Blog Archive

ಅಮಿತ್ ಶಾಗೆ ಜ್ವರ… ಕುಕ್ಕೆ ಸುಬ್ರಹ್ಮಣ್ಯದಲ್ಲಿ ವೈದ್ಯರಿಂದ ಚಿಕಿತ್ಸೆ

Tuesday, February 20th, 2018
subramanya

ಮಂಗಳೂರು: ಮೂರು ದಿನಗಳ ರಾಜ್ಯದ ಕರಾವಳಿ ಭಾಗದಲ್ಲಿ ಪ್ರವಾಸ ಕೈಗೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕುಕ್ಕೆ ಸುಬ್ರಹ್ಮಣ್ಯಕ್ಕೆ ಕಳೆದ ರಾತ್ರಿ ಆಗಮಿಸಿ ಅಲ್ಲಿನ ಗೆಸ್ಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಆದಿಶೇಷ ಗೆಸ್ಟ್ ಹೌಸ್‌‌ನಲ್ಲಿ ವಾಸ್ತವ್ಯ ಹೂಡಿರುವ ಅಮಿತ್ ಶಾ ಆರೋಗ್ಯದಲ್ಲಿ ಕಳೆದ ರಾತ್ರಿ ಏರುಪೇರಾಗಿತ್ತು. ಶಾ ಜ್ವರದಿಂದ ಬಳಲುತ್ತಿದ್ದು, ವೈದ್ಯರು ತಪಾಸಣೆ ಮಾಡಿದ್ದಾರೆ. ಇಂದಿನ ಕಾರ್ಯಕ್ರಮಗಳಲ್ಲಿ ಕುಳಿತು ಮಾತನಾಡುವಂತೆ ಶಾಗೆ ವೈದ್ಯರು ಸಲಹೆ ನೀಡಿದ್ದಾರೆ. ಕಳೆದ ರಾತ್ರಿ ಅಮಿತ್ ಶಾಗೆ ಉತ್ತರ ಭಾರತ ಶೈಲಿಯ […]

ಮಂಗಳವಾರ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ 108 ಮಹಾ ಆಶ್ಲೇಷ ಬಲಿ ಪೂಜೆ

Monday, February 19th, 2018
kudupu-anantha

ಮಂಗಳೂರು : ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧಾನ ಕ್ಷೇತ್ರ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಸಂಭ್ರಮ ಸಡಗರದಿಂದ ನಡೆಯುತ್ತಿದ್ದು ಇಂದು ಪಂಚಮಿಯ ವಿಶೇಷ ಪರ್ವದಿನ. ಕ್ಷೇತ್ರದಲ್ಲಿ ನಾಗವನದಲ್ಲಿರುವ ನಾಗನ ಶಿಲಾ ಬಿಂಬಗಳಿಗೆ ಕಲಾಭಿಷೇಕ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ ನಡೆದು ತಂಬಿಲ ಸೇವೆಯೊಂದಿಗೆ ವಿಶಷ ಮಹಾಪೂಜೆ ನಾಗವನದಲ್ಲಿ ನಡೆಯಲಿದೆ. ಮಧ್ಯಾಹ್ನ ಅನಂತ ಪದ್ಮನಾಭ ದೇವರಿಗೆ ವಿಶೇಷ ಮಹಾಪೂಜೆ ಜರಗಿ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಜೀರ್ಣೋಧ್ದಾರ ಸಮಿತಿಯ ವತಿಯಿಂದ ಸಂಜೆ 5.30 ಕ್ಕೆ […]

ಮಲಯಾಳ ಸಿನೆಮಾ ಚಿತ್ರೀಕರಣ

Friday, February 16th, 2018
malayalam

ಕಡಬ: ಇಲ್ಲಿನ ಬಲ್ಯ, ಕುಂತೂರು ಪದವು, ಕೊಯಿಲ ಫಾರ್ಮ್ ಮುಂತಾದೆಡೆ ಕಳೆದ ಕೆಲ ದಿನಗಳಿಂದ 2 ಪ್ರತ್ಯೇಕ ಬಹುಕೋಟಿ ವೆಚ್ಚದ ಮಲಯಾಳಂ ಚಲನಚಿತ್ರಗಳ ಚಿತ್ರೀಕರಣ ನಡೆಯುತ್ತಿದ್ದು, ಇದರಲ್ಲಿ ಭಾಗವಹಿಸುತ್ತಿರುವ ಮಲಯಾಳಂನ ಸ್ಟಾರ್‌ ನಟರಾದ ಮೋಹನ್‌ಲಾಲ್‌ ಹಾಗೂ ಮಮ್ಮೂಟ್ಟಿ ಅವರನ್ನು ಕಾಣಲು ಅವರ ಅಭಿಮಾನಿಗಳು ಚಿತ್ರೀಕರಣದ ಸ್ಥಳಕ್ಕೆ ಮುಗಿಬೀಳುತ್ತಿದ್ದಾರೆ. ರೋಷನ್‌ ಆ್ಯಂಡ್ರೂಸ್‌ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿರುವ ಬಹುಕೋಟಿ ವೆಚ್ಚದ ಮಲಯಾಳಂ ಚಿತ್ರ ‘ಕಾಯಂಕುಳಂ ಕೊಚ್ಚುಣ್ಣಿ’ಯಲ್ಲಿ ನಾಯಕನಾಗಿ ಯುವ ನಟ ನಿವಿನ್‌ ಪೋಲಿ, ನಾಯಕಿಯಾಗಿ ಪ್ರಿಯಾ ಆನಂದ್‌ ನಟಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ […]

ಕುಕ್ಕೆ ಸುಬ್ರಹ್ಮಣ್ಯ ದರ್ಶನ ಪಡೆದ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್

Thursday, February 15th, 2018
mohanlal

ಮಂಗಳೂರು: ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾರೆ. ಸುಬ್ರಹ್ಮಣ್ಯ ದೇವಾಲಯಕ್ಕೆ ಆಗಮಿಸಿ, ದೇವರ ದರ್ಶನ ಪಡೆದ ಮೋಹನ್ ಲಾಲ್ ಕುಕ್ಕೆ ಸುಬ್ರಹ್ಮಣ್ಯನಿಗೆ ವಿಶೇಷ ಪೂಜೆ ಸಲ್ಲಿಸಿದರು. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಶೀಘ್ರದಲ್ಲೇ ಆಲ್ಕೋಹಾಲ್ ಮುಕ್ತ! ಮಲಯಾಳಂನ ಬಹುನಿರೀಕ್ಷಿತ ಕಾಯಂಕುಳಂ ಕೊಚ್ಚುನ್ನಿ ಚಿತ್ರದ ಚಿತ್ರೀಕರಣ ಪುತ್ತೂರು ತಾಲೂಕಿನ ಕಡಬದ ಬಲ್ಯ ಹಾಗೂ ಪದವು ಎಂಬಲ್ಲಿ ನಡೆಯುತ್ತಿದ್ದು, ಚಿತ್ರದಲ್ಲಿ ನಿವಿನ್ ಪೌಲ್, ಪ್ರಿಯಾ ಆನಂದ್ ಮತ್ತು ಮೋಹನ್ ಲಾಲ್ […]

ಸೂಪರ್‌‌ ಮೂನ್‌ ಎಫೆಕ್ಟ್‌… ದ.ಕ ಜಿಲ್ಲೆಯ ದೇಗುಲಗಳ ದರ್ಶನ ಸಮಯ ಬದಲು

Wednesday, January 31st, 2018
super-moon

ಮಂಗಳೂರು: ಪೂರ್ಣ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಸ್ಥಾನಗಳಾದ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ದೇವಸ್ಥಾನದಲ್ಲಿ ದೇವರ ದರ್ಶನದಲ್ಲಿ ಸಮಯ ಬದಲಾವಣೆ ಮಾಡಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಬೆಳಗ್ಗೆ 6.30ರಿಂದ 9 ಗಂಟೆಯವರೆಗೆ ಪೂಜೆಗೆ ಅವಕಾಶ ಕಲ್ಪಿಸಲಾಗಿತ್ತು. ಬೆಳಗ್ಗೆ 9ರಿಂದ ರಾತ್ರಿ 8.30ರವರೆಗೆ ದೇವಸ್ಥಾನದ ಬಾಗಿಲು ಮುಚ್ಚಿರುತ್ತದೆ. ಸಾಮಾನ್ಯವಾಗಿ ನಡೆಯುವ ಮಧ್ಯಾಹ್ನದ ಪೂಜೆಯೂ ಗ್ರಹಣದಿಂದಾಗಿ ಬೆಳಗ್ಗೆಯೇ ದೇವರಿಗೆ ಸಮರ್ಪಣೆಗೊಂಡಿದೆ. ಧರ್ಮಸ್ಥಳದಲ್ಲೂ ಮಧ್ಯಾಹ್ನ 2.30ರಿಂದ ರಾತ್ರಿ 9 ಗಂಟೆಯವರೆಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ. ರಾತ್ರಿ […]

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿಯ ಮಹಾರಥೋತ್ಸವ

Saturday, November 25th, 2017
Kukke Ratha

ಮಂಗಳೂರು : ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿಯ ಮಹಾರಥೋತ್ಸವ ದೊಂದಿಗೆ ಸಂಪನ್ನಗೊಂಡಿತು. ಧನುರ್ ಲಗ್ನದಲ್ಲಿ ಶುಕ್ರವಾರ ಮುಂಜಾನೆ 8.37 ರ ಮುಹೂರ್ತದಲ್ಲಿ ಸುಬ್ರಹ್ಮಣ್ಯ ಆದಿಯಾಗಿ ಉಮಾಮಹೇಶ್ವರ ದೇವರಿಗೆ ನಡೆದ ರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಪಾಲ್ಗೊಳ್ಳುವ ಮೂಲಕ ದೇವರ ದರ್ಶನ ಪಡೆದು ಕೃತಾರ್ಥರಾದರು. ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಹದಿನಾರು ದಿನಗಳ ಕಾಲ ನಡೆಯುವ ಜಾತ್ರೋತ್ಸವದ ಕಾರ್ಯಕ್ರಮಗಳಲ್ಲಿ ಕ್ಷೇತ್ರದಲ್ಲಿ ಮೂರು ದಿನಗಳ ಆಚರಣೆಗಳು ವಿಶಿಷ್ಟವಾಗಿರುತ್ತದೆ. ಚೌತಿ, ಪಂಚಮಿ ಹಾಗೂ ಷಷ್ಠಿ ಯಂದು ಇಲ್ಲಿ ವಿಶೇಷ ಸೇವೆಯಾದ ಎಡೆಮಡೆಸ್ನಾನದ ಜೊತೆಗೆ ಕ್ಷೇತ್ರಾಧಿಪತಿಯಾದ […]

ಚಂಪಾ ಷಷ್ಠಿ: ಮಲೆಕುಡಿಯರ ಪ್ರಭಲ ವಿರೋಧ

Saturday, October 21st, 2017
champa shasti

ಮಂಗಳೂರು:  ಮಡೆ ಸ್ನಾನವನ್ನು ಮೂಢನಂಬಿಕೆ ನಿಷೇಧ ಕಾಯ್ದೆಯಡಿಯಲ್ಲಿ ಬ್ಯಾನ್ ಮಾಡುವ ರಾಜ್ಯ ಸರಕಾರದ ನಿರ್ಧಾರಕ್ಕೆ ಮಲೆಕುಡಿಯರು ಕರಾವಳಿಯ ಬುಡಕಟ್ಟು ಸಮುದಾಯದಲ್ಲಿ ಪ್ರಭಲ ವಿರೋಧ ವ್ಯಕ್ತಪಡಿಸಿದ್ದಾರೆ. ಮುಜುರಾಯಿ ಆಡಳಿತಕ್ಕೆ ಒಳಪಟ್ಟಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾ ಷಷ್ಠಿಯನ್ನು ಬಹಿಷ್ಕರಿಸುವ ಬೆದರಿಕೆಯನ್ನು ಮಲೆಕುಡಿಯರು ಹಾಕಿದ್ದಾರೆ. ಚಂಪಾ ಷಷ್ಠಿಯಲ್ಲಿ ಮಲೆಕುಡಿಯರ ಪಾತ್ರ ಪ್ರಮುಖವಾಗಿದ್ದು ರಥ ಕಟ್ಟುವುದೂ ಸೇರಿದಂತೆ ಹಲವು ಆಚರಣೆಗಳನ್ನು ತಲೆತಲಾಂತರದಿಂದ ಇದೇ ಸಮುದಾಯದವರು ನಡೆಸಿಕೊಂಡು ಬಂದಿದ್ದಾರೆ. ನವೆಂಬರ್ 24ರಂದು ಸುಬ್ರಮಣ್ಯದಲ್ಲಿ ಚಂಪಾ ಷಷ್ಠಿ ನಡೆಯಲಿದೆ. ಒಂದೊಮ್ಮೆ ರಾಜ್ಯ ಸರಕಾರ ಮಡೆ […]

ಕುಕ್ಕೆ: ಬ್ರಹ್ಮರಥ ನಿರ್ಮಿಸುವ ಪ್ರಸ್ತಾಪ, ನಿರ್ಮಾಣ ವಿಚಾರದಲ್ಲಿ ಚರ್ಚೆ

Wednesday, October 18th, 2017
kukke subramanya

ಮಂಗಳೂರು: ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಬ್ರಹ್ಮರಥದ ನಿರ್ಮಾಣ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಉದ್ಯಮಿ ಹಾಗೂ ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ತನ್ನ ಸ್ವಂತ ಖರ್ಚಿನಲ್ಲಿ ಕ್ಷೇತ್ರಕ್ಕೆ ಬ್ರಹ್ಮರಥ ನಿರ್ಮಿಸುವ ಪ್ರಸ್ತಾಪವನ್ನು ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ಮುಂದಿಟ್ಟಿದ್ದಾರೆ. ಈ ವಿಚಾರವನ್ನು ವ್ಯವಸ್ಥಾಪನಾ ಮಂಡಳಿ ಇಂದು ದೇವಸ್ಥಾನದಲ್ಲಿ ನಡೆದ ದೇವಸ್ಥಾನದ ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಪ್ರಸ್ತುತ ಪಡಿಸಿದ್ದು, ಇದಕ್ಕೆ ಭಕ್ತರಿಂದ ವಿರೋಧ ವ್ಯಕ್ತವಾಗಿದೆ. ಕೇವಲ ಒಬ್ಬ ಭಕ್ತ ಕೊಡುವ ಬ್ರಹ್ಮರಥದಲ್ಲಿ ಸುಬ್ರಮಣ್ಯ ಸ್ವಾಮಿ ಸಂತುಷ್ಚನಾಗಲಾರ. ಈ […]

ದಸರಾ ರಜೆ ಹಿನ್ನೆಲೆ, ಪುಣ್ಯ ಕ್ಷೇತ್ರಗಳ ದರ್ಶನಕ್ಕಾಗಿ ಭಕ್ತ ಸಾಗರ

Monday, October 2nd, 2017
darmasthala

  ಮಂಗಳೂರು:  ದಸರಾ ರಜೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರಮುಖ ಪುಣ್ಯ ಕ್ಷೇತ್ರಗಳಿಗೆ ಭಾರೀ ಪ್ರಮಾಣದಲ್ಲಿ ಭಕ್ತರು ಭೇಟಿ ನೀಡುತ್ತಿದ್ದಾರೆ. ಕೊಲ್ಲೂರು ಶ್ರೀ ಮೂಕಾಂಬಿಕಾ ಸನ್ನಿಧಿ, ಶ್ರೀ ಕ್ಷೇತ್ರ ಧರ್ಮಸ್ಥಳ, ಶ್ರೀ ಕ್ಷೇತ್ರ ಕಟೀಲು, ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನಕ್ಕಾಗಿ ಭಕ್ತ ಸಾಗರವೇ ಹರಿದು ಬರುತ್ತಿದೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ಕ್ಷೇತ್ರದ ಪ್ರಮುಖ ಸೇವೆಗಳಾದ ಆಶ್ಲೇಷ ಬಲಿ, ನಾಗ ಪ್ರತಿಷ್ಠೆ ಮತ್ತಿತರ ಸೇವೆಗಳು ಅಧಿಕವಾಗಿ […]

ಕುಕ್ಕೆ ಸುಬ್ರಹ್ಮಣ್ಯ ದೇವರ ದರುಶನ ಪಡೆದ ಸಚಿವ ಡಿ.ಕೆ ಶಿವಕುಮಾರ ಕುಟುಂಬ

Monday, September 25th, 2017
DK Shivakumar

ಸುಬ್ರಹ್ಮಣ್ಯ: ಐಟಿ ದಾಳಿ ಕುರಿತು ಸದ್ಯಕ್ಕೆ ತಾನೇನು ಪ್ರತಿಕ್ರೀಯಿಸುವುದಿಲ್ಲ. ಸೂಕ್ತ ಘಳಿಗೆ ಬಂದಾಗ ಪ್ರತಿಕ್ರೀಯಿಸುವೆ. ಆ ಶುಭ ಘಳಿಗೆ ತನಕ ಕಾದು ಬಳಿಕ ಐಟಿ ಧಾಳಿ ಕುರಿತು ಮಾತನಾಡುವೆ. ಅಲ್ಲಿ ತನಕ ಸ್ವಲ್ಪ ಸಮಯ ಕಾಯೋಣ ಎಂದು ತನ್ನ ಹಾಗೂ ಸಂಬಂಧಿಕರ ಮೇಲಿನ ಐಟಿ ದಾಳಿ ಕುರಿತು ಇಂಧನ ಸಚಿವ ಹಾಗೂ ಕಾಂಗ್ರೇಸ್‌ನ ಪ್ರಭಾವಿ ನಾಯಕ ಡಿ.ಕೆ ಶಿವಕುಮಾರ ಪ್ರತಿಕ್ರೀಯಿಸಿದರು. ಕುಕ್ಕೆ ಸಬ್ರಹ್ಮಣ್ಯ ಕ್ಷೇತ್ರಕ್ಕೆ ಭಾನುವಾರ ಕುಟುಂಬ ಸದಸ್ಯರ ಜೊತೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದು […]