ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದ ಕಿಚ್ಚ ಸುದೀಪ್ ಕುಟುಂಬ

Sunday, December 12th, 2021
kicha-sudeep

ಸುಬ್ರಹ್ಮಣ್ಯ : ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕುಟುಂಬ ಸಮೇತರಾಗಿ ಭೇಟಿ ನೀಡಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದರು. ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಆಶ್ಲೇಷ ಬಲಿ ಪೂಜೆ ಹಾಗೂ ನಾಗಪ್ರತಿಷ್ಠಾ ಕಾರ್ಯವನ್ನು ನೆರವೇರಿಸಿದರು. ನಂತರ ಸುದೀಪ್ ಪತ್ನಿ ಪ್ರಿಯಾ, ಮಗಳು ಸಾನ್ವಿಯೊಂದಿಗೆ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರನ್ನ ಭೇಟಿ ಮಾಡಿ ಆಶೀರ್ವಾದ ಪಡೆದರು.  

ದೇವಸ್ಥಾನಗಳ ನಿರ್ಬಂಧ ತೆರವು : ನೆಗೆಟಿವ್ ವರದಿ ಹೊಂದಿದ್ದಲ್ಲಿ ಸೇವೆಗೆ ಅವಕಾಶ

Saturday, September 18th, 2021
Kateel Kukke Dharmasthala

ಮಂಗಳೂರು :  ಕೋವಿಡ್ ಸೋಂಕಿನ ಪಾಸಿಟಿವಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರತಿಷ್ಠಿತ ದೇವಸ್ಥಾನಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಈ ಹಿಂದೆ ವಿಧಿಸಲಾಗಿದ್ದ ನಿರ್ಬಂಧ ಗಳನ್ನು ಹಿಂಪಡೆದು ಸಾರ್ವಜನಿಕರ ಮುಕ್ತ ಪ್ರವೇಶಕ್ಕೆ ಹಾಗೂ ಸೇವೆಗಳನ್ನು ನಡೆಸಲು ಷರತ್ತುಗಳನ್ನು ಪಾಲಿಸುವ ನಿಬಂಧನೆಗಳಿಗೊಳಪಟ್ಟು ಜಿಲ್ಲಾಡಳಿತ ಅನುಮತಿ ನೀಡಿದೆ. ಷರತ್ತುಗಳಿಂತಿವೆ: 1, ದೇವಾಲಯಗಳಲ್ಲಿ ಕೋವಿಡ್ ಸಮುಚಿತ ವರ್ತನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ದೇವಳದ ಆಡಳಿತ ವರ್ಗವು ಇದನ್ನು ಕಟ್ಟುನಿಟಟಾಗಿ ಅನುಷ್ಠಾನಿಸುವ  ಜವಾಬ್ದಾರಿಯನ್ನು ಹೊಂದಿದೆ. 2. ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುವ […]

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನ್ನದಾನ ನಿಧಿಗೆ 10 ಲಕ್ಷ ರೂ. ದೇಣಿಗೆ ನೀಡಿದ ದೇವಸ್ಥಾನ ತಮಿಳು ನಿರ್ಮಾಪಕ

Saturday, July 24th, 2021
Arun Kumar

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತಮಿಳು ಚಿತ್ರರಂಗದ ನಿರ್ಮಾಪಕ, ನಿರ್ದೇಶಕ ಅರುಣ್ ಕುಮಾರ್(ಅಟ್ಲೀ) ದಂಪತಿ ಶುಕ್ರವಾರ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ವೇಳೆ ಅವರು ದೇವಳದ ಅನ್ನದಾನ ನಿಧಿಗೆ 10 ಲಕ್ಷ ರೂ. ದೇಣಿಗೆ ನೀಡಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಅವರಿಗೆ ದೇಣಿಗೆಯ ಚೆಕ್ ಅನ್ನು ಹಸ್ತಾಂತರಿಸಿದರು. ದೇವಳದ ಕಚೇರಿ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್, ಸುಬ್ರಹ್ಮಣ್ಯ ಗ್ರಾಪಂ ಸದಸ್ಯ ಹರೀಶ್ ಇಂಜಾಡಿ, ಮಾಜಿ ಸದಸ್ಯ ಸುರೇಶ್ ಭಟ್ ಉಪಸ್ಥಿತರಿದ್ದರು.

