ವಾಕ್ ಸ್ಟಿಕ್ ನಿಂದ ಥಳಿಸಿ ಕೆಇಬಿ ಅಧಿಕಾರಿಯಿಂದ ವೃದ್ಧ ಮಾವನ ಕೊಲೆಯತ್ನ

Monday, March 11th, 2024
Umashankari

ಮಂಗಳೂರು: ತಂದೆ ಸಮಾನರಾದ ವೃದ್ಧ ಮಾವ ನಿಗೆ ಸೊಸೆಯೊಬ್ಬಳು ಮನಸೋ ಇಚ್ಛೆ ಥಳಿಸಿದ ಘಟನೆ ಮಂಗಳೂರಿನ ಕುಲಶೇಖರದಲ್ಲಿ ನಡೆದಿದೆ. ಪದ್ಮನಾಭ ಸುವರ್ಣ(87), ಸೊಸೆಯಿಂದ ಹಲ್ಲೆಗೊಳಗಾದ ಮಾವ. ಆರೋಪಿ ಸೊಸೆಯನ್ನು ಉಮಾಶಂಕರಿ ಎಂದು ಗುರುತಿಸಲಾಗಿದ್ದು, ಈಕೆ ಮಂಗಳೂರಿನ ಅತ್ತಾವರದ ಕೆಇಬಿಯಲ್ಲಿ ಅಧಿಕಾರಿಯಾಗಿದ್ದಾಳೆ. ಈಕೆಯ ರಾಕ್ಷಸಿ ಕೃತ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಉಮಾಶಂಕರಿ ಪತಿ ವಿದೇಶದಲ್ಲಿ ಉದ್ಯೋಗಲ್ಲಿದ್ದಾರೆ. ಪತಿ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಮಾರ್ಚ್ 9 ರಂದು ಮಾವನಿಗೆ ವಾಕ್ ಸ್ಟಿಕ್ ನಲ್ಲಿ […]

ಕುಲಶೇಖರ ವೀರನಾರಾಯಣ ದೇವಸ್ಥಾನದಲ್ಲಿ ಗೋಪೂಜೆ ಭಜನೆ ಸತ್ಯನಾರಾಯಣ ಮಹಾಪೂಜೆ ಅನ್ನಸಂತರ್ಪಣೆ

Wednesday, November 17th, 2021
Veeranarayana Temple

ಮಂಗಳೂರು: ಕುಲಶೇಖರ ವೀರನಾರಾಯಣ ದೇವಸ್ಥಾನ ಜೀರ್ಣೋದ್ಧಾರದ ಪ್ರಕ್ರಿಯೆ ಪ್ರಾರಂಭಗೊಂಡಿದ್ದು ಆ ಪ್ರಯುಕ್ತ ನವೆಂಬರ್ 14 ರಂದು ರವಿವಾರ ದೇವಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘ ಮತ್ತು ವೀರನಾರಾಯಣ ದೇವಸ್ಥಾನದ ಆಡಳಿತ ಮಂಡಳಿ ಜಂಟಿಯಾಗಿ ಭಜನೆ. ಗೋಪೂಜೆ. ಸತ್ಯನಾರಾಯಣ ಮಹಾಪೂಜೆ, ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ದೇವಸ್ಥಾನದ ತಂತ್ರಿ ಗಳಾಗಿರುವ ಶ್ರೀಹರಿ ಉಪಾಧ್ಯಾಯರು ಅವರ ಮಾರ್ಗದರ್ಶನದಂತೆ ಪ್ರಧಾನ ಅರ್ಚಕರು ಜನರ್ಧನ್ ಭಟ್ ಅವರು ಶ್ರೀದೇವರಿಗೆ ವಿಶೇಷ ಪೂಜೆ ನಡೆಸಿದರು. ಆ ಬಳಿಕ ದಕ್ಷಿಣ ಕನ್ನಡ […]

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಆಡಳಿತ ಮಂಡಳಿಯಿಂದ ಪೋರ್ಜರಿ, ಭಕ್ತಾದಿಗಳಿಂದ ಪ್ರತಿಭಟನೆ

Sunday, November 14th, 2021
Veeranarayana Temple

ಮಂಗಳೂರು : ಶ್ರೀ ವೀರನಾರಾಯಣ ದೇವಸ್ಥಾನ, ಪದವು ಗ್ರಾಮ, ಕುಲಶೇಖರದಲ್ಲಿ ಪ್ರಸ್ತುತ ಆಡಳಿತ ನಡೆಸುವ ಸಮಿತಿಯು ಪೋರ್ಜರಿ ದಾಖಲೆಗಳ ಮೂಲಕ ದೇವಳದ, ಸಮಸ್ತ ಆಸ್ತಿಯನ್ನು ಕಬಳಿಸಿರುವ ಮತ್ತು ಸಾರ್ವಜನಿಕ ದೇವಸ್ಥಾನವನ್ನು ಒಂದು ಸಮುದಾಯದ ಆಸ್ತಿ ಎಂದು ತಪ್ಪು ಸಂದೇಶವನ್ನು ನೀಡಿ ಭಕ್ತರನ್ನು ದಾರಿ ತಪ್ಪಿಸುತ್ತಿರುವ ಬಗ್ಗೆ ಪರಿಸರದ ಭಕ್ತಾಧಿಗಳು ಮತ್ತು ಸುಮಾರು 32 ಸಮಿತಿಗಳು ಸೇರಿ ದೇವಸ್ಥಾನದ ಸಮೀಪ ನವೆಂಬರ್ 14ರ ಭಾನುವಾರ ಪ್ರತಿಭಟನೆ ನಡೆಸಿತು. ಶ್ರೀ ವೀರನಾರಾಯಣ ಸದ್ಭಕ್ತ ಸಮಿತಿ ಕುಲಶೇಖರ ಹಮ್ಮಿಕೊಂಡ ಪ್ರತಿಭಟನಾ ಸಭೆಯನ್ನು […]

ಭಾರಿ ಮಳೆ : ಕುಲಶೇಖರ ಬಳಿ ರೈಲ್ವೆ ಹಳಿಗೆ ಕುಸಿದು ಬಿದ್ದ ತಡೆಗೋಡೆ, ರೈಲುಗಳ ಸಂಚಾರ ಸ್ಥಗಿತ

Friday, July 16th, 2021
Konkan-Rail

ಮಂಗಳೂರು:  ನಗರದ ಕುಲಶೇಖರದಲ್ಲಿ ನಿರ್ಮಾಣ ಹಂತದ ರೈಲ್ವೆ ಸುರಂಗ ಮಾರ್ಗದ ಬಳಿ ತಡೆಗೋಡೆ ಕುಸಿದು ಹಳಿಗೆ ಬಿದ್ದು, ರೈಲು ಸಂಚಾರಕ್ಕೆ ಅಡಚಣೆಯಾಗಿದೆ. ಭಾರಿ ಮಳೆಯಿಂದಾಗಿ  ಶುಕ್ರವಾರ ಮುಂಜಾನೆ ಘಟನೆ ಸಂಭವಿಸಿದ್ದು, ಕಾಂಕ್ರೀಟ್‌ನಿಂದ ನಿರ್ಮಿಸಲಾದ ತಡೆಗೋಡೆ ಸಹಿತ ಭಾರಿ ಪ್ರಮಾಣದ ಮಣ್ಣು ಜರಿದು ಹಳಿಯ ಮೇಲೆ ಬಿದ್ದಿದೆ. ಮಂಗಳೂರು ಜಂಕ್ಷನ್‌-ತೋಕೂರು ನಡುವಿನ ಕುಲಶೇಖರ ಬಳಿ ಸುರಂಗ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಮಣ್ಣು ತೆರವು ಕಾರ್ಯ ಆರಂಭವಾಗಿದ್ದು, ಕೊಂಕಣ ಮಾರ್ಗದ ಎಲ್ಲ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.  ಹಳಿಯ ಮೇಲೆ […]

ಮಂಗಳೂರು ತಾಪಂ ಮಾಜಿ ಸದಸ್ಯನ ಮೇಲೆ ಕುಲಶೇಖರ ಬಳಿ ತಲವಾರು ದಾಳಿ

Tuesday, October 13th, 2020
Yusuf

ಮಂಗಳೂರು : ದುಷ್ಕರ್ಮಿಗಳ ತಂಡವೊಂದು ಉಳಾಯಿಬೆಟ್ಟು ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಮಂಗಳೂರು ತಾಪಂ ಮಾಜಿ ಸದಸ್ಯ ಯೂಸುಫ್ ಅವರ ಮೇಲೆ ತಲವಾರು ದಾಳಿ ನಡೆಸಿದ ಘಟನೆ ಕುಲಶೇಖರ ಬಳಿ ಸೋಮವಾರ ಸಂಜೆ ನಡೆದಿದೆ. ಗಾಯಗೊಂಡ ಯೂಸುಫ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತನ್ನ ಕಾರಿನಲ್ಲಿ ಮಂಗಳೂರಿನಿಂದ ಉಳಾಯಿಬೆಟ್ಡುವಿಗೆ ಯೂಸುಫ್ ಅವರು ತೆರಳುತ್ತಿದ್ದಾಗ ಕುಲಶೇಖರ ಬಳಿ ಬೈಕೊಂದು ಯೂಸುಫ್‌ರ ಕಾರಿಗೆ ಹಿಂದಿನಿಂದ ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ತಕ್ಷಣ ಯೂಸುಫ್‌ ತನ್ನ ಕಾರನ್ನು ನಿಲ್ಲಿಸಿ ಪ್ರಶ್ನಿಸಿದಾಗ ಬೈಕ್ ಸವಾರ […]

ಕೊರೊನಾ ಸೋಂಕಿನಿಂದ ಗುರುವಾರ ಕುಲಶೇಖರದ 80ರ ವೃದ್ಧೆ ಸಾವು

Thursday, May 14th, 2020
Covid death Mangalore

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಗುರುವಾರ ಕುಲಶೇಖರದ 80ರ ವೃದ್ಧೆ ಮೃತಪಟ್ಟಿದ್ದಾರೆ. ಈ ವೃದ್ಧೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಈಕೆ ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವ ವಾಯು ಸಮಸ್ಯಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆಸ್ಪತ್ರೆಯಲ್ಲಿದ್ದ ತಾಯಿ ಮತ್ತು ಮಗ ಇಬ್ಬರಿಗೂ ಕೋವಿಡ್-19 ಪಾಸಿಟಿವ್ ಆಗಿತ್ತು. ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ  ಒಟ್ಟು ಐದು ಮಂದಿ  ಮೃತಪಟ್ಟಿದ್ದಾರೆ. ಬುಧವಾರ ಸೋಂಕಿನಿಂದ ಬಳಲುತ್ತಿದ್ದ ಬೋಳೂರಿನ 58ರ ಮಹಿಳೆ ಸಾವಿಗೀಡಾದ್ದಾರೆ. ಈಗ ಫಸ್ಟ್‌ ನ್ಯೂರೋ ಆಸ್ಪತ್ರೆ ಸಂಪರ್ಕದಿಂದ ಸೋಂಕಿತರಾದವರ ಸಂಖ್ಯೆ 20ಕ್ಕೆ […]

ಮಂಗಳೂರು : ನ.19ರಂದು ನಂದಿನಿ ನೂತನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ

Saturday, November 16th, 2019
Nandini-Milk

ಮಂಗಳೂರು : ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು 66ನೆ ಸಹಕಾರಿ ಸಪ್ತಾಹದ ಅಂಗವಾಗಿ ನೂತನ ಉತ್ಪನ್ನಗಳಾದ ನಂದಿನಿ ಕೋಲ್ಡ್ ಕಾಫಿ ಹಾಗೂ ನಂದಿನಿ ಕಷಾಯವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಎರಡೂ ಉತ್ಪನ್ನಗಳು 200 ಮಿ.ಲೀ. ಸಿಪಿಪಿ ಬಾಟಲುಗಳಲ್ಲಿ ನ.19ರಂದು ಬಿಡುಗಡೆಯಾಗಲಿದೆ ಎಂದು ತಿಳಿಸಿದರು. ಕುಲಶೇಖರದ ಕೋರ್ಡೆಲ್ ಸಭಾಂಗಣದಲ್ಲಿ ಅಂದು ಸಪ್ತಾಹದ ಅಂಗವಾಗಿ ಸಹಕಾರ ಸಂಸ್ಥೆಗಳ ಮೂಲಕ ಆರ್ಥಿಕ ಸೇರ್ಪಡೆ, ತಂತ್ರಜ್ಞಾನ ಅಳವಢಿಕೆ ಹಾಗೂ ಗಣಕೀಕರಣ […]

ಕುಲಶೇಖರ, ರೈಲಿನ ಹಳಿಗೆ ಮಣ್ಣು ಕುಸಿತ; ಸಂಚಾರ ಸ್ಥಗಿತ

Friday, August 23rd, 2019
Kulshekar

ಮಂಗಳೂರು : ಕರಾವಳಿ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಪರಿಣಾಮ ಧರೆ ಕುಸಿತ ಪ್ರಕರಣಗಳು ಮುಂದುವರಿದಿದ್ದು, ಇದೀಗ ಕುಲಶೇಖರ ಬಳಿಯೂ ಹಳಿಗೆ ಮಣ್ಣು ಕುಸಿದ ಬಿದ್ದ ಪರಿಣಾಮ ಈ ಮಾರ್ಗವಾಗಿ ಶುಕ್ರವಾರ ಈ ಮಾರ್ಗವಾಗಿ ರೈಲು ಸಂಚಾರ ಸ್ಥಗಿತಗೊಂಡಿದೆ. ಕುಲಶೇಖರದಲ್ಲಿ ಕಳೆದೆರಡು ವರ್ಷದಿಂದ ನಡೆಯುತ್ತಿರುವ ಕುಲಶೇಖರ-ಪಡೀಲ್ ರೈಲ್ವೆ ಸುರಂಗ ಮಾರ್ಗದ ಸನಿಹ ಈ ಘಟನೆ ನಡೆದಿದ್ದು ಈ ಹಿನ್ನಲೆಯಲ್ಲಿ ಈ ಮಾರ್ಗವಾಗಿ ಸಂಚರಿಸುವ ರೈಲುಗಳು ಬದಲಿ ಮಾರ್ಗದಲ್ಲಿ ಸಂಚರಿಸಲು ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಹಳಿಯಲ್ಲಿದ್ದ ಮಣ್ಣು ತೆರವುಗೊಳಿಸುವ ಕಾರ್ಯವನ್ನು ರೈಲ್ವೆ […]

ಡಿ ವೇದವ್ಯಾಸ ಕಾಮತ್ ರಿಂದ ಕುಲಶೇಖರ ಕನ್ನಗುಡ್ಡೆಯ ರಸ್ತೆ ಕಾಮಗಾರಿ ಪರಿಶೀಲನೆ

Saturday, November 3rd, 2018
vedvyas-kamath

ಮಂಗಳೂರು: ಕುಲಶೇಖರದ ಕನ್ನಗುಡ್ಡೆಯ ರಸ್ತೆ ಕಾಮಗಾರಿಯನ್ನು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಪರಿಶೀಲಿಸಿದರು. ಕುಲಶೇಖರದಿಂದ ಉಮ್ಮಿಕಾನ್ ಸರಿಪಳ್ಳದ ಮೂಲಕ ಕೊಡಕಲ್ಲು ಪ್ರದೇಶಕ್ಕೆ ಹೋಗುವ ಈ ರಸ್ತೆ ಮುಂದಿನ ದಿನಗಳಲ್ಲಿ ಅಸಂಖ್ಯಾತ ಜನರಿಗೆ ಉಪಯೋಗಕ್ಕೆ ಬರಲಿದ್ದು, ಇಂದು ಕಾಮಗಾರಿ ನಡೆಯುವ ಸ್ಥಳಕ್ಕೆ ಆಗಮಿಸಿದ ಶಾಸಕರು ಅಧಿಕಾರಿಗಳನ್ನು ಕರೆಸಿ ಕಾಮಗಾರಿಯ ಕುರಿತು ಚರ್ಚಿಸಿದರು. ಶಾಸಕರೊಂದಿಗೆ ಬಿಜೆಪಿ ಮುಖಂಡರಾದ ಅಜಯ್, ವಸಂತ ಜೆ ಪೂಜಾರಿ, ನರೇಶ್ ಸರಿಪಲ್ಲ, ಪ್ರವೀಣ್ ಶೆಟ್ಟಿ ನಿಡ್ಡೇಲ್, ಸುರೇಶ್ ಆಚಾರ್, ಗೀತಾ ಶೆಟ್ಟಿ, […]

ಕುಲಶೇಖರ ಶ್ರೀ ಧರ್ಮಶಾಸ್ರ ಮಂದಿರದಿಂದ ಮೇಯರ್ ಭಾಸ್ಕರ ಕೆ.ರವರಿಗೆ ಸನ್ಮಾನ

Tuesday, March 13th, 2018
mayor-baskar-moily

ಮಂಗಳೂರು: ಕುಲಶೇಖರ ಜ್ಯೋತಿ ನಗರದ ಶ್ರೀ ಧರ್ಮಶಾಸ್ರ ಮಂದಿರ ಟ್ರಸ್ಟ್ ವತಿಯಿಂದ ಮಂಗಳೂರು ಮಹಾನಗರಪಾಲಿಕೆಯ ನೂತನ ಮೇಯರ್ ಶ್ರೀ ಭಾಸ್ಕರ್ ಕೆ.ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.ಮಂದಿರದ ಅಧ್ಯಕ್ಷರಾದ ನ್ಯಾಯವಾದಿ ಶ್ರೀ ರಾಮ್‌ಪ್ರಸಾದ್‌ರವರು ಮಾತನಾಡಿ ಭಾಸ್ಕರವಣ್ಣನವರು ಕಳೆದ 10 ವರ್ಷಗಳಿಂದ ಮಂದಿರದ ಗೌರವ ಸಲಹೆಗಾರರಾಗಿ ಮಂದಿರದ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಿರುತ್ತಾರೆ. ಪದವು ವಾರ್ಡ್‌ನಲ್ಲಿ ಸತತ ಮೂರನೇ ಬಾರಿಗೆ ದಾಖಲೆ ಮತಗಳ ಅಂತರದಿಂದ ಕಾರ್ಪೋರೇಟರ್ ಆಗಿ ಆಯ್ಕೆಯಾಗಿ ನಿರಂತರ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಜನಪ್ರಿಯರಾಗಿದ್ದು ಇದೀಗ ಮೇಯರ್ ಆಗಿರುವುದು ಅತ್ಯಂತ ಸಂತಸದ ವಿಚಾರ […]