಯೆ ನಿಷೇಧ ಕಾಯ್ದೆಗೆ ಅಂಕಿತ ಹಾಗೂ ಕಾಶ್ಮೀರಕ್ಕೆ ಸ್ವಾಯತ್ತತೆ ವಿರೋಧಿಸಿ, ಭಾರತೀಯ ಜನತಾಪಾರ್ಟಿ ವತಿಯಿಂದ ಪ್ರತಿಭಟನೆಯು ಇಂದು ಬೆಳಿಗ್ಗೆ ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿಯ ಮುಂಭಾಗದಲ್ಲಿ ಜರಗಿತು.