ಕುದ್ರೋಳಿಗೆ ಸಿಎಂ ಭೇಟಿ: ಭದ್ರತಾ ಕಾರಣಗಳಿಗಾಗಿ ಮಧ್ಯಾಹ್ನ 3 ರಿಂದ ಸಂಜೆ 7 ಗಂಟೆಯ ವರೆಗೆ ಭಕ್ತರ ಪ್ರವೇಶಕ್ಕೆ ನಿರ್ಬಂಧ

Tuesday, October 12th, 2021
Kudroli Dasara

ಮಂಗಳೂರು : ನಗರದ ಕುದ್ರೋಳಿಯ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ಮಂಗಳೂರು ದಸರಾ ಮಹೋತ್ಸವಕ್ಕೆ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಅ.13ರ ಬುಧವಾರ ಸಂಜೆ ಆಗಮಿಸುತ್ತಿದ್ದಾರೆ. ಭದ್ರತೆ ಹಾಗೂ ವಿಶೇಷ ತಯಾರಿಗಳನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ ಅ.13ರ ಮಧ್ಯಾಹ್ನ 3 ರಿಂದ ಸಂಜೆ 7 ಗಂಟೆಯವರೆಗೆ ಆಗಮಿಸುವ ಭಕ್ತಾಧಿಗಳಿಗೆ ಅನಾನುಕೂಲವಾಗಲಿದೆ. ರಾತ್ರಿ 7 ರಿಂದ ಎಂದಿನಂತೆ ದರುಶನಕ್ಕೆ ಅವಕಾಶವಿದೆ. ಭದ್ರತಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ನಾಗರೀಕರು ಸಹಕರಿಸುವಂತೆ ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

ಕುದ್ರೋಳಿ ಸಮೀಪ ಮೆಹೆಂದಿ ಕಾರ್ಯಕ್ರಮಕ್ಕೆ ಬಂದಿದ್ದ ರೌಡಿ ಶೀಟರ್ ಹತ್ಯೆ

Thursday, November 26th, 2020
Indrajeet

ಮಂಗಳೂರು : ರೌಡಿ ಶೀಟರ್ ವೊಬ್ಬನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಕುದ್ರೋಳಿ ಸಮೀಪದ ಕರ್ನಲ್‌ ಗಾರ್ಡನ್ ಬಳಿ ನಡೆದಿದೆ. ಬೊಕ್ಕಪಟ್ಣ ನಿವಾಸಿ ಇಂದ್ರಜಿತ್ (45) ಹತ್ಯೆಗೊಳಗಾದ ವ್ಯಕ್ತಿ ಎಂದು  ತಿಳಿದುಬಂದಿದೆ. ಈತ ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಈತನ ಮೇಲೆ ತಲವಾರ್‌ ದಾಳಿ ನಡೆದಿತ್ತು ಎಂಬ ಮಾಹಿತಿ ಲಭಿಸಿದೆ. ಬುಧವಾರ ರಾತ್ರಿ ಈತನು ಮೆಹೆಂದಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು ಅಲ್ಲಿ ಯಾವುದೋ ವಿಚಾರಕ್ಕೆ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ. ಗುರುವಾರ […]

ಕೋವಿಡ್ -19 ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬವನ್ನು ಸರಳವಾಗಿ ಆಚರಿಸಿದ ಮುಸ್ಲಿಮರು

Friday, July 31st, 2020
eid

ಮಂಗಳೂರು : ಕೋವಿಡ್ -19 ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬವನ್ನು ಸರಳವಾಗಿ ಆಚರಿಸಲು ಸರಕಾರ ಹೊರಡಿಸಿದ ಮಾರ್ಗಸೂಚಿಯಂತೆ ಅಂತರ ಕಾಪಾಡುವುದರೊಂದಿಗೆ ಜುಲೈ 31 ರಂದು ಮಸೀದಿಗಳಲ್ಲಿ ಸಾಮೂಹಿಕವಾಗಿ ಮುಸ್ಲಿಮರು ನಮಾಝ್ ನಿರ್ವಹಿಸಿದರು. ಈದ್ಗಾದಲ್ಲಿ ಸಾಮೂಹಿಕ ನಮಾಝ್ ಮತ್ತು ಈದ್ ಖುತ್ಬಾಕ್ಕೆ ನಿರ್ಬಂಧ ವಿಧಿಸಲಾದ ಕಾರಣ ಇದೇ ಮೊದಲ ಬಾರಿಗೆ ಮಂಗಳೂರು ಸಹಿತ ಜಿಲ್ಲೆಯ ಯಾವುದೇ ಈದ್ಗಾಗಳಲ್ಲಿ ನಮಾಝ್, ಈದ್ ಖುತ್ಬಾ ನಡೆಯಲಿಲ್ಲ. ಬಹುತೇಕ ಮಸೀದಿಗಳಲ್ಲಿ ತಲಾ 50 ಮಂದಿಯಂತೆ ಸರದಿ ಸಾಲಿನಲ್ಲಿ ನಮಾಝ್ ನಿರ್ವಹಿಸಿದರು. 60 ವರ್ಷಕ್ಕಿಂತ ಮೇಲ್ಪಟ್ಟ ಮತ್ತು […]

ಜನಾರ್ಧನ ಪೂಜಾರಿಯವರ ಆರೋಗ್ಯ ಚೇತರಿಕೆಗೆ ಕುದ್ರೋಳಿಯಲ್ಲಿ ವಿಶೇಷ ಪೂಜೆ

Wednesday, July 8th, 2020
corona pooje

ಮಂಗಳೂರು : ಹಿರಿಯ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವರಾದ ಬಿ. ಜನಾರ್ಧನ ಪೂಜಾರಿಯವರಿಗೆ ಮತ್ತು ಅವರ ಕುಟುಂಬದವರ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ಹೀಗಾಗಿ ಇವರೆಲ್ಲರೂ ಶೀಘ್ರವೇ ಗುಣಮುಖರಾಗಿ ಉತ್ತಮ ಅರೋಗ್ಯ ಲಭಿಸಲೆಂದು ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವಿಶೇಷ ಪೂಜೆ ನೆರವೇರಿಸಿ ಪ್ರಾರ್ಥಿಸಲಾಯ್ತು. ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಜನಾರ್ಧನ ಪೂಜಾರಿಯವರ ಅಭಿಮಾನಿ ಬಳಗದವರಿಂದ 108 ಸೀಯಾಳಾಭಿಷೇಕ ಮತ್ತು ಮಹಾಪೂಜೆ ನಡೆಯಿತು.‌ ಇದೇ ವೇಳೆ ಜಗತ್ತಿನಾದ್ಯಂತ ಇಂದಿರುವ ಕೋವಿಡ್ ರೋಗ ಸಂಪೂರ್ಣವಾಗಿ ಕಣ್ಮರೆಯಾಗುವಂತೆ  […]

ಮಂಗಳೂರು : ಕುದ್ರೋಳಿ ದಸರಾ ಆಚರಣೆ ಸೆಪ್ಟೆಂಬರ್ 29 ರಿಂದ ಪ್ರಾರಂಭ

Saturday, September 28th, 2019
kudroli

ಮಂಗಳೂರು: ಮಂಗಳೂರು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವ ಮತ್ತು ಮಂಗಳೂರು ದಸರಾದ ಸಿದ್ಧತೆ ಬಿರುಸಿನಿಂದ ನಡೆಯುತ್ತಿದೆ. ಪ್ರತಿವರ್ಷವೂ ನವರಾತ್ರಿ ಸಂದರ್ಭದಲ್ಲಿ ಕುಡ್ಲದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವ ಮತ್ತು ಮಂಗಳೂರು ದಸರಾ ವಿಜೃಂಭಣೆಯಿಂದ ನಡೆಯುತ್ತದೆ. ಈ ಬಾರಿ ಸೆಪ್ಟೆಂಬರ್‌ 29ರಿಂದ ಆರಂಭವಾಗುವ ನವರಾತ್ರಿ ಮಹೋತ್ಸವ ಅಕ್ಟೋಬರ್‌ 9ರವರೆಗೆ ನಡೆಯಲಿದೆ. ನವದುರ್ಗೆಯರ ಮತ್ತು ಶಾರದಾ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ನವರಾತ್ರಿ ಉತ್ಸವ ಆರಂಭವಾಗಲಿದ್ದು, ಉತ್ಸವಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ. ಪಿ ಎಸ್ ಹರ್ಷ ಚಾಲನೆ […]

ಪತ್ನಿಗೆ ಹಲ್ಲೆ ನಡೆಸಿದ ಗಂಡನನ್ನು ಠಾಣೆಗೆ ಕರೆತರುವಾಗ ನದಿಗೆ ಹಾರಿ ಸತ್ತೇ ಹೋದ

Monday, July 15th, 2019
Muneer

ಮಂಗಳೂರು : ಪತ್ನಿಗೆ ಹಲ್ಲೆ ನಡೆಸಿದ  ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಡನನ್ನು ಬಂದರ್ ಠಾಣೆಗೆ ಕರೆತರುವಾಗ ಆತ ಕೂಳೂರು ಸೇತುವೆಯಿಂದ ಜಿಗಿದ ಘಟನೆ ರವಿವಾರ ತಡರಾತ್ರಿ ನಡೆದಿದ್ದು, ಆತನ  ಮೃತದೇಹ ಬೆಂಗ್ರೆ ಸಮೀಪ ಸೋಮವಾರ ಸಂಜೆ ಪತ್ತೆಯಾಗಿದೆ. ಕುದ್ರೋಳಿ ನಿವಾಸಿ ಮುನೀರ್ (42) ಮೃತರು ಎಂದು ಗುರುತಿಸಲಾಗಿದೆ. ಮುನೀರ್ ತನ್ನ ಪತ್ನಿಗೆ ಹಲ್ಲೆ ನಡೆಸಿದ್ದು, ಬಳಿಕ ತನ್ನ ಲಗೇಜ್ ಸಹಿತ ಮಂಗಳೂರು ತೊರೆಯಲು ಯತ್ನಿಸಿದ್ದರೆನ್ನಲಾಗಿದ್ದು, ಅವರ ವಿರುದ್ಧ ಮುಹಮ್ಮದ್ ಎಂಬವರು ಮಂಗಳೂರು ಉತ್ತರ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ದೂರನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ […]

ಕುದ್ರೋಳಿಯಲ್ಲಿ ಶಾರದೆ, ನವದುರ್ಗೆಯರ ಪ್ರತಿಷ್ಠೆಯೊಂದಿಗೆ ಮಂಗಳೂರು ದಸರಾಕ್ಕೆ ಚಾಲನೆ

Wednesday, October 10th, 2018
Kudroli Dasara

ಮಂಗಳೂರು:  ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆಯುವ ಮಂಗಳೂರು ದಸರಾ ಮಹೋತ್ಸವಕ್ಕೆ ಬುಧವಾರ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಭಟ್ ಅವರು ದೀಪ ಬೆಳಗಿಸಿ ಉತ್ಸವಕ್ಕೆ ಚಾಲನೆ ನೀಡಿದರು. ಮಹಾಗಣಪತಿಯೊಂದಿಗೆ ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಯ ಪ್ರತಿಷ್ಠೆಯೊಂದಿಗೆ ದಸರಾ ಮಹೋತ್ಸವ ವಿಧ್ಯುಕ್ತವಾಗಿ  ಪ್ರಾರಂಭಗೊಂಡಿತು. ಮಹಾಗಣಪತಿಯೊಂದಿಗೆ ನವದುರ್ಗೆಯರಾದ ಆದಿಶಕ್ತಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಿ, ಕೂಷ್ಮಾಂಡಿನಿ, ಸ್ಕಂದ ಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿಯರ ಪ್ರತಿಷ್ಠಾಪನೆ ಹಾಗೂ  ಪೂಜೆ ನಡೆಯಿತು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಂ, ಉಪಾಧ್ಯಕ್ಷ ರಾಘವೇಂದ್ರ […]

ಕುದ್ರೋಳಿ ಕಸಾಯಿಖಾನೆ ವಿವಾದ: ಯು ಟಿ ಖಾದರ್ ಸ್ಪಷ್ಟನೆ‌

Monday, October 8th, 2018
u-t-kadher

ಮಂಗಳೂರು: ಕುದ್ರೋಳಿ ಕಸಾಯಿಖಾನೆ ವಿವಾದಕ್ಕೆ ಸಂಬಂಧಪಟ್ಟಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಸ್ಪಷ್ಟನೆ‌ ನೀಡಿದ್ದಾರೆ. ಇತ್ತೀಚೆಗೆ ನಡೆದ ಸುದ್ದಿಗೋಷ್ಟಿಯಲ್ಲಿ, ಕುದ್ರೋಳಿ ಕಸಾಯಿಖಾನೆಗೆ 15 ಕೋಟಿ ರೂ. ಸ್ಮಾರ್ಟ್ ಯೋಜನೆಯ ಅನುದಾನ ನೀಡುವೆ ಎಂದು ಅವರು ಹೇಳಿದ್ದರು. ಇಂದು ಈ ವಿಚಾರ ವಿವಾದಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಸಚಿವ ಖಾದರ್ ಪ್ರತಿಕ್ರಿಯಿಸಿದ್ದಾರೆ. ನಾವು ತಿನ್ನುವ ಆಹಾರ ಸ್ವಚ್ಛವಾಗಿರಬೇಕು. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಕಸಾಯಿಖಾನೆಗೆ ಜನರ ಆರೋಗ್ಯಕ್ಕೆ ಹಾನಿಯಾಗದ ಮಾಂಸ ಬರಬೇಕು. ಕಸಾಯಿಖಾನೆ ಪರಿಸರ […]

ಮಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ನಾಮಪತ್ರ ಸಲ್ಲಿಕೆ

Monday, April 23rd, 2018
vedavyas-kamath

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ. ವೇದವ್ಯಾಸ ಕಾಮತ್ ನಾಮಪತ್ರ ಸಲ್ಲಿಸಿದ್ದಾರೆ. ವೇದವ್ಯಾಸ್ ಕಾಮತ್ ಅವರು ಇದೇ ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ನಾಮಪತ್ರ ಸಲ್ಲಿಕೆ ಮುನ್ನ ಬೃಹತ್ ಪಾದಯಾತ್ರೆ ನಡೆಯಿತು. ಕುದ್ರೋಳಿ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಬಳಿಕ ವೇದವ್ಯಾಸ್ ಕಾಮತ್ ನಾಮಪತ್ರ ಸಲ್ಲಿಸಿದರು.

ವರ್ಷದ ಮೊದಲ ದಿನ: ಕದ್ರಿ, ಕುದ್ರೋಳಿ ಸೇರಿ ಹಲವು ದೇವಾಲಯಗಳಲ್ಲಿ ಭಕ್ತರಿಂದ ಪೂಜೆ

Monday, January 1st, 2018
Temple

ಮಂಗಳೂರು: ಹಳೆ ವರ್ಷ ಕಳೆದು ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಇಡೀ ವರ್ಷ ಆರೋಗ್ಯ, ನೆಮ್ಮದಿ, ಯಶಸ್ಸು, ಐಶ್ವರ್ಯ ದಯಪಾಲಿಸಲಿ ಎಂಬುದು ಎಲ್ಲರ ಅಭಿಲಾಸೆ. ಯಾವುದೇ ಕಾರ್ಯವನ್ನು ಜನ ಇಂದು ದೇವರ ದರ್ಶನದ ಮೂಲಕ ಆರಂಭಿಸುತ್ತಾರೆ. ಹಾಗೆಯೇ ಮಂಗಳೂರಿನಲ್ಲೂ ಮಂಗಳಾದೇವಿ, ಕದ್ರಿ ಮಂಜುನಾಥ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯ ಸೇರಿದಂತೆ ಎಲ್ಲಾ ದೇವಸ್ಥಾನಗಳಲ್ಲೂ ಭಕ್ತರು ಮುಗಿಬಿದ್ದು ಪೂಜೆ ಸಲ್ಲಿಸುತ್ತಿರುವ ದೃಶ್ಯ ಕಂಡುಬಂತು. ಬಹುತೇಕ ಎಲ್ಲಾ ದೇವಸ್ಥಾನಗಳಲ್ಲೂ ಇಂದು ವಿಶೇಷ ಪೂಜೆ ನೆರವೇರಿತು. ಭಕ್ತರು ಸಾಮೂಹಿಕ ಸತ್ಯನಾರಾಯಣ ಪೂಜೆ ಕೈಗೊಂಡು […]