14 ಕೇಂದ್ರಗಳಲ್ಲಿ 14 ಗಣ್ಯರಿಂದ ಕಾರ್ಯಕ್ರಮಕ್ಕೆ ಚಾಲನೆ: 2000 ಗಿಡ ನೆಡುವ ಮೂಲಕ ಹಸಿರು ಕುಕ್ಕೆ ಯೋಜನೆ ಆರಂಭ

Wednesday, July 14th, 2021
Kukke

ಸುಬ್ರಹ್ಮಣ್ಯ : ಕುಮಾರಧಾರ ತಪ್ಪಲಿನ ನಿತ್ಯ ಹರಿದ್ವರ್ಣ ಕಾಡುಗಳ ನಡುವಣ ಇರುವ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯವನ್ನು ಮತ್ತಷ್ಟು ಹಸಿರುಮಯವಾಗಿಸಲು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ಹಮ್ಮಿಕೊಂಡಿದ್ದ ಬೃಹತ್ ವನ ಸಂವರ್ಧನಾ ಕಾರ್ಯಕ್ರಮವು ಮಂಗಳವಾರ ಸಂಪನ್ನವಾಯಿತು. ಏಕಕಾಲದಲ್ಲಿ 14 ಕಡೆ ವಿವಿಧ ಜಾತಿಯ ಸಸ್ಯಗಳನ್ನು 14 ಗಣ್ಯರು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೋವಿಡ್-19 ಮಾರ್ಗಸೂಚಿಗೆ ಅನುಗುಣವಾಗಿ ಅಗಾಧ ಫಲ ನೀಡುವ ಕಾರ್ಯಕ್ರಮವು ಪುಟ್ಟದಾಗಿ ನೆರವೇರಿತು. ಸೇವಾ ಭಾರತಿ ಸುಳ್ಯ, ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಮತ ಇತರ ಸಂಘ […]

ಅಂಗಡಿ ಬಾಡಿಗೆ ವಿಚಾರದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಇಬ್ಬರು ಅಮಾಯಕ ನೌಕರರ ಅಮಾನತು

Thursday, June 11th, 2020
Kukke Subrahmanya

ಸುಬ್ರಹ್ಮಣ್ಯ  :  ಅಂಗಡಿ ಬಾಡಿಗೆ ವಿಚಾರದಲ್ಲಿ ಕರ್ತವ್ಯಲೋಪ ಮಾಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಬ್ಬರು ನೌಕರರನ್ನು ಅಮಾನತು ಮಾಡಿದ ಘಟನೆ ನಡೆದಿದೆ. ದೇವಳದ ಆಡಳಿತ ಕಚೇರಿಯ ಸಿಬ್ಬಂದಿಗಳಾಗಿದ್ದು ಕೇಸ್ ವರ್ಕರ್ ಗಳಾಗಿರುವ ಬಾಲಸುಬ್ರಹ್ಮಣ್ಯ ಮಾರಾರ್ ಮತ್ತು ಲೋಕೇಶ್ ಎಂಬುವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ದೇವಸ್ಥಾನಕ್ಕೆ ಸಂಬಂಧಿಸಿದ ಅಂಗಡಿಗಳ ಬಾಡಿಗೆಯನ್ನು ವಸೂಲಿ ಮಾಡುವಲ್ಲಿ ಎಡವಿರುವುದು ಈ ಅಮಾನತಿಗೆ ಕಾರಣ ಎಂದು ತಿಳಿದು ಬಂದಿದೆ. ಪ್ರಕರಣ ಹಿಂದೆ ದೊಡ್ಡ ರಾಜಕೀಯ ಇದೆ, ಬೇರೆಯವರ ತಪ್ಪಿಗೆ […]

