ನಾಗರಪಂಚಮಿಗೂ ಕೊರೋನಾ ಎಫೆಕ್ಟ್, ದೇವಸ್ಥಾನಕ್ಕೆ ಭಕ್ತರಿಗಿಲ್ಲ ಪ್ರವೇಶ..!

Friday, July 24th, 2020
naragapanchami

ಮಂಗಳೂರು: ಕೊರೋನಾ  ಎಫೆಕ್ಟ್ ಈ ಬಾರಿಯ ಹಬ್ಬಗಳ ಆಚರಣೆಗೂ ತಟ್ಟಿದೆ, ಹಿಂದೂ ಹಬ್ಬಗಳಲ್ಲಿ ಮೊದಲಿಗೆ ಬರುವ ಹಬ್ಬ ನಾಗರ ಪಂಚಮಿ. ಅದಕ್ಕೂ ಕೊರೋನಾಮಹಾಮಾರಿ ತಡೆಯೊಡ್ಡಿದೆ. ಈ ಬಾರಿ ನಾಗರ ಪಂಚಮಿಯನ್ನು ಭಕ್ತರು ದೇವಸ್ಥಾನಗಳಿಗೆ ತೆರಳಿ ಆಚರಿಸುವಂತಿಲ್ಲ. ಮಂಗಳೂರು ಸಮೇತ ರಾಜ್ಯದ ಎಲ್ಲಾ ನಾಗ ದೇವಸ್ಥಾನಗಳಲ್ಲಿ ನಾಗರಪಂಚಮಿ ಜುಲೈ 25 ರ ಶನಿವಾರ  ಆಚರಿಸುವಂತಿಲ್ಲ. ಮಂಗಳೂರಿನ ಇತಿಹಾಸ ಪ್ರಸಿದ್ದ ಕುಡುಪು‌ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಈ ಬಾರಿ ಅರ್ಚರು ಮಾತ್ರ ನಾಗನಿಗೆ ಹಾಲೆರೆಯುವ ಮತ್ತು ಇತರ ಸೇವೆಗಳನ್ನು ಮಾಡಲಿದ್ದಾರೆ. ಮಂಗಳೂರಿನ […]

ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ

Monday, December 2nd, 2019
Kudupu shashti

ಮಂಗಳೂರು :  ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ ಹಾಗೂ  ಬ್ರಹ್ಮರಥೋತ್ಸವವು  ಸೋಮವಾರ ವಿಜೃಂಭಣೆಯಿಂದ ನೆರವೇರಿತು. ದೇವರ ಬಲಿ ಉತ್ಸವ ನಡೆದ ಬಳಿಕ ರಥೋತ್ಸವ, ನಾಗಬನದಲ್ಲಿ ತಂಬಿಲ ಸೇವೆ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಸೀಯಾಳ ಅಭಿಷೇಕಗಳು ನಡೆದವು. ಚಂಪಾಷಷ್ಠಿಯಂದು ಹಗಲು ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಅನಂತಪದ್ಮನಾಭ, ನಾಗದೇವರು ಹಾಗೂ ಸುಬ್ರಹ್ಮಣ್ಯ ದೇವರು ಮೂವರು ಕೂಡಾ ಒಟ್ಟಾಗಿ ನೆಲೆಸಿರುವ ಅಪರೂಪದ ಕ್ಷೇತ್ರ ಇದಾಗಿದೆ. ದೇವಳ ದಕ್ಷಿಣಕ್ಕೆ ಪವಿತ್ರ ಭದ್ರಾ ಸರಸ್ವತಿ ಕೆರೆ. ಪೂರ್ವಭಾಗದಲ್ಲಿ 500ಕ್ಕೂ ಹೆಚ್ಚಿನ ನಾಗಶಿಲೆಗಳಿರುವ ನಾಗಬನವಿದೆ. ಕರಾವಳಿಯ […]

ಮಂಗಳೂರು : ಪಚ್ಚನಾಡಿಯ ‘ಬೇಲಿಂಗ್‌ ಯುನಿಟ್’ ಮಾದರಿ ತ್ಯಾಜ್ಯ ವಿಲೇವಾರಿ

Wednesday, August 21st, 2019
ಮಂಗಳೂರು : ಪಚ್ಚನಾಡಿಯ ‘ಬೇಲಿಂಗ್‌ ಯುನಿಟ್’ ಮಾದರಿ ತ್ಯಾಜ್ಯ ವಿಲೇವಾರಿ

ಮಂಗಳೂರು :  ಕುಡುಪು ಸಮೀಪದ ಮಂದಾರದಲ್ಲಿ ವ್ಯಾಪಕವಾಗಿ ಬಿದ್ದಿರುವ ಪಚ್ಚನಾಡಿಯ ತ್ಯಾಜ್ಯ ರಾಶಿಯನ್ನು ‘ಬೇಲಿಂಗ್‌ ಯುನಿಟ್’ ಸಹಾಯದಿಂದ ತಲಾ ಒಂದೊಂದು ಟನ್‌ ಗಾತ್ರದ ಬಾಕ್ಸ್‌ ಮಾದರಿಯಲ್ಲಿ ಹಾಕಿ ಅದನ್ನು ಕಂಪ್ರಸ್‌ ಯಂತ್ರದ ಮೂಲಕ ಪುಡಿ ಮಾಡಿ ಮತ್ತೆ ಡಂಪಿಂಗ್‌ ಯಾರ್ಡ್‌ ಗೆ ಕೇಬಲ್ ಮಾದರಿಯಲ್ಲಿ ಎಳೆದು ತರುವ ವಿನೂತನ ಪ್ರಯೋಗದ ಬಗ್ಗೆ ಕೊಯಮತ್ತೂರಿನ ಸುಧೀರ್‌ ಜೈಸ್ವಾಲ್ ನೇತೃತ್ವದ ಅಧ್ಯಯನ ತಂಡ ಯೋಜನ ವರದಿಯನ್ನು ದ.ಕ. ಜಿಲ್ಲಾಡಳಿತ/ಮಂಗಳೂರು ಪಾಲಿಕೆಗೆ ಮಂಗಳವಾರ ನೀಡಿದೆ. ಪಚ್ಚನಾಡಿಯ ಡಂಪಿಂಗ್‌ಯಾರ್ಡ್‌ ನಿಂದ ಮಂದಾರಕ್ಕೆ ಜಾರಿರುವ […]

ಮುಸ್ಲಿಂ ಮಹಿಳೆಯಿಂದ ಕುಡುಪುವಿನಲ್ಲಿ ನಾಗ ಪೂಜೆ

Monday, August 5th, 2019
kudupu

ಮಂಗಳೂರು  : ನಗರದ ಕುಡುಪು ಶ್ರೀ ಅನಂತ ಪದ್ಮನಾಭ ದೇವಾಲಯದಲ್ಲಿ ನಾಗರಪಂಚಮಿ ಪ್ರಯುಕ್ತ ಭಕ್ತರು ದೇವರಿಗೆ ಕ್ಷೀರಾಭಿಷೇಕ, ಸೀಯಾಳಾಭಿಷೇಕ ನೆರವೇರಿಸಿದರು. ಮುಂಜಾನೆ ಐದು ಗಂಟೆಯಿಂದ ಮಧ್ಯಾಹ್ನ ಮಹಾಪೂಜೆಯವರೆಗೆ ಭಕ್ತರು ನಾಗ ದೇವರಿಗೆ ಸೀಯಾಳಭಿಷೇಕ, ಕ್ಷೀರಾಭಿಷೇಕ ನೆರವೇರಿಸುತ್ತಾರೆ. ನಾಗ ದೇವರ ನೂರಾರು ಮೂರ್ತಿಗಳಿಗೆ ಭಕ್ತರು ‌ನೀಡಿದ ಸೀಯಾಳದ ನೀರು ಮತ್ತು ಹಾಲನ್ನು ದೇವರಿಗೆ ಸಮರ್ಪಿಸಲಾಯಿತು. ಕುಡುಪು ದೇವಾಲಯದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಬಂದು ನಾಗರಪಂಚಮಿ ಪ್ರಯುಕ್ತ ಪ್ರಾರ್ಥನೆ ಸಲ್ಲಿಸಿದ್ದು ವಿಶೇಷವಾಗಿದ್ದು, ಎಲ್ಲರ ಗಮನ ಸೆಳೆಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುಗಳ […]

ಕುಡುಪು ವಿವಿಧೊದ್ದೇಶ ಸಹಕಾರಿ ಸಂಘ (ನಿ)ದ ವಾರ್ಷಿಕ ಮಹಾಸಭೆ

Saturday, July 21st, 2018
kudupu

ಮಂಗಳೂರು: ಕುಡುಪು ವಿವಿಧೊದ್ದೇಶ ಸಹಕಾರಿ ಸಂಘ (ನಿ)ದ ವಾರ್ಷಿಕ ಮಹಾಸಭೆ ಕುಡುಪು ಅನಂತ ಪದ್ಮನಾಭ ದೇವಸ್ಥಾನದ ಶ್ರೀ ಸುಬ್ರಹ್ಮಣ್ಯ ಮಂದಿರದಲ್ಲಿ ಸಂಘದ ಅಧ್ಯಖ್ಷರಾದ ಶ್ರೀ ಜನಾರ್ಧನ ಬಿ. ಇವರ ಅಧ್ಯಕ್ಷತೆ ಯಲ್ಲಿ ಜರಗಿತು. 2017-18ರ ಸಾಲಿನಲ್ಲಿ 60.58 ಲಕ್ಷರೂ. ಪಾಲು ಬಂಡವಾಳ ಹೊಂದಿದ್ದು 16.95 ಕೋಟಿ ರೂ ಠೇವಣಿ ಇದ್ದು 11.33ಕೋಟಿರೂ ಸಾಲ ನೀಡಿರುತ್ತದೆ. 2017-18ನೇ ಸಾಲಿನಲ್ಲಿ 53.06 ಲಕ್ಷರೂ ಲಾಭಗಳಿಸಿರುತ್ತದೆ ಎಂದುಅಧ್ಯಕ್ಷರು ಸಭೆಗೆ ವಿವರಿಸಿದರು. 2017-18ನೇ ಸಾಲಿನ ಸಂಘದ ಸದಸ್ಯರಿಗೆ ಶೇ 20 ರಡಿವಿಡೆಂಟ್ ಘೋಷಿಸಲಾಯಿತು. ಸಂಘದ ಸ್ಥಾಪಕ ಸದಸ್ಯರಾದ ಪೂಜ್ಯ […]

ದೇವರಲ್ಲಿ ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಮಾಡಿದರೆ ಪ್ರತಿಫಲ ಸಿಗುತ್ತದೆ : ವೀರಪ್ಪ ಮೊಯಿಲಿ

Friday, February 23rd, 2018
kudupu

ಮಂಗಳೂರು: ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ಕಳೆದ ಐದು ವರ್ಷಗಳಿಂದ ಪರಿಶ್ರಮದಿಂದ ನಡೆಯುತ್ತಾ ಬಂದಿದೆ. ದ.ಕ. ಉಡುಪಿಯಲ್ಲಿರುವ ಬಹಳಷ್ಟು ಹಳೇ ದೇವಸ್ಥಾನಗಳು ಪುನರುತ್ಥಾನವಾಗುತ್ತಿದೆ. ಕುಡುಪು ದೇವಸ್ಥಾನದಲ್ಲಿ ಉತ್ತಮ ಮನಸ್ಸಿನಿಂದ ಬಂದು ಪ್ರಾರ್ಥನೆ ಮಾಡಿದರೆ ಜೀವನ ಸಾರ್ಥಕವಾಗುತ್ತದೆ. ಮನುಷ್ಯನಲ್ಲಿ ಶ್ರದ್ಧೆ, ಭಕ್ತಿ , ವಿಶ್ವಾಸ ಮುಖ್ಯ. ದೈಹಿಕ ಶುದ್ಧಿ ಮಾಡಿ ದೇವರಲ್ಲಿ ಪ್ರಾರ್ಥನೆ ಮಾಡಿದರೆ ಶೂನ್ಯತೆಯಲ್ಲಿರುವ ಮನಸು ತುಂಬುತ್ತವೆ. ಇದರಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ದೇವಸ್ಥಾನಕ್ಕೆ ಉತ್ತಮ ಸಂಸ್ಕೃತಿ ಇದೆ. ಇದನ್ನು ಉತ್ತಮ […]

ಕುಡುಪು ಕ್ಷೇತ್ರಕ್ಕೆ ಸಂಗೀತ ನಿರ್ದೇಶಕ ಗುರುಕಿರಣ್ ಭೇಟಿ

Tuesday, February 20th, 2018
gurukiran

ಮಂಗಳೂರು : ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ನಿನ್ನೆ ಶ್ರೀ ಕ್ಷೇತ್ರದಲ್ಲಿ ನಡೆದ ಕಲಶಾಭಿಷೇಕ, ತಂಬಿಲ ಹಾಗೂ ವಿಶೇಷ ಮಹಾಪೂಜೆಯಲ್ಲಿ ಖ್ಯಾತ ಚಲನಚಿತ್ರ ನಟ, ಸಂಗೀತ ನಿರ್ದೇಶಕ ಗುರುಕಿರಣ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಗುರುಕಿರಣ್ ಅವರಿಗೆ ಶ್ರೀ ಕ್ಷೇತ್ರದ ವತಿಯಿಂದ ಕ್ಷೇತ್ರದ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಎ. ಸುತಗುಂಡಿ ಅವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಮುಕ್ತೇಸರ ಭಾಸ್ಕರ ಕೆ. ಪ್ರಧಾನ ಕಾರ್ಯದರ್ಶಿ ಕೆ. ಸುಜನ್‌ದಾಸ್ ಕುಡುಪು, ಅನುವಂಶಿಕ […]

ಕುಡುಪು ದೇವಾಳದಲ್ಲಿ ಜಿಲ್ಲೆಯ ಪ್ರಸಿದ್ಧ ಬ್ರಹ್ಮವಾಚಕರಿಗೆ ಗೌರಪಾರ್ಪಣೆ

Monday, February 19th, 2018
ananthapadbanabha

ಮಂಗಳೂರು : ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನ ಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮನಾಭ ದೇವಳದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಸಂಭ್ರಮ ಸಡಗರದಿಂದ ನಡೆಯುತ್ತಿದ್ದ ಈ ಬ್ರಹ್ಮಕಲಶೋತ್ಸವದ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಸಿದ್ಧ ಸುಮಾರು ೩೦ ಮಂದಿ ಬ್ರಹ್ಮ ವಾಹಕರಿಗೆ (ದೇವರು ಹೊರುವವರು) ವಿಶೇಷ ಗೌರವ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸನ್ಮಾನವನ್ನು ದೇವರು ಹೊರುವವರಾದ (ಬ್ರಹ್ಮವಾಹಕರು) ಕೃಷ್ಣ ಮೂರ್ತಿ ಭಟ್ ಮಂಗಳಾದೇವಿ, ಹರಿಪ್ರಸಾದ್ ಭಟ್ ಮಂಗಳಾದೇವಿ, ಕೃಷ್ಣಭಟ್ ಕದ್ರಿ, ಲಕ್ಷ್ಮೀ ನಾರಾಯಣಭಟ್ ಕುತ್ಯಾರು, ಮೋಹನ ಭಟ್ ಹೊಗೆ ಗುಡ್ಡೆ, […]

ಕುಡುಪು ಬ್ರಹ್ಮಕಲಶ ಧಾರ್ಮಿಕ ಸಮಾರಂಭ

Monday, February 19th, 2018
kudupu

ಮಂಗಳೂರು: ಕುಡುಪು ಶ್ರೀಅನಂತ ಪದ್ಮನಾಭ ದೇವಸ್ಥಾನ ನಾಗರಾಧನೆಯ ಪ್ರಸಿದ್ಧ ಕ್ಷೇತ್ರವಾಗಿದ್ದು, ಬಹಳ ವರ್ಷಗಳ ಬಳಿಕ ಜೀರ್ಣೋದ್ಧಾರ ಕಾಣುತ್ತಿದೆ. ಸಮಗ್ರ ಭೂಮಿಯಲ್ಲಿ ನಾಗ ದೇವರ ಸ್ಥಾನ ಇದೆ. ಪ್ರಸಕ್ತ ನಾಗನಿಗೆ ನಿರ್ದಿಷ್ಟ ಸ್ಥಾನ ಕಲ್ಪಿಸಲಾಗಿದೆ. ನಾಗದೇವರ ಸಾನಿಧ್ಯವಿರುವ ದೇವಸ್ಥಾನಗಳಲ್ಲಿ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ ಕೂಡಾ ಒಂದು ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು. ಅವರು ಕುಡುಪು ಅನಂತ ಪದ್ಮನಾಭ ದೇವಸ್ಥಾನದ ಅನಂತ ಪದ್ಮನಾಭ ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ […]

ವಿನೂತನ ಸುತ್ತುಪೌಳಿಯೊಂದಿಗೆ ಕಂಗೊಳಿಸಲಿದೆ: ಕುಡುಪು ನಾಗ ಸನ್ನಿಧಿ

Wednesday, January 17th, 2018
temple

ಮಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ನಾಗ ಸಾನ್ನಿಧ್ಯದ ಕ್ಷೇತ್ರ ಪುಣ್ಯಭೂಮಿ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಸುಮಾರು 4 ಕೋ. ರೂ. ವೆಚ್ಚದಲ್ಲಿ ಶಿಲಾಮಯ ಅದಿಷ್ಠಾನ ಹಾಗೂ ಸ್ತಂಭಗಳ ಮುಖೇನ ಕೆಂಪು ಕಲ್ಲಿನ ವಿಶೇಷ ಕೆತ್ತನೆಯ ಗೋಡೆಯೊಂದಿಗೆ ಸುತ್ತುಪೌಳಿ ನಿರ್ಮಾಣ ನಡೆಯುತ್ತಿದೆ. ದಾರು ಶಿಲ್ಪಗಳನ್ನು ಹೊಂದಿರುವ ಮರದ ಮೇಲ್ಛಾವಣಿ ಜತೆಗೆ ದೇವಸ್ಥಾನದ ಸುತ್ತಲೂ ತಾಮ್ರದ ಮುಚ್ಚಿಗೆ ಯೊಂದಿಗೆ ವಿಶೇಷ ವಿನ್ಯಾಸದ ಸುತ್ತು ಪೌಳಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಮುಂದಿನ ವರ್ಷದ ಫೆ. 18ರಿಂದ 25ರ ವರೆಗೆ ಶ್ರೀ […]