Blog Archive

ಕೊರೋನಾ ಸೋಂಕು ಶುಕ್ರವಾರ : ದಕ್ಷಿಣ ಕನ್ನಡ ಜಿಲ್ಲೆ 311, ಉಡುಪಿ ಜಿಲ್ಲೆ84, ಕಾಸರಗೋಡು ಜಿಲ್ಲೆ 32

Saturday, July 18th, 2020
CORONA

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ 311 ಮಂದಿಯಲ್ಲಿ ಕೊರೋನಾ  ಸೋಂಕು ಇರುವುದು ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3074ಕ್ಕೆ ಏರಿಕೆಯಾಗಿದೆ. 1725 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ 15 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಒಟ್ಟು 1278 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 23168 ಮಂದಿಯ ವರದಿ ಜಿಲ್ಲೆಯಲ್ಲಿ ಇಲ್ಲಿಯ ತನಕ ನೆಗೆಟಿವ್ ಬಂದಿದೆ. ಶುಕ್ರವಾರದಂದು ಜಿಲ್ಲೆಯಲ್ಲಿ ಕೊರೊನಾ ಸೋಂಕೊನಿಂದಾಗಿ 8 ಮಂದಿ ಮೃತಪಟ್ಟಿ ದ್ದಾರೆ.  ಮಂಗಳೂರಿನ 72 ವರ್ಷದ […]

ಕೊರೋನಾ ಸೋಂಕಿತರು : ದಕ್ಷಿಣ ಕನ್ನಡ ಜಿಲ್ಲೆ 73, ಉಡುಪಿ ಜಿಲ್ಲೆ 53, ಕಾಸರಗೋಡು ಜಿಲ್ಲೆ 74

Thursday, July 16th, 2020
corona virus

ಮಂಗಳೂರು : ದಕ್ಷಿಣ ಕನ್ನಡ  ಜಿಲ್ಲೆಯಲ್ಲಿ ಬುಧವಾರ 73 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.  ಜಿಲ್ಲೆಯಲ್ಲಿ 104 ಮಂದಿಯ ಬುಧವಾರದಂದು ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2525 ಕ್ಕೆ ಏರಿಕೆಯಾಗಿದೆ. ಆ ಮೂಲಕ ಜಿಲ್ಲೆಯಲ್ಲಿ ಇಲ್ಲಿಯ ತನಕ 1089 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 1379 ಮಂದಿ ಸದ್ಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಜಿಲ್ಲೆಯಲ್ಲಿ ಇಲ್ಲಿಯ ತನಕ 22740 ಮಂದಿಯ ವರದಿ ನೆಗೆಟಿವ್ ಬಂದಿದೆ. ದಕ್ಷಿಣ ಕನ್ನಡದಲ್ಲಿ  ಬುಧವಾರದಂದು ನಾಲ್ವರು ಸೋಂಕಿನಿಂದಾಗಿ […]

ಕೊರೊನಾ ಸೋಂಕು : ದಕ್ಷಿಣ ಕನ್ನಡ ಜಿಲ್ಲೆ- 83, ಉಡುಪಿ ಜಿಲ್ಲೆ- 28, ಕಾಸರಗೋಡು – 13

Tuesday, July 7th, 2020
corona-district

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 83 ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1,359  ಕ್ಕೆ ಏರಿಕೆಯಾಗಿದೆ. ಮಂಗಳವಾರ ಓರ್ವ ವ್ಯಕ್ತಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು ಜಿಲ್ಲೆಯಲ್ಲಿ ಈವರೆಗೆ 26 ಮಂದಿ ಸಾವನ್ನಪ್ಪಿದ್ದಾರೆ. 83 ಮಂದಿಯ ಪೈಕಿ 48 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ, ಇಬ್ಬರಿಗೆ ದ್ವಿತೀಯ ಸಂಪರ್ಕದಿಂದ ಕೊರೊನಾ ಸೋಂಕು ತಗುಲಿದ್ದರೆ 20 ಐಎಲ್‌ಐ ಹಾಗೂ 1 ಎಸ್‌ಎಆರ್‌ಐ ಪ್ರಕರಣವಾಗಿದೆ. ಇಬ್ಬರು ಚಿಕ್ಕಮಗಳೂರು ಜಿಲ್ಲೆಗೆ ಹೋಗಿ […]

ಮಂಗಳೂರು – ಕಾಸರಗೋಡಿನ ಮಧ್ಯೆ ಪಾಸ್ ಬಳಸಿ ಸಂಚರಿಸಲು ಅನುಮತಿ

Wednesday, June 3rd, 2020
sidhu-roopesh

ಮಂಗಳೂರು:   ಮಂಗಳೂರು – ಕಾಸರಗೋಡಿನ ಮಧ್ಯೆಯ ನಿತ್ಯ ಸಂಚಾರಕ್ಕೆ ಈಗ ಗ್ರೀನ್ ಸಿಗ್ನಲ್ ಸಿಕ್ಕಿದೆ. ಉದ್ಯೋಗಿಗಳು, ವಿದ್ಯಾರ್ಥಿಗಳು, ಆರೋಗ್ಯ ಸೇವಕರು ಮತ್ತು ಸರ್ಕಾರಿ ನೌಕರರು ಪಾಸ್ ಬಳಸಿ ಸಂಚರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಆದೇಶ ನೀಡಿದ್ದಾರೆ. ಕಾಸರಗೋಡಿನಲ್ಲಿರುವ ಬಹಳಷ್ಟು ಗಡಿನಾಡ ಕನ್ನಡಿಗರು ಉದ್ಯೋಗ, ಶಿಕ್ಷಣ ನಿಮಿತ್ತ ದಿನನಿತ್ಯ ಮಂಗಳೂರಿಗೆ ಸಂಚರಿಸುತ್ತಾರೆ. ಇಂತವರಿಗೆ ಪಾಸ್ ಬಳಸಿ ನಿತ್ಯ ಸಂಚರಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಅವಕಾಶ ಕಲ್ಪಿಸಿದರು. ವೆಬ್ ಸೈಟ್ ನಲ್ಲಿ ರಿಜಿಸ್ಟರ್ ಮಾಡಿ ಪಾಸ್ ಪಡೆಯಲು […]

ಕಾಸರಗೋಡಿನಲ್ಲಿ ಭಾನುವಾರ ಹತ್ತು ಮಂದಿಗೆ ಕೋವಿಡ್ ಪಾಸಿಟಿವ್, 3691 ಮಂದಿ ಮೇಲೆ ನಿಗಾ

Sunday, May 31st, 2020
kerala-corona

ಕಾಸರಗೋಡು :  ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಭಾನುವಾರ  ಮಹಾರಾಷ್ಟ್ರದಿಂದ ಬಂದ ಹತ್ತು ಮಂದಿಗೆ  ಕೋವಿಡ್ ದ್ರಢಪಟ್ಟಿದೆ. ಮಂಗಲ್ಪಾಡಿ ನಾಲ್ಕು, ಪೈವಳಿಕೆ, ಮಧೂರು ತಲಾ ಎರಡು, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್, ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. ಮೊಗ್ರಾಲ್ ಪುತ್ತೂರು ನಿವಾಸಿ 59 ವರ್ಷದ ವ್ಯಕ್ತಿ, ಪೈವಳಿಕೆ ನಿವಾಸಿಗಳಾದ 43, 40 ವರ್ಷದ ವ್ಯಕ್ತಿಗಳು, ಕಾಸರಗೋಡು ನಗರಸಭೆ ನಿವಾಸಿ 30 ವರ್ಷದ ವ್ಯಕ್ತಿ, ಮಂಗಲ್ಪಾಡಿ ನಿವಾಸಿಗಳಾದ 64, 27, 23, 51 ವರ್ಷದ […]

ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ ನಾಲ್ವರಿಗೆ ಕೊರೊನಾ ಸೋಂಕು, ರಾಜ್ಯದಲ್ಲಿ ಹೊಸ 7 ಕೇಸ್, ಒಟ್ಟು 27 ಪ್ರಕರಣಗಳು ಸಕ್ರಿಯ

Monday, May 11th, 2020
KK-Shailaja

ಕಾಸರಗೋಡು : ಕಾಸರಗೋಡು ಕೊರೊನಾ ಮುಕ್ತ ಜಿಲ್ಲೆ ಎಂದು ಘೋಷಣೆಗೆ ತಯಾರಿ ನಡೆಸುತ್ತಿರುವ ಬೆನ್ನಿಗೆ ಮತ್ತೆ ನಾಲ್ವರಿಗೆ ಸೋಮವಾರ ಕೊರೊನಾ ಸೋಂಕು ಪತ್ತೆಯಾಗಿದೆ. ಕೊರೊನಾ ಸೋಂಕು ಕಾಣಿಸಿಕೊಂಡವರಲ್ಲಿ ಕುಂಬಳೆ ಮೂಲದ 41, 49 ವರ್ಷ ವಯಸ್ಸಿನ ಇಬ್ಬರು ಪುರುಷರು ಹಾಗೂ 61, 51 ವರ್ಷ ವಯಸ್ಸಿನ ಇಬ್ಬರು ವೃದ್ದರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಇಬ್ಬರು ವೃದ್ದರು ಪೈವಳಿಕೆ ಹಾಗೂ ಮಂಗಲ್ಪಾಡಿಯವರೆಂದು ತಿಳಿದುಬಂದಿದೆ. ಕೆಲವು ದಿನಗಳ ಹಿಂದೆ ಈ ನಾಲ್ವರೂ ಕಾಸರಗೋಡಿಗೆ ಮುಂಬೈಯಿಂದ ವಾಪಾಸ್ಸಾಗಿದ್ದರು ಎನ್ನಲಾಗಿದೆ. ಶನಿವಾರ ದುಬೈ ಮತ್ತು ಅಬು ದುಬಾಯಿಯಿಂದ  […]

ಕೊರೊನಾ ನಿಯಂತ್ರಣ : ಕಾಸರಗೋಡು ದೇಶಕ್ಕೆ ಮಾದರಿ ; ಕೇಂದ್ರ ಆರೋಗ್ಯ ಸಚಿವಾಲಯ

Saturday, April 18th, 2020
corona kasaragod

ಕಾಸರಗೋಡು : ಜಿಲ್ಲೆಯಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗದ್ದರೂ ಸೋಂಕು ತಡೆಯುವಲ್ಲಿ ಕಾಸರಗೋಡು ದೇಶಕ್ಕೆ ಮಾದರಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮೆಚ್ಚುಗೆ ವ್ಯಕ್ತಪಡಿಸಿದೆ. ಆರಂಭದಿಂದಲೇ ಆತಂಕದ ವಾತಾವರಣ ಕಾಸರಗೋಡಿನಲ್ಲಿ ಕಂಡು ಬಂದಿತ್ತು. 168 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು . ಈ ಪೈಕಿ 117 ಮಂದಿ ಗುಣಮುಖರಾಗಿದ್ದಾರೆ . ಯಾವುದೇ ಸಾವು ಸಂಭವಿಸಿಲ್ಲ. ಕೇರಳ ಸರಕಾರ, ಆರೋಗ್ಯ ಇಲಾಖೆ, ಜಿಲ್ಲಾಡಳಿತ ಕಾರ್ಯವನ್ನು ಶ್ಲಾಘಿಸಿದೆ. ಸೋಂಕು ಹರಡದಂತೆ ಆರಂಭದಲ್ಲಿ ಕ್ರಮ ತೆಗೆದುಕೊಂಡಿತ್ತು . ಕೊರೊನಾ ರೋಗಿಗಳಿಗೆ ವಿಶೇಷ ಆಸ್ಪತ್ರೆ […]

ಕಾಸರಗೋಡು ಕೊರೊನಾ ಹಾವಳಿ : ಪುತ್ತೂರು ವಿಭಾಗದ ಕಾಸರಗೋಡು, ಉಪ್ಪಳ ಕೆಎಸ್ಸಾರ್ಟಿಸಿ ಬಸ್ಸು ಸಂಚಾರ ರದ್ದು

Monday, March 23rd, 2020
putturu Kasaragod

ಪುತ್ತೂರು: ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪುತ್ತೂರು-ಕಾಸರಗೋಡು, ಪುತ್ತೂರು-ಉಪ್ಪಳ, ಪುತ್ತೂರು-ಅಡೂರು ಸೇರಿದಂತೆ ಕೆಎಸ್ಸಾರ್ಟಿಸಿ ಅಂತರ್‍ರಾಜ್ಯ ಸಾರಿಗೆ ಸೇವೆಯನ್ನು ಮಾ. 31ರವರೆಗೆ ಸ್ಥಗಿತಗೊಳಿಸಲಾಗಿದ್ದು, ಜಿಲ್ಲಾಡಳಿತದ ಸೂಚನೆಯಂತೆ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗ ನಿಯಂತ್ರಣಾಧಿಕಾರಿ ನಾಗೇಂದ್ರ ತಿಳಿಸಿದ್ದಾರೆ. ಪುತ್ತೂರು ವಿಭಾಗ ವ್ಯಾಪ್ತಿಯ ಧರ್ಮಸ್ಥಳ, ಬಿ.ಸಿ. ರೋಡು, ಮಡಿಕೇರಿ, ಸುಳ್ಯ ಘಟಕಗಳಿಂದಲೂ ಕಾಸರಗೋಡು ಜಿಲ್ಲೆಗೆ ಓಡಾಟ ನಡೆಸುವ ಬಸ್‍ಗಳ ಸಂಚಾರವನ್ನು ಮಾ. 31ರವರೆಗೆ ಸ್ಥಗಿತಗೊಳಿಸಲಾಗಿದೆ ಪ್ರಯಾಣಿಕರು ಸಹಕರಿಸುವಂತೆ ಅವರು ವಿನಂತಿಸಿದ್ದಾರೆ. ಮಾ. 22ರಂದು ನಡೆಯುವ […]

ಗಂಡ ಮಗುವನ್ನು ಬಿಟ್ಟು ಪರಾರಿಯಾಗಿದ್ದ ಯುವತಿ ಪ್ರಿಯಕರನ ಮನೆಯಲ್ಲಿ ಆತ್ಮಹತ್ಯೆ

Friday, March 13th, 2020
Jaya

ಕಾಸರಗೋಡು : ಮೂರು ವರ್ಷದ ಹಿಂದೆ ವೆಳ್ಳಿಕೋತ್‌‌ನ ಯುವಕನ ಜೊತೆ ವಿವಾಹವಾಗಿದ್ದ ಯುವತಿ  ಪತಿ ಮತ್ತು ಮಗುವನ್ನು ತೊರೆದು ಪ್ರಿಯಕರನ ಜೊತೆ ಪರಾರಿಯಾಗಿ, ಮೂರು ತಿಂಗಳ ಬಳಿಕ  ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಬೆಳಿಗ್ಗೆನಡೆದಿದೆ . ಪ್ರೇಮಿಗಳು ಪರವನಡ್ಕದಲ್ಲಿರುವ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಉದುಮ ಪಾಕ್ಯಾರಿನ ಜಿಶಾಂತ್ (33) ಮತ್ತು ಪತ್ನಿ ಜಯ (24) ಮೃತಪಟ್ಟವರು. ಮೂರು ತಿಂಗಳ ಹಿಂದೆಯಷ್ಟೇ ಪ್ರೀತಿಸಿ ವಿವಾಹವಾಗಿದ್ದರು. ಮೂರು ವರ್ಷದ ಹಿಂದೆ ವೆಳ್ಳಿಕೋತ್‌‌ನ ಯುವಕನ ಜೊತೆ ವಿವಾಹವಾಗಿದ್ದ ಜಯ, […]

ಕಾಸರಗೋಡು : ಬೈಕ್-ಕಾರು ನಡುವೆ ಭೀಕರ ಅಪಘಾತ; ದಂಪತಿ ಸ್ಥಳದಲ್ಲೇ ಮೃತ್ಯು

Monday, January 6th, 2020
accident

ಕಾಸರಗೋಡು : ಬೈಕ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ದಂಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಪೂರ್ವಾಹ್ನ 11 ಗಂಟೆ ಸುಮಾರಿಗೆ ಮುಳ್ಳೇರಿಯಾ ಸಮೀಪದ ಕಾರಡ್ಕದಲ್ಲಿ ನಡೆದಿದೆ. ಮೃತಪಟ್ಟವರನ್ನು ಗೋವಿಂದ ರಾಜ್( 53) ಮತ್ತು ಪತ್ನಿ ಉಮಾವತಿ ( 42 ) ಎಂದು ಗುರುತಿಸಲಾಗಿದೆ. ಗೋವಿಂದರಾಜ್ ಮತ್ತು ಪತ್ನಿ ಸಂಚರಿಸುತ್ತಿದ್ದ ಬೈಕಿಗೆ ಎದುರಿನಿಂದ ಅತೀ ವೇಗದಿಂದ ಬಂದ ಕಾರು ಢಿಕ್ಕಿ ಹೊಡೆಯಿತೆನ್ನಲಾಗಿದೆ. ಅಪಘಾತದ ತೀವ್ರತೆಗೆ ಬೈಕನ್ನು ಮೀಟರ್ ಗಳಷ್ಟು ದೂರ ಕಾರು ಎಳೆದೊಯ್ದಿದೆ. ಇದರಿಂದ […]