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದಲ್ಲಿ ಸಂಭ್ರಮದ ಚಂಪಾಷ‌ಷ್ಠಿ- ಬ್ರಹ್ಮರಥೋತ್ಸವ

Monday, December 2nd, 2019
Kukke-shashti

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಬ್ರಹ್ಮರಥದ ಸಮರ್ಪಣೆ ಸೋಮವಾರ ಬೆಳಗ್ಗೆ ನಡೆದಿದ್ದು 8.14ರ ಧನುರ್‌ ಲಗ್ನದ ಸುಮುಹೂರ್ತದಲ್ಲಿ ಪ್ರಧಾನ ಅರ್ಚಕ ವೇ|ಮೂ| ಸೀತಾರಾಮ ಎಡಪಡಿತ್ತಾಯರು ವೈದಿಕ ವಿಧಿಗಳನ್ನು ನೆರವೇರಿಸಿದರು. ಬಳಿಕ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಚಂಪಾಷ‌ಷ್ಠಿ ಬ್ರಹ್ಮರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನೆರವೇರಿತು. ವರ್ಷಕ್ಕೊಮ್ಮೆ ನಡೆಯುವ ಬ್ರಹ್ಮರಥೋತ್ಸವ ಸೇವೆಗೆ 99 ಭಕ್ತರು ನೋಂದಾಯಿಸಿದ್ದರು. 400 ವರ್ಷಗಳ ಬಳಿಕ ದೇವರಿಗೆ ನೂತನ ಬ್ರಹ್ಮರಥದ ಸಮರ್ಪಣೆ ನಡೆದಿದ್ದು, ಭಕ್ತ ಜನ ಸಾಗರದ ನಡುವೆ ಸಂಭ್ರಮದಿಂದ ಚಂಪಾಷ‌ಷ್ಠಿ ಮಹಾರಥೋತ್ಸವ […]

ಸುಬ್ರಹ್ಮಣ್ಯದಲ್ಲಿ ಭದ್ರತೆಯೇ ಒಂದು ಸವಾಲು

Saturday, August 31st, 2019
Subramanya

ಸುಬ್ರಹ್ಮಣ್ಯ : ಕೆಲವು ಉಗ್ರ ಸಂಘಟನೆಗಳು ಪ್ರಮುಖ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ಮಾಡುವ ಗುರಿ ಇರಿಸಿಕೊಂಡಿರುವ ಎಚ್ಚರಿಕೆಯನ್ನು ಗುಪ್ತಚರ ಇಲಾಖೆ ನೀಡಿದೆ. ದೇಗುಲಗಳಿಗೆ ಹೆಚ್ಚಿನ ಭದ್ರತೆ ಒದಗಿಸುವ ಬಗ್ಗೆ ಸರಕಾರದಿಂದ ಪತ್ರಗಳು ಬರುತ್ತಿರುತ್ತವೆ. ಆದರೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭದ್ರತೆಯೇ ಒಂದು ಸವಾಲಾಗಿದೆ. ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ. ಇಲ್ಲಿ ಭದ್ರತೆಯ ಲೋಪಗಳ ಪಟ್ಟಿಯೇ ಸಿಗುತ್ತದೆ. ಕುಕ್ಕೆಯ ವಸತಿ ಗೃಹಗಳಲ್ಲಿ ತಂಗುವ ಭಕ್ತರ ಕುರಿತು ಯಾವುದೇ ಮಾಹಿತಿ ಇರುವುದಿಲ್ಲ. ಪ್ರವಾಸಿ ತಾಣವಾಗಿರುವ […]

ಕುಕ್ಕೆ ಸುಬ್ರಹ್ಮಣ್ಯನಿಗೆ ಅವಭೃತೋತ್ಸವ

Monday, December 9th, 2013
Temple

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಚಂಪಾಷಷ್ಠಿ ಮಹೋತ್ಸವದ ಪ್ರಯುಕ್ತ ಮಾರ್ಗಶಿರ ಶುದ್ಧ ಸಪ್ತಮಿ ಸೋಮವಾರ ಬೆಳಿಗ್ಗೆ ಕುಮಾರಾಧಾರಾ ನದಿಯಲ್ಲಿ ಶ್ರೀ ದೇವರಿಗೆ ನೌಕಾವಿಹಾರ ಹಾಗೂ ಅವಭೃತೋತ್ಸವ ನಡೆಯಿತು. ದೇವಳದಿಂದ  ಬಂಡಿ ರಥದಲ್ಲಿ ಶ್ರೀ ದೇವರ ಅವಭೃತೋತ್ಸವ ಸವಾರಿ ಹೊರಟು, ಬಿಲದ್ವಾರದ ಕಟ್ಟೆಯಲ್ಲಿ ಪೂಜೆ ನಡೆಸಲಾಯಿತು.ಬಳಿಕ ಕುಮಾರಾಧಾರಾ ನದಿ ತಟದವರೆಗೆ ಸಾಗಿಬಂದು ನದಿಯಲ್ಲಿ ತಳಿರು ತೋರಣ ಮತ್ತು ಹೂವುಗಳಿಂದ ಸಿಂಗರಿಸಲ್ಪಟ್ಟ ತೆಪ್ಪದಲ್ಲಿ ನೌಕಾವಿಹಾರ ನಡೆಯಿತು.  ಬಳಿಕ ಅವಭೃತೋತ್ಸವ ನಡೆಯಿತು. ದೇವಳದ ಪ್ರಧಾನ ಅರ್ಚಕ ವೇ|ಮೂ| ಕೇಶವ ಜೋಗಿತ್ತಾಯರ […]

ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಸಂದರ್ಭ ಭಕ್ತರಿಂದ ಮಡೆಸ್ನಾನ ಹರಕೆ ಸೇವೆ ನಡೆಯಿತು

Friday, January 18th, 2013
Madesnaana

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಚಂಪಾಷಷ್ಠಿಯ ಒಂದು ತಿಂಗಳ ಅನಂತರ ಕ್ಷೇತ್ರದಲ್ಲಿ ಆಚರಿಸಲಾಗುವ ಕಿರುಷಷ್ಠಿಯ ಪರ್ವದಿನವಾದ ಗುರುವಾರ ಭಕ್ತಾದಿಗಳು ಮಡೆಮಡೆಸ್ನಾನ ಹರಕೆ ಸೇವೆ ಸಲ್ಲಿಸಿದರು. ಈ ಹಿಂದೆ ಕ್ಷೇತ್ರದಲ್ಲಿ ಮಡೆಸ್ನಾನದ ಬದಲು ಎಡೆಸ್ನಾನ ನಡೆಸುವಂತೆ ಉಚ್ಚ ನ್ಯಾಯಾಲಯ ಸರಕಾರಕ್ಕೆ ಆದೇಶಿಸಿತ್ತು. ಆದರೆ ಇದಕ್ಕೆ ಪ್ರತಿಯಾಗಿ ಸುಪ್ರೀಂ ಕೋರ್ಟ್‌ನ ಮೂಲಕ ತಾತ್ಕಾಲಿಕ ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ವಾರ್ಷಿಕ ಜಾತ್ರೆಯ ವೇಳೆ ಮಡೆಸ್ನಾನ ನಡೆದಿತ್ತು. ತಡೆಯಾಜ್ಞೆ ಇನ್ನು ಜಾರಿಯಲ್ಲಿರುವುದರಿಂದ ಗುರುವಾರ ಕೂಡ ಮಡೆಸ್ನಾನದ ಹರಕೆ